1
00:00:07,633 --> 00:00:08,926
ಶಾಖದ ಭೂಮಿ.

2
00:00:10,720 --> 00:00:14,014
ಆಘಾತ ಮತ್ತು ಅಚ್ಚರಿ, ರಕ್ತ ಮತ್ತು ಮೂಳೆ.

3
00:00:15,391 --> 00:00:20,271
ಕೊನೆಗೆ, ಇಬ್ಬರಲ್ಲಿ ಒಬ್ಬ ನಿಂತುಕೊಂಡಿರುವುದು.

4
00:00:24,358 --> 00:00:26,193
ಬಹಳ ವಿಚಿತ್ರ.

5
00:00:32,116 --> 00:00:33,032
ಹಿಂದಿನದರಲ್ಲಿ

6
00:00:33,033 --> 00:00:34,159
ಇನ್ನೇನು ಈಸ್ಟರ್ ಹತ್ತಿರ ಬಂತು.

7
00:00:34,160 --> 00:00:36,453
ಯೇಸುವಿನ ಪುನರುತ್ಥಾನದ ದಿನದಂದು

8
00:00:36,454 --> 00:00:39,497
ಯೇಸುವಿನಂತೆ ನಿಮ್ಮ ಎರಡನೇ ಬರುವಿಕೆ
ಅದ್ಭುತವಾಗಿರುತ್ತದೆಯಲ್ಲಾ?

9
00:00:39,498 --> 00:00:41,458
- ನೀನು ಅಧ್ಯಕ್ಷರ ಸಾವಿಗೆ ಕಾರಣವಾದೆ.
- ಬೇರೆ ಆಯ್ಕೆ ಇರಲಿಲ್ಲ.

10
00:00:41,459 --> 00:00:44,919
ಎಲ್ಲವೂ ಮುಗಿದಿದೆ.
ಮತ್ತೆಂದಿಗೂ ನನ್ನ ಧ್ವನಿ ನಿನಗೆ ಕೇಳಲ್ಲ.

11
00:00:44,920 --> 00:00:46,254
ನಿನ್ನನ್ನ ಬಳಸಿಕೊಳ್ಳುತ್ತಿದ್ದಾಳೆ!

12
00:00:46,255 --> 00:00:48,506
- ಬಾಯಿ ಮುಚ್ಚು!
- ನೀನು ನಿಷ್ಪ್ರಯೋಜಕ ಅಂದುಕೊಂಡ ಹೆಂಗಸಿಗಾಗಿ

13
00:00:48,507 --> 00:00:49,966
ನನ್ನ ಬಿಟ್ಟುಹೋಗುತ್ತಿರುವೆ! ಕೆವಿನ್!

14
00:00:49,967 --> 00:00:54,429
ನೀನು ನೀರಿನೊಳಗೆ ಒಂದು ಪಾದ ಇಟ್ಟರೂ,
ನಾವು ನಿನ್ನನ್ನು ಕೊಲ್ಲುತ್ತೇವೆ!

15
00:00:54,430 --> 00:00:57,558
ಹೋಮ್ಲ್ಯಾಂಡರ್ ವಿಶ್ವದ ಅಪಾಯಕಾರಿ ಅತೀಂದ್ರಿಯ
ಶಕ್ತಿಯುಳ್ಳವರನ್ನೇಕೆ ಒಟ್ಟು ಮಾಡಿದ್ದಾನೆ?

16
00:00:58,142 --> 00:01:00,311
- ಚಿಂತನೆಯ ಪೊಲೀಸ್.
- ಧರ್ಮದ್ರೋಹಿಗಳಿಗೆ ಅವಕಾಶವಿಲ್ಲ.

17
00:01:01,812 --> 00:01:04,689
ನನಗೆ ಕಾಳಜಿ ಇತ್ತು. ನಾನು ನಿನ್ನಂತೆಯೇ ಇದ್ದೆ.

18
00:01:04,690 --> 00:01:07,442
ಯಾವಾಗಲೂ ಕಿರಿಕಿರಿ ಮಾಡುವ
ಒಳ್ಳೆಯ ಬೇವರ್ಸಿ ಆಗಿರು.

19
00:01:07,443 --> 00:01:09,069
- ನಿನಗೆ ಏನು ಬೇಕು?
- ನಿಮ್ಮ ಸಹಾಯ.

20
00:01:09,820 --> 00:01:11,654
ನಿನಗೆ ಗೊತ್ತಾ, ಬಿಲ್ಲಿಗೆ ಆತ್ಮಸಾಕ್ಷಿ ಇರಲಿಲ್ಲ.

21
00:01:11,655 --> 00:01:14,115
ಅವನ ನಡವಳಿಕೆಯನ್ನು
ನಿಯಂತ್ರಣದಲ್ಲಿಡಲು ನಿನಗೆ ಹೇಳುತ್ತಾನೆ.

22
00:01:14,116 --> 00:01:15,450
ಆದರೆ ಸತ್ಯವೇನೆಂದರೆ,

23
00:01:15,451 --> 00:01:17,452
ನೀನವನ ದಾರಿಗೆ ಅಡ್ಡ ಬಂದರೆ ನಿನ್ನ ಕಥೆ ಮುಗೀತು.

24
00:01:17,453 --> 00:01:20,330
ನಿನ್ನನ್ನು ಪ್ರೀತಿಸಿದವರನ್ನು ನೀನು ಕೊನೆಗೆ
ಸಾಯಿಸುವೆ, ಅದಕ್ಕೆ, ಅಲ್ಲವೇ?

25
00:01:20,331 --> 00:01:23,209
ವಿವರಿಸಲಾಗದ ವಸ್ತುಗಳ ಪತ್ತೆಗಾಗಿ
ಛಾವಣಿಯಲ್ಲಿ ಡಾಪ್ಲರ್ ವ್ಯವಸ್ಥೆ ಮಾಡಿದ್ದೆ.

26
00:01:27,004 --> 00:01:28,296
ಫ್ರೆಂಚಿ? ಫ್ರೆಂಚಿ!

27
00:01:28,297 --> 00:01:29,756
ನನ್ನನ್ನು ಉಳಿಸಿದ್ದಕ್ಕಾಗಿ ಧನ್ಯವಾದ.

28
00:01:29,757 --> 00:01:33,552
ನನ್ನ ಹೃದಯವೇ. ನೀನು ನನ್ನನ್ನು ಉಳಿಸಿದ್ದು.

29
00:01:34,178 --> 00:01:35,888
ಇಲ್ಲ, ಇಲ್ಲ, ಇಲ್ಲ.

30
00:02:08,295 --> 00:02:11,130
"ನಾನು, ಸೆರ್ಜ್ ಎಮಿಲಿಯಾನ್ ಲೆಸ್ ಸೇಂಟ್ಸ್,

31
00:02:11,131 --> 00:02:15,009
ಅಸ್ವಸ್ಥ ಮನಸ್ಸು ಮತ್ತು ದಣಿದ ದೇಹದವನು,

32
00:02:15,010 --> 00:02:17,679
ಇದನ್ನು ನನ್ನ ಕೊನೆಯ ಇಚ್ಛೆ
ಮತ್ತು ಒಡಂಬಡಿಕೆ ಎಂದು ಘೋಷಿಸುತ್ತೇನೆ."

33
00:02:17,680 --> 00:02:20,473
'ನನಗೆ ನೀಡಲು
ಯಾವುದೇ ಲೌಕಿಕ ಆಸ್ತಿ ಇಲ್ಲದಿದ್ದರೂ,

34
00:02:20,474 --> 00:02:24,435
ಆದರೆ ನಾನು ಈ ಪತ್ರವನ್ನು
ಸ್ವಾತಂತ್ರ್ಯ ಶಿಬಿರದಲ್ಲಿ

35
00:02:24,436 --> 00:02:28,022
ಬರ್ಟ್ ಎಂಬ ಕರುಳಿನ ರೋಗವಿರುವ
ಧೃಢಕಾಯ ಭದ್ರತಾ ಪಡೆಯವನ ಗುದದ್ವಾರದೊಳಗೆ…

36
00:02:28,023 --> 00:02:32,151
ಬಚ್ಚಿಟ್ಟು ಕಳ್ಳಸಾಗಣೆ ಮಾಡಿದ
ರಟ್ಟಿನಲ್ಲಿ ಬರೆಯುವಾಗ,

37
00:02:32,152 --> 00:02:35,530
ನನ್ನಲ್ಲಿ ನಿಮಗೆ ಕೊಡಲು
ಏನೋ ಇದೆ ಎಂದು ನೆನಪಾಯಿತು."

38
00:02:35,531 --> 00:02:39,033
"ಅದೇನೆಂದರೆ, ನಿಮ್ಮಲ್ಲರ
ತಿಕಗಳನ್ನೂ ನೋಡಿದ್ದೇನೆ ಎಂಬ ಜ್ಞಾನ."

39
00:02:39,034 --> 00:02:40,202
ಏನಂದೆ?

40
00:02:42,746 --> 00:02:43,664
ಇದರಲ್ಲಿ ಇರೋದು ಓದಿದೆ.

41
00:02:45,749 --> 00:02:49,419
"ಬುಚರ್, ನಾನು ಒಮ್ಮೆ
ವಿಜ್ಞಾನಕ್ಕಾಗಿ ಟಾಯ್ಲೆಟ್ ಕ್ಯಾಮ್ ಅಳವಡಿಸಿದ್ದೆ,

42
00:02:49,420 --> 00:02:52,547
ಅದು ದೊಡ್ಡ ಕಥೆ,
ಅಜಾಗರೂಕತೆಯಿಂದ ನಿನ್ನದನ್ನು ಸೆರೆಹಿಡಿದೆ."

43
00:02:52,548 --> 00:02:57,552
"ಹೂಯಿ, ಎಂ.ಎಂ, ಕ್ಯಾಂಪ್‌ನಲ್ಲಿ ಬಗ್ಗಿಸಿ ಕಳ್ಳ
ಸಾಗಣೆ ವಸ್ತುವಿಗಾಗಿ ನಮ್ಮ ತಪಾಸಣೆ ಮಾಡಿದಾಗ."

44
00:02:57,553 --> 00:03:02,223
"ಆ್ಯನಿ, ಹೂಯಿ ಮತ್ತು ನೀನು ಪ್ರಣಯದಲ್ಲಿ
ನಿರತರಾಗಿದ್ದಾಗ ಆಕಸ್ಮಿಕವಾಗಿ ನೋಡಿಬಿಟ್ಟೆ,

45
00:03:02,224 --> 00:03:03,224
ನೀವು ನನ್ನ ಗಮನಿಸಲಿಲ್ಲ."

46
00:03:03,225 --> 00:03:05,518
ನಾನು… ನಾನು ಮುಂದೆ ಹೋಗುತ್ತೇನೆ…

47
00:03:05,519 --> 00:03:06,561
ಹೌದು, ಅದು ಒಳ್ಳೆಯ ಐಡಿಯಾ.

48
00:03:06,562 --> 00:03:10,733
"ಎಲ್ಲರದ್ದೂ ವಿವಿಧಾಕಾರದ ಗುಹೆಯಂತಿತ್ತು."

49
00:03:11,859 --> 00:03:15,278
ಸರಿ. ಅವನು… ಅವನು ರೇಖಾಚಿತ್ರಗಳನ್ನು ಬಿಡಿಸಿದ್ದ.

50
00:03:15,279 --> 00:03:17,864
ಇವೆಲ್ಲಾ ತಿಕದ ಬಗ್ಗೆ ಸಂಬಂಧಿಸಿದ್ದು, ಆದರೆ…

51
00:03:17,865 --> 00:03:20,033
ಸರಿ. ಅವನು ಇಲ್ಲಿ ವಿಷಯಕ್ಕೆ ಬರುತ್ತಿದ್ದಾನೆ.

52
00:03:20,034 --> 00:03:24,580
"ನಾವು ಒಟ್ಟಿಗೆ ತುಂಬಾ ಅನುಭವಿಸಿದ್ದೇವೆ,
ಒಳ್ಳೆಯ ಮತ್ತು ಕೆಟ್ಟ ಸಮಯ ನೋಡಿದ್ದೇವೆ."

53
00:03:25,831 --> 00:03:29,668
"ನಾನು ನನ್ನ ರಕ್ತಸಂಬಂಧಿಕರಿಗೆ ಹೋಲಿಸಿದರೆ
ನಿಮ್ಮೆಲ್ಲರಿಗೂ ಹತ್ತಿರವಾಗಿದ್ದೇನೆ."

54
00:03:30,502 --> 00:03:33,339
"ಎಷ್ಟು ಹತ್ತಿರ ಎಂದರೆ
ನಾನು ನಿಮ್ಮ ತಿಕಗಳನ್ನೂ ನೋಡಿದ್ದೇನೆ."

55
00:03:34,048 --> 00:03:37,468
"ಮತ್ತು ಅದು ನನಗೆ ನಿಜವಾದ ಕುಟುಂಬದ ಗುರುತು."

56
00:03:38,135 --> 00:03:39,969
"ನೀವು ನನ್ನ ಕುಟುಂಬ."

57
00:03:39,970 --> 00:03:42,931
"ನಾನು ಸ್ವರ್ಗವನ್ನು ಪ್ರವೇಶಿಸುವಷ್ಟು
ಶುದ್ಧನಾಗಿದ್ದಾನೆಯೇ

58
00:03:42,932 --> 00:03:44,265
ಎಂದು ಗೊತ್ತಿಲ್ಲ,

59
00:03:44,266 --> 00:03:47,018
ಆದರೆ ಯೋಚಿಸಬೇಡಿ, ನಾನು ಶಾಂತಿಯಿಂದಿದ್ದೇನೆ

60
00:03:47,019 --> 00:03:49,521
ಏಕೆಂದರೆ ಒಂದು ಕ್ಷಣ,
ಭೂಮಿಯ ಮೇಲಿನ ಸ್ವರ್ಗವನ್ನು ಅನುಭವಿಸಿದ್ದೆ…

61
00:03:52,232 --> 00:03:53,734
ನಿನ್ನ ಬಾಹುಗಳಲ್ಲಿ, ನನ್ನ ಹೃದಯವೇ."

62
00:04:13,379 --> 00:04:15,213
{\an8}ಅಮೆರಿಕದ
ಡೆಮಾಕ್ರಟಿಕ್ ಚರ್ಚ್

63
00:04:15,214 --> 00:04:19,384
{\an8}ಧೈರ್ಯಶಾಲಿ ಸ್ವತಂತ್ರ ಚಿಂತಕರಿಗೆ, ಬದಲಾವಣೆ
ಬಯಸುವವರಿಗೆ, ಕ್ರಾಂತಿಕಾರಿಗಳಿಗೆ ಶುಭಾಶಯಗಳು.

64
00:04:19,385 --> 00:04:22,345
{\an8}ಏಕೆಂದರೆ ಲೋಕವನ್ನು ಬದಲಾಯಿಸುವ ಶಕ್ತಿಯಿರುವವರೇ

65
00:04:22,346 --> 00:04:24,722
{\an8}ಸಾಮಾನ್ಯವಾಗಿ ಅದನ್ನು ಬದಲಾಯಿಸುವುದು.

66
00:04:24,723 --> 00:04:29,185
ಈಸ್ಟರ್ ಭಾನುವಾರ, ಸಂಜೆ 4:00 ಗಂಟೆಗೆ,
ವೈಟ್ ಹೌಸ್‌‌ನಿಂದ ನೇರಪ್ರಸಾರ,

67
00:04:29,186 --> 00:04:32,438
ಹೋಮ್ಲ್ಯಾಂಡರ್
ವಿಶ್ವವನ್ನು ಪುನರಾರಂಭಿಸುತ್ತಿದ್ದಾರೆ.

68
00:04:32,439 --> 00:04:34,942
ವಾಟ್‌ಬುಕ್, ವಾಟ್‌ಟ್ಯೂಬ್‌ನಲ್ಲಿ
ಸ್ಟ್ರೀಮ್ ಆಗುತ್ತಿದೆ--

69
00:04:41,949 --> 00:04:45,953
ಭಯ ಪಡಬೇಡ.
ನಾನು ನಿನಗೆ ನೋವುಂಟು ಮಾಡಲು ಬಂದಿಲ್ಲ.

70
00:04:47,079 --> 00:04:48,913
ಅಂದರೆ, ಕಳೆದ ಬಾರಿಯಂತೆಯಾ?

71
00:04:48,914 --> 00:04:51,416
ನೋಡು, ನಿನಗೆ ಏನೂ ಹಾನಿಯಾಗಿಲ್ಲ.

72
00:04:51,417 --> 00:04:52,875
ನನ್ನನ್ನು ಹೇಗೆ ಹುಡುಕಿದೆ?

73
00:04:52,876 --> 00:04:56,880
ಕ್ರೈಮ್ ಅನಾಲಿಟಿಕ್ಸ್‌ಗೆ ಕೋಲ್ವೆರೈಡ್ ಹೊರಗೆ
ಹಾರುತ್ತಿರುವ ಯುವಕನ ಸುದ್ದಿ ಸಿಕ್ಕಿತು.

74
00:04:58,215 --> 00:04:59,508
ಹಾರುವುದು ಜನರ ಗಮನ ಸೆಳೆಯುತ್ತೆ.

75
00:05:00,175 --> 00:05:01,343
ನನಗೆ ನಿನ್ನ ಸಹಾಯ ಬೇಡ.

76
00:05:03,053 --> 00:05:06,222
ನನಗೆ ಗೊತ್ತು. ಅದನ್ನು ಸ್ಪಷ್ಟಪಡಿಸಿದ್ದೀಯ.

77
00:05:06,223 --> 00:05:09,768
ಆದರೆ ನೀನು ದೇವರ ಮಗ ಕೂಡ,
ಮತ್ತು ನೀನು ಕೊಟ್ಟಿಗೆಯಲ್ಲಿ ಮಲಗಬಾರದು.

78
00:05:10,352 --> 00:05:12,812
ಟವರ್‌ನಲ್ಲಿ ಸಂಪೂರ್ಣ ಮಹಡಿ ತೆಗೆದುಕೋ.

79
00:05:12,813 --> 00:05:15,606
ಅಲ್ಲಿ ಏನು ಬೇಕೋ ಅದನ್ನು ಮಾಡು.
ಮನಬಂದಂತೆ ಬಂದು ಹೋಗುತ್ತಿರು.

80
00:05:15,607 --> 00:05:17,067
ನಿನ್ನ ಹತ್ತಿರ ಇರಲು ಇಷ್ಟವಿಲ್ಲ.

81
00:05:19,361 --> 00:05:22,113
ಈಗ ಎಲ್ಲವೂ ವಿಭಿನ್ನವಾಗಿದೆ.

82
00:05:22,114 --> 00:05:25,575
ನಾನು ಮೇಲಕ್ಕೆ ಏರಿದ್ದೇನೆ.
ನಾನು ಅಮರನಾಗಿದ್ದೇನೆ.

83
00:05:25,576 --> 00:05:27,285
ಹಾಗಾದರೆ ನನಗೆ ಏನಾದರೆ ನಿನಗೇನು?

84
00:05:27,286 --> 00:05:28,328
ಏಕೆಂದರೆ ನಾವು ಒಂದೇ ಕುಟುಂಬ.

85
00:05:28,996 --> 00:05:31,039
ನಮ್ಮ ರಕ್ತನಾಳಗಳಲ್ಲಿ ಹರಿಯುತ್ತಿರುವುದು
ಒಂದೇ ರಕ್ತ.

86
00:05:31,040 --> 00:05:33,082
ನಿನಗೆ ನಿನ್ನ ಜನಾಂಗೀಯವಾದಿ ಅಪ್ಪ ಸಿಕ್ಕಿದನಲ್ಲ,

87
00:05:33,083 --> 00:05:34,459
ಆದ್ದರಿಂದ ನಿನಗೆ ನನ್ನ ಅಗತ್ಯವಿಲ್ಲ.

88
00:05:34,460 --> 00:05:36,295
ಸೋಲಜರ್ ಬಾಯ್ ಮುಖ್ಯವಲ್ಲ.

89
00:05:37,212 --> 00:05:41,216
ನೀನು ಮತ್ತು ನಾನು… ನಾವಷ್ಟೇ ಮುಖ್ಯ.

90
00:05:44,303 --> 00:05:47,806
ನಾನು ನಿನ್ನನ್ನು ತಿಳಿದಿದ್ದೇನೆ
ಏಕೆಂದರೆ ನಾನು ನೀನೇ.

91
00:05:50,642 --> 00:05:51,810
ಮತ್ತು ನೀನು ನಾನೇ.

92
00:05:57,232 --> 00:05:58,400
ಅಪ್ಪ.

93
00:06:06,200 --> 00:06:07,034
ಹಾಳಾಗಿ ಹೋಗು.

94
00:06:08,869 --> 00:06:11,205
ನಾನು ಕೊಂಚವೂ ನಿನ್ನ ಹಾಗೆ ಅಲ್ಲ.

95
00:06:12,164 --> 00:06:14,499
ನೀನು ಈಗಾಗಲೇ ಭೂಮಿಯ ಮೇಲಿನ
ಅತ್ಯಂತ ಶಕ್ತಿಶಾಲಿಯಾಗಿದ್ದೆ,

96
00:06:14,500 --> 00:06:18,128
ಮತ್ತು ನೀನು ಒಬ್ಬಂಟಿ,
ದುಃಖತಪ್ತ ವ್ಯಕ್ತಿಯಾಗಿದ್ದೆ,

97
00:06:19,046 --> 00:06:21,381
ನೀನು ಬಯಸಿದ್ದು ಸಿಗದಿದ್ದಾಗ
ಕೋಪೋದ್ರೇಕದಿಂದ ವರ್ತಿಸುತ್ತಿದ್ದೆ.

98
00:06:22,466 --> 00:06:24,927
ಹೆಚ್ಚಿನ ಶಕ್ತಿ ನಿನ್ನನ್ನು
ಹೇಗೆ ಉತ್ತಮಗೊಳಿಸಲು ಸಾಧ್ಯ?

99
00:06:26,053 --> 00:06:31,140
ಅದು ನಿನ್ನನ್ನು ಇನ್ನಷ್ಟು ಒಂಟಿಯಾಗಿಸುತ್ತೆ,
ಶೋಚನೀಯ ಸ್ಥಿತಿಗೆ ಕೊಂಡೊಯ್ಯುತ್ತದೆ.

100
00:06:31,141 --> 00:06:34,645
ಜನರನ್ನು ಹೆದರಿಸಿ
ನಿನ್ನನ್ನು ದೇವರು ಎಂದು ಕರೆಸಿಕೊಳ್ಳುವುದು…

101
00:06:36,396 --> 00:06:39,399
ನಿನ್ನನ್ನು ದೇವರನ್ನಾಗಿಸಲ್ಲ.

102
00:06:41,276 --> 00:06:42,945
ಮನಸ್ಸಿನ ಮೂಲೆಯಲ್ಲಿ, ನಿನಗೆ ಅದು ಗೊತ್ತು.

103
00:06:49,827 --> 00:06:51,078
ಪರವಾಗಿಲ್ಲ.

104
00:06:58,168 --> 00:07:01,839
ಏನು ನಡೆಯುತ್ತಿದೆ ಎಂದು ನಿನಗೆ ಗೊತ್ತಿಲ್ಲ.
ಪರವಾಗಿಲ್ಲ.

105
00:07:08,137 --> 00:07:09,805
ಆದರೆ ನೀನು ತಿಳಿದುಕೊಳ್ಳುವೆ.

106
00:07:14,560 --> 00:07:17,770
ಅವಳು ಮಾತನಾಡಲ್ಲವೋ, ಅಥವಾ ಮಾತನಾಡಲು ಬರಲ್ಲವೋ?

107
00:07:17,771 --> 00:07:19,147
ನನಗೆ ಗೊತ್ತಿಲ್ಲ.

108
00:07:19,148 --> 00:07:21,732
ಆ ಹುಡುಗಿಯಲ್ಲಿ

109
00:07:21,733 --> 00:07:23,776
ನಿಜವಾದ ರೋಷ ಇದೆ.

110
00:07:23,777 --> 00:07:25,028
ತುಂಬಾ ಕಷ್ಟ ಅನುಭವಿಸಿದ್ದಾಳೆ.

111
00:07:26,947 --> 00:07:30,575
ಸೇಜ್ ಏನು ಹೇಳುತ್ತಿದ್ದಾಳೆ?
ಪ್ರಯೋಗಗಳು ಕೆಲಸ ಮಾಡಿದ್ದರ ಸೂಚನೆ ಇದೆಯೇ?

112
00:07:30,576 --> 00:07:33,787
ಇಲ್ಲ. ಅಂದರೆ
ಫ್ರೆಂಚಿ ಸತ್ತಿದ್ದು ವ್ಯರ್ಥವಾಯಿತು.

113
00:07:36,707 --> 00:07:38,332
ಸರಿ, ನೀವು ಹೋಗಬೇಕಾದ ಜಾಗ ತಲುಪಿದಾಗ,

114
00:07:38,333 --> 00:07:39,959
ಬ್ಯಾಂಡೇಜ್ ಬದಲಾಯಿಸು.

115
00:07:39,960 --> 00:07:41,210
- ಸರಿ.
- ಸರಿ.

116
00:07:41,211 --> 00:07:42,546
ನಾವು ಯಾವಾಗ ಹೊರಡುತ್ತೇವೆ?

117
00:07:44,923 --> 00:07:46,258
ಒಳ್ಳೆಯ ಪ್ರಶ್ನೆ.

118
00:07:47,009 --> 00:07:48,384
ನಾನು ನಿನಗೆ ಹೇಳಿದೆ, ನಾವು ಓಡಲ್ಲ.

119
00:07:48,385 --> 00:07:52,180
ನಿಮ್ಮನ್ನು ಓಡಲು ಹೇಳುತ್ತಿಲ್ಲ.
ಈ ಜನರನ್ನು ಉಳಿಸುವಂತೆ ಕೇಳಿಕೊಳ್ಳುತ್ತಿದ್ದೇನೆ.

120
00:07:52,181 --> 00:07:56,559
ಅವರನ್ನು ಅವನಿಂದ ಉಳಿಸಬೇಕಾ? ನಿನ್ನೆ ಅವರು
ಅವನ ತುಣ್ಣೆ ಚೀಪಲು ಜೊಲ್ಲು ಸುರಿಸುತ್ತಿದ್ದರು.

121
00:07:56,560 --> 00:07:59,270
ಹೋಮ್ಲ್ಯಾಂಡರ್‌ನ ತುಣ್ಣೆ ವಿಚಿತ್ರವಾಗಿದೆ
ಎಂದು ಬಾಜಿ ಕಟ್ಟುತ್ತೇನೆ.

122
00:07:59,271 --> 00:08:01,856
ನಾವು ಇನ್ನೂ ಜಾಸ್ತಿ ಮಾಡಬಹುದು.
ನಮಗೆ ಹೆಚ್ಚಿನದನ್ನು ಮಾಡುವ ಆಸೆ.

123
00:08:01,857 --> 00:08:04,525
ಇವರನ್ನು ಉಳಿಸುವುದು
ನಾವು ಮಾಡಬಹುದಾದ ಅತ್ಯುತ್ತಮ ಕೆಲಸ.

124
00:08:04,526 --> 00:08:06,527
ಅವರನ್ನು ಕೆನಡಾಗೆ ಕರೆದುಕೊಂಡು ಹೋಗಿ,

125
00:08:06,528 --> 00:08:09,989
ನಿಮ್ಮ ತಂಡದ ಉಳಿದವರೊಂದಿಗೆ ಸಂಪರ್ಕ ಸಾಧಿಸಿ
ಮತ್ತು ಒಬ್ಬೊಬ್ಬರಿಗೇ ಸಹಾಯ ಮಾಡುತ್ತಿರಿ.

126
00:08:09,990 --> 00:08:11,950
ನೀನು ಆತ್ಮಹತ್ಯಾ ಕಾರ್ಯಾಚರಣೆಯಲ್ಲಿ ಸಾಯುವಾಗಲಾ?

127
00:08:13,160 --> 00:08:14,785
ನಿನ್ನ ಬಳಿ ಯೋಜನೆಯಾದರೂ ಇದೆಯಾ?

128
00:08:14,786 --> 00:08:16,370
ಅಂದರೆ, ಆತ್ಮಹತ್ಯೆಯೋ ಕೆನಡಾವೋ,

129
00:08:16,371 --> 00:08:18,540
ಇದು ನಿಜವಾದ ಕುದುರೆ ರೇಸ್, ಅಲ್ವಾ?

130
00:08:19,791 --> 00:08:22,461
ಅರ್ಥ ಆಯಿತು.
ತಮಾಷೆ ನಿಲ್ಲಿಸುವೆ. ಇಲ್ಲಿಂದ ತೊಲಗುವೆ.

131
00:08:26,173 --> 00:08:31,094
ನಾನು ದಿ ಸೆವೆನ್ ಸೇರಿದಾಗ, ಕ್ವೀನ್ ಮೇವ್‌ಳನ್ನು
ಭೇಟಿ ಮಾಡಲು ತುಂಬಾ ಉತ್ಸುಕಳಾಗಿದ್ದೆ.

132
00:08:32,054 --> 00:08:36,349
ಆದರೆ… ನಿಮ್ಮ ನಾಯಕರನ್ನು ಎಂದಿಗೂ ಭೇಟಿಯಾಗಬೇಡಿ.

133
00:08:36,350 --> 00:08:39,436
ಅವಳು ದುಃಖದಲ್ಲಿರುತ್ತಿದ್ದಳು,
ಯಾವುದರ ಬಗ್ಗೆಯೂ ಅವಳಿಗೆ ಕಾಳಜಿ ಇರಲಿಲ್ಲ ಮತ್ತು…

134
00:08:40,312 --> 00:08:43,106
ಅವಳು ತ್ಯಾಗ ಮಾಡಿ ದಣಿದಿದ್ದಳು.

135
00:08:43,774 --> 00:08:46,567
ನಾನು ಎಂತಹ ಗೂಬೆಯಾಗಿದ್ದೆನೆಂದರೆ,

136
00:08:46,568 --> 00:08:51,322
"ಜೀವನದಲ್ಲಿ ಹೋರಾಡಲು ಮೌಲ್ಯಯುತವಾದದ್ದು
ಏನಾದರೂ ಇದ್ದೇ ಇರುತ್ತೆ", ಎನ್ನುತ್ತಿದ್ದೆ.

137
00:08:51,323 --> 00:08:55,327
ನನಗೆ ನಾನೇ ಪ್ರಮಾಣ ಮಾಡಿಕೊಂಡೆ,
ನಾನು ಹಾಗೆ ಎಂದಿಗೂ ಆಗಲ್ಲ ಎಂದು.

138
00:08:57,996 --> 00:08:58,997
ಆದರೆ ಹಾಗೇ ಆಯಿತು.

139
00:09:00,666 --> 00:09:01,833
ಇನ್ನು ಮುಂದೆ ಹಾಗಾಗುವುದು ಬೇಡ.

140
00:09:04,253 --> 00:09:08,005
ಆತ್ಮಹತ್ಯೆ ನನಗಿಷ್ಟವಿಲ್ಲ. ನಾನು ಸೋಲಲ್ಲ.

141
00:09:08,006 --> 00:09:10,008
ಇದು ಗೆಲ್ಲುವ ಬಗ್ಗೆಯೂ ಅಲ್ಲ. ಇದು…

142
00:09:11,134 --> 00:09:14,930
ನಮಗೆ ಸಾಧ್ಯವಾದಷ್ಟು ಕಾಲ
ಧೈರ್ಯಗೆಡದೇ ಇರುವುದು ಮುಖ್ಯ.

143
00:09:18,100 --> 00:09:20,602
ಧೈರ್ಯಗೆಡದೇ
ಮುನ್ನುಗ್ಗುತ್ತಿರುವುದಕ್ಕೆ ಧನ್ಯವಾದ.

144
00:09:26,400 --> 00:09:29,569
"ನಿಮ್ಮ ನಾಯಕರನ್ನು ಎಂದಿಗೂ ಭೇಟಿಯಾಗಬೇಡಿ"
ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ.

145
00:09:32,322 --> 00:09:33,824
ನನ್ನ ವಿಷಯದಲ್ಲಿ ಅದು ಪರವಾಗಿರಲಿಲ್ಲ.

146
00:09:55,679 --> 00:09:58,890
ವಾರ್ಷಿಕೋತ್ಸವದ ಶುಭಾಶಯಗಳು,
ಮಿಸ್ಟರ್ ಅಧ್ಯಕ್ಷರೇ.

147
00:10:00,183 --> 00:10:04,229
ನಾನು ಇದನ್ನು ಟರ್ಬೈನ್-ಗ್ರೇಡ್
ಟೈಟಾನಿಯಂನಿಂದ ನಿಮಗಾಗಿ ಮಾಡಿಸಿದ್ದೇನೆ.

148
00:10:05,939 --> 00:10:09,483
ಪಟ್ಟಿಗಳನ್ನು
ಬುಲೆಟ್ ಪ್ರೂಫ್ ವಸ್ತುವಿನಿಂದ ಬಲಪಡಿಸಲಾಗಿದೆ.

149
00:10:09,484 --> 00:10:14,489
ನಾನು ನಿನ್ನನ್ನು ಎಷ್ಟು ಹಾಳು ಮಾಡಿದರೂ,
ಇದು ಎಂದಿಗೂ ಸ್ಫೋಟವಾಗುವುದಿಲ್ಲ.

150
00:10:16,700 --> 00:10:21,079
ಚಿನ್ನ, ನಾನು
ನಿನ್ನನ್ನು ಮದುವೆಯಾಗಲು ಅದೃಷ್ಟ ಮಾಡಿದ್ದೆ.

151
00:10:29,963 --> 00:10:30,880
ನಿನ್ನದು ತಡವಾಗುತ್ತಾ?

152
00:10:30,881 --> 00:10:32,549
ಈ ಕೆಲಸಕ್ಕೆ ಎಷ್ಟು ಸಮಯವಿದ್ದರೂ ಸಾಲದು.

153
00:10:33,967 --> 00:10:34,885
ಸಮಸ್ಯೆ ಏನು?

154
00:10:35,594 --> 00:10:36,761
ತಪ್ಪು ತಿಳಿದುಕೊಳ್ಳಬೇಡ.

155
00:10:36,762 --> 00:10:39,889
ಹೋಮ್ಲ್ಯಾಂಡರ್ ಭಾಷಣ ಬರೆಯಲು ನನಗೆ ಸಂತೋಷವೇ,

156
00:10:39,890 --> 00:10:43,018
ನಮ್ಮ ಹೊಸ ಭಗವಂತನ ಆಗಮನವನ್ನು ಘೋಷಿಸುವುದು.

157
00:10:43,977 --> 00:10:44,811
ಆದರೆ?

158
00:10:45,771 --> 00:10:49,441
ಇಷ್ಟೊಂದು ಜನ ಹೋಮ್ಲ್ಯಾಂಡರ್‌ನ ದೈವತ್ವವನ್ನು…

159
00:10:51,485 --> 00:10:55,947
ಅನುಮಾನಿಸುತ್ತಾರೆ ಎಂದು ಊಹಿಸಿರಲಿಲ್ಲ.

160
00:10:58,033 --> 00:11:00,202
ಆ '95ರ ವೈನ್ ಇನ್ನೂ ನಿನ್ನ ಹತ್ತಿರ ಇದೆಯಾ?

161
00:11:00,744 --> 00:11:03,246
ಇಮ್ಯಾಕ್ಯುಲೇಟ್ ಕನ್ಸೆಪ್ಷನ್‌ನಲ್ಲಿ,
ಆ ಪಾದ್ರಿಯಿಂದ ಪಡೆದದ್ದಾ?

162
00:11:04,748 --> 00:11:06,792
- ಅದನ್ನು ತೆರೆಯೋಣ.
- ಒಳ್ಳೆಯ ಐಡಿಯಾ.

163
00:11:13,715 --> 00:11:17,093
ನೀನು ನನ್ನ ಮೇಲೆ ಕೋಪಗೊಂಡಿದ್ದೀಯ ಅಂತ ಗೊತ್ತು,
ಆದರೆ ನನಗೆ ಈಗ ನಿನ್ನ ಅವಶ್ಯಕತೆಯಿದೆ.

164
00:11:17,094 --> 00:11:18,428
ಅವನು ಏನು ಯೋಚಿಸುತ್ತಿದ್ದಾನೆ?

165
00:11:21,098 --> 00:11:23,600
ಅವನ ಮೇಲೆ ಒತ್ತಡ ಹೇರಿದರೆ,
ಹೋಮ್ಲ್ಯಾಂಡರ್ ವಿರುದ್ಧ ತಿರುಗಿ ಬೀಳ್ತಾನಾ?

166
00:11:25,560 --> 00:11:29,731
ಅಯ್ಯೋ, ಇದೇನು ಎಂಟನೇ ತರಗತಿಯಾ?

167
00:11:32,859 --> 00:11:36,947
ಹಾಗಾದರೆ, ಅನುಮಾನಿಸುವ ಜನರ ವಿಷಯದಲ್ಲಿ
ನೀನು ಏನಾದರೂ ಮಾಡಿದರೆ ಹೇಗಿರುತ್ತೆ?

168
00:11:37,906 --> 00:11:39,157
ನಿನ್ನ ಮಾತಿನ ಅರ್ಥವೇನು?

169
00:11:40,700 --> 00:11:42,243
ನಿನಗೆ ಗೊತ್ತು ಅಂದುಕೊಳ್ಳುತ್ತೇನೆ.

170
00:11:42,244 --> 00:11:43,495
ಇಲ್ಲ, ನನಗೆ ಗೊತ್ತಿಲ್ಲ.

171
00:11:44,037 --> 00:11:44,996
ಸರಿ…

172
00:11:56,049 --> 00:12:00,637
ಹೋಮ್ಲ್ಯಾಂಡರ್‌ಗೆ ಜಗತ್ತನ್ನು ನಂಬಿಸಲು
ನಾವು ಹೇಗೆ ಸಹಾಯ ಮಾಡಬಹುದು?

173
00:12:01,596 --> 00:12:04,099
ನಾನು ಪ್ರತಿದಿನ ಅದರ ಬಗ್ಗೆ ಯೋಚಿಸುತ್ತೇನೆ.

174
00:12:14,526 --> 00:12:15,360
ರುಚಿಯಾಗಿದೆ.

175
00:12:27,164 --> 00:12:29,832
ನಾನು ಚಿಕ್ಕವಳಾಗಿದ್ದಾಗ,
ನನ್ನ ಬಳಿ ಪೀಚಸ್ ಎಂಬ ನಾಯಿ ಇತ್ತು.

176
00:12:29,833 --> 00:12:30,833
ಅದು ಸತ್ತು ಹೋಯಿತು.

177
00:12:30,834 --> 00:12:33,795
ಅವಳ ಮೇಲೆ ಸಾಗಿ ಹೋದ
ಶಾಲಾ ಬಸ್‌ನಲ್ಲಿ ನಾನು ಪ್ರಯಾಣಿಸುತ್ತಿದ್ದೆ.

178
00:12:34,379 --> 00:12:35,380
ಭಯಂಕರ ದೃಶ್ಯವಾಗಿತ್ತು.

179
00:12:37,340 --> 00:12:39,967
ನಾನು ಅವಳ ಕಾಲರ್ ಅನ್ನು
ವಾರಗಳವರೆಗೆ ನನ್ನ ಬಳಿ ಇಟ್ಟುಕೊಂಡಿದ್ದೆ.

180
00:12:39,968 --> 00:12:43,305
ನಾನು ತುಂಬಾ ಪ್ರೀತಿಸುತ್ತಿದ್ದ
ಸಾಕುಪ್ರಾಣಿಯ ನೆನಪಿಗಾಗಿ.

181
00:12:44,431 --> 00:12:47,057
ನೀನು ಮಾಡುತ್ತಿರುವುದೂ ಅದನ್ನೇ, ಅಲ್ವಾ?

182
00:12:47,058 --> 00:12:50,311
ಎಲ್ಲರೂ ನೀನೇ ಅಲೆಮಾರಿ ಮತ್ತು ಫ್ರೆಂಚಿ
ನಿನಗೆ ಆಶ್ರಯ ನೀಡಿದ ಅಂದುಕೊಳ್ಳಬೇಕೆಂದಿರುವೆ

183
00:12:50,312 --> 00:12:52,647
ಆದರೆ ನಿಜವಾಗಿ ಅದು ವಿರುದ್ಧವಾಗಿತ್ತು
ಎಂದು ನಿನಗೆ ಗೊತ್ತು.

184
00:12:54,107 --> 00:12:57,276
ಅವನು ನಿನ್ನ ಸಾಕು ನಾಯಿ.

185
00:12:57,277 --> 00:12:58,861
ಅವನನ್ನು ನಿನ್ನ ನಿಯಂತ್ರಣದಲ್ಲಿಟ್ಟುಕೊಂಡಿದ್ದೆ,

186
00:12:58,862 --> 00:13:01,573
ಏಕೆಂದರೆ ಅವನನ್ನು
ಬಳಸಿಕೊಳ್ಳುವುದು ನಿನಗಿಷ್ಟವಿತ್ತು.

187
00:13:02,449 --> 00:13:04,909
ಅವನ ನಿನ್ನಲ್ಲಿಟ್ಟಿದ್ದ ಭಕ್ತಿ
ನಿನಗೆ ಸಂತೋಷ ನೀಡುತ್ತಿತ್ತು.

188
00:13:04,910 --> 00:13:08,287
ಅವನು ಮತ್ತೊಬ್ಬರೊಂದಿಗೆ ಹೋಗಬಹುದು ಎಂದಾದಾಗ,

189
00:13:08,288 --> 00:13:09,706
ಕೊನೆಗೂ ಅವನ ಜೊತೆ ಮಲಗಿದೆ.

190
00:13:11,583 --> 00:13:14,419
ಅವನಿಗೆ ಸಂತೋಷ ಸಿಗದಂತೆ ಮಾಡುವುದು
ನಿನ್ನ ಗುರಿಯಾಗಿತ್ತು,

191
00:13:15,378 --> 00:13:17,547
ಅವನು ನಿನಗಾಗಿ
ಏನನ್ನಾದರೂ ಮಾಡಲು ಸಿದ್ಧನಾಗಿದ್ದರೂ,

192
00:13:18,548 --> 00:13:19,883
ಅವನ ಜೀವವನ್ನೇ ಪಣಕ್ಕಿಟ್ಟಿದ್ದರೂ.

193
00:13:26,181 --> 00:13:28,308
ಅವನು ಜೀವ ಕೊಡುವುದೇ ನಿನಗೆ ಬೇಕಿದ್ದದ್ದು--

194
00:13:43,406 --> 00:13:46,700
ಓಯ್, ಓಯ್! ಶಾಂತವಾಗಿರು. ನನ್ನ ಮಾತು ಕೇಳು.

195
00:13:46,701 --> 00:13:49,704
ಸೋಲಜರ್ ಬಾಯ್‌ಗೆ ಕೆಟ್ಟ ಕೋಪ ಬಂದಾಗಲೇ
ಅವನ ಸ್ಫೋಟ ಕೆಲಸ ಮಾಡುವುದು, ಆಯ್ತಾ?

196
00:13:50,372 --> 00:13:53,374
ನಿನಗೂ ಹಾಗೇ ಇರಬಹುದೆಂದು ನಾವು ಕೋಪ ಬರಿಸಿದೆವು.

197
00:13:53,375 --> 00:13:55,209
ಆದರೆ ಅದು ವೈಯಕ್ತಿಕವಾಗಿರಲಿಲ್ಲ. ದೇವರಾಣೆ.

198
00:13:55,210 --> 00:13:57,754
"ಓ, ಈಗ, ಶಾಶ್ವತವಾಗಿ…"

199
00:13:58,880 --> 00:14:02,550
"ವಿದಾಯ. ವಿದಾಯ…"

200
00:14:02,551 --> 00:14:03,717
ಏನು?

201
00:14:03,718 --> 00:14:04,969
ಏನು ಹೇಳುತ್ತಿರುವೆ?

202
00:14:04,970 --> 00:14:10,850
ಒಥೆಲ್ಲೋ. ನನಗೆ ಅದು ಬಾಯಿಪಾಠವಾಗಿತ್ತು,
ಆದರೆ ಈಗ ಅದು… ಮರೆತುಹೋಗಿದೆ.

203
00:14:11,643 --> 00:14:16,147
ನನ್ನ ಮೆದುಳು ಚುರುಕಾಗಿತ್ತು, ಆದರೆ ಈಗ ಅದು…

204
00:14:19,776 --> 00:14:21,110
ಅದು ಕೆಲಸ ಮಾಡಿತಾ?

205
00:14:21,111 --> 00:14:24,114
ನಾನು ನಿಮ್ಮಂತೆ ಮೂರ್ಖಳಾಗಿದ್ದೇನೆ.

206
00:14:29,077 --> 00:14:30,245
ಧನ್ಯವಾದ.

207
00:14:36,876 --> 00:14:39,420
ಅದ್ಭುತ. ಅದ್ಭುತ, ಅದ್ಭುತ.

208
00:14:39,421 --> 00:14:42,381
ನಾವೆಲ್ಲರೂ ಈಗ
ಸಾಕಷ್ಟು ವಿಕಿರಣಕ್ಕೆ ಒಡ್ಡಿಕೊಳ್ಳುತ್ತಿದ್ದೇವೆ,

209
00:14:42,382 --> 00:14:45,050
ಇದು ತುಂಬಾ ಮೋಜು.

210
00:14:45,051 --> 00:14:47,720
ಮುಖ್ಯವಾದದ್ದೇನೆಂದರೆ
ಅದನ್ನು ಫ್ರೆಂಚಿ ಮಾಡಿದ್ದು.

211
00:14:47,721 --> 00:14:48,971
ಇದು ಕೆಲಸ ಮಾಡುತ್ತಿದೆ.

212
00:14:48,972 --> 00:14:52,808
ನಾನು ಕೂಡ ಕೆಲಸ ಮಾಡಿದ್ದೇನೆ.

213
00:14:52,809 --> 00:14:55,019
ನೀನು ಉತ್ತಮ ಆಯುಧವಾಗುತ್ತೀಯ
ಎಂದು ನನಗೆ ಗೊತ್ತಿತ್ತು,

214
00:14:55,020 --> 00:14:57,563
ಆದರೆ ಇಷ್ಟು ಒಳ್ಳೆಯ ಆಯುಧವಾಗುತ್ತೀಯ
ಎಂದು ಕನಸಿನಲ್ಲೂ ಎಣಿಸಿರಲಿಲ್ಲ.

215
00:14:57,564 --> 00:14:59,106
ಹಾಗಾದರೆ, ಯೋಜನೆ ಏನು?

216
00:14:59,107 --> 00:15:02,276
ಹೋಮ್ಲ್ಯಾಂಡರ್ ಈಸ್ಟರ್ ಹಬ್ಬದಂದು
ತಾನು ಸರ್ವಶಕ್ತ ದೇವರು ಎಂದು ಘೋಷಿಸ್ತಿದ್ದಾನೆ.

217
00:15:02,277 --> 00:15:04,028
ಅವನು ಎಲ್ಲಿ, ಯಾವಾಗ ಇರುತ್ತಾನೆಂದು ಗೊತ್ತು.

218
00:15:04,029 --> 00:15:05,613
ಹೋಮ್ಲ್ಯಾಂಡರ್‌ನಿಂದ ವಿಶ್ವದ ಪುನರಾರಂಭ
ದಿ ವೈಟ್ ಹೌಸ್.

219
00:15:05,614 --> 00:15:07,406
ಅದು ವಾಟ್ ಸ್ಟುಡಿಯೋನಲ್ಲಿದ್ದಂತೆ ಇದ್ದರೆ,

220
00:15:07,407 --> 00:15:09,742
ಕೆಲಸವಾದ ಮೇಲೆ, ಚಿಂತನೆಯ ಪೊಲೀಸರನ್ನು
ಅಮೆರಿಕದ ಮೇಲೆ ಪ್ರಯೋಗಿಸ್ತಾನೆ.

221
00:15:09,743 --> 00:15:11,076
ಲಕ್ಷಾಂತರ ಜನರು ಸಾಯಲಿದ್ದಾರೆ.

222
00:15:11,077 --> 00:15:12,911
ಸ್ಪಷ್ಟವಾಗಿ ಹೇಳಬೇಕೆಂದರೆ,

223
00:15:12,912 --> 00:15:15,914
ನಾವು ವೈಟ್ ಹೌಸ್‌ಗೆ ನುಗ್ಗುವ ಬಗ್ಗೆ
ಮಾತನಾಡುತ್ತಿದ್ದೇವೆಯೇ?

224
00:15:15,915 --> 00:15:17,333
- ಹೌದು.
- ಹೋಮ್ಲ್ಯಾಂಡರ್‌ಗೆ

225
00:15:17,334 --> 00:15:19,960
- ನಮ್ಮ ಬರುವಿಕೆ ಮೊದಲೇ ಗೊತ್ತು.
- ಅರ್ಥವಾಯಿತು… ವೇಷ ಧರಿಸ್ತೇವೆ.

226
00:15:19,961 --> 00:15:23,256
ತುಪ್ಪಳಿನ ಟೋಪಿ ಧರಿಸುವ… ಸೈನಿಕರಂತೆಯಾ?

227
00:15:25,508 --> 00:15:28,719
ಅಯ್ಯೋ. ಅದು ಇಂಗ್ಲೆಂಡ್. ಮರೆತುಬಿಡಿ.

228
00:15:28,720 --> 00:15:31,013
ನಾವು ಒಳಗೆ ಹೋಗುವುದು ಹೇಗೆ?

229
00:15:31,014 --> 00:15:32,222
ಭೂಗತ ಸುರಂಗದಿಂದ.

230
00:15:32,223 --> 00:15:34,892
ಹಳೆಯ ಅಧ್ಯಕ್ಷ
ಅಕ್ರಮ ಸಂಬಂಧ ಇಟ್ಟುಕೊಳ್ಳಲು ಬಳಸುತ್ತಿದ್ದ ಜಾಗ.

231
00:15:34,893 --> 00:15:37,603
ರಹಸ್ಯ ಅಧ್ಯಕ್ಷೀಯ ಅಕ್ರಮ ಸಂಬಂಧದ ಟನಲ್‌ಗಳು

232
00:15:37,604 --> 00:15:38,771
ಸಾಕಷ್ಟು ಸುರಕ್ಷಿತವಾಗಿರಬೇಕು.

233
00:15:38,772 --> 00:15:41,106
ನಿಜ, ಆದರೆ ನನ್ನ ಬಳಿ
ಕಳೆದ ವರ್ಷದ ನೀಲನಕ್ಷೆಗಳು ಇನ್ನೂ ಇವೆ.

234
00:15:41,107 --> 00:15:42,650
ಸಿಂಗರ್‌ಗೆ ರಕ್ಷಣೆ ನೀಡಿದಾಗ ಬಳಸಿದ್ದು.

235
00:15:42,651 --> 00:15:44,485
ಪ್ರತಿಯೊಂದು ಬಾಗಿಲಿನ,
ಪ್ರತಿ ಪ್ರವೇಶದ್ವಾರದ ಕೋಡ್.

236
00:15:44,486 --> 00:15:45,903
ಚಾತುರ್ಯ.

237
00:15:45,904 --> 00:15:50,325
ಹೇಗಿದೆ, ಹೇಳಿ?
ಕೊನೆಯದಾಗಿ ಒಮ್ಮೆ ಪ್ರಯತ್ನಿಸೋಣವೇ?

238
00:16:03,713 --> 00:16:05,422
ಹೌದು ಅಂದುಕೊಳ್ಳುತ್ತೇನೆ.

239
00:16:05,423 --> 00:16:09,511
ಇಲ್ಲ, ನೀವೆಲ್ಲರೂ ಮೂರ್ಖರು.

240
00:16:10,428 --> 00:16:13,305
ಹೋಮ್ಲ್ಯಾಂಡರ್ ನಿಮ್ಮನ್ನು ಕೊಲ್ಲುತ್ತಾನೆ,
ನನ್ನನ್ನು ಹುಡುಕುತ್ತಾನೆ.

241
00:16:13,306 --> 00:16:15,350
ಹಾಗಾಗಿ, ನನಗಿರುವ ಉಳಿದ ಸಮಯದಲ್ಲಿ,

242
00:16:16,643 --> 00:16:18,978
ಒರ್ಲ್ಯಾಂಡೊದಲ್ಲಿರುವ
ಹ್ಯಾರಿ ಪಾಟರ್ ವರ್ಲ್ಡ್‌ಗೆ ಹೋಗ್ತೇನೆ.

243
00:16:19,562 --> 00:16:20,522
ನನ್ನ ಜೊತೆ ಯಾರು ಬರುವಿರಿ?

244
00:16:23,274 --> 00:16:26,277
ಕೈ ಎತ್ತಿ! ಸೇಜ್ ಇದರಲ್ಲಿಲ್ಲ!

245
00:16:40,375 --> 00:16:41,458
ಹೋಮ್ಲ್ಯಾಂಡರ್‌ನ ನಂಬುವೆವು

246
00:16:41,459 --> 00:16:43,586
ನಾನು ಅಡ್ಡಿಪಡಿಸುವವನು.
ನಾನು ಅಡ್ಡಿಪಡಿಸುತ್ತೇನೆ.

247
00:16:44,754 --> 00:16:47,131
ನನ್ನ ಕಾರ್ಖಾನೆಯಲ್ಲಿ ಸ್ಟಾರ್ಲೈಟರ್‌ಗಳು
ಸಂಬಳ ಪಡೆಯದ ನೌಕರರಾಗಿ

248
00:16:47,132 --> 00:16:49,217
ಕೆಲಸ ಮಾಡಬಾರದೇಕೆ ಎಂದು ಯೋಚಿಸುತ್ತಿದ್ದೆ.

249
00:16:50,343 --> 00:16:52,011
ಅಂದರೆ, ಗುಲಾಮರಾ?

250
00:16:52,846 --> 00:16:54,346
ನೀವಿಲ್ಲಿ ಬಂದಿದ್ದು ಸಂತೋಷ, ಹೋಮ್ಲ್ಯಾಂಡರ್.

251
00:16:54,347 --> 00:16:56,974
ಬಿಳಿಯರ ಫಲವತ್ತತೆ ದರದ ಬಗ್ಗೆ
ನಿಮಗೆ ತಿಳಿಸಬೇಕೆಂದಿದ್ದೆ.

252
00:16:56,975 --> 00:16:59,435
ನೀನು ತೋಟದಲ್ಲಿ ಕಾಯುತ್ತಿರು.

253
00:16:59,436 --> 00:17:00,436
- ನಮಗೆ ಸ್ವಲ್ಪ ಸಮಯ ಬೇಕು.
- ಸರಿ.

254
00:17:00,437 --> 00:17:01,521
ಈ ಕಡೆ.

255
00:17:03,440 --> 00:17:06,860
- ಅದು ಯಾರು?
- ಗುಂಟರ್ ವ್ಯಾನ್ ಎಲ್ಲಿಸ್, ಅತ್ಯಂತ ಶ್ರೀಮಂತ.

256
00:17:07,819 --> 00:17:10,529
ಹದಿನೇಳು ಮಕ್ಕಳು, ಹವ್ಯಾಸಿ ಗಗನಯಾತ್ರಿ.

257
00:17:10,530 --> 00:17:11,447
ಹಾಗಾದರೆ?

258
00:17:11,448 --> 00:17:13,449
ಅವನು ಕೋಟ್ಯಾಧಿಪತಿಗಳನ್ನು ಪ್ರತಿನಿಧಿಸುತ್ತಾನೆ,

259
00:17:13,450 --> 00:17:15,617
ಮತ್ತು ಅವರಲ್ಲಿ ಕೆಲವು… ವಿನಂತಿಗಳಿವೆ.

260
00:17:15,618 --> 00:17:16,785
ನನಗೆ ಇದಕ್ಕೆ ಸಮಯವಿಲ್ಲ.

261
00:17:16,786 --> 00:17:19,414
ಅವರು ಅಮೆರಿಕದ ಆಡಳಿತ ವರ್ಗ.

262
00:17:20,165 --> 00:17:22,500
ನಿಮ್ಮ ಚರ್ಚ್ ನಿರ್ಮಿಸಲು,
ನಮಗೆ ಅವರ ಬೆಂಬಲ ಬೇಕಾಗುತ್ತದೆ.

263
00:17:27,046 --> 00:17:29,424
ಅವನು ನಂಬಿಕೆಯುಳ್ಳವನೇ?
ಅವರಲ್ಲಿ ಯಾರಾದರೂ ನಂಬಿಕೆಯುಳ್ಳವರಾ?

264
00:17:30,300 --> 00:17:33,260
- ಅಥವಾ ನನಗೆ ಹೆದರುವವರಷ್ಟೇನಾ?
- ಥಾಮಸ್ ಕೂಡ ಯೇಸುವನ್ನು ಅನುಮಾನಿಸಿದ್ದ.

265
00:17:33,261 --> 00:17:38,141
ಸಾಕಷ್ಟು ಸಮಯವಿದ್ದರೆ, ಅತ್ಯಂತ ಸೌಮ್ಯವಾದ ನೀರು
ಯಾವುದೇ ಕಲ್ಲನ್ನು ಸವೆಯಿಸಬಹುದು.

266
00:17:38,850 --> 00:17:41,310
- ತಾಳ್ಮೆ--
- ಏನು ಮಾಡುತ್ತಿದ್ದರೂ, ಅದನ್ನು ಬೇಗ ಮುಗಿಸು.

267
00:17:41,311 --> 00:17:43,896
ನಾವು ಮುಂದೂಡಬೇಕು ಅನಿಸುತ್ತೆ.

268
00:17:43,897 --> 00:17:45,355
ಮುಂದೂಡುವ ಪ್ರಶ್ನೆಯೇ ಇಲ್ಲ.

269
00:17:45,356 --> 00:17:46,607
ಬುಚರ್‌ನ ಪ್ರಯೋಗಾಲಯ ನೋಡಿದಿರಿ.

270
00:17:46,608 --> 00:17:49,067
ಅವನು ಸೋಲಜರ್ ಬಾಯ್‌ನ ಸ್ಫೋಟವನ್ನು ಕಂಡುಹಿಡಿದರೆ,

271
00:17:49,068 --> 00:17:52,696
ಅಥವಾ ಅವನು ನಿಮ್ಮನ್ನು
ಶಕ್ತಿಹೀನನನ್ನಾಗಿ ಮಾಡುವ ಸಣ್ಣ ಅವಕಾಶವಿದ್ದರೂ--

272
00:17:52,697 --> 00:17:54,990
ನಾನು ವಿಲಿಯಂ ಬುಚರ್‌ಗೆ
ಹೆದರುತ್ತೇನೆ ಅಂದುಕೊಂಡಿದ್ದೀಯಾ?

273
00:17:54,991 --> 00:17:56,533
ಇಲ್ಲ. ಇಲ್ಲ, ಖಂಡಿತ ಇಲ್ಲ.

274
00:17:56,534 --> 00:17:59,328
ಖಂಡಿತ ಇಲ್ಲ. ಅಗತ್ಯ
ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದ್ದೇವೆ.

275
00:17:59,329 --> 00:18:00,537
ಜಾಗ ಇಲ್ಲಿಗೆ ಸ್ಥಳಾಂತರಿಸಿದ್ದೇವೆ.

276
00:18:00,538 --> 00:18:04,708
ನಿಮ್ಮ ಪವಿತ್ರ ದಿನದಂದು ಯಾವುದೇ ಗೊಂದಲವಾಗಬಾರದು.

277
00:18:04,709 --> 00:18:07,420
ಹಾಗಾದಾಗ ನನ್ನ ಕೆಲಸ ಮನಸಿಟ್ಟು ಮಾಡಬಲ್ಲೆ.

278
00:18:08,505 --> 00:18:11,298
ನಿಮ್ಮ ಧರ್ಮಧ್ವಜದ ಅಡಿಯಲ್ಲಿ
ಇನ್ನಷ್ಟು ಆತ್ಮಗಳನ್ನು ಸೇರಿಸಬಲ್ಲೆ.

279
00:18:11,299 --> 00:18:12,300
ಮಹಾಶಯರೇ.

280
00:18:15,720 --> 00:18:17,889
- ಈಗ ಬೇಡ, ಡೀಪ್.
- ನೀನು ಮಧ್ಯ ಬಾಯಿ ಹಾಕಬೇಡ.

281
00:18:18,473 --> 00:18:21,350
ನಿಮಗೆ ಇನ್ನು ಮುಂದೆ ದಿ ಸೆವೆನ್ ಅಗತ್ಯವಿಲ್ಲವಾ?
ಅದ್ಭುತ ನಡೆ, ಎಂದಿನಂತೆ.

282
00:18:21,351 --> 00:18:24,394
ಆದರೆ ನಾನು ಯೋಚಿಸುತ್ತಿದ್ದೆ,
ನಿಮಗೆ ಬೇಕಾಗಿರುವುದು ಒಬ್ಬ ಯೋಧ.

283
00:18:24,395 --> 00:18:27,314
ಹಳೆಯ ಕಾಲದ ದಷ್ಟ ಪುಷ್ಟ ಯೋಧರಂತೆಯಾ?

284
00:18:27,315 --> 00:18:29,400
ತಲೆಬುರುಡೆ ಒಡೆಯುವವರು.
ಕಾನೂನನ್ನು ಜಾರಿಗೆ ತರುವವರು.

285
00:18:30,151 --> 00:18:31,777
ಇಂತಹ ಯೋಧರ ಬಗ್ಗೆ ಎಲ್ಲಿ ತಿಳಿದುಕೊಂಡೆ?

286
00:18:31,778 --> 00:18:33,403
ಬೈಬಲ್. ಹೆಸರು ಕೇಳಿರುವೆಯಾ?

287
00:18:33,404 --> 00:18:37,032
ಅದು ಬೈಬಲ್‌ನಲ್ಲಿಲ್ಲ.
ನಾನು ಊಹಿಸುತ್ತೇನೆ. ಕೆಜಿಎಫ್ ನೋಡಿದೆಯಾ?

288
00:18:37,033 --> 00:18:38,450
ಏನು? ಇಲ್ಲ.

289
00:18:38,451 --> 00:18:40,035
ಭರ್ಜರಿ ಚಿತ್ರ ಕಾಂತಾರ.

290
00:18:40,036 --> 00:18:41,453
ಅದು ಸಾಕ್ಷ್ಯಚಿತ್ರವಲ್ಲ.

291
00:18:41,454 --> 00:18:42,372
ಇಲ್ಲ, ಟಗರು.

292
00:18:47,544 --> 00:18:50,463
- ಏನು ಮಾಡಿದಿರಿ…
- ಅವನು ಗಗನಯಾತ್ರಿ. ಬಾಹ್ಯಾಕಾಶಕ್ಕೆ ಕರೆದೊಯ್ದೆ.

293
00:18:51,172 --> 00:18:54,424
ನನ್ನ ಮಾತು ಕೇಳು.
ನನಗೆ ಇನ್ನು ಯಾರ ಅಗತ್ಯವೂ ಇಲ್ಲ.

294
00:18:54,425 --> 00:18:56,844
- ನನಗೆ ಕೋಟ್ಯಾಧಿಪತಿಗಳು ಬೇಕಿಲ್ಲ--
- ಒಪ್ಪುತ್ತೇನೆ, ಸರ್.

295
00:18:56,845 --> 00:18:58,470
ನನ್ನ ಪ್ರೀತಿಗಾಗಿ

296
00:18:58,471 --> 00:19:02,350
ಅವಮಾನವನ್ನೂ ಲೆಕ್ಕಿಸದ
ವಿಕೃತ ಮೀನಿನ ಅಗತ್ಯವೂ ನನಗಿಲ್ಲ.

297
00:19:04,853 --> 00:19:05,936
ನನ್ನ ಬಗ್ಗೆ ಹಾಗಂದುಕೊಂಡಿದ್ದೀರಾ?

298
00:19:05,937 --> 00:19:06,896
ನಾವು ಭೇಟಿಯಾದ ದಿನದಿಂದ.

299
00:19:08,314 --> 00:19:13,694
ಜೀವನದಲ್ಲಿ ಯಾರ ಬಗ್ಗೆಯೂ
ನಿನಗಿಂತ ಕಡಿಮೆ ಗೌರವ ಇರಲಿಲ್ಲ.

300
00:19:13,695 --> 00:19:18,867
ನಿಜ ಹೇಳಬೇಕೆಂದರೆ, ಕೆವಿನ್,
ನಾನು ನಿನ್ನನ್ನು ಕೊಲ್ಲದಿರಲು ಒಂದೇ ಕಾರಣವೆಂದರೆ

301
00:19:19,909 --> 00:19:23,912
ನೀನು ಎಷ್ಟು ನಿಷ್ಪ್ರಯೋಜಕ ಎಂದು

302
00:19:23,913 --> 00:19:26,708
ನಿನಗೆ ತಿಳಿಯಬೇಕು.

303
00:19:33,339 --> 00:19:34,548
ಅತೀಂದ್ರಿಯ ಶಕ್ತಿಯವರು ಬಂದರಾ?

304
00:19:34,549 --> 00:19:36,551
- ರಾಷ್ಟ್ರದ ಮೂಲೆಗಳಿಂದ.
- ಒಳ್ಳೆಯದು.

305
00:19:37,594 --> 00:19:43,181
ನೇರ ಪ್ರಸಾರ ಮುಗಿದ ತಕ್ಷಣ,
ನಾಸ್ತಿಕರನ್ನು ಆಸ್ತಿಕರಿಂದ ಬೇರ್ಪಡಿಸು.

306
00:19:43,182 --> 00:19:49,272
ನನ್ನ ಸತ್ಯವನ್ನು ಸ್ವೀಕರಿಸದವರು ನನ್ನ
ಪವಿತ್ರ ಬೆಂಕಿಯಲ್ಲಿ ಮೊದಲು ಸುಡಲ್ಪಡುತ್ತಾರೆ.

307
00:19:51,065 --> 00:19:56,362
ಮುಗುಳ್ನಗು, ಫಾದರ್. ಒಂದಲ್ಲ ಒಂದು ರೀತಿಯಲ್ಲಿ,
ಇಂದು ಒಂದು ಸುಂದರ ದಿನವಾಗಿರುತ್ತದೆ.

308
00:20:18,551 --> 00:20:19,552
ಕಿಮಿಕೊ?

309
00:20:20,803 --> 00:20:21,679
ಬುಚರ್ ಹೇಳಿದ್ದು ತಪ್ಪು.

310
00:20:22,931 --> 00:20:24,891
ನೀನು ಕೇವಲ ಆಯುಧವಲ್ಲ.

311
00:20:27,393 --> 00:20:29,979
ಆರಂಭದಿಂದಲೂ,
ಫ್ರೆಂಚಿಗೆ ನಿನ್ನ ಬಗ್ಗೆ ತಿಳಿದಿತ್ತು.

312
00:20:31,272 --> 00:20:33,733
ಮತ್ತು ಅವನಿಗೆ ತಿಳಿದಿದ್ದರಿಂದ, ನಮಗೂ ತಿಳಿಯಿತು.

313
00:20:34,817 --> 00:20:38,279
ಅವನು ಹೋದ ಮಾತ್ರಕ್ಕೆ
ಅದೆಲ್ಲವೂ ಹೋಯಿತು ಅಂದುಕೊಳ್ಳಬೇಡ.

314
00:20:40,865 --> 00:20:43,076
ಸರಿ. ಇದೊಂದು ರೋಮಾಂಚಕಾರಿ ಸನ್ನಿವೇಶ.

315
00:20:43,785 --> 00:20:44,911
ಹಾಗಾದರೆ, ಬನ್ನಿ ಹೋಗೋಣ.

316
00:21:06,015 --> 00:21:08,976
ಈಗ ಏನು ಮಾಡಿದರೆ ತುಂಬಾ ಉಪಯೋಗವಾಗುತ್ತೆ ಗೊತ್ತಾ?

317
00:21:08,977 --> 00:21:11,228
ನೀನು ನನ್ನ ಜೊತೆ ಮಾತನಾಡಿದರೆ, ನಾಯಿ.

318
00:21:11,229 --> 00:21:12,480
ಏನು ಹೇಳಿದೆ?

319
00:21:14,315 --> 00:21:17,693
ಏನೂ ಇಲ್ಲ. ನಿನ್ನ ಭಾಷಣ ಕೇಳಲು
ಕಾತರದಿಂದ ಕಾಯುತ್ತಿದ್ದೇನೆ.

320
00:21:17,694 --> 00:21:19,362
ಅದ್ಭುತವಾಗಿ ಮಾತಾಡಿರುತ್ತೀಯ ಎಂದು ಗೊತ್ತು.

321
00:21:20,488 --> 00:21:24,450
ಲೈವ್ ಹೋಗಲು ಐದು, ನಾಲ್ಕು, ಮೂರು…

322
00:21:29,455 --> 00:21:33,126
ನನ್ನ ಸಹ ಅಮೆರಿಕನ್ನರೇ…

323
00:21:35,628 --> 00:21:36,878
ಈಸ್ಟರ್ ಹಬ್ಬದ ಶುಭಾಶಯಗಳು.

324
00:21:36,879 --> 00:21:40,465
{\an8}ನಮಗೆಲ್ಲ ತಿಳಿದಿರುವಂತೆ, ಚಿತ್ರಹಿಂಸೆಗೊಳಪಡಿಸಿ,

325
00:21:40,466 --> 00:21:44,052
{\an8}ಘನತೆಯನ್ನು ಕಸಿದುಕೊಂಡು ಕೊಲ್ಲಲ್ಪಟ್ಟ,
ಯೇಸುವನ್ನು ಸ್ಮರಿಸುವ ದಿನ.

326
00:21:44,053 --> 00:21:45,804
ಹೋಮ್ಲ್ಯಾಂಡರ್
ರಾಷ್ಟ್ರವನ್ನುದ್ದೇಶಿಸಿ ಮಾತಾಡುತ್ತಾರೆ

327
00:21:45,805 --> 00:21:48,724
ಅದೆಲ್ಲ ಒಂದು ಬದಿಗಿರಲಿ. ನೀವು ಅಮೆರಿಕನ್ನರು.

328
00:21:48,725 --> 00:21:51,519
ನಿಮ್ಮ ದೇವರು ಸಾವನ್ನು ಜಯಿಸಿದವನಾಗಿರಬೇಕು.

329
00:21:52,103 --> 00:21:56,982
ಪ್ರತಿದಾಳಿ ಮಾಡುವ ದೇವರು.
ನೀವು ನಂಬಬಹುದಾದ ದೇವರು.

330
00:21:56,983 --> 00:22:01,362
{\an8}ಇಂದು ನಾನು ನಿಮಗೆ
ಒಳ್ಳೆಯ ಸುದ್ದಿಯನ್ನು ತಂದಿದ್ದೇನೆ.

331
00:22:02,613 --> 00:22:07,951
ಇತ್ತೀಚೆಗೆ, ನನಗೆ
ಅದ್ಭುತ ದೇವತೆ ದರ್ಶನ ನೀಡಿದಳು,

332
00:22:07,952 --> 00:22:10,371
ರಹಸ್ಯದ ಉಡುಗೊರೆಯನ್ನು ನೀಡಿದಳು.

333
00:22:11,497 --> 00:22:15,167
ರಹಸ್ಯ ಟನಲ್
ನಾನು ಅಂದುಕೊಂಡ ವಾಸನೆಯೇ ಬರುತ್ತಿದೆ.

334
00:22:15,168 --> 00:22:17,461
ನಾನವಳ ಬೆಳಕಿನಲ್ಲಿ ಮಿಂದಾಗ,

335
00:22:17,462 --> 00:22:21,381
ಅವಳ ದೈವಿಕ ತುಟಿಗಳು
ನನ್ನ ಕಿವಿಗೆ ಸಿಹಿ ಸತ್ಯವನ್ನು ಸುರಿದವು.

336
00:22:21,382 --> 00:22:24,843
ಮತ್ತು ನನ್ನ ನಿಜವಾದ ಉದ್ದೇಶ ಏನು
ಎಂದು ನಾನು ಅರಿತುಕೊಂಡೆ.

337
00:22:24,844 --> 00:22:27,721
ಜಗತ್ತಿನ ಶ್ರೇಷ್ಠ ನಾಯಕನಾಗುವುದು ಮಾತ್ರವಲ್ಲ,

338
00:22:27,722 --> 00:22:32,184
ಇಡೀ ಮಾನವೀಯತೆಯನ್ನು ಉಳಿಸುವುದು ಕೂಡ.

339
00:22:32,185 --> 00:22:38,024
ಎರಡನೇ ಬರುವಿಕೆಯ… ಸಮಯವಾಗಿದೆ.

340
00:22:39,442 --> 00:22:43,779
ಆದರೆ ಒಂದು ರೀತಿಯಲ್ಲಿ, ನಿಜವಾಗಿಯೂ,
ನನ್ನ ಮೊದಲ ಬರುವಿಕೆ.

341
00:22:43,780 --> 00:22:50,453
ಅಮೆರಿಕ, ನಾನು ದೇವರು, ನಿಮ್ಮ ರಕ್ಷಕ.

342
00:22:53,247 --> 00:22:54,916
ನಾನು ನಿಮ್ಮ ದೇವರು,

343
00:22:55,917 --> 00:23:00,921
{\an8}ಮತ್ತು ನಾನು ಈ ಜಗತ್ತನ್ನು
ಹೊಸ ಸ್ವರ್ಣ ಉದಯಕ್ಕೆ ಕರೆದೊಯ್ಯಲಿದ್ದೇನೆ,

344
00:23:00,922 --> 00:23:05,425
ನಿಮ್ಮ ದೇವರು ನಿಮಗೆ ಕಾಣುವಂತೆ,
ಕೇಳಿಸುವಂತೆ ನಿಮ್ಮ ನಡುವೆ ಸಂಚರಿಸುವ ಯುಗ.

345
00:23:05,426 --> 00:23:09,805
ಹೋಮ್ಲ್ಯಾಂಡರ್ ಚರ್ಚ್‌ಗೆ ಭೇಟಿ ನೀಡಿದಾಗ
ನಿಮ್ಮ ಪ್ರಾರ್ಥನೆಗಳು ಫಲ ನೀಡುತ್ತವೆ.

346
00:23:09,806 --> 00:23:11,598
{\an8}ನಾನು ಪ್ರತಿಯಾಗಿ ಕೇಳುವುದು ಪ್ರೀತಿ ಮಾತ್ರ.

347
00:23:11,599 --> 00:23:13,475
ಅಧ್ಯಕ್ಷೆ ಮೇಡಂ, ಕಟ್ಟಡದ ಮೇಲೆ ಬೆದರಿಕೆ ಇದೆ.

348
00:23:13,476 --> 00:23:15,644
ಒಂದು ಸಣ್ಣ ಗುಂಪು ಸುರಂಗಗಳೊಳಗೆ ನುಸುಳಿದೆ.

349
00:23:15,645 --> 00:23:17,479
ಅದು ಬುಚರ್ ಮತ್ತು ಅವನ ತಂಡ.

350
00:23:17,480 --> 00:23:21,149
ಚಿಂತಿಸಬೇಡ, ನಾವು ಸಿದ್ಧರಿದ್ದೇವೆ.
ಅವಳನ್ನು ಸುರಕ್ಷಿತ ಜಾಗಕ್ಕೆ ಕರೆದೊಯ್ಯಿರಿ.

351
00:23:21,150 --> 00:23:24,653
ಇವೆಲ್ಲವನ್ನೂ ಹೋಮ್ಲ್ಯಾಂಡರ್ ಬೈಬಲ್‌ನ
ಎರಡನೇ ಅಧ್ಯಾಯದಲ್ಲಿ ವಿವರಿಸಲಾಗಿದೆ.

352
00:23:24,654 --> 00:23:28,908
ಇರಿ. ನೀಲನಕ್ಷೆಯ ಪ್ರಕಾರ
ಇಲ್ಲಿ ಬಾಗಿಲು ಇರಲಿಲ್ಲ.

353
00:23:29,659 --> 00:23:31,661
ಇಲ್ಲ. ಅದು ಹೊಸದು.

354
00:23:34,372 --> 00:23:35,288
ಛೇ!

355
00:23:35,289 --> 00:23:39,000
ಹೇ, ಹೇ, ಹೇ! ಹೇ, ಹೇ! ಆ್ಯನಿ!

356
00:23:39,001 --> 00:23:40,168
ಆ್ಯನಿ, ಏನಾಗುತ್ತಿದೆ?

357
00:23:40,169 --> 00:23:41,379
ಸೂಪ್‌ಗಳಿಗೆ ಕೇಳಿಸುವ ಶಿಳ್ಳೆ!

358
00:23:44,048 --> 00:23:46,217
- ಕೆಳಗೆ ಕುಳಿತುಕೋ.
- ಛೇ!

359
00:23:53,850 --> 00:23:56,394
ಇಲ್ಲಿ ಗುಂಡಿನ ದಾಳಿ ನಡೆದಿದೆ.
ಒಬ್ಬ ಏಜೆಂಟ್ ಸತ್ತಿದ್ದಾನೆ.

360
00:23:58,771 --> 00:24:01,149
ಎಂತಹ ಜೀವನ ನನ್ನದು.

361
00:24:03,317 --> 00:24:04,485
ಅಧ್ಯಕ್ಷರೇ!

362
00:24:22,753 --> 00:24:23,754
ಹಾಗೇ ಇರು, ಆಯ್ತಾ?

363
00:24:27,508 --> 00:24:28,885
ಬಲಕ್ಕೆ. ಬಲಕ್ಕೆ ಹೋಗು!

364
00:24:29,427 --> 00:24:31,637
ಕೊನೆಗೂ ಮಾತಾಡಿದೆಯಲ್ಲ, ನೀಚೆ!

365
00:24:39,312 --> 00:24:41,229
ಅಲ್ಲಿ ಏನು ಮಾಡುತ್ತಿರುವಿರಿ? ಹೊರಟು ಹೋಗಿ!

366
00:24:41,230 --> 00:24:42,981
ಹೋಗೋಣ!

367
00:24:42,982 --> 00:24:44,025
ಬನ್ನಿ!

368
00:24:54,785 --> 00:24:56,204
ನೀನು ಚೆನ್ನಾಗಿದ್ದೀಯಾ?

369
00:24:59,248 --> 00:25:00,707
ಹೋಮ್ಲ್ಯಾಂಡರ್ ಓವಲ್ ಆಫೀಸ್‌ನಲ್ಲಿದ್ದಾನೆ.

370
00:25:00,708 --> 00:25:01,917
ಒಳ್ಳೆಯದು. ದಾರಿ ತೋರಿಸು.

371
00:25:01,918 --> 00:25:04,754
ಇಲ್ಲ, ಇಲ್ಲ.
ಅವನು ನನ್ನನ್ನು ಸಿಗಿದು ಹಾಕುತ್ತಾನೆ.

372
00:25:05,755 --> 00:25:07,089
ಆದರೆ ನಿಮಗೇನೂ ಆಗಲ್ಲ.

373
00:25:09,342 --> 00:25:12,011
ಆ ಕಡೆಯಿದೆ. ನಿಮಗೆ ಶುಭವಾಗಲಿ.

374
00:25:22,355 --> 00:25:23,522
ಎಡಕ್ಕೆ.

375
00:25:28,819 --> 00:25:29,779
ಹೆಮ್ಮೆಯ ಕೆಲಸ ಮಾಡಿದೆ.

376
00:25:36,452 --> 00:25:37,453
ಛೇ.

377
00:25:55,930 --> 00:25:56,847
ನೀನು ಅಳುತ್ತಿದ್ದೀಯಾ?

378
00:25:59,850 --> 00:26:00,726
ಇಲ್ಲ.

379
00:26:01,811 --> 00:26:04,479
ಸ್ಟಾರ್ಲೈಟ್? ಇದು ಒಂದು ಪರೀಕ್ಷೆಯಾಗಿತ್ತು.

380
00:26:04,480 --> 00:26:07,274
ಹೌದು! ನನ್ನ ನಿಷ್ಠೆಗೆ
ವಿಶ್ವವೇ ನನಗೆ ಬಹುಮಾನ ಕೊಡುತ್ತಿದೆ.

381
00:26:07,275 --> 00:26:09,192
ಕುರುಕ್ಷೇತ್ರ ಸಿನೆಮಾದ ಕೊನೆಯಲ್ಲಿ

382
00:26:09,193 --> 00:26:11,111
ಕೃಷ್ಣನು ವೀರರನ್ನು ಗೌರವಿಸುವಂತೆ.

383
00:26:11,112 --> 00:26:13,322
ದೇವರೇ! ನೀನೊಬ್ಬ ಮೂರ್ಖ.

384
00:26:15,574 --> 00:26:16,575
ನಿನ್ನನ್ನು ಕೊಲ್ತೇನೆ.

385
00:26:18,035 --> 00:26:20,329
ಹೋಮ್ಲ್ಯಾಂಡರ್‌ಗೆ
ಕೊನೆಗೂ ನನ್ನ ಬೆಲೆ ಗೊತ್ತಾಗುತ್ತೆ.

386
00:26:21,247 --> 00:26:23,916
ನಾನು ಅವನನ್ನು ನೋಡಿಕೊಳ್ಳುತ್ತೇನೆ.
ನೀವು ಮುಂದೆ ಹೋಗಿ.

387
00:26:38,139 --> 00:26:40,015
ನನಗೆ ಬುಚರ್ ಮತ್ತು ಹುಡುಗಿ ಬೇಕು.

388
00:26:40,016 --> 00:26:42,226
ಉಳಿದವರು ಸಮಾಧಾನದಿಂದ ಹೋಗಬಹುದು.

389
00:26:44,895 --> 00:26:46,813
ಹೇ, ಹೇ. ಬೇಡ, ಬೇಡ. ನಮಗೆ ಸಮಯವಿಲ್ಲ.

390
00:26:46,814 --> 00:26:48,983
ನೀನು ಹೋಮ್ಲ್ಯಾಂಡರ್ ಹತ್ತಿರ
ಕಿಮಿಕೊಳನ್ನು ಕರೆದುಕೊಂಡು ಹೋಗು.

391
00:26:49,650 --> 00:26:50,734
ನಾನಿವನನ್ನು ನೋಡಿಕೊಳ್ತೇನೆ.

392
00:26:50,735 --> 00:26:52,361
ನೀನು ಇವನನ್ನು ಹೇಗೆ ಸಂಭಾಳಿಸುತ್ತೀಯ?

393
00:26:53,279 --> 00:26:55,781
ಅದು ವಿಶೇಷ ಅಗ್ನಿಶಾಮಕ ವ್ಯವಸ್ಥೆ.

394
00:26:58,034 --> 00:27:00,494
ನಿನಗೆ ನಿನ್ನ ವಿಶೇಷತೆಯಿದೆ. ನನಗೆ ನನ್ನದಿದೆ.

395
00:27:07,418 --> 00:27:10,546
ಓಯ್! ಬನ್ನಿ. ಈ ಕಡೆ!

396
00:27:14,091 --> 00:27:17,094
ಓಯ್! ಇದು ಭಯಂಕರವಾಗಿದೆ!

397
00:27:30,441 --> 00:27:33,777
ಯಾಕೆ ಹೀಗೆ ಮಾಡುತ್ತಿದ್ದೀಯ? ನೀನು
ಹೊತ್ತಿ ಉರಿಯುತ್ತಿದ್ದರೂ ತಿರುಗಿ ನೋಡದವನಿಗಾಗಿ

398
00:27:33,778 --> 00:27:36,071
ನೀನೇಕೆ ನಿನ್ನ ಜೀವನ ತ್ಯಾಗ ಮಾಡುತ್ತಿರುವೆ?

399
00:27:36,072 --> 00:27:39,033
ನಾನು ಅವರ ಬಲಗೈ ಬಂಟ. ನಾನು ಬಯಸಿದಾಗ
ಅವರು ನನ್ನನ್ನು ತಿರುಗಿ ನೋಡುತ್ತಾರೆ.

400
00:27:39,158 --> 00:27:41,284
ಕೇಳು, ನೀನು ಭಯಗೊಂಡಿದ್ದೀಯ ಅಂತ ನನಗೆ ಗೊತ್ತು.

401
00:27:41,285 --> 00:27:44,204
- ನನಗೆ ಯಾವುದಕ್ಕೂ ಭಯವಿಲ್ಲ.
- ಡೀಪ್… ಕೆವಿನ್.

402
00:27:44,205 --> 00:27:48,083
ನಿನ್ನ ಕಣ್ಣುಗಳಲ್ಲಿ ನೋಡಬಲ್ಲೆ.
ಹೋಮ್ಲ್ಯಾಂಡರ್‌ನನ್ನು ನೋಡಿದರೆ ನಿನಗೆ ಭಯವಿದೆ,

403
00:27:48,084 --> 00:27:50,294
ಆದರೆ ಅವನು
ನಿನ್ನನ್ನು ಗೌರವಿಸಲ್ಲ ಅನ್ನೋದು ಖಚಿತ.

404
00:27:51,295 --> 00:27:54,507
ನಿನಗೆ ಅವನಿಂದ ಸ್ವಾತಂತ್ರ್ಯ ಬೇಡವಾ?

405
00:27:56,425 --> 00:27:58,718
- ನಿನ್ನ ಆ ಕೆಟ್ಟ ಬಾಯಿ.
- ಇದು ನನ್ನ ಬಗ್ಗೆ ಅಲ್ಲ.

406
00:27:58,719 --> 00:28:02,806
ಖಂಡಿತ ಹೌದು! ನನ್ನ ಬಳಿ ಎಲ್ಲವೂ ಇತ್ತು!

407
00:28:02,807 --> 00:28:05,600
ಶಕ್ತಿ, ಗೌರವ,

408
00:28:05,601 --> 00:28:08,103
ಐಎಮ್‌ಡಿಬಿ ಪ್ರೋನಲ್ಲಿ
ಟಾಪ್ 50 ಸ್ಟಾರ್‌ಮೀಟರ್ ಸ್ಥಾನ.

409
00:28:08,104 --> 00:28:10,688
ಈ ಕೆಟ್ಟ ಸಮಯ ಶುರುವಾದದ್ದು ನೀನು ಬಂದಾಗಿನಿಂದ!

410
00:28:10,689 --> 00:28:12,690
ನಾನು ಎಲ್ಲವನ್ನೂ ಕಳೆದುಕೊಂಡೆ!

411
00:28:12,691 --> 00:28:16,528
ನೀನು ಕೆಟ್ಟ ಆಯ್ಕೆಗಳನ್ನು ಮಾಡಿದೆ.
ನಿನ್ನ ಜೀವನವನ್ನು ನೀನೇ ಹಾಳುಮಾಡಿಕೊಂಡೆ.

412
00:28:16,529 --> 00:28:20,825
ನೀನು ಮುಗ್ಧ ಮಗು ಅಲ್ಲ.
ಒಮ್ಮೆಯಾದರೂ, ಸ್ವಲ್ಪ ಜವಾಬ್ದಾರಿ ತೆಗೆದುಕೋ.

413
00:28:23,744 --> 00:28:24,870
ಇಲ್ಲ!

414
00:28:30,876 --> 00:28:32,211
ಛೇ! ಆಚೆ ಹೋಗಲು ದಾರಿಯಿಲ್ಲ.

415
00:28:33,129 --> 00:28:33,963
ಅಯ್ಯೋ!

416
00:28:36,048 --> 00:28:37,383
ಬುಚರ್ ಎಲ್ಲಿದ್ದಾನೆ?

417
00:28:50,479 --> 00:28:51,730
ನನಗೆ ಹೊಸ ಕೆಲಸ ಬೇಕು.

418
00:28:54,024 --> 00:28:59,195
ನೀವು ನಿಮ್ಮ ಹೃದಯಗಳನ್ನು ತೆರೆದು
ನನ್ನಲ್ಲಿ ನಂಬಿಕೆ ಇಡಬೇಕೆಂದು ಕೇಳಿಕೊಳ್ತೇನೆ.

419
00:28:59,196 --> 00:29:04,242
ನನ್ನ ಸತ್ಯವನ್ನು ಸ್ವೀಕರಿಸುವವರನ್ನು
ಸಮೃದ್ಧ ದೇಶಕ್ಕೆ ಸ್ವಾಗತಿಸಲಾಗುತ್ತದೆ,

420
00:29:04,243 --> 00:29:06,536
ಏಕೆಂದರೆ ನಾನು ನಿಮ್ಮ…

421
00:29:06,537 --> 00:29:08,873
ಏಕೆಂದರೆ ನಾನು ನಿಮ್ಮ ತಂದೆ,
ನೀವು ನನ್ನ ಪ್ರೀತಿಯ ಮಕ್ಕಳು.

422
00:29:13,377 --> 00:29:14,920
ನಾನು…

423
00:29:19,633 --> 00:29:21,259
ನಾನು ಏನೇ ಮಾಡಿದರೂ,

424
00:29:21,260 --> 00:29:24,763
ನಿಮ್ಮಲ್ಲಿ ಕೆಲವರು ನನ್ನನ್ನು ಎಂದಿಗೂ
ನಿಮ್ಮ ಹೃದಯದಲ್ಲಿ ಸ್ವೀಕರಿಸುವುದಿಲ್ಲ.

425
00:29:25,931 --> 00:29:29,351
ನನ್ನನ್ನು ಎಂದಿಗೂ ಪ್ರೀತಿಸುವುದಿಲ್ಲ.
ನನ್ನನ್ನು ಎಂದಿಗೂ ನಂಬುವುದಿಲ್ಲ.

426
00:29:31,312 --> 00:29:34,398
ಮತ್ತು ಅಂತಹ ಧರ್ಮದ್ರೋಹಿಗಳನ್ನು,
ನಾನು ಅಳಿಸಿಹಾಕುತ್ತೇನೆ.

427
00:29:34,982 --> 00:29:36,941
{\an8}ಮತ್ತು ನನ್ನನ್ನು ನಾಶಮಾಡಲು ಪ್ರಯತ್ನಿಸುವವರು,

428
00:29:36,942 --> 00:29:40,862
ನೀವು ಅತ್ಯಂತ ಭಯಾನಕ ಸಾವು ಕಾಣುವಿರಿ,

429
00:29:40,863 --> 00:29:43,531
ನಿಮ್ಮ ದುಷ್ಟತನಕ್ಕೆ ತಕ್ಕ ಸಾವು.

430
00:29:43,532 --> 00:29:45,241
ನನ್ನ ಆಳ್ವಿಕೆ ಶಾಶ್ವತವಾಗಿ ಇರುತ್ತದೆ,

431
00:29:45,242 --> 00:29:50,914
ಮತ್ತು ಈ ಲೋಕವು ಸತ್ತು ತಣ್ಣಗಾದಾಗ,
ನಾನಿನ್ನೂ ಬದುಕಿರುತ್ತೇನೆ.

432
00:29:50,915 --> 00:29:54,960
ಶಾಶ್ವತವಾಗಿ. ಭಸ್ಮದ ದೇವರಾಗಿ.

433
00:30:03,260 --> 00:30:05,054
ಶುಭ ಸಂಜೆ, ನೀಚರೇ.

434
00:30:07,431 --> 00:30:08,474
ನಾನು ಬಂದುಬಿಟ್ಟೆ.

435
00:30:13,020 --> 00:30:14,188
ವಿಲಿಯಂ.

436
00:30:17,483 --> 00:30:21,403
ನಮ್ಮ ಒಪ್ಪಂದದಲ್ಲಿ ನಿನಗಿರುವ ಭಾಗವನ್ನು
ನೀನು ನೆರವೇರಿಸಲ್ಲ ಅಂದುಕೊಳ್ಳುತ್ತಿದ್ದೆ.

437
00:30:26,450 --> 00:30:27,409
ಏನಾದರೂ ಮಾಡಿ ಗೆಲ್ಲುವ ಪ್ರಯತ್ನ.

438
00:30:30,538 --> 00:30:32,873
ಫ್ರೆಂಚಿ ಬಗ್ಗೆ ನಾಚಿಕೆಗೇಡು.

439
00:30:34,166 --> 00:30:37,002
ಅವನಿಲ್ಲದೆ ನಿನ್ನ ಪ್ರಯೋಗ ಹೇಗೆ ನಡೆಯುತ್ತಿದೆ?

440
00:30:38,295 --> 00:30:39,213
ಈಗ ನೋಡೋಣ.

441
00:31:50,492 --> 00:31:52,410
ಛೇ! ಛೇ!

442
00:31:52,411 --> 00:31:55,496
- ಓ ದೇವರೇ. ಛೇ! ಕ್ಷಮಿಸು!
- ಆಂಬ್ರೋಸಿಯಸ್‌ಗೆ ನ್ಯಾಯ!

443
00:31:55,497 --> 00:31:57,790
- ದೇವರೇ! ಛೇ! ನನ್ನಿಂದ ದೂರವಿರು.
- ಆಂಬ್ರೋಸಿಯಸ್‌ಗೆ ನ್ಯಾಯ!

444
00:31:57,791 --> 00:32:03,504
ಆಂಬ್ರೋಸಿಯಸ್‌ಗೆ ನ್ಯಾಯ!
ಆಂಬ್ರೋಸಿಯಸ್‌ಗೆ ನ್ಯಾಯ!

445
00:32:03,505 --> 00:32:04,590
ಅವಳ ಹೆಸರು ಹೇಳು!

446
00:32:04,923 --> 00:32:09,469
ಆಂಬ್ರೋಸಿಯಸ್‌ಗೆ ನ್ಯಾಯ!
ಆಂಬ್ರೋಸಿಯಸ್‌ಗೆ ನ್ಯಾಯ!

447
00:32:09,470 --> 00:32:11,138
- ಕ್ಷಮಿಸು! ಓ, ಛೇ!
- ಆಂಬ್ರೋಸಿಯಸ್‌ಗೆ ನ್ಯಾಯ!

448
00:32:41,085 --> 00:32:41,919
ನೀಚನನ್ನು ಸ್ಫೋಟಿಸು!

449
00:32:44,755 --> 00:32:45,631
ಬೇಡ, ಬೇಡ.

450
00:33:12,199 --> 00:33:13,450
ಏನು…

451
00:33:28,006 --> 00:33:29,383
ನಿಷ್ಪ್ರಯೋಜಕಿ.

452
00:33:41,395 --> 00:33:43,147
ನಿನ್ನಿಂದ ಪ್ರಾರಂಭಿಸಿ ಎಲ್ಲರೂ ಸಾಯುತ್ತಾರೆ!

453
00:33:55,451 --> 00:33:57,870
ಏಕೆ ಕಾಯುತ್ತಿರುವೆ? ಈಗಲೇ ಮುಗಿಸು!

454
00:34:10,758 --> 00:34:11,592
ಏನಾಯಿತು?

455
00:34:24,062 --> 00:34:27,691
{\an8}ನನ್ನಿಂದ ಆಗಲ್ಲ.

456
00:34:28,442 --> 00:34:29,401
{\an8}ಯಾಕಾಗಲ್ಲ?

457
00:34:31,028 --> 00:34:34,864
{\an8}ನನ್ನಲ್ಲಿರಬೇಕಾದ ಕೋಪ.

458
00:34:34,865 --> 00:34:36,992
{\an8}ಅದಿಲ್ಲ.

459
00:34:38,827 --> 00:34:41,497
{\an8}ಬರೀ ದುಃಖವಾಗುತ್ತಿದೆ ಅಷ್ಟೇ.

460
00:34:50,130 --> 00:34:52,382
ಕೋಪವು ನಮ್ಮನ್ನು ಬಲಿಷ್ಠರನ್ನಾಗಿಸುವುದಿಲ್ಲ.

461
00:34:58,847 --> 00:35:00,849
ಎಂದಿಗೂ ಬಲಿಷ್ಠರನ್ನಾಗಿಸುವುದಿಲ್ಲ, ಹೃದಯವೇ.

462
00:35:03,101 --> 00:35:04,812
ನನ್ನ ಹೃದಯ ಯಾವಾಗಲೂ ನಿನ್ನದೇ.

463
00:37:08,936 --> 00:37:12,356
ಆಘಾತ ಮತ್ತು ವಿಸ್ಮಯ, ಮಗನೇ.

464
00:37:14,983 --> 00:37:18,779
ರಕ್ತ ಮತ್ತು ಮೂಳೆ.

465
00:37:36,004 --> 00:37:38,840
ಇದು ಫ್ರೆಂಚಿಗಾಗಿ.

466
00:37:53,689 --> 00:37:57,526
ದಯವಿಟ್ಟು. ದಯವಿಟ್ಟು ನಿಲ್ಲಿಸು.

467
00:37:58,694 --> 00:37:59,986
ನೀನು ನನಗೆ ಋಣಿಯಾಗಿರಬೇಕು.

468
00:37:59,987 --> 00:38:04,031
ಎಷ್ಟೋ ಬಾರಿ ನಾನು ನಿನ್ನನ್ನು ಕೊಲ್ಲಬಹುದಿತ್ತು,
ಆದರೆ ಕೊಲ್ಲಲಿಲ್ಲ.

469
00:38:04,032 --> 00:38:05,866
ನಿನ್ನನ್ನು ಬದುಕಲು ಬಿಟ್ಟಿದ್ದೇನೆ.

470
00:38:05,867 --> 00:38:11,288
ನಾನು… ನಿನಗೆ ವಾಟ್ ಕೊಡುತ್ತೇನೆ.
ನಾನು ನಿನಗೆ ವಾಟ್ ಕೊಡುತ್ತೇನೆ, ಆಯ್ತಾ?

471
00:38:11,289 --> 00:38:14,500
ಅದನ್ನು ಏನು ಬೇಕಾದರೂ ಮಾಡು. ಸರಿಯಾ?

472
00:38:14,501 --> 00:38:16,336
ನಾನು…

473
00:38:17,254 --> 00:38:20,339
ಬೆಕ್ಕಾ! ನಿನ್ನ ಹೆಂಡತಿಯನ್ನು ಮರಳಿ ಪಡೆಯಬೇಕಾ?

474
00:38:20,340 --> 00:38:23,093
ರೂಪ ಬದಲಾಯಿಸುವವಳನ್ನು ಅವಳಾಗಿಸುತ್ತೇನೆ.

475
00:38:24,720 --> 00:38:25,803
ನನಗೆ ಹೇಳು.

476
00:38:25,804 --> 00:38:28,055
ನಾನು ನಿನ್ನ ತುಣ್ಣೆ ಉಣ್ಣುತ್ತೇನೆ!

477
00:38:28,056 --> 00:38:30,266
ದಯವಿಟ್ಟು! ನಾನು ಏನು ಬೇಕಾದರೂ ಮಾಡುತ್ತೇನೆ!

478
00:38:30,267 --> 00:38:32,436
ಹೇಲು ತಿನ್ನಬೇಕಾ ಹೇಳು?
ನಿನ್ನ ಹೇಲು ತಿನ್ನುತ್ತೇನೆ!

479
00:38:33,061 --> 00:38:36,314
{\an8}ಲೈವ್ ಟಿವಿಯಲ್ಲಿ ನಿನ್ನ ಹೇಲು ತಿನ್ನುತ್ತೇನೆ.

480
00:38:41,486 --> 00:38:42,487
ಇದು ನಿಜವಲ್ಲ.

481
00:38:42,904 --> 00:38:44,656
ಮ್ಯಾಡೆಲಿನ್, ನೀನು ನನಗೆ ಮಾತು ಕೊಟ್ಟಿದ್ದೆ.

482
00:38:45,907 --> 00:38:47,200
ಇದು ನಿಜವಲ್ಲ.

483
00:38:48,660 --> 00:38:50,828
ನೀನು ಹೀಗೆ ಮಾಡಲು ಸಾಧ್ಯವಿಲ್ಲ.

484
00:38:50,829 --> 00:38:52,747
ನೀನು ಹೀಗೆ ಮಾಡಲು ಸಾಧ್ಯವಿಲ್ಲ!

485
00:38:52,748 --> 00:38:55,417
ನಾನು ಹೋಮ್ಲ್ಯಾಂಡರ್.

486
00:38:56,209 --> 00:39:00,338
ಇಲ್ಲ. ಇಲ್ಲ, ನೀನು ಏನೂ ಅಲ್ಲ.

487
00:39:02,340 --> 00:39:03,675
ಮತ್ತು ಇದು…

488
00:39:05,635 --> 00:39:07,136
ಇದು ನನ್ನ ಬೆಕ್ಕಾಗಾಗಿ.

489
00:39:07,137 --> 00:39:08,638
ಬೇಡ, ಬೇಡ.

490
00:40:29,845 --> 00:40:31,012
ನಾನಿದ್ದೇನೆ.

491
00:40:33,598 --> 00:40:35,308
ಆರಾಮವಾಗಿ. ಆಯ್ತಾ?

492
00:40:37,811 --> 00:40:40,981
ಸರಿ, ಆರಾಮವಾಗಿ.

493
00:41:10,677 --> 00:41:14,430
{\an8}ವೈಟ್ ಹೌಸ್‌ನಿಂದ ಬಂದ ಆಘಾತಕಾರಿ ದೃಶ್ಯಾವಳಿಗಳು
ನೈಜವಾದವು ಎಂದು ದೃಢಪಡಿಸಲಾಗಿದೆ.

494
00:41:14,431 --> 00:41:17,433
{\an8}ಹೋಮ್ಲ್ಯಾಂಡರ್,
ವಿಶ್ವದ ಅತ್ಯಂತ ಪ್ರಮುಖ ಸೂಪರ್‌ಹೀರೋ,

495
00:41:17,434 --> 00:41:21,187
{\an8}ತನ್ನನ್ನು ತಾನು ದೇವರು
ಎಂದು ಘೋಷಿಸಿಕೊಂಡ ನಂತರ ಇಂದು ಕೊಲ್ಲಲ್ಪಟ್ಟರು.

496
00:41:21,188 --> 00:41:25,858
{\an8}ನಾನು ನಿನ್ನ…ಉಣ್ಣುತ್ತೇನೆ…
ನಾನು ನಿನ್ನ…ತಿನ್ನುತ್ತೇನೆ…ಲೈವ್ ಟಿವಿಯಲ್ಲಿ.

497
00:41:25,859 --> 00:41:28,319
{\an8}ಹೋಮ್ಲ್ಯಾಂಡರ್ ತೀವ್ರವಾಗಿ ಅಸ್ವಸ್ಥರಾಗಿದ್ದರು.

498
00:41:28,320 --> 00:41:31,238
{\an8}ನನ್ನ ಆದೇಶದ ಮೇರೆಗೆ ಪ್ರಜಾಸತ್ತಾತ್ಮಕ
ವ್ಯವಸ್ಥೆಗೆ ಎದುರಾದ ಈ ಬೆದರಿಕೆಯನ್ನು

499
00:41:31,239 --> 00:41:35,911
{\an8}ಎದುರಿಸಿದ ಸಿಐಎಯ ಧೈರ್ಯಶಾಲಿ ಪುರುಷರು,
ಮಹಿಳೆಯರಿಗೆ ಧನ್ಯವಾದ ಹೇಳಲು ಇಚ್ಛಿಸುತ್ತೇನೆ.

500
00:41:36,536 --> 00:41:38,954
{\an8}ಮತ್ತು ನಿಮ್ಮಲ್ಲಿ ಊಹಿಸುತ್ತಿರುವವರಿಗೆ,

501
00:41:38,955 --> 00:41:40,539
{\an8}ನಾನು ಹೇಳಬೇಕೆಂದಿರುವುದು, ಇಲ್ಲ.

502
00:41:40,540 --> 00:41:44,293
{\an8}ನಾನು ರಾಜೀನಾಮೆ ನೀಡುವುದಿಲ್ಲ.
ನಾನು ಯಾವುದೇ ತಪ್ಪು ಮಾಡಿಲ್ಲ.

503
00:41:44,294 --> 00:41:47,129
{\an8}ಅದು ಮಾಜಿ ಅಧ್ಯಕ್ಷೆ ಆಶ್ಲಿ ಬ್ಯಾರೆಟ್,

504
00:41:47,130 --> 00:41:50,507
{\an8}ಕಾಂಗ್ರೆಸ್‌ನಲ್ಲಿ ಅಭೂತಪೂರ್ವ ಸರ್ವಾನುಮತದಿಂದ,

505
00:41:50,508 --> 00:41:54,679
{\an8}ಅವರನ್ನು ಇಂದು ಮಧ್ಯಾಹ್ನ ದೋಷಾರೋಪಣೆಯ ಮೇರೆಗೆ
ತಕ್ಷಣವೇ ಕಚೇರಿಯಿಂದ ತೆಗೆದುಹಾಕಲಾಯಿತು.

506
00:41:55,305 --> 00:42:00,059
ಹೀಗೆ ಅಮೆರಿಕದ ಮೊದಲ ಮಹಿಳಾ ಅಧ್ಯಕ್ಷೆಯ
ಹಗರಣ ಪೀಡಿತ ಅಧಿಕಾರಾವಧಿ ಕೊನೆಗೊಳ್ಳುತ್ತದೆ.

507
00:42:00,060 --> 00:42:01,853
- ತಗೋ.
- ಧನ್ಯವಾದ.

508
00:42:03,688 --> 00:42:04,856
ನನ್ನ ಸಹೋದರ.

509
00:42:05,482 --> 00:42:06,608
ಚೆನ್ನಾಗಿದೆ.

510
00:42:07,901 --> 00:42:08,735
ನಾನದನ್ನು ಪ್ರಯತ್ನಿಸಬಹುದಾ?

511
00:42:09,569 --> 00:42:11,655
ಇವತ್ತು ಒಳ್ಳೆಯ ಕೆಲಸ ಮಾಡಿದ್ದೀಯ. ತಗೋ.

512
00:42:13,490 --> 00:42:16,701
ಫ್ರೆಂಚಿ ನಿನ್ನನ್ನು ನೋಡಿದ್ದರೆ
ಎಷ್ಟು ಚೆನ್ನಾಗಿರುತ್ತಿತ್ತು.

513
00:42:18,703 --> 00:42:19,537
ಅವನು ನೋಡಿದ.

514
00:42:25,627 --> 00:42:29,047
ರುಚಿ ತುಂಬಾ ಅಸಹ್ಯವಾಗಿದೆ.
ಶ್ರೀಮಂತರಿಗೆ ಇಂತಹ ರುಚಿ ಇಷ್ಟವಾ?

515
00:42:44,896 --> 00:42:46,398
ಕೇಳು, ಪುಟ್ಟ…

516
00:42:49,192 --> 00:42:53,822
ನಿನಗೆ ಸಮಾಧಾನ ಮಾಡಲು ನಾನು ಏನೂ ಹೇಳಲಾರೆ,

517
00:42:55,156 --> 00:42:56,908
ಆದರೆ ನೀನು ಮಾಡಬೇಕಾದ್ದನ್ನು ಮಾಡಿದೆ.

518
00:42:57,409 --> 00:42:59,536
ನೀನು ಒಳ್ಳೆಯ ಕೆಲಸ ಮಾಡಿದೆ, ಆಯ್ತಾ?

519
00:43:06,418 --> 00:43:11,422
ಈಗ, ಇದನ್ನೆಲ್ಲ ಮರೆತು ನಾವು ಮುಂದೆ ಸಾಗಬೇಕು.

520
00:43:11,423 --> 00:43:16,594
ಇನ್ನು ನಮ್ಮ ಬಳಿ ಯಾವ ಶಕ್ತಿಯೂ ಇಲ್ಲ,
ನಾವು ಈಗ… ಸಾಮಾನ್ಯರು.

521
00:43:17,387 --> 00:43:20,890
ಶಾಂತವಾದ ಜಾಗ ಹುಡುಕಿ,
ಮತ್ತೆ ಹೊಸದಾಗಿ ಜೀವನ ಆರಂಭಿಸಬಹುದು.

522
00:43:21,558 --> 00:43:23,143
ನೀನು, ನಾನು, ಮತ್ತು ಟೆರರ್ ಅಷ್ಟೇ.

523
00:43:24,102 --> 00:43:26,187
ನಿನ್ನ ಅಮ್ಮನಿಗೆ
ಅದು ಇಷ್ಟವಾಗಬಹುದು ಅನ್ನಿಸುತ್ತೆ.

524
00:43:30,275 --> 00:43:31,609
ನನ್ನ ತಂದೆ ಏನೆಂದು ನನಗೆ ಗೊತ್ತು…

525
00:43:33,611 --> 00:43:35,280
ಅವನು ಸತ್ತಿದ್ದು ಒಳ್ಳೆಯದೇ ಆಯ್ತು.

526
00:43:37,741 --> 00:43:39,534
ಆದರೆ ನೀವೂ ಒಳ್ಳೆಯ ವ್ಯಕ್ತಿಯಲ್ಲ.

527
00:43:42,579 --> 00:43:44,539
ನಾನು ಅವನ ಬದಲು ನಿಮ್ಮನ್ನು ಆರಿಸಲಿಲ್ಲ.

528
00:43:47,459 --> 00:43:49,336
ನನ್ನನ್ನು ಆರಿಸಿಕೊಂಡೆ.

529
00:43:50,462 --> 00:43:53,798
ಕ್ಷಮಿಸಿ, ಆದರೆ ನನಗೆ ನಿಮ್ಮೊಂದಿಗೆ
ಹೊಸ ಆರಂಭ ಬೇಡ.

530
00:43:56,092 --> 00:43:57,510
ಇದು ಅಂತ್ಯವಾಗಬೇಕೆಂದು ಬಯಸುತ್ತೇನೆ.

531
00:44:15,195 --> 00:44:18,365
ಈಗ ನೀನು ಮತ್ತು ನಾನು ಮಾತ್ರ, ಟೆರರ್.

532
00:44:26,790 --> 00:44:27,791
ಟೆರರ್?

533
00:45:25,598 --> 00:45:30,018
{\an8}ಬಹಳ ಸಮಯದಿಂದ, ಸೂಪರ್‌ಹೀರೋಗಳ
ಕೆಟ್ಟ ನಡವಳಿಕೆಯನ್ನು ನಿಯಂತ್ರಿಸಲಾಗಿಲ್ಲ.

534
00:45:30,019 --> 00:45:32,813
ಹೋಮ್ಲ್ಯಾಂಡರ್ ಬಳಿ
ನಾನು ಹಲವು ತಿಂಗಳು ಬಂಧಿಯಾಗಿದ್ದ ಅನುಭವ

535
00:45:32,814 --> 00:45:34,356
ನನಗೆ ಒಂದು ವಿಷಯವನ್ನು ಕಲಿಸಿದೆ,

536
00:45:34,357 --> 00:45:38,610
ಸೂಪರ್‌ಹೀರೋಗಳೊಂದಿಗೆ ನಮ್ಮ ಸಂಬಂಧವನ್ನು
ಸಂಪೂರ್ಣವಾಗಿ ಮರುಚಿಂತನೆ ಮಾಡಬೇಕಾಗಿದೆ.

537
00:45:38,611 --> 00:45:43,615
ಅದಕ್ಕಾಗಿಯೇ ನಾನು ವಾಟ್‌ನ
ಮಧ್ಯಂತರ ಸಿಇಒ ಆಗಿ ಮರಳಲು ಒಪ್ಪಿಕೊಂಡಿದ್ದೇನೆ.

538
00:45:43,616 --> 00:45:45,868
ಬೋಳಿ ಮಗ.

539
00:45:45,869 --> 00:45:48,036
ಈ ಸಂಕಷ್ಟದ ಸಮಯದಲ್ಲಿ
ಪುನರ್‌ನಿರ್ಮಾಣವನ್ನು ಆರಂಭಿಸಲು

540
00:45:48,037 --> 00:45:50,999
ನಮ್ಮ ಷೇರುದಾರರಿಗೆ ಸ್ಥಿರ ನಾಯಕತ್ವ ಬೇಕಾಗಿದೆ.

541
00:45:52,208 --> 00:45:56,628
ವಾಟ್‌ನ ಶ್ರೇಷ್ಠ, ಅತ್ಯಂತ ಲಾಭದಾಯಕ ದಿನಗಳು
ಇನ್ನು ಮುಂದಿವೆ ಎಂದು ನಾನು ನಂಬುತ್ತೇನೆ.

542
00:45:56,629 --> 00:45:59,590
ಇದೀಗ ವಾಟ್ ಕಂಪನಿ
ಜನರ ಮಾತನ್ನು ಕೇಳುವ ಸಮಯ ಬಂದಿದೆ.

543
00:45:59,591 --> 00:46:01,217
ಹೇ, ಬುಚರ್, ನಾನು…

544
00:46:16,649 --> 00:46:17,859
ಕ್ಷಮಿಸು, ಗೆಳೆಯ.

545
00:46:33,166 --> 00:46:34,000
ಛೇ.

546
00:47:35,770 --> 00:47:36,604
ಟ್ರಾಫಿಕ್?

547
00:47:39,148 --> 00:47:43,402
ಹೌದು. ಸೇತುವೆಯ ಮೇಲೆ ಅಪಘಾತ ಆಗಿದೆ.
ಸುರಂಗದ ಮೂಲಕ ಬರಬೇಕಿತ್ತು.

548
00:47:43,403 --> 00:47:45,571
ನೀನು ನನ್ನನ್ನು
ತಡೆಯಲು ಪ್ರಯತ್ನಿಸಬಹುದು ಅಂದುಕೊಂಡಿದ್ದೆ.

549
00:47:45,572 --> 00:47:47,574
ಆದರೆ ನೀನು ಒಬ್ಬಂಟಿಯಾಗಿ ಬರಬಾರದಿತ್ತು.

550
00:47:49,117 --> 00:47:51,243
ದೊಡ್ಡ ಸೈನ್ಯವನ್ನು ತರಬೇಕಿತ್ತು.

551
00:47:51,244 --> 00:47:54,622
ಇಲ್ಲ. ನೀನು ವೈರಸ್ ಅನ್ನು ಬಿಡುಗಡೆ
ಮಾಡಬೇಕೆಂದಿದ್ದರೆ, ಈಗಾಗಲೇ ಮಾಡಿರುತ್ತಿದ್ದೆ.

552
00:47:55,123 --> 00:48:01,170
ಎಲ್ಲಾ ಸೂಪರ್‌ಹೀರೋಗಳು…
ತಮ್ಮ ಕೆಲಸಕ್ಕೆ ಬರುವವರೆಗೆ ನಾನು ಕಾಯುತ್ತಿದ್ದೆ.

553
00:48:03,506 --> 00:48:07,427
ಖಾಲಿ ಕಟ್ಟಡದ ಮೇಲೆ ದಾಳಿ ಮಾಡುವುದಕ್ಕೆ
ಅರ್ಥವೇ ಇಲ್ಲ, ಅಲ್ಲವಾ?

554
00:48:09,804 --> 00:48:12,974
ನಾನು ಸೇನೆಯನ್ನು ಕರೆತಂದಿದ್ದರೆ
ಚೆನ್ನಾಗಿರುತ್ತಿತ್ತು ಎಂದು ಈಗ ಅನ್ನಿಸುತ್ತಿದೆ.

555
00:48:15,935 --> 00:48:17,061
ವೈರಸ್ ಎಲ್ಲಿದೆ, ಬುಚರ್?

556
00:48:19,439 --> 00:48:24,110
ಬೆಂಕಿ ಬಿದ್ದರೆ ನೀರು ಸಿಂಪಡಿಸುವ ವ್ಯವಸ್ಥೆಯ
ಟ್ಯಾಂಕ್‌ಗೆ ಹಾಕಿಬಿಟ್ಟೆ. ಇದು ಫ್ರೆಂಚಿಯ ಐಡಿಯಾ.

557
00:48:25,320 --> 00:48:27,196
ದೇವರು ಅವನ ಆತ್ಮಕ್ಕೆ ಶಾಂತಿ ನೀಡಲಿ.

558
00:48:29,282 --> 00:48:33,285
ನಾನು ಈ ಟ್ರಿಗರ್ ಒತ್ತಿದರೆ ಸಾಕು,

559
00:48:33,286 --> 00:48:36,496
99 ಮಹಡಿಗಳಲ್ಲೂ
ವೈರಸ್‌ನ ದ್ರವ ಮಳೆಯಂತೆ ಸುರಿಯುತ್ತದೆ.

560
00:48:36,497 --> 00:48:39,082
ಒಂದೆರಡು ದಿನಗಳಲ್ಲಿ
ಇದು ವಿಶ್ವಾದ್ಯಂತ ಹರಡುತ್ತದೆ.

561
00:48:39,083 --> 00:48:43,629
ಏಕೆ? ನಾವು ಈಗಾಗಲೇ ಗೆದ್ದಿದ್ದೇವೆ.

562
00:48:43,630 --> 00:48:47,800
ಗೆದ್ದೆವಾ? ಇಲ್ಲ, ನಾವು ಅವರಿಗೆ
ಒಂದು ಹೊಡೆತ ನೀಡಿದ್ದೇವಷ್ಟೇ.

563
00:48:48,551 --> 00:48:50,510
ವಾಟ್ ಇರುವವರೆಗೆ, ಸೂಪ್‌ಗಳು ಇರುತ್ತಾರೆ,

564
00:48:50,511 --> 00:48:52,971
ಈಗಲ್ಲದಿದ್ದರೆ ನಾಳೆ, ಯಾರೋ ನೀಚ

565
00:48:52,972 --> 00:48:54,723
ಮುಂದಿನ ಹೋಮ್ಲ್ಯಾಂಡರ್ ಆಗುತ್ತಾನೆ,

566
00:48:54,724 --> 00:48:56,225
ನಿನಗೆ ಅದು ಗೊತ್ತು.

567
00:48:58,978 --> 00:48:59,812
ಇಲ್ಲ.

568
00:49:02,899 --> 00:49:07,737
ಸೂಪರ್‌ಹೀರೋಗಳೆಂಬ ಈ ಕಲ್ಪನೆಯನ್ನೇ
ಸಂಪೂರ್ಣವಾಗಿ ಕೊನೆಗಾಣಿಸಬೇಕು.

569
00:49:10,615 --> 00:49:14,327
ಮತ್ತು ನಾವು ಇದನ್ನು… ಶಾಶ್ವತಗೊಳಿಸಬೇಕು.

570
00:49:15,912 --> 00:49:17,747
ನಿನಗೆ ಗೊತ್ತಾಗುತ್ತಿದೆಯಲ್ಲಾ?

571
00:49:19,540 --> 00:49:22,418
ಇದೇ. ಇದೇ ಆ ಕ್ಷಣ.

572
00:49:23,127 --> 00:49:28,299
ಇದಕ್ಕಾಗಿ, ಈ ಕ್ಷಣಕ್ಕಾಗಿ
ನೀನು ನನ್ನನ್ನು ಈ ನರಕಕ್ಕೆ ನೂಕಿದೆ.

573
00:49:29,550 --> 00:49:33,137
ನಿನಗಾಗಿ… ಸತ್ತ ಹೆಣವಾಗಲು.

574
00:49:34,305 --> 00:49:38,685
ಅಥವಾ ನಿನ್ನ ಕೆಸ್ಲರ್. ಅಥವಾ ಲೆನ್ನಿ ಆಗಲು.

575
00:49:40,186 --> 00:49:43,230
ಆದರೆ ವಿಷಯ ಇಷ್ಟೇ,
ಅದಕ್ಕಾಗಿ ನಿನಗೆ ನನ್ನ ಅಗತ್ಯವಿಲ್ಲ.

576
00:49:43,231 --> 00:49:45,900
ನನ್ನ ಅಗತ್ಯ ಎಂದಿಗೂ ಇರಲಿಲ್ಲ.
ಅದು ಸದಾ ನಿನ್ನೊಳಗಿತ್ತು. ನಾನು ನೋಡಬಲ್ಲೆ.

577
00:49:46,609 --> 00:49:49,904
ನಿನ್ನ ಬಳಿ ಮುರಿದ ಹೃದಯ ಇರಬಹುದು,
ಆದರೆ ಹೃದಯ ಇದೆ.

578
00:49:51,030 --> 00:49:55,159
ನೀನು ರಾಕ್ಷಸನಲ್ಲ, ಬುಚರ್.

579
00:49:57,328 --> 00:49:59,163
ಮಾನವನಾಗಿರುವುದಕ್ಕೇ ನಿನಗೆ ನೋವಾಗೋದು.

580
00:50:03,710 --> 00:50:05,378
ನನ್ನನ್ನು ಕ್ಷಮಿಸು, ಗೆಳೆಯ.

581
00:50:07,588 --> 00:50:11,175
ಸೂಪರ್‌ಹೀರೋಗಳು… ಮುಗಿದ ಕಥೆ.

582
00:50:21,018 --> 00:50:21,936
ಹಾಗೆ ಮಾಡಲು ಬಿಡಲಾರೆ.

583
00:50:22,729 --> 00:50:26,441
ಪುಟ್ಟ ಹೂಯಿ ಮತ್ತು ಅವನ ಬಂದೂಕು.

584
00:50:27,316 --> 00:50:30,737
ಸ್ನೇಹಿತನ ಮೇಲೆ ಗುಂಡು ಹಾರಿಸಲು
ತುಂಬಾ ಧೈರ್ಯ ಬೇಕು.

585
00:50:35,032 --> 00:50:36,242
ಅಗತ್ಯವಿದ್ದರೆ ಮಾಡುತ್ತೇನೆ.

586
00:50:38,369 --> 00:50:39,327
ಮಾಡಲ್ಲ.

587
00:50:39,328 --> 00:50:40,538
ನಿನಗೆ ಆ ಧೈರ್ಯವಿಲ್ಲ--

588
00:50:47,044 --> 00:50:48,045
ಕೆಳಗೇ ಇರು.

589
00:52:04,038 --> 00:52:08,251
ಕ್ಷಮಿಸು. ನನಗೆ…
ನನಗೆ ಹಾಗೆ ಮಾಡಲು ಇಷ್ಟವಿರಲಿಲ್ಲ.

590
00:52:09,794 --> 00:52:11,546
ನಾನು… ಆಂಬ್ಯುಲೆನ್ಸ್‌ಗೆ ಕರೆ ಮಾಡ್ತೇನೆ, ಆಯ್ತಾ?

591
00:52:14,257 --> 00:52:15,299
ತಲೆಕೆಡಿಸಿಕೊಳ್ಳಬೇಡ.

592
00:52:19,554 --> 00:52:21,055
ಪರವಾಗಿಲ್ಲ, ಹೂಯಿ.

593
00:52:22,557 --> 00:52:26,894
ನಿನಗೆ ಬೇರೆ ವಿಧಿ ಇರಲಿಲ್ಲ.
ನಾನು… ನಾನು ನಿಲ್ಲಿಸುತ್ತಿರಲಿಲ್ಲ.

594
00:52:30,690 --> 00:52:34,986
ನಿನ್ನನ್ನು ನಾನು…
ಎಷ್ಟು ರಕ್ತಪಾತಕ್ಕೆ, ಕಷ್ಟಕ್ಕೆ ಒಳಪಡಿಸಿದ್ದರೂ,

595
00:52:37,738 --> 00:52:41,409
ಅದರಿಂದ ಏನೂ ಬದಲಾವಣೆಯಾಗಲಿಲ್ಲ.

596
00:52:44,287 --> 00:52:50,042
ನಾನು… ಏನು ಮಾಡಿದರೂ… ನೀನು ನೀನಾಗೇ ಉಳಿದೆ.

597
00:53:00,136 --> 00:53:01,387
ಏನು ಮಾಡಬೇಕೆಂದು ತಿಳಿಯುತ್ತಿಲ್ಲ.

598
00:53:02,305 --> 00:53:03,598
ನೀನೇನೂ ಮಾಡುವ ಅಗತ್ಯವಿಲ್ಲ.

599
00:53:17,069 --> 00:53:22,783
ನೀನು… ಲೆನ್ನಿಯಂತೆಯೇ ಇದ್ದೀಯ.

600
00:54:10,790 --> 00:54:13,793
ಬುಚರ್ ಇಲ್ಲಿ ಇದ್ದಿದ್ದರೆ,
ಅವನಿಗಾಗಿ ನಾವು ಅಳುವುದನ್ನು ಟೀಕಿಸುತ್ತಿದ್ದ.

601
00:54:15,419 --> 00:54:19,340
ಆದರೆ ಅವನು ಸತ್ತಿದ್ದಾನೆ,
ಆದ್ದರಿಂದ, ನಾವು ಆಳಬಹುದು.

602
00:54:20,508 --> 00:54:21,342
ಹೋಗಲಿ ಬಿಡು.

603
00:54:22,510 --> 00:54:27,848
ನನ್ನ ಪ್ರಕಾರ, ಅವನಲ್ಲಿದ್ದದ್ದು
ನ್ಯೂನತೆಗಳು ಮತ್ತು ಕೆಟ್ಟ ಆಯ್ಕೆಗಳಷ್ಟೇ.

604
00:54:29,225 --> 00:54:32,686
ಆದರೆ ಅವನು ಹೋಮ್ಲ್ಯಾಂಡರ್‌ನನ್ನು ತಡೆಯಬಲ್ಲೆ
ಎಂಬ ಭರವಸೆಯನ್ನು ಬಿಟ್ಟುಕೊಡಲಿಲ್ಲ,

605
00:54:32,687 --> 00:54:35,773
ನಂತರ ಅವನು ನಿಜವಾಗಿಯೂ ಅದನ್ನು ಮಾಡಿದ.

606
00:54:36,357 --> 00:54:41,153
ಅವನನ್ನು ಪ್ರೀತಿಸಿದರೂ ದ್ವೇಷಿಸಿದರೂ,
ಅವನು ಜಗತ್ತನ್ನು ಸುರಕ್ಷಿತ ಸ್ಥಳವನ್ನಾಗಿಸಿದ,

607
00:54:42,029 --> 00:54:43,531
ಅದು ಅವನನ್ನು ಹೀರೋ ಆಗಿಸುತ್ತದೆ.

608
00:54:46,075 --> 00:54:49,327
ಇಷ್ಟು ಹೊತ್ತಿಗೆ
ಅವನು ಖಂಡಿತ ನರಕದಲ್ಲಿರುತ್ತಾನೆ,

609
00:54:49,328 --> 00:54:50,746
ತನ್ನ ಆ ನಗು ತೋರಿಸುತ್ತಾ

610
00:54:52,039 --> 00:54:54,166
ಯಮದೂತರಿಗೆ ಕಿರುಕುಳ ನೀಡುತ್ತಿರುತ್ತಾನೆ.

611
00:55:00,589 --> 00:55:01,757
ಹೌದು, ಅಷ್ಟೇ.

612
00:55:06,512 --> 00:55:08,388
{\an8}ಅವನು ನನ್ನ ಅಮ್ಮನ ಪಕ್ಕದಲ್ಲಿರುವುದು ಒಳ್ಳೆಯದು.

613
00:55:08,389 --> 00:55:09,639
{\an8}ರೆಬೆಕಾ ಸಾಂಡರ್ಸ್ ಬುಚರ್
ಪ್ರೀತಿಯ ಸ್ಮರಣಾರ್ಥ

614
00:55:09,640 --> 00:55:10,641
{\an8}ಪ್ರೀತಿಯ ತಾಯಿ
ಪತ್ನಿ, ಸಹೋದರಿ, ಮಗಳು

615
00:55:11,392 --> 00:55:13,144
ಅವನು ಯಾವಾಗಲೂ ಇರಲು ಬಯಸಿದ್ದ ಸ್ಥಳ ಅದು.

616
00:55:25,823 --> 00:55:26,866
ಬೈ.

617
00:55:42,381 --> 00:55:43,466
ಹೂಯಿ.

618
00:55:45,509 --> 00:55:46,677
ಹೋಗೋಣ ಬಾ, ಮಗು.

619
00:55:51,348 --> 00:55:52,891
ನಿಜವಾಗಲೂ ರೆನೋದ ಟಾಪ್‌ ಧರಿಸದ--

620
00:55:52,892 --> 00:55:54,560
ಪರಿಚಾರಿಕೆಯರ
ಬಾಡೂ‌ಟದ ರೆಸ್ಟೋರಂಟ್‌ಗೆ ಹೋಗ್ತೀವಾ?

621
00:55:56,020 --> 00:55:57,354
ಹೌದು, ನಾವು ಹೋಗುತ್ತಿದ್ದೀವಿ.

622
00:55:59,732 --> 00:56:00,566
ಮಾತು ಕೊಟ್ಟಿದ್ದೆ.

623
00:56:03,402 --> 00:56:04,570
ಅವನಿಗಿದು ಇಷ್ಟವಾಗ್ತಿತ್ತು.

624
00:56:08,574 --> 00:56:09,575
ಖಂಡಿತ.

625
00:56:22,379 --> 00:56:24,756
{\an8}ಪ್ರೀತಿಯ ಸ್ಮರಣೆಯಲ್ಲಿ
ವಿಲಿಯಂ ಬುಚರ್ - ಪ್ರೀತಿಯ ಪತಿ

626
00:56:24,757 --> 00:56:27,843
ಓಯ್, ಹಾಳಾಗಿ ಹೋಗಿ, ನೀಚರಾ

627
00:57:21,647 --> 00:57:24,233
{\an8}ಕೆಫೇ ದೆ ಲಾ ರಿವ್ ದೆ ಮಾರ್ಸೇಯ್

628
00:57:53,762 --> 00:57:56,557
- ಹಲೋ?
- ಹ್ಯೂ ಕ್ಯಾಂಪ್‌ಬೆಲ್, ನಾನು ಬಾಬ್ ಸಿಂಗರ್.

629
00:57:57,558 --> 00:57:59,684
ನಮಸ್ಕಾರ, ಅಧ್ಯಕ್ಷರೇ.

630
00:57:59,685 --> 00:58:03,771
ಕ್ಯಾಂಪ್‌ಬೆಲ್, ದೇಶವು ನಿನಗೆ
ಮತ್ತು ನಿನ್ನ ತಂಡಕ್ಕೆ ಚಿರಋಣಿಯಾಗಿದೆ,

631
00:58:03,772 --> 00:58:06,608
ನಾನು ಸುತ್ತಿ ಬಳಸಿ ಮಾತಾಡಲ್ಲ.

632
00:58:06,609 --> 00:58:10,528
ಸುತ್ತಿ ಬಳಸಿ ಮಾತಾಡೋದು
ನನಗೆ ಬೇಕಾಗೂ ಇಲ್ಲ, ಸರ್.

633
00:58:10,529 --> 00:58:12,864
ವಾಟ್ ಕಂಪನಿ ಈಗ ಸಂಪೂರ್ಣ ಗೊಂದಲದಲ್ಲಿದೆ.

634
00:58:12,865 --> 00:58:18,036
ಕಾಂಪೌಂಡ್ ವಿ ಪಡೆದ ಆ ಹುಚ್ಚರು
ಮನಬಂದಂತೆ ವರ್ತಿಸುತ್ತಿದ್ದಾರೆ.

635
00:58:18,037 --> 00:58:21,414
ಆದ್ದರಿಂದ, ನಾವು ಸೂಪ್ ಅಫೇರ್ಸ್ ಬ್ಯೂರೋವನ್ನು
ಪುನಃ ಸ್ಥಾಪಿಸುತ್ತಿದ್ದೇವೆ.

636
00:58:21,415 --> 00:58:24,918
ಅದನ್ನು ನಡೆಸಲು ನಮಗೆ ಯಾರಾದರೂ ಬೇಕು.
ನೀನು ನಡೆಸುತ್ತೀಯಾ?

637
00:58:24,919 --> 00:58:26,836
ನೀನು ನನಗೆ ನೇರವಾಗಿ ವರದಿ ಮಾಡುತ್ತೀಯ.

638
00:58:26,837 --> 00:58:29,757
ಅದು… ವಾಹ್. ಅದು…

639
00:58:30,424 --> 00:58:33,010
ಅದು ನನಗೆ ಗೌರವದ ವಿಷಯ, ಸರ್. ಆದರೆ…

640
00:58:34,094 --> 00:58:35,720
ನನಗದು ಬೇಡ, ಧನ್ಯವಾದ?

641
00:58:35,721 --> 00:58:37,180
"ಬೇಡವಾ"?

642
00:58:37,181 --> 00:58:39,098
ನೀವು… ಆಫರ್ ನೀಡಿದ್ದು ನಿಜವಾಗಲೂ ಸಂತೋಷದ ವಿಷಯ.

643
00:58:39,099 --> 00:58:40,935
ನಿಜ ಹೇಳಬೇಕೆಂದರೆ ನಾನು…

644
00:58:41,977 --> 00:58:44,020
ನನ್ನದೇ ಸ್ಟಾರ್ಟ್‌ಅಪ್ ಮೇಲೆ
ಕೆಲಸ ಮಾಡ್ತಿದ್ದೇನೆ.

645
00:58:44,021 --> 00:58:46,481
ಖಾಸಗಿ ವಲಯ ಹಾಳಾಗಿ ಹೋಗಲಿ.

646
00:58:46,482 --> 00:58:48,984
ನಿನ್ನ ಮನಸ್ಸು ಬದಲಾದರೆ ಆಫರ್ ಇನ್ನೂ ಇರುತ್ತದೆ.

647
00:58:54,240 --> 00:58:56,241
ಕ್ಯಾಂಪ್‌ಬೆಲ್
ಆಡಿಯೋ ವಿಷುಯಲ್

648
00:58:56,242 --> 00:59:02,957
{\an8}ನಿನಗಾಗಿ ಶುಂಠಿ ಬಿಯರ್, ಶುಂಠಿ ಕ್ಯಾಂಡಿ ಮತ್ತು…

649
00:59:03,791 --> 00:59:06,001
{\an8}- ಉಪ್ಪಿನ ಬಿಸ್ಕತ್ ತಂದಿದ್ದೀನಿ.
- ಉಪ್ಪಿನ ಬಿಸ್ಕತ್ ಕೊಡು.

650
00:59:06,585 --> 00:59:07,878
ಬೆಳಗ್ಗಿನಿಂದ ಏನೇನು ಮಾಡಿದೆ?

651
00:59:09,213 --> 00:59:10,838
ವಾಂತಿ ಮಾಡಿದೆ.

652
00:59:10,839 --> 00:59:13,299
ನಂತರ, ಮೂತ್ರ ವಿಸರ್ಜಿಸಬೇಕಾಯಿತು,
ಅಲ್ಲೂ ಸ್ವಲ್ಪ ತಡವಾಯಿತು.

653
00:59:13,300 --> 00:59:14,550
ನಂತರ ಮತ್ತೆ ವಾಂತಿ ಮಾಡಿದೆ.

654
00:59:14,551 --> 00:59:16,636
ನಂತರ, ಅಮ್ಮ ಕರೆ ಮಾಡಿದಳು.

655
00:59:16,637 --> 00:59:18,930
ಅಮ್ಮನ ಹತ್ತಿರ ಮಾತಾಡಿ ತಲೆ ಕೆಟ್ಟುಹೋಯಿತು.

656
00:59:18,931 --> 00:59:21,224
ನಾವು ಮದುವೆಯಾಗುತ್ತಿಲ್ಲ ಎಂದು
ಸತತ 30 ನಿಮಿಷ ಕೊರೆದಳು.

657
00:59:21,225 --> 00:59:24,227
ನಾವು ಈಗಲೇ ನ್ಯಾಯಾಲಯಕ್ಕೆ ಹೋಗಬಹುದು.

658
00:59:24,228 --> 00:59:25,353
ನಿನಗೆ ಮದುವೆ ಆಗಬೇಕಿದ್ದರೆ.

659
00:59:25,354 --> 00:59:26,521
ಇಲ್ಲ, ನನ್ನಿಂದ ಸಾಧ್ಯವಿಲ್ಲ.

660
00:59:26,522 --> 00:59:28,274
ಏಕೆಂದರೆ ನನಗೆ ಈ ಶೂಗಳು ಮಾತ್ರ ಸರಿಹೊಂದುವುದು.

661
00:59:30,985 --> 00:59:35,239
ನೀನು ಈ ಶೂ ಹಾಕಿದ್ದರೂ ನಾನು ಮಾಡುವೆಯಾಗಬಲ್ಲೆ.

662
00:59:36,282 --> 00:59:39,660
ಬ್ರಾಡ್‌ವೇಯಲ್ಲಿ 11-99 ಮತ್ತು 96.
ಹತ್ತಿರದ ಅಧಿಕಾರಿಗಾಗಿ ವಿನಂತಿ.

663
00:59:41,620 --> 00:59:43,997
ಪಾರ್ಕ್‌ವೇಯಲ್ಲಿ ನಿರ್ಮಾಣ ನಡೀತಿದೆ.
ಬ್ಯಾಕಪ್‌ಗೆ ಒಂದು ನಿಮಿಷ ಸಾಕು.

664
00:59:43,998 --> 00:59:45,123
ಮಾಡಲು ಸಿದ್ಧವಿದ್ದೀಯಾ?

665
00:59:45,124 --> 00:59:46,291
ಹೌದು.

666
00:59:46,292 --> 00:59:47,543
ಆದರೆ ನನ್ನ ಶೂ ಬದಲಾಯಿಸಲ್ಲ.

667
00:59:56,510 --> 00:59:58,095
ರಾಬಿನ್, ಅಮ್ಮನನ್ನು ಚೆನ್ನಾಗಿ ನೋಡಿಕೋ.

668
01:00:30,586 --> 01:00:31,627
ಗಾರ್ತ್ ಎನಿಸ್‌ರ ಡೈನಮೈಟ್ ಎಂಟರ್ಟೈನ್ಮೆಂಟ್
ಕಾಮಿಕ್ ಪುಸ್ತಕ ಸರಣಿಯಾಧಾರಿತ

669
01:00:31,628 --> 01:00:32,546
ವಿವರಣೆ
ಡರಿಕ್ ರಾಬರ್ಟ್ಸನ್

670
01:03:13,665 --> 01:03:15,750
ಉಪ ಶೀರ್ಷಿಕೆ ಅನುವಾದ: ನಾಗರತ್ನ ಹೆಚ್ ಎಂ

671
01:03:15,751 --> 01:03:17,753
ಸೃಜನಶೀಲ ಮೇಲ್ವಿಚಾರಕರು
ಗಾಡ್ವಿನ್ ಅಮನ್ನಾ

