1
00:00:53,262 --> 00:00:55,514
ಅಂತಿಮ ಯುದ್ಧ

2
00:01:07,735 --> 00:01:09,987
ಇಲ್ಲಾ, ರೀಸ್, ನಿಲ್ಲು. ದೇವರೇ, ಇಲ್ಲ.

3
00:01:10,070 --> 00:01:12,281
-ನೀನೇನ್ ಮಾಡ್ತಿದ್ದೀಯಾ? ದೇವರೇ!
-ಬೇಡ!

4
00:01:12,406 --> 00:01:18,412
ಕೊರೋನಾಡೋದಲ್ಲಿ ಭಯೋತ್ಪಾದನೆ

5
00:01:28,964 --> 00:01:34,553
ಕೊರೋನಾಡೋದಲ್ಲಿ ಭಯೋತ್ಪಾದನೆ

6
00:02:43,038 --> 00:02:44,039
ಹಾಂ.

7
00:02:45,875 --> 00:02:47,042
ಒಳ್ಳೇದಾಯಿತು.

8
00:02:47,877 --> 00:02:49,712
ಆಯಿತು. ನಿನ್ನದೊಂದು ಋಣ ನನ್ನ ಮೇಲೆ.

9
00:02:58,053 --> 00:02:59,471
ದರಿದ್ರವಾಗಿ ಕಾಣ್ತಿದ್ದೀಯ.

10
00:03:01,557 --> 00:03:02,600
ನಾನಾ ಕಾಣ್ತಿರೋದು?

11
00:03:04,476 --> 00:03:05,394
ಇಷ್ಟ ಆಗ್ಲಿಲ್ವಾ?

12
00:03:07,229 --> 00:03:10,149
ವ್ಯಾನಲ್ಲಿ ವಾಸಿಸುವ
ಪ್ಯಾಟ್ರಿಕ್ ಸ್ವೇಯ್ಜ್ ತರ ಕಾಣ್ತೀಯ.

13
00:03:15,070 --> 00:03:17,489
ಅಂದಹಾಗೆ ಹಾರ್ಟ್ಲೀ ಉತ್ತರಕ್ಕೆ ತಲುಪಿದ್ದಾಳೆ.

14
00:03:19,533 --> 00:03:21,076
ಓರ್ಕಾಸ್ ಐಲ್ಯಾಂಡ್ ಮನೇಲಾ?

15
00:03:21,869 --> 00:03:23,621
ಸಿಐಡಿಯನ್ನೂ ಬಿಟ್ಟುಬಿಟ್ಟಳು.

16
00:03:24,914 --> 00:03:26,332
ಸೀಕ್ರೆಟ್ ಸರ್ವಿಸಿಗಾ?

17
00:03:26,874 --> 00:03:27,917
ಇನ್ನೊಂದು ಗೆಸ್ಸ್.

18
00:03:28,459 --> 00:03:31,879
ಟಾಲೋಸ್. ಒಂದು ಡಜನ್ ಜನರ
ಮೇಲೆ ಕಾಂಟ್ರಾಕ್ಟ್. ಇನ್ನೂ ಇರಬಹುದು.

19
00:03:34,423 --> 00:03:35,674
ನಾನು ಬರೋದು ಗೊತ್ತಿದೆ.

20
00:03:36,216 --> 00:03:37,259
ಅವ್ಳಿಗ್ಗೊತ್ತು.

21
00:03:38,510 --> 00:03:39,428
ಅದು ಮುಖ್ಯವೇ?

22
00:03:41,764 --> 00:03:44,683
ಇಲ್ಲ, ಮುಖ್ಯವಿಲ್ಲ. ಇದುವರೆಗಿಲ್ಲ.

23
00:04:46,495 --> 00:04:47,830
ಇದ್ನ ರೆಕಾರ್ಡ್ ಮಾಡ್ಲಾ?

24
00:04:49,748 --> 00:04:51,625
ಖಂಡಿತ ಇಲ್ಲ. ಅದಕ್ಕೆ ನೀ ಬಂದಿರೋದು.

25
00:04:51,709 --> 00:04:53,752
ಹೌದು. ಲೆಕ್ಕ ಚುಕ್ತಾ ಮಾಡೋಕೆ.

26
00:04:54,253 --> 00:04:55,546
ನಿನಗೆ ಸಂದೇಹ ಅನ್ಸತ್ತೆ.

27
00:04:56,672 --> 00:04:59,466
ಸರ್ಕಾರಿ ಸಂಪನ್ಮೂಲಗಳ ಮೂಲಕ
ನನ್ನ ಕಥೆಯನ್ನು ತಡೆಸಿದಿರಿ.

28
00:04:59,550 --> 00:05:00,968
ನನಗೆ ಬಹಳ ಸಂದೇಹವಿದೆ.

29
00:05:01,051 --> 00:05:03,512
ಮಿಸ್ ಬರನೆಕ್, ನಿಮ್ಮ ಕಥೆ ತಪ್ಪು.

30
00:05:04,013 --> 00:05:05,389
ಅದು, ಮಾನಹಾನಿಕರ.

31
00:05:05,973 --> 00:05:07,349
ಪ್ರಿಂಟಿಗೆ ಹೋಗುವ ಮೊದಲು,

32
00:05:07,433 --> 00:05:11,395
ನಡೆದ ಘಟನೆಗಳ ನಿಜವಾದ ಕ್ರಮವನ್ನು
ನೀನು ತಿಳಿಯಬೇಕು.

33
00:05:11,478 --> 00:05:14,064
ನನ್ನ ಕಥೆಯಲ್ಲಿ ಎಲ್ಲವನ್ನೂ ದೃಢೀಕರಿಸಲಾಗಿದೆ.

34
00:05:14,148 --> 00:05:16,817
ಸ್ಟೀವ್ ಹಾರ್ನ್,
ಅಡ್ಮಿರಲ್ ಪಿಲ್ಲರಿಂದ ದಾಖಲೆಗಳಿವೆ--

35
00:05:16,900 --> 00:05:19,278
ನಿನ್ನ ಸತ್ಯವನ್ನು ನಾನು ನಿರಾಕರಿಸುವುದಿಲ್ಲ.

36
00:05:19,361 --> 00:05:21,405
ನೀನು ತಪ್ಪು ತೀರ್ಮಾನ ತಗೊಳ್ತಿದ್ದೀಯ.

37
00:05:22,531 --> 00:05:26,535
ಈಗ, ನಿನ್ನ ಕಥೆಯಲ್ಲಿ ಒಬೆರಾನ್ ಅನಲಿಟಿಕ್ಸ್
ಅಂತ ಒಂದು ಶೆಲ್ ಕಂಪನಿ ಉಲ್ಲೇಖಿಸಿ,

38
00:05:27,202 --> 00:05:30,414
ನಾನೇ ಅದರಲ್ಲಿನ ಹೆಸರಿಸದ ಫಲಾನುಭಾವಿ
ಎಂದು ಸೂಚಿಸುತ್ತಿದೀಯ.

39
00:05:31,040 --> 00:05:31,874
ನಾನಲ್ಲ.

40
00:05:32,541 --> 00:05:35,335
ಸ್ಟೀವ್ ಹಾರ್ನ್ ಅಥವಾ
ಯಾರಿಂದಲೂ ನನಗೆ ಹಣ ಸಿಗ್ಲಿಲ್ಲ.

41
00:05:36,211 --> 00:05:38,839
ಅದನ್ನ ನಂಬುವುದು ಕಷ್ಟ, ಯಾಕೆಂದರೆ ವಾಸ್ತವಿಕವಾಗಿ

42
00:05:38,922 --> 00:05:41,425
ಪಿತೂರಿಗಾರರನ್ನು ಮುಚ್ಚಿಡಲು
ಹಣ ಕೊಡಲಾಗಿತ್ತು.

43
00:05:41,925 --> 00:05:44,053
ನಾನು ಪಿತೂರಿ ನಡೆಸಲಿಲ್ಲ, ಮಿಸ್ ಬರನೆಕ್.

44
00:05:44,136 --> 00:05:47,973
ಪೆಂಟಗಾನ್ ನನಗೆ ಕೊಟ್ಟ ಅಧಿಕಾರಕ್ಕೆ
ತಕ್ಕಂತೆ ಕಾರ್ಯ ಮಾಡಿದೆ.

45
00:05:49,016 --> 00:05:53,479
ಒಂದು ಇಡೀ ನೇವಿ ಸೀಲ್ ತುಕಡಿಯ ಮೇಲೆ
ಲೈಸೆನ್ಸ್ ಇಲ್ಲದ ಔಷಧ ಪರೀಕ್ಷಿಸಿದ್ದೀರಿ.

46
00:05:53,562 --> 00:05:54,897
ಪರೀಕ್ಷೆ ಆರಂಭಿಸಿದೆ ನಿಜ.

47
00:05:55,606 --> 00:05:59,318
ಮುಚ್ಚಿಡುವುದ್ರಲ್ಲಿ ನನ್ನ ಪಾತ್ರವಿಲ್ಲ
ಹಾಗೂ ಅದನ್ನು ಲಾಭಕ್ಕಾಗಿ ಮಾಡಿಲ್ಲ.

48
00:06:00,486 --> 00:06:01,487
ಮತ್ತೆ ಯಾಕೆ?

49
00:06:02,780 --> 00:06:04,573
ಆರ್ಡಿ-4895 ಟೆಸ್ಟ್ ಮಾಡಿದ್ಯಾಕೆ?

50
00:06:05,074 --> 00:06:09,078
ನನ್ನ ನೀತಿಗಳು ಇರಾಕ್ ಹಾಗೂ ಆಫ್ಘಾನ್ನಿಂದ
ಪಡೆಗಳನ್ನ ಹಿಂಪಡೆಯಲು ದಾರಿ ಮಾಡಿದವು.

51
00:06:09,828 --> 00:06:13,832
ಆದರೆ ನಮ್ಮ ಸ್ಪೆಷಲ್ ಆಪರೇಟರ್ಗಳಿಗೆ
ನಿಯೋಜನೆಯ ಕಾಲದ ಜೊತೆ ಒತ್ತಡ ಜಾಸ್ತಿಯಾಯಿತು.

52
00:06:14,291 --> 00:06:15,459
ಹೆಚ್ಚು ಆಘಾತ.

53
00:06:15,542 --> 00:06:20,089
ಈ ಸಮಸ್ಯೆಯನ್ನು ಪರಿಹರಿಸಲು ನನಗೆ ನೈತಿಕ
ಮತ್ತು ವೃತ್ತಿಪರ ಬಾಧ್ಯತೆ ಇದೆ.

54
00:06:20,172 --> 00:06:23,008
ಇಯುಏಗೆ ಸೂಕ್ಷ್ಮ ಸಮಸ್ಯೆಗಳನ್ನು
ಪರಿಹರಿಸಲು ಗೊತ್ತು.

55
00:06:24,343 --> 00:06:27,096
ಸನ್ನಿಹಿತವಾದ ದುರಂತ, ಮರಣವನ್ನು ತಡೆಗಟ್ಟಲು.

56
00:06:27,721 --> 00:06:32,643
ದಿನನಿತ್ಯ ಸರಾಸರಿ 17ರಿಂದ 22 ಯೋಧರು
ಆತ್ಮಹತ್ಯೆ ಗೈಯ್ಯುತ್ತಾರೆ.

57
00:06:33,727 --> 00:06:36,063
ಸಕ್ರಿಯರಾಗಿರುವವರನ್ನು ಕೂಡ ಪರಿಗಣಿಸಿದರೆ,

58
00:06:36,146 --> 00:06:40,025
ಬರುವ ಸಂಖ್ಯೆ 9-11 ಗಿಂತಲೂ
ದುಪ್ಪಟ್ಟು ಆಗುತ್ತದೆ.

59
00:06:40,109 --> 00:06:43,529
ಇದು ದುರಂತಕರ ನಷ್ಟವಲ್ಲದಿದ್ದರೆ
ಬೇರೇನಂತ ನನಗೆ ಗೊತ್ತಿಲ್ಲ.

60
00:06:45,155 --> 00:06:48,283
ಮತ್ತೆ ಇಡೀ ಸೀಲ್ ತುಕಡಿಗೆ ಬ್ರೈನ್ ಟ್ಯೂಮರ್...

61
00:06:49,326 --> 00:06:50,911
ಅದು ದುರಂತಕರವೇ?

62
00:06:51,578 --> 00:06:53,956
ಪಿಲ್ಲರ್ ನನಗೆ ಮೆಡಿಕಲ್
ರಿಪೋರ್ಟ್ ಕಳಿಸಿದ್ದರು.

63
00:06:54,039 --> 00:06:56,333
ಅದನ್ನು ಪ್ರಶ್ನಿಸಲು
ಯಾವುದೇ ಕಾರಣವಿರಲಿಲ್ಲ.

64
00:06:58,836 --> 00:07:00,963
ನಿಮಗೆ ಗೆಡ್ಡೆಗಳ ಬಗ್ಗೆ ತಿಳಿದಿರಲಿಲ್ಲವಾ?

65
00:07:01,046 --> 00:07:04,800
ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನೀನು ಹಾರ್ನ್ನ
ಎದುರುಹಾಕಿಕೊಂಡಮೇಲೆ ತಿಳೀತು.

66
00:07:05,551 --> 00:07:09,596
ಅಂದರೆ ನೀನು ಕೂಗುತ್ತಿದ್ದ ವಿಷಯದ ಬಗ್ಗೆ
ಪ್ರಪಂಚಕ್ಕೆ ಏನೂ ಆಗಬೇಕಿಲ್ಲ.

67
00:07:09,680 --> 00:07:11,640
ನನಗೆ, ಸ್ಪಷ್ಟೀಕರಣದ ಕ್ಷಣವಾಗಿತ್ತು.

68
00:07:12,182 --> 00:07:14,518
ಹಾರ್ನ್ ಹಾಗೂ ಅವನ ತಂಡ ಆಪರೇಷನ್ ಓಡಿನ್ಸ್

69
00:07:14,601 --> 00:07:17,521
ಸ್ವೋರ್ಡನ್ನು ಸತ್ಯ ಮುಚ್ಚಿಡುವ
ತಂತ್ರವಾಗಿ ರಚಿಸಿರುವ ವಿಷಯ

70
00:07:17,604 --> 00:07:20,566
ತಿಳಿದಾಗಲೇ ನಾನು ಡಿಸಿಐಎಸ್
ತನಿಖೆಯನ್ನು ಪ್ರಾರಂಭಿಸಿದೆ.

71
00:07:22,067 --> 00:07:24,153
ನಿನ್ನ ಹಾಗೆ ನನಗೂ ಬೇಸರವಾಗಿತ್ತು.

72
00:07:27,406 --> 00:07:28,365
ಇನ್ನೂ ಹೆಚ್ಚು.

73
00:07:31,743 --> 00:07:32,953
ಮೇಡಂ ಸೆಕ್ರೆಟರಿ?

74
00:07:34,037 --> 00:07:37,833
ನಿಮ್ಮನ್ನು ಎಸ್ಸಿಐಎಫ್ಗೆ ಕರೆದೊಯ್ಯುತ್ತೇನೆ.
ಜಂಟಿ ಮುಖ್ಯಸ್ಥರ ಕರೆ ಇದೆ.

75
00:07:38,542 --> 00:07:39,585
ಧನ್ಯವಾದಗಳು.

76
00:07:41,920 --> 00:07:43,422
ಇದನ್ನು ನಂತರ ಎತ್ತಿಕೊಳ್ಳೋಣ.

77
00:07:44,214 --> 00:07:46,925
ಏತನ್ಮಧ್ಯೆ, ಪೂರ್ವ ವಿಭಾಗದಲ್ಲಿ ಠಿಕಾಣಿ ಹೂಡು,

78
00:07:47,009 --> 00:07:48,886
ಸಾಧ್ಯವಾದರೆ ಕಿಟಕಿಯಿಂದ ದೂರವಾಗಿ.

79
00:07:50,095 --> 00:07:53,307
ಅಥವಾ ಹೋಗಿ
ನಾನು ಹೇಳಿರೋದನ್ನ ಪ್ರಕಟಿಸು. ಏಕೆಂದರೆ...

80
00:07:55,392 --> 00:07:56,560
ಅದೇ ಸತ್ಯ.

81
00:08:54,534 --> 00:08:56,203
ರಸ್ತೆ ತಡೆ ಮತ್ತು ಚೆಕ್ಪೋಸ್ಟ್?

82
00:08:57,496 --> 00:08:59,206
ಎಲ್ಏಗೆ ಒಳಿತೇನೆಂದು ಗೊತ್ತು.

83
00:09:00,207 --> 00:09:02,459
ಹೋವಾರ್ಡ್ಗಳು ಎಡ್ವರ್ಡ್ಸನ್ನು ಗುರುತಿಸಿದರು.

84
00:09:02,960 --> 00:09:05,504
ಹೌದು, ನೋಡಿದೆವು. ಬಿಯುಡಿ-ಎಸ್ ಸಹಪಾಠಿಗಳು.

85
00:09:06,630 --> 00:09:08,882
ಅವನು ಸಿಐಎ. ಗ್ರೌಂಡ್ ಬ್ರಾಂಚ್.

86
00:09:09,549 --> 00:09:11,969
ಅವನು ಇಲ್ಲಿಯವರೆಗೆ ಕಾಣೆಯಾಗಿದ್ದ.

87
00:09:12,678 --> 00:09:14,137
ಹಾರ್ಟ್ಲೀ ಸಿಐಡಿಯಿಂದ ದೂರ.

88
00:09:14,721 --> 00:09:18,976
ಟಾಲೋಸ್ನ ಗುತ್ತಿಗೆದಾರರನ್ನ ಬಿಟ್ಟು, ರೀಸ್
ಮೇಲೆ ವಿಚಾರಣೆಯಿಲ್ಲದೆ ಬರೋಕೆ ಬಿಡ್ತಾಳೆ.

89
00:09:20,602 --> 00:09:21,853
ಅವನನ್ನು ಕೊಲ್ತಾಳೆ.

90
00:09:22,771 --> 00:09:24,606
ಮತ್ತು ಬಯಸಿದ ಕಥೆಯನ್ನು ಹೇಳ್ತಾಳೆ.

91
00:09:24,690 --> 00:09:26,817
ಕನಿಷ್ಠ ಹಾಗಾದರೂ ಕೊನೆಯಾಗುತ್ತೆ. ಅಲ್ವಾ?

92
00:09:28,819 --> 00:09:30,570
ಹೌದು, ಆದರೆ ನಮ್ಮ ನಿಯಮಗಳಂತಲ್ಲ.

93
00:09:36,410 --> 00:09:39,454
ಕ್ವಾಂಟಿಕೋ ತೊರೆದಾಗ,
ನನ್ನ ಇಷ್ಟದ ಪ್ರಕಾರ ಇರಬಹುದಿತ್ತು.

94
00:09:40,038 --> 00:09:43,166
ಪಲಾಯನಗೈದವರನ್ನು ಆರಿಸಿದೆ,
ಏಕೆಂದರೆ ನನಗೆ ಸರಳತೆ ಇಷ್ಟ.

95
00:09:43,250 --> 00:09:46,086
ಉದ್ದೇಶವನ್ನು ಸಾಬೀತುಪಡಿಸಬೇಕಾಗಿಲ್ಲ,
ಹಿಡಿಯೋದಷ್ಟೇ.

96
00:09:46,169 --> 00:09:47,879
ತಪ್ಪಿತಸ್ಥರಲ್ಲದವರು ಓಡಲ್ಲ.

97
00:09:51,967 --> 00:09:54,594
ಆದರೆ ನಾವು ಬಾಧಿತನನ್ನೇ ಬೆನ್ನಟ್ಟುತ್ತಿದ್ದೇವೆ.

98
00:09:55,595 --> 00:09:58,307
ರೀಸ್ ಬೆನ್ನತ್ತಿರೋ ಜನ ಮಹಾಪಾಪಿಗಳು.

99
00:09:58,932 --> 00:09:59,933
ಏನು?

100
00:10:00,851 --> 00:10:03,437
ನಾವು ಈಗ ರೀಸ್ ಪರ ವಹಿಸಬೇಕಾ ಅಥವಾ...

101
00:10:04,771 --> 00:10:05,605
ಇಲ್ಲ.

102
00:10:07,107 --> 00:10:08,233
ಅವರನ್ನೆಲ್ಲ ಹಿಡಿಯೋಣ.

103
00:10:09,401 --> 00:10:12,487
ನಾವು? ನಾವು ರಜೆ ಮೇಲೆ ಇದ್ದೇವೆ, ಬಾಸ್.

104
00:10:13,780 --> 00:10:14,990
ಕೆಲವು ಕರೆ ಮಾಡಿದೆ.

105
00:10:16,533 --> 00:10:18,827
ಇನ್ನೊಂದು ಅವಕಾಶ ಬೇಕಿರೋರು ನಾವಷ್ಟೇ ಅಲ್ಲ.

106
00:10:20,829 --> 00:10:23,373
ಇದನ್ನ ಮಾಡಿ ಒಳ್ಳೆ ವೃತ್ತಿಯನ್ನ
ಹಾಳು ಮಾಡ್ಕೊತೀಯಾ?

107
00:10:33,258 --> 00:10:38,055
ನಿಮ್ಮ ಸಂಶೋಧನೆಗೆ ಸಹಾಯ ಮಾಡಲು.
ನಾನೊಂದು ತೆರೆದ ಪುಸ್ತಕ. -ಲೊರೈನ್

108
00:10:42,309 --> 00:10:45,979
ಬ್ಯಾಂಕ್ ಸ್ಟೇಟ್ಮೆಂಟ್

109
00:10:54,738 --> 00:10:57,657
ಹಾರ್ಟ್ಲೀ ಜೊತೆ ಇರುವೆ. ನೀನು ಬರೋದು ಗೊತ್ತು.
ಆದರೆ ದಯವಿಟ್ಟು ತಡಿ. ಸಮಯ ಬೇಕು.

110
00:10:57,741 --> 00:11:00,952
ಪೂರ್ಣ ಕಥೆಯನ್ನು ಹೊಂದಿಲ್ಲದಿರಬಹುದು.

111
00:11:31,400 --> 00:11:34,069
ನನಗೆ ಈ ಸಂಗೀತ ಭರಿಸೋಕೆ ಆಗ್ತಿಲ್ಲ ಸದ್ಯಕ್ಕೆ.

112
00:11:34,152 --> 00:11:36,488
"ಭರಿಸೋಕೆ" ಸಾಧ್ಯವಿಲ್ಲವಾ? ಸರಿ.

113
00:11:39,991 --> 00:11:40,992
ಸರಿ.

114
00:11:41,618 --> 00:11:42,577
ಇದು?

115
00:11:46,415 --> 00:11:47,666
ಇದು ಚಂದ.

116
00:11:49,960 --> 00:11:51,211
ಅದೊಂದು ಒಳ್ಳೆಯ ಹಾಡು.

117
00:11:56,883 --> 00:11:58,844
ನಾನೀಗ ನೋಡ್ತಿರೋದು ನಿಜವಾ?

118
00:12:00,762 --> 00:12:01,972
ನಗ್ತಿದ್ಯಾ?

119
00:12:02,681 --> 00:12:05,392
ಅಂದ್ರೆ ನೀನು ನಕ್ಕಿರೋದೇ
ನನಗೆ ನೆನಪಿಲ್ಲ, ಆದರೆ...

120
00:12:06,768 --> 00:12:10,105
ಒಂದು ಕ್ಷಣ, ನಾವಿಬ್ಬರೂ ನೆನಪು
ಕಳೆದುಕೊಳ್ತಾ ಇದ್ದೀವಿ ಅನ್ನಿಸ್ತು.

121
00:12:17,863 --> 00:12:18,864
ಅದು ಯಾರು?

122
00:12:19,781 --> 00:12:21,116
ವರದಿಗಾರ್ತಿ.

123
00:12:23,577 --> 00:12:24,786
ದ್ವೀಪದಲ್ಲಿದ್ದಾಳೆ.

124
00:12:25,787 --> 00:12:27,372
ಹೌದು, ಖಂಡಿತ ಇದ್ದಾಳೆ.

125
00:12:28,915 --> 00:12:31,585
ಸೆಕ್ ಡೆಫ್ಗೆ ಈಗ
ಒಂದು ಮಾನವ ಗುರಾಣಿ ಸಿಕ್ಕಿದೆಯಲ್ಲ.

126
00:12:32,919 --> 00:12:34,671
ಕೆಲಸ ಶುರು ಆಗೋಕೆ ಎಷ್ಟೊತ್ತು?

127
00:12:37,174 --> 00:12:38,467
ಎರಡು, ಮೂರು ಗಂಟೆ.

128
00:12:40,343 --> 00:12:44,014
ಪ್ರಶ್ನೆ ಏನೆಂದರೆ, ನಮಗಾಗಿ ದೋಣಿ ಕಾಯುತ್ತಿದೆಯೇ?

129
00:12:44,097 --> 00:12:46,224
ಅದು ಇರುತ್ತೆ ಎಂದು ಹೇಳಿದ. ಅದು ಇರುತ್ತೆ.

130
00:12:48,977 --> 00:12:49,978
ನನಗೇನೋ ಅನುಮಾನ.

131
00:12:51,062 --> 00:12:52,314
ರೈಫ್ ಹೇಸ್ಟಿಂಗ್ಸ್.

132
00:12:53,440 --> 00:12:56,735
ನಾನು ಸಾವಿರ ವರ್ಷ ಬದುಕಿದ್ದರೂ ಆ ಬೋಳಿ ಮಗನನ್ನ

133
00:12:56,818 --> 00:12:58,778
ಹೇಗೆ ನಂಬ್ತೀಯ ಅಂತ ಅರ್ಥವೇ ಆಗಲ್ಲ.

134
00:13:01,781 --> 00:13:03,783
ನಿನ್ನನ್ನಿನ್ನೂ ನಂಬ್ತೀನಲ್ಲ?

135
00:13:13,293 --> 00:13:14,294
ಬೆನ್.

136
00:13:16,171 --> 00:13:17,506
ಅಯ್ಯೋ.

137
00:13:19,382 --> 00:13:20,509
ಛೆ.

138
00:13:35,106 --> 00:13:36,983
ಮೂರು, ನಾಲ್ಕು ಚಾರ್ಜರ್ಗಳು ಇವೆ.

139
00:13:38,193 --> 00:13:40,237
ಎರಡು ಟಾಹೋಗಳು. ಒಂದೆರಡು ಬೈಕುಗಳು.

140
00:13:40,737 --> 00:13:43,031
ಮತ್ತು ಎಂಟು ಪೊಲೀಸರು.

141
00:13:45,700 --> 00:13:47,410
ಇಲ್ಲಿ ತಪ್ಪಿಸಿಕೊಳ್ಳಲು ಆಗಲ್ಲ.

142
00:13:48,995 --> 00:13:51,915
ನಾವು ಅವರನ್ನ ಗುಂಡು ಹಾರಿಸಿ ಎದುರಿಸೋಕೂ ಆಗಲ್ಲ.

143
00:13:51,998 --> 00:13:53,083
ನಮಗೆ ನಿರ್ಗಮನವಿಲ್ಲ.

144
00:13:54,501 --> 00:13:55,710
ರಕ್ಷಣೆ ಇಲ್ಲ.

145
00:13:57,754 --> 00:13:58,797
ಜೊತೆಗ್ ಇದ್ದೇನೆ.

146
00:14:00,674 --> 00:14:03,426
ಹೊರಟುಬಿಡ್ತೀವಿ. ಹೊರಡಬೇಕು.

147
00:14:13,311 --> 00:14:15,480
ನಮಸ್ಕಾರ, ಸರ್. ಏನ್ಸಮಾಚಾರ?

148
00:14:16,398 --> 00:14:17,941
ಚಾಲಕರ ಪರವಾನಗಿ ಕೊಡಿ.

149
00:14:18,483 --> 00:14:19,901
ಹಾಂ, ಖಂಡಿತ.

150
00:14:22,821 --> 00:14:25,949
ಎಲ್ಲಪ್ಪಾ? ಒಂದು ಸೆಕೆಂಡ್.

151
00:14:33,832 --> 00:14:35,709
ಎಲ್ಲಿಗೆ ಹೊರಟಿರಿ, ಮಿ. ಆಡಮ್ಸ್?

152
00:14:35,792 --> 00:14:37,794
ಪೆಸಿಫಿಕ್ ಸಿಟಿಗೆ ಹೊರಟೆ, ಸರ್.

153
00:14:38,378 --> 00:14:42,507
ಉತ್ತರದ ಅಲೆಗಳ ಮೇಲೆ ನನ್ನ ಹೆಸರು ಬರೆದಿದೆ
ಅಂತ ವದಂತಿ ಬಂದಿದೆ.

154
00:14:51,224 --> 00:14:53,685
ಹಿಂದೆ ಒಂದು ಸಲ ನೋಡಬಹುದಾ? ವಾಡಿಕೆಯ ತಪಾಸಣೆ.

155
00:15:03,778 --> 00:15:04,863
ಧಾರಾಳವಾಗಿ ನೋಡಿ.

156
00:15:13,663 --> 00:15:14,664
ನಮಸ್ಕಾರ.

157
00:15:17,792 --> 00:15:19,628
ನೀವು ವಾಹನದಲ್ಲಿ ವಾಸಿಸ್ತೀರಾ, ಸರ್?

158
00:15:20,211 --> 00:15:23,423
ಕಾಲಕಾಲಕ್ಕೆ, ಮೇಡಮ್.
ಕೇವಲ ಅಲೆಗಳನ್ನು ಬೆನ್ನಟ್ಟುತ್ತಿರ್ತೀನಿ.

159
00:15:23,965 --> 00:15:26,718
ಐಡಿ ಪರಿಶೀಲನೆ. ಕ್ಯಾಲಿಫೋರ್ನಿಯಾ.

160
00:15:26,801 --> 00:15:30,805
ಇಂಡಿಯಾ-ಎಂಟು-ಎಂಟು-ಎಂಟು-
ನಾಲ್ಕು-ಎರಡು-ಒಂದು-ಸೊನ್ನೆ.

161
00:16:10,428 --> 00:16:13,723
ಸರ್, ಇದು ಏನು ಎಂದು ನನಗೆ ತಿಳಿದಿದೆ.

162
00:16:16,142 --> 00:16:19,813
ದಾರಿಯಲ್ಲಿ ಬರುವಾಗ ಕಾಣೆಯಾದವರ ಸುದ್ದಿ
ನನ್ನ ಫೋನಿಗೆ ಬಂತು.

163
00:16:20,689 --> 00:16:24,109
ಅಂದರೆ, ಆ ಮುದುಕಿಯನ್ನು ಯಾರು ಅಪಹರಿಸುತ್ತಾರೆ?

164
00:16:24,192 --> 00:16:28,571
ಆಕೆ ಎಲ್ಲಾ ಕಡೆ ಓಡಾಡಿಕೊಂಡು
ಎಲ್ರಿಗೂ ಸ್ವೆಟರ್ ಹೊಲೀತಾರಾ ಏನು?

165
00:16:28,655 --> 00:16:32,367
ಮಿ. ಆಡಮ್ಸ್, ನಾವು ಮೌನವಾಗಿ ಮುಂದುವರಿಯಬಹುದೇ?

166
00:16:35,036 --> 00:16:36,204
ಖಂಡಿತವಾಗಿ.

167
00:16:37,372 --> 00:16:39,582
ಏಳು-ಲಿಂಕನ್-ನಾಲ್ಕು-ಎರಡು.

168
00:16:40,083 --> 00:16:42,419
ಯಾವ ಗುರುತೂ ಸಿಗ್ತಿಲ್ಲ. ಐಡಿ ಮತ್ತೆ ಹೇಳಿ?

169
00:16:42,919 --> 00:16:46,756
ಕೊನೆಯ ಹೆಸರು ಆಡಮ್ಸ್,
ಮೊದಲ ಹೆಸರು ಶೇನ್, ಪುರುಷ, ಬಿಳಿಯ.

170
00:16:47,632 --> 00:16:51,136
ಹುಟ್ಟಿದ ದಿನಾಂಕ, ಶೂನ್ಯ-ಏಳು-ಎರಡು-ಎರಡು 1984.

171
00:16:56,474 --> 00:16:59,227
ಏಳು-ಲಿಂಕನ್-ನಾಲ್ಕು-ಎರಡು
ಐಡಿ ಚೆಕ್ ಕ್ಲಿಯರ್ ಆಗಿದೆ.

172
00:16:59,310 --> 00:17:02,439
ಆಡಮ್ಸ್ ಹಾಗೂ ಶೇನ್ ಹೆಸರಿನ
ಯಾವುದೇ ವಾಂಟೆಡ್ ವಾರೆಂಟ್ ಇಲ್ಲ.

173
00:17:03,273 --> 00:17:05,483
ಸೆವೆನ್-ಎಲ್-ನಲವತ್ತೆರಡು ರೋಜರ್.

174
00:17:06,735 --> 00:17:09,320
ಐಡಿ ಏನೋ ಸರಿ. ಗಾಡಿ ಸರಿನಾ?

175
00:17:17,036 --> 00:17:18,163
ಸರಿಯಿದೆ.

176
00:17:32,844 --> 00:17:33,970
ಶುಭ ದಿನ.

177
00:17:35,138 --> 00:17:36,181
ದಾರಿಯಲ್ಲಿ ಎಚ್ಚರ.

178
00:17:39,726 --> 00:17:42,562
ಬೇಕರ್ 23, ಎಕ್ಸ್-ರೇ
ಏಳು-ಒಂಬತ್ತು-ಏಳು ಸ್ಪಷ್ಟವಾಗಿದೆ,

179
00:17:42,645 --> 00:17:45,315
ವಾಂಟೆಡ್ ಅಥವಾ ವಾರೆಂಟ್ ಇಲ್ಲ, ಕಳಿಸಿಕೊಡಬಹುದು.

180
00:17:46,149 --> 00:17:48,151
ಹೋಗಿ, ಸರಿಯಿದೆ. ಹೊರಡಬಹುದು.

181
00:17:49,110 --> 00:17:50,528
ಹೋಗಿ. ಸರಿಯಿದೆ.

182
00:18:03,750 --> 00:18:05,919
ನನ್ನ ಆಯವ್ಯಯಗಳಿಂದ ಸಹಾಯವಾಯಿತಾ?

183
00:18:06,669 --> 00:18:09,088
ಸೆಕ್ ಡೆಫ್ ಆಗಿ ಅದನ್ನ ಬಹಿರಂಗವಾಗಿರಿಸಬೇಕಲ್ಲ.

184
00:18:09,172 --> 00:18:11,633
ಇಪ್ಪತ್ತು ಮಿಲಿಯನ್ ಡಾಲರ್ ಬಚ್ಚಿಡೋದು ಕಷ್ಟ.

185
00:18:12,467 --> 00:18:14,093
ಕಷ್ಟ, ಆದರೆ ಅಸಾಧ್ಯವಲ್ಲ.

186
00:18:14,177 --> 00:18:16,971
ನಾನು ಓಡಿನ್ಸ್ ಸ್ವೋರ್ಡ್ ಮಿಷನ್ ಲಾಗ್ ನೋಡಬೇಕು.

187
00:18:17,764 --> 00:18:20,433
ನಿಮ್ಮ ಕೋಣೆಗೆ ಕಳುಹಿಸುತ್ತೇನೆ. ಬೇರೆ ಏನಾದರೂ?

188
00:18:21,226 --> 00:18:23,102
ನಾವು ಸಂದರ್ಶನ ಪೂರ್ಣಗೊಳಿಸಲಿಲ್ಲ.

189
00:18:28,525 --> 00:18:31,861
ನನ್ನ ತಂದೆಯ ಇತಿಹಾಸ ನಿಮಗೆ
ಎಷ್ಟರ ಮಟ್ಟಿಗೆ ಅರಿವಿದೆ?

190
00:18:31,945 --> 00:18:33,613
ನಿಮ್ಮ ಜೀವನ ಚರಿತ್ರೆ ಓದಿದೆ.

191
00:18:34,364 --> 00:18:38,868
ಮರದ ವ್ಯಾಪಾರ ಮಾಡಿಕೊಂಡು ಬಂದರಂತ ಗೊತ್ತು.
ಕೊರಿಯಾ ಮತ್ತು ವಿಯೆಟ್ನಾಂ ಯುದ್ಧದಲ್ಲಿದ್ದರು.

192
00:18:39,911 --> 00:18:41,579
ಅವರ ಕಷ್ಟ ನನಗೆ ತಿಳಿದಿದೆ.

193
00:18:42,539 --> 00:18:44,791
ಮದ್ಯಪಾನ, ಮನೋವಿಕೃತ ಸನ್ನಿವೇಶಗಳು.

194
00:18:47,377 --> 00:18:48,920
ಆತ್ಮಹತ್ಯೆ ಮಾಡಿಕೊಂಡರು.

195
00:18:50,713 --> 00:18:54,968
ಚಿಕ್ಕಂದಿನಲ್ಲಿ, ಇದೇ ಕೋಣೆಯಲ್ಲಿ ನನಗೆ
ಉಕುಲೇಲೆಯಿಂದ ಹಾಡುಗಳನ್ನು ನುಡಿಸುತ್ತಿದ್ರು.

196
00:18:56,344 --> 00:19:00,181
ಅವರಿಗೆ ರಾಗ ಬರದೇ
ಇದ್ದರೂ ಖುಷಿಯಾಗಿರುತ್ತಿದ್ದರು.

197
00:19:02,016 --> 00:19:04,143
ಯುದ್ಧದ ನಂತರ, ಆ ಮನುಷ್ಯ ಕಳೆದುಹೋಗಿದ್ರು.

198
00:19:05,019 --> 00:19:07,814
ಮೇಡಂ ಸೆಕ್ರೆಟರಿ, ವಿಷಯ ತಿರುಗಿಸುತ್ತಿದ್ದೀರ.

199
00:19:08,273 --> 00:19:12,694
ಪಿಟಿಎಸ್ಡಿಯನ್ನ ಗುಣಪಡಿಸಬೇಕು ಅಂತ ಯೋಚಿಸೋಕೆ
ಸ್ವಂತ ಅನುಭವವೇ ಆಗಿರಬೇಕಿಲ್ಲ.

200
00:19:13,444 --> 00:19:15,071
ಹಾಂ, ಆಗಬೇಕಿಲ್ಲ ಅಂತ ಗೊತ್ತು.

201
00:19:15,446 --> 00:19:18,491
ಆದರೆ 12ನೇ ವಯಸ್ಸಿನಲ್ಲಿ ಅಪ್ಪನಿಂದ
ಅಮ್ಮನನ್ನು ಕಾಪಾಡೋದು,

202
00:19:18,575 --> 00:19:21,077
ಅಥವಾ ಅಟ್ಟದ ಮೇಲೆ ಅಪ್ಪನ ಶವ ನೋಡೋದು...

203
00:19:21,703 --> 00:19:23,288
ಬೆಂಕಿಗೆ ತುಪ್ಪ ಸುರಿದಂಗೆ.

204
00:19:25,957 --> 00:19:28,918
ಕ್ಷಮಿಸಿ, ಆದರೆ ನಾನು ಕೇಳಿದ ಪ್ರಶ್ನೆ

205
00:19:29,002 --> 00:19:31,838
ಪರೀಕ್ಷೆಗೊಳಪಡದ ಔಷಧವನ್ನ
ನಮ್ಮ ಪಡೆಗಳ ಮೇಲೆ ಅವರ ಸಮ್ಮತಿ

206
00:19:31,921 --> 00:19:34,841
ಇಲ್ಲದೇ ಅಥವಾ ಅವರಿಗೆ ಗೊತ್ತಿಲ್ಲದೇ
ಪ್ರಯೋಗಿಸಬಹುದಾ ಅಂತ.

207
00:19:34,924 --> 00:19:39,345
ಆಘಾತದ ಬಗ್ಗೆಯ ಪರಿಶೋಧನೆ ಕುರುಡು ಅಧ್ಯಯನ
ಮಾಡಿದರೇನೇ ಪರಿಣಾಮಕಾರಿಯಾಗಿರುತ್ತೆ.

208
00:19:40,680 --> 00:19:43,766
ಇದು ನಾನು ಮಾಡಿದ ಆಯ್ಕೆಯಲ್ಲ,
ಇದು ಕೇವಲ ವಿಜ್ಞಾನ.

209
00:19:44,350 --> 00:19:46,853
ಓಡಿನ್ಸ್ ಸ್ವೋರ್ಡ್ ನಂತರ
ಏಕೆ ಬಹಿರಂಗಪಡಿಸಲಿಲ್ಲ?

210
00:19:46,936 --> 00:19:49,230
ನಾನು ಸಾರ್ವಜನಿಕಗೊಳಿಸುತ್ತಿದ್ದೇನೆ. ಈಗಲೇ.

211
00:19:49,314 --> 00:19:52,066
ನಿರೂಪಣೆಯನ್ನು
ನಿಯಂತ್ರಿಸಲು ಪ್ರಯತ್ನಿಸುತ್ತಿದ್ದೀರಿ.

212
00:19:52,150 --> 00:19:56,070
ನಿಮ್ಮನ್ನು ವಿರೋಧಿಸಲು ಇಲ್ಲದಿರೋ
ಸತ್ತ ವ್ಯಕ್ತಿಗಳನ್ನು ಆರೋಪಿಸುತ್ತಿದ್ದೀರಾ.

213
00:19:56,154 --> 00:20:00,283
ಆರ್ಡಿ-4895ನ ಅನುಮೋದಿಸಿದ್ದಕ್ಕೆ
ನನ್ನ ಬಗ್ಗೆ ಕೆಟ್ಟದಾಗಿ ಅಂದುಕೊಳ್ತಾರಾ?

214
00:20:00,700 --> 00:20:01,993
ಕೆಲವರು, ಬಹುಶಃ.

215
00:20:02,493 --> 00:20:05,371
ಆದರೆ ಇತರರು ನನ್ನ ನಿರ್ಧಾರ ಅರ್ಥ
ಮಾಡ್ಕೋತರೆ ಅನ್ಸುತ್ತೆ.

216
00:20:07,582 --> 00:20:09,292
ಜೇಮ್ಸ್ ರೀಸ್ ಅರ್ಥಮಾಡ್ಕೋತರಾ?

217
00:20:13,671 --> 00:20:16,132
ಈ ಪ್ರಶ್ನೆಗೆ ಉತ್ತರ ನಮ್ಮಿಬ್ಬರಿಗೂ ಗೊತ್ತು.

218
00:20:17,342 --> 00:20:19,677
ಅವನು ಮಾಡಿದ್ದಕ್ಕಾಗಿ
ಅವನನ್ನು ದೂಷಿಸುತ್ತೀರಾ?

219
00:20:21,262 --> 00:20:23,765
ಓಡಿನ್ಸ್ ಸ್ವೋರ್ಡ್ ಆದಾಗ
ಯುದ್ಧ ಕೊಠಡಿಯಲ್ಲಿದ್ದೆ.

220
00:20:24,891 --> 00:20:29,562
ಆ ಸುರಂಗಗಳಲ್ಲಿ ಅವನ ಜನರ ಕೊಲೆಯಾಗುತ್ತಿದ್ದಾಗ
ಕೇಳಿಸಿಕೊಳ್ತಿದ್ದೆ, ಆದರೆ ಅಸಹಾಯಕಳಾಗಿದ್ದೆ.

221
00:20:29,646 --> 00:20:32,607
ತದನಂತರ ತನ್ನ ಹೆಂಡತಿ, ಮಗಳನ್ನು ಕಳೆದುಕೊಂಡು...

222
00:20:36,527 --> 00:20:38,404
ನೀವು ಅವನ ಬೆಂಬಲಿಗರು ಎನ್ನುತ್ತೀರಾ,

223
00:20:38,488 --> 00:20:42,659
ಆದರೆ ಖಾಸಗಿ ಮಿಲಿಟರಿ ಗುತ್ತಿಗೆದಾರರಿಂದ
ನಿಮ್ಮ ಮನೆಗೆ ಕಾವಲಿರಿಸಿದ್ದೀರ.

224
00:20:42,742 --> 00:20:47,121
ರೀಸ್ ಬರುತ್ತಿದ್ದಾನೆ, ಬರನೆಕ್. ನನ್ನನ್ನು
ರಕ್ಷಿಸಿಕೊಳ್ಳುವುದನ್ನು ಬಿಟ್ಟು ದಾರಿಯಿಲ್ಲ.

225
00:20:48,456 --> 00:20:50,124
ಅದರಿಂದ ನಾನು ಅಪರಾಧಿಯಾಗಲ್ಲ.

226
00:20:51,209 --> 00:20:52,460
ನಾನೂ ಮನುಷ್ಯಳೇ.

227
00:21:15,316 --> 00:21:17,193
ಅಂದುಕೊಂಡಿದ್ದನ್ನ ಮಾಡಿಬಿಟ್ಟರು.

228
00:21:27,036 --> 00:21:27,996
ಛೆ.

229
00:21:32,959 --> 00:21:38,047
ಇದು ನಮ್ಮ ಲೆಕ್ಕ ಚುಕ್ತಾ ಮಾಡುತ್ತದೆ.
ಗೆದ್ದು ಬಂದರೆ ಮುಂದೆಲ್ಲಿ ಅಂತ ನಿಂಗೊತ್ತು. -ಆರ್

230
00:21:38,339 --> 00:21:39,340
ಅರೆರೆ.

231
00:21:41,759 --> 00:21:43,344
ರೈಫ್ ನಿಜವಾಗಿಯೂ ಮಾಡಿಬಿಟ್ಟ.

232
00:21:46,139 --> 00:21:47,473
ಟಿಪ್ಪಣಿ ಏನು ಹೇಳುತ್ತದೆ?

233
00:21:48,474 --> 00:21:49,976
ನಮಗೆ ಶುಭವಾಗಲಿ ಅಂತಿದೆ.

234
00:22:28,056 --> 00:22:30,516
ಯಾರಿಗೂ ಗೊತ್ತಾಗದೇ ಇರಲಿ ಅಂದುಕೊಂಡೆ.

235
00:22:30,600 --> 00:22:33,811
ನಮಗೆ ಕತ್ತಲೆಯೇ ಉತ್ತಮ.
ಪರ್ವಾಗಿಲ್ವೇ, ಹುಷಾರಾಗಿ ಕಾಣ್ತೀರ.

236
00:22:33,895 --> 00:22:34,896
ಲಯೂನ್.

237
00:22:34,979 --> 00:22:36,230
ನಿಮಗೆ ಋಣಿಯಾಗಿದ್ದೇವೆ.

238
00:22:36,814 --> 00:22:38,983
ಹತ್ತಾರು ವರ್ಷದಿಂದ ಕೆಲಸ
ಮಾಡುತ್ತಿದ್ದೇನೆ.

239
00:22:39,067 --> 00:22:42,904
ನಾವು ಕಳೆದುಕೊಂಡ ಏಕೈಕ ವ್ಯಕ್ತಿ ಅಡ್ಮಿರಲ್ನೇ
ಸ್ಫೋಟಿಸಿದನಾ? ನಿಮ್ಮ ಋಣ ಬೇಡ.

240
00:22:43,446 --> 00:22:44,989
ನಿಮ್ಮ ಚೀಲಗಳನ್ನ ಕೊಡಿ.

241
00:22:45,698 --> 00:22:46,908
ಇದರ ಬಗ್ಗೆ ಗೊತ್ತಲ್ವಾ?

242
00:22:47,700 --> 00:22:49,827
ಹೌದು, ಟೀ ಪತ್ನಿ ಫೆಡರಲ್ ಅಟಾರ್ನಿ.

243
00:22:49,911 --> 00:22:53,498
-ಯೋ, ಟೀ. ಅವಳು ಅದನ್ನು ಏನು ಕರೆದಳು? ತುರ್--
-ತುರ್ತು ಸಂದರ್ಭಗಳು.

244
00:22:54,165 --> 00:22:57,126
ನಾವು ಡ್ರಿಲ್ಗಳನ್ನು ಮಾಡುತ್ತಾ ಏನಾದರೂ ಹಾಳಾದರೆ,

245
00:22:57,210 --> 00:22:59,295
ಮಧ್ಯಸ್ಥಿಕೆ ವಹಿಸೋದು ನಮ್ಮ ಕರ್ತವ್ಯ.

246
00:22:59,378 --> 00:23:01,172
ಯಾರಿಗೂ ಕಡಲ್ಕೊರೆತ ಆಗಲ್ಲ ತಾನೆ?

247
00:23:43,589 --> 00:23:47,093
ರಹಸ್ಯ ಪರೀಕ್ಷೆಗಳು ಮತ್ತು ಸ್ಟಾಕ್ ಪಾವತಿಗಳು:
ಜೇಮ್ಸ್ ರೀಸ್ ವಿರುದ್ಧ ಲೊರೈನ್ ಹಾರ್ಟ್ಲೀಯ ಯುದ್ಧ

248
00:24:21,169 --> 00:24:22,962
ರೀಸ್, ನನ್ನ ಮಾತು ಕೇಳು.

249
00:24:23,045 --> 00:24:26,299
ನಾನು 15 ಬಾಹ್ಯ ಟಾಲೋಗಳನ್ನು ಎಣಿಸಿದೆ.

250
00:24:26,382 --> 00:24:28,551
-ಒಳನುಗ್ಗಿದ ಮೇಲೆ ನಾನೂ ಬರ್ತೀನಿ.
-ಬೆನ್.

251
00:24:29,969 --> 00:24:31,596
ನೀನು ಈ 50 ಕ್ಯಾಲ್ ನೋಡಿಕೋ.

252
00:24:31,679 --> 00:24:33,472
ನೀನು ದೋಣಿಯಲ್ಲೇ ಉಳಿದುಕೋ.

253
00:24:33,556 --> 00:24:37,185
ಲೈಟ್ಹೌಸ್ನಿಂದ ಗಮನಿಸ್ತಾ ಇರು.
ಪ್ಲಾನಲ್ಲೇ ಇರು. ಇದು ಫಲಿಸುತ್ತೆ.

254
00:24:38,436 --> 00:24:40,396
ಇದೊಂದೇ ಆಯ್ಕೆಯಲ್ಲ, ಕಣೋ.

255
00:24:41,397 --> 00:24:44,066
ನಾವು ವಾಪಸ್ ಹೋಗಬಹುದು, ಈಗಲೇ.

256
00:24:45,109 --> 00:24:46,569
ಬಂದ ದಾರಿಯಲ್ಲೇ ಹೋಗಬಹುದು.

257
00:24:47,904 --> 00:24:51,407
ಆ ವರದಿಗಾರ್ತಿಗೆ ಕಥೆ ಸಿಕ್ತು.
ಹಾರ್ಟ್ಲೀ ತಪ್ಪಿಸಿಕೊಳ್ಳೋಕೆ ಆಗಲ್ಲ.

258
00:24:54,827 --> 00:24:56,996
ನಾವು ಪೆರುವಿನ ಆ ಬೀಚ್ಗೆ ಹೋಗೋಣ, ಬ್ರದರ್.

259
00:24:57,622 --> 00:24:59,832
ಸರ್ವೆಜಾಸ್ ಕುಡ್ಕೊಂಡು ಆರಾಮಾಗಿ...

260
00:25:00,875 --> 00:25:02,710
ಕಾಲ ಎಲ್ಲಿಗೆ ಕರೆದೊಯ್ಯುತ್ತೆ ನೋಡಣ.

261
00:25:04,503 --> 00:25:07,256
ನನ್ನ ತಲೆಯಲ್ಲಿರೋ ಈ ಬಾಂಬ್
ಸ್ಫೋಟಿಸೋಕೆ ಕಾಯಬೇಕಾ?

262
00:25:10,384 --> 00:25:11,886
ಇದು ಹೀಗೆ ಕೊನೆಗೊಳ್ಳಲ್ಲ.

263
00:25:19,810 --> 00:25:20,811
ಹೇ.

264
00:25:25,274 --> 00:25:26,859
ನೀ ಒಬ್ಬಂಟಿಯಾಗಿ ಸಾಯಬೇಕಿಲ್ಲ.

265
00:25:29,946 --> 00:25:31,155
ನಾನು ಒಬ್ಬಂಟಿಯಾಗಿಲ್ಲ.

266
00:26:27,128 --> 00:26:28,045
ಮೇಡಂ.

267
00:26:29,088 --> 00:26:30,089
ಹೊರಡುತ್ತಿದ್ದೀಯಾ?

268
00:26:30,673 --> 00:26:33,050
ಕಡೆಯ ದೋಣಿ ಹಿಡಿಯಬೇಕಂದರೆ ಹೊರಡಲೇಬೇಕು.

269
00:26:33,134 --> 00:26:35,094
ನೀನು ಬೆಳಿಗ್ಗೆ ಕೂಡ ಹೊರಡಬಹುದು.

270
00:26:35,177 --> 00:26:36,971
ನಾನು ಇಲ್ಲಿರಲು ಬಯಸುವುದಿಲ್ಲ.

271
00:26:42,935 --> 00:26:47,148
ಲೊರೈನ್ ಹಾರ್ಟ್ಲೀಯ ಪರಂಪರೆ ಮತ್ತು
ವಿಶೇಷ ಆಪರೇಟರ್ಗಳಿಗಾಗಿ ಅವರ ಖಾಸಗಿ ಯುದ್ಧ

272
00:26:49,066 --> 00:26:50,985
ಕಥೆಯನ್ನು ಬದಲಾಯಿಸಿದ್ದಕ್ಕೆ ಸಂತೋಷ.

273
00:26:52,236 --> 00:26:56,449
ಕೆಲ ಕರೆಗಳನ್ನ ಮಾಡ್ತೀನಿ. 32 ವರ್ಷಗಳ
ಸಾರ್ವಜನಿಕ ತುಲನೆಗೂ ಅನುಕೂಲಗಳಿವೆ.

274
00:26:57,199 --> 00:26:59,076
ಅದು ಸಹಾಯಕವಾಗುತ್ತದೆ. ಧನ್ಯವಾದಗಳು.

275
00:26:59,577 --> 00:27:00,953
ನಾನು ಕಾರು ತರಿಸ್ತೀನಿ.

276
00:27:01,037 --> 00:27:02,705
ಇನ್ನೂ ಒಂದು ವಿಷಯವಿದೆ.

277
00:27:02,788 --> 00:27:06,375
ಇದರಲ್ಲಿನ ಕಾಲಘಟ್ಟಗಳು ಸರಿ ಇವೆಯಾ
ಅಂತ ನಾನು ಪರೀಕ್ಷಿಸಬೇಕಿದೆ.

278
00:27:08,377 --> 00:27:10,171
-ಧಾರಾಳವಾಗಿ.
-ಧನ್ಯವಾದಗಳು.

279
00:27:19,013 --> 00:27:20,056
ಸರಿ.

280
00:27:20,514 --> 00:27:24,060
ಸರಿ, ಓಡಿನ್ಸ್ ಸ್ವೋರ್ಡ್ ಮಿಷನ್ ಲಾಗ್ ಪ್ರಕಾರ,

281
00:27:24,143 --> 00:27:27,396
ಮಿಷನ್ ಪ್ರಗತಿಯಲ್ಲಿದ್ದಾಗಲೇ
ನೀವು ಯುದ್ಧ ಕೊಠಡಿಗೆ ಬಂದಿದ್ರಾ?

282
00:27:28,022 --> 00:27:29,440
ಅದು ಸರಿ.

283
00:27:29,523 --> 00:27:34,612
ಮಿಷನ್ ಗಡಿಯಾರದ ಪ್ರಕಾರ 22 ನಿಮಿಷ ಕಳೆದಿತ್ತು
ಅಂತ ನನ್ನ ಅನಿಸಿಕೆ.

284
00:27:38,824 --> 00:27:40,284
ವಾಸ್ತವವಾಗಿ 21:12.

285
00:27:40,368 --> 00:27:43,996
ಇದು ಸರಿಸುಮಾರು ಕಾಮ್ಸ್ ಡೌನ್ ಆಗುವ
ಎಷ್ಟು ಸಮಯದ ಮೊದಲು ಆಗಿತ್ತು?

286
00:27:44,080 --> 00:27:46,123
ಅದು ಲಾಗಲ್ಲಿದೆ, ಅಲ್ವಾ?

287
00:27:47,208 --> 00:27:49,543
ಒಂಬತ್ತು ನಿಮಿಷಗಳು ಮತ್ತು 21 ಕ್ಷಣಗಳು.

288
00:27:53,255 --> 00:27:58,177
ಮತ್ತು ಅಡ್ಮಿರಲ್ ಪಿಲ್ಲರ್ ಬಗ್ಗೆ ಆ ಸಮಯದಲ್ಲಿ
ನಿಮಗೆ ಏನೂ ಅನುಮಾನ ಬರಲಿಲ್ವಾ?

289
00:27:59,220 --> 00:28:02,473
ಗುಪ್ತಚರ ವರದಿಗಳಲ್ಲಿ ಅನುಮಾನಾಸ್ಪದವಾಗಿ
ಏನೂ ಇರಲಿಲ್ವಾ?

290
00:28:03,474 --> 00:28:05,601
ಇಲ್ಲ. ಅನುಮಾನಾಸ್ಪದವಾಗಿ ಏನೂ ಇಲ್ಲ.

291
00:28:06,435 --> 00:28:10,523
ಗಡಿಯಾರದಲ್ಲಿ 30:33ಕ್ಕೆ ಆಲ್ಫಾ ಪ್ಲಟೂನಿಗೆ
ಐಇಡಿಗಳು ಎದುರಾಗುವವರೆಗೂ ಇಲ್ಲ.

292
00:28:10,606 --> 00:28:11,899
ಅದು ಸರಿ.

293
00:28:11,982 --> 00:28:16,237
ಒಳ್ಳೇದು. ಬಜೆಟ್ ಪರಿಷ್ಕರಣೆ ಮತ್ತು
ಡಿಸಿಐಎಸ್ ತನಿಖೆಯನ್ನ ನೀವು ಶುರುಮಾಡಿದ

294
00:28:16,320 --> 00:28:18,114
ನಿಖರ ದಿನಾಂಕ ನೆನಪಿದೆಯಾ?

295
00:28:18,948 --> 00:28:22,743
ನಾನು ನನ್ನ ಕಚೇರಿ ಸಂಪರ್ಕಿಸಿ
ಏಜೆಂಟ್ ಆಜಾದನ್ನ ಕೇಳ್ತೀನಿ.

296
00:28:22,827 --> 00:28:25,788
ಇದು ಸ್ಟೀವ್ ಹಾರ್ನ್ ಸಾವಿನ ಮೊದಲಾ ಅಥವಾ ನಂತರವೇ?

297
00:28:25,871 --> 00:28:27,790
ಕ್ಷಮಿಸಿ, ಇದು ಹೇಗೆ ಪ್ರಸ್ತುತ?

298
00:28:27,873 --> 00:28:32,169
"ನಡೆದ ಘಟನೆಗಳ ನಿಜವಾದ ಕ್ರಮ"ವನ್ನು
ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇನಷ್ಟೇ.

299
00:28:58,154 --> 00:29:02,450
ಏನಂದ್ರೆ, ಮೇಡಂ ಸೆಕ್ರೆಟರಿ, ನೀವು ನನಗೆ
ಎರಡು ವಿಭಿನ್ನ ಕತೆಗಳನ್ನ ಹೇಳಿದ್ದೀರ.

300
00:29:03,451 --> 00:29:08,747
ಮೊದಲ ಕಥೆಯಲ್ಲಿ ನೀವು ತೆಗೆದುಕೊಂಡ ನಿರ್ಧಾರ
ಪ್ರಶ್ನಾರ್ಹ, ಆದರೆ ನಮ್ ಸೇನೆಯಲ್ಲಿ ನಡೆಯುತ್ತಿರೋ

301
00:29:09,290 --> 00:29:12,751
ಮಾನಸಿಕ ಆರೋಗ್ಯ ಬಿಕ್ಕಟ್ಟನ್ನು
ಪರಿಹರಿಸಲು ಸಮರ್ಥನೀಯವಾದದ್ದೇ,

302
00:29:12,835 --> 00:29:15,421
ಆದರೆ ನೀವು ತಪ್ಪು ಜನರಲ್ಲಿ
ನಂಬಿಕೆ ಇರಿಸಿದಿರಿ.

303
00:29:16,046 --> 00:29:17,715
ಹಾರ್ನ್ ಮತ್ತು ಪಿಲ್ಲರ್,

304
00:29:17,798 --> 00:29:19,967
ಪ್ರಯೋಗದ ಬಗ್ಗೆ ನಿಮಗೆ ಸುಳ್ಳು ಹೇಳಿದವರು,

305
00:29:20,050 --> 00:29:24,096
ತದನಂತರ ಅವರ ಲಾಭದ ಗಳಿಕೆಯನ್ನು ರಕ್ಷಿಸಲು
ಅಪರಾಧಗಳನ್ನು ಮಾಡಿದರು,

306
00:29:24,180 --> 00:29:25,473
ಇಲ್ಲಿಯವರೆಗೆ ಸರಿಯಲ್ವಾ?

307
00:29:26,390 --> 00:29:29,560
ಇನ್ನೊಂದು ಆವೃತ್ತಿಯಲ್ಲಿ,
ಅವರು ಮಾಡಿರೋದು ನಿಮಗೆ ಅರ್ಥವಾಗಿ

308
00:29:29,643 --> 00:29:33,189
ನಿಮ್ಮ ಇಲಾಖೆಗೆ ಅವರ ಪ್ರವೇಶ ನಿರ್ಬಂಧಿಸುವಂಥ
ಕ್ರಮಗಳನ್ನು ಕೈಗೊಂಡಿರಿ.

309
00:29:34,273 --> 00:29:38,068
ಅವರೆಲ್ಲರನ್ನೂ ಹೊಣೆಗಾರರನ್ನಾಗಿ ಮಾಡಲು

310
00:29:38,152 --> 00:29:40,488
ನೀವು ಅಪರಾಧದ ತನಿಖೆಗಳನ್ನ ಶುರುಮಾಡಿದಿರಿ.

311
00:29:40,905 --> 00:29:44,074
ಇವು ಎರಡು ಕಥೆಗಳು ಎಂದು ನೀವು ಹೇಳುತ್ತಿದ್ದೀರಿ.
ಇವು ಒಂದೇ.

312
00:29:44,158 --> 00:29:46,410
ಇಲ್ಲ. ಅವು ಒಂದೇ ಕಥೆಯಾಗಿರೋಕಾಗಲ್ಲ.

313
00:29:46,494 --> 00:29:50,664
ಮೊದಲ ಕಥೆಯಲ್ಲಿ ನಾನು ಹಾರ್ನ್ ಮೇಲೆ
ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಕೂಗಾಡೋದನ್ನ

314
00:29:50,748 --> 00:29:55,336
ನೋಡೋವರೆಗೂ ನಿಮಗೆ ಆರ್ಡಿ-4895ನ ಸಮಸ್ಯೆ
ಏನಂತ ಗೊತ್ತಿರಲಿಲ್ಲ. ಎರಡನೇ ಕತೆಯಲ್ಲಿ,

315
00:29:55,419 --> 00:29:58,005
ಹಾರ್ನ್ ಮತ್ತು ಪಿಲ್ಲರ್ರನ್ನು ಶಿಕ್ಷಿಸುತ್ತೀರಾ.

316
00:29:58,088 --> 00:30:01,675
ನಿಮ್ಮ ದಾಖಲೆಗಳಂತೆ
ಸ್ಯಾನ್ ಫ್ರಾನ್ಸಿಸ್ಕೋಗೆ ಮುಂಚೇನೇ ಮಾಡಿದ್ದೀರಾ.

317
00:30:01,759 --> 00:30:03,469
ವಿರೋಧಾಭಾಸವನ್ನು ನೋಡಿದ್ರಾ?

318
00:30:04,929 --> 00:30:09,016
ಅವರು ಅಪರಾಧ ಮಾಡಿದ್ದೇ ನಿಮಗೆ ಗೊತ್ತಿಲ್ಲದಿದ್ದಾಗ
ಯಾರನ್ನೋ ಹೇಗೆ ದೂಷಿಸಿದಿರಿ?

319
00:30:09,099 --> 00:30:11,519
ಓಡಿನ್ಸ್ ಸ್ವೋರ್ಡಲ್ಲಿ ರೀಸ್ ಮತ್ತವರ ತಂಡ

320
00:30:11,602 --> 00:30:14,522
ಸಾಯುತ್ತಾರೆ ಅಂತ ಆ ಕೋಣೆಯಲ್ಲಿ
ನಿಮಗೆ ಗೊತ್ತಿಲ್ಲದಿದ್ದಾಗ.

321
00:30:20,903 --> 00:30:22,947
ಪಿಲ್ಲರ್ ನನಗೆ ಹೇಳಿದ್ದರು--

322
00:30:23,030 --> 00:30:27,243
ಅಲ್ಲದೇ, ಆಲ್ಫಾ ತುಕಡಿಯಲ್ಲಿ ಕೆಲವು
ತೊಡಕುಗಳಿದ್ದವು ಅಂತ ನನಗೆ ವಿವರಿಸಿದ್ದರು.

323
00:30:27,326 --> 00:30:29,245
ಅವರ ಅನಾರೋಗ್ಯದ ಬಗ್ಗೆ ಗೊತ್ತಿತ್ತು?

324
00:30:29,995 --> 00:30:33,457
ಪ್ರತಿಕೂಲ ಬೆಳವಣಿಗೆಗಳು ಇವೆ
ಎಂದು ನನಗೆ ತಿಳಿದಿತ್ತು.

325
00:30:34,250 --> 00:30:37,586
ತಲೆನೋವು. ಮರುವು.
ನಾನು ಒಪ್ಪುತ್ತೇನೆ, ಸಾಕಷ್ಟು ಪ್ರತಿಕೂಲವಾಗಿದೆ.

326
00:30:37,670 --> 00:30:41,507
ಇಲ್ಲ, ಆರೋಗ್ಯ ಸಮಸ್ಯೆಗಳನ್ನ ಅಡ್ಮಿರಲ್ ಪಿಲ್ಲರ್
ಪರಿಹರಿಸುವರೆಂದು ಹೇಳಿದ್ರು.

327
00:30:41,590 --> 00:30:43,717
"ಪರಿಹರಿಸುತ್ತಾರೆ" ಅಂದ್ರೆ ಏನಂತೆ?

328
00:30:44,260 --> 00:30:46,595
ವೈದ್ಯಕೀಯ ಆರೈಕೆ ಎಂದು ನಾನು ಭಾವಿಸಿದೆ.

329
00:30:47,680 --> 00:30:53,060
ಕ್ಷಮಿಸಿ. ಪರೀಕ್ಷೆಯಾಗದ ಔಷಧವನ್ನ ನೇವಿ ಸೀಲ್ಗಳ
ಮೇಲೆ ಪ್ರಯೋಗಿಸೋಕೆ ಎಫ್ಡಿಏ ನಿಯಮ ಉಲ್ಲಂಘಿಸಿ,

330
00:30:53,143 --> 00:30:56,772
ಅವರು ಅನಾರೋಗ್ಯಕ್ಕೆ ಒಳಗಾದಾಗ,
ಇದೇನು ಯೋಜನೆ ಎಂದು ನೀವು ಕೇಳಲಿಲ್ಲವೇ?

331
00:30:56,855 --> 00:31:00,025
ಹಾರ್ನ್ ಮತ್ತು ಪಿಲ್ಲರ್ ಹೀಗೆ ಮಾಡ್ತಾರಂತ
ಅಂದುಕೊಂಡಿರಲಿಲ್ಲ.

332
00:31:00,109 --> 00:31:01,819
ನನಗೆ ಹೇಳಿದ್ದನ್ನ ಉಲ್ಲೇಖಿಸುವೆ,

333
00:31:01,902 --> 00:31:06,782
"ಆ ಸುರಂಗಗಳಲ್ಲಿ ಅವನ ಜನರ
ಕೊಲೆಯಾಗುತ್ತಿದ್ದಾಗ ಕೇಳಿಸಿಕೊಳ್ತಿದ್ದೆ,

334
00:31:06,865 --> 00:31:09,368
ಆದರೆ ಅಸಹಾಯಕಳಾಗಿದ್ದೆ."
ಏಕೆ ಸಹಾಯ ಮಾಡಲಾಗಲಿಲ್ಲ?

335
00:31:09,451 --> 00:31:10,327
ಸಂಪರ್ಕ ಆಗಿಲ್ಲ.

336
00:31:10,411 --> 00:31:12,871
ಕ್ರಮೇಣ, ಕಡಿಯಿತು.
ಆದರೆ ಈಗಷ್ಟೇ ಹೇಳಿದ್ರಿ,

337
00:31:12,955 --> 00:31:16,083
ಆಲ್ಫಾ ಪ್ಲಟೂನ್ ಕಳೆದುಹೋಗೋ ಮುಂಚೆ
ಒಂಬತ್ತು ನಿಮಿಷ, 21 ಕ್ಷಣಗಳ

338
00:31:16,166 --> 00:31:18,210
ಕಾಲ ಸಂಪರ್ಕ ತೆರೆದಿತ್ತು ಅಂತ?

339
00:31:18,294 --> 00:31:19,378
ಸಮಯವಿರಲಿಲ್ಲ--

340
00:31:19,461 --> 00:31:21,964
"ನಿಲ್ಲಿಸಿ" ಅನ್ನೋಕೆ ಎಷ್ಟು ಸಮಯ ಬೇಕು?

341
00:31:25,259 --> 00:31:27,761
ಸತ್ಯವೇನೆಂದರೆ, ಮೇಡಂ ಸೆಕ್ರೆಟರಿ,

342
00:31:28,387 --> 00:31:31,348
ಒಂಬತ್ತು ನಿಮಿಷ ಮತ್ತು 21 ಸೆಕೆಂಡುಗಳ ಕಾಲ,

343
00:31:31,432 --> 00:31:35,769
14 ಮಂದಿಗೆ ಮಿದುಳಿನ ಗಡ್ಡೆ ಕೊಟ್ಟ ಪ್ರಯೋಗವನ್ನ
ಅನುಮೋದಿಸಿದ್ದನ್ನ ಒಪ್ಪಿಕೊಳ್ಳುವುದರ

344
00:31:35,853 --> 00:31:38,647
ಪರಿಣಾಮಗಳ ಬಗ್ಗೆ ಯೋಚನೆ ಮಾಡ್ತಿದ್ರಿ.

345
00:31:39,607 --> 00:31:42,359
ಒಂಬತ್ತು ನಿಮಿಷ ಮತ್ತು 21 ಸೆಕೆಂಡುಗಳ ಕಾಲ,

346
00:31:42,443 --> 00:31:44,820
ನಿಮ್ಮ ಸ್ವಾರ್ಥದ ಅಗತ್ಯ ಮತ್ತು ಪರಂಪರೆಯನ್ನ

347
00:31:44,903 --> 00:31:48,532
ಆ ಮನುಷ್ಯರ ಜೀವಗಳ ಬೆಲೆಯ
ವಿರುದ್ಧ ತೂಗಿನೋಡುತ್ತಿದ್ದಿರಿ.

348
00:31:48,616 --> 00:31:52,036
ನೀವು ಮೌನವಾಗಿದ್ದುಕೊಂಡು
ಆ ಜನರನ್ನ ಸಾಯಲು ಬಿಟ್ಟಿರಿ!

349
00:31:52,119 --> 00:31:54,371
ಆ ಮನುಷ್ಯರು ಸುಮ್ಮನೆ ಸಾಯಲಿಲ್ಲ!

350
00:31:55,414 --> 00:31:56,957
ಅವರು ಜೀವಗಳನ್ನು ಉಳಿಸಿದರು!

351
00:32:09,261 --> 00:32:13,349
ನಿಮ್ಮ ವರದಿಯಲ್ಲಿನ ತೊಂದರೆ
ಏನಂದ್ರೆ ನಮ್ಮ ಆಪರೇಟರ್ಗಳು,

352
00:32:13,432 --> 00:32:17,311
ಅಂದರೆ ವೈಯಕ್ತಿಕ ತ್ಯಾಗದ
ಸ್ವರೂಪವನ್ನ ಅರ್ಥಮಾಡಿಕೊಂಡವರೇ

353
00:32:17,895 --> 00:32:19,605
ಬಲಿಪಶುಗಳಂತ ನೀವು ವರ್ತಿಸುತ್ತೀರ.

354
00:32:20,272 --> 00:32:22,691
ಅವರು ಅಲ್ಲ, ಅವರು ಹೀರೋಗಳು.

355
00:32:23,859 --> 00:32:24,985
ಹದಿನಾಲ್ಕು ಜೀವಗಳಾ?

356
00:32:25,611 --> 00:32:28,697
ನನ್ನ ನೀತಿಗಳು ಪ್ರತಿದಿನ 40
ಜೀವಗಳನ್ನು ಉಳಿಸುತ್ತವೆ.

357
00:32:28,781 --> 00:32:31,700
ಆರ್ಡಿ-4896 ಹೊರಬಂದಾಗ,
ಮತ್ತು ಒಂದು ದಿನ ಅದು ಬರುತ್ತದೆ,

358
00:32:31,784 --> 00:32:34,870
ಆ ಸಂಖ್ಯೆ ಹೆಚ್ಚಾಗುತ್ತೆ. ಆದಕ್ಕೆ ಹೌದು!
ನಾನು ಮೌನವಾಗಿದ್ದೆ,

359
00:32:34,953 --> 00:32:37,915
ಏಕೆಂದರೆ ಅದು ನಾನು ಮಾಡಲು
ಸಿದ್ಧಳಾಗಿದ್ದ ತ್ಯಾಗವಾಗಿತ್ತು.

360
00:32:37,998 --> 00:32:41,251
ಒಂದು ವೇಳೆ ತನ್ನ ಜನರನ್ನ
ಯುದ್ಧದ ಭೀಕರತೆಯಿಂದ ರಕ್ಷಿಸಲು

361
00:32:41,335 --> 00:32:43,671
ಜೇಮ್ಸ್ ರೀಸಿಗೆ ನೀವೇನಾದರೂ ಕೇಳಿದರೆ,

362
00:32:44,129 --> 00:32:47,216
ಆತ ತತ್ ಕ್ಷಣವೇ ಆ ತ್ಯಾಗವನ್ನು ಮಾಡಿಬಿಡುತ್ತಾರೆ.

363
00:32:47,591 --> 00:32:50,636
ನೀವು ಮಾತ್ರ ಅವನನ್ನು ಕೇಳಲಿಲ್ಲ, ಅಲ್ಲವೇ?

364
00:32:53,681 --> 00:32:56,517
ಆಲ್ಫಾ ತುಕಡಿ ಸಾಯೋದಕ್ಕೆ
ಬಿಟ್ಟಿದ್ದನ್ನ ಒಪ್ಪಿಕೊಂಡಿರಿ.

365
00:33:02,773 --> 00:33:05,901
ಕೊಲೆ ಕೊಲೆಯೇ,
ಅದಕ್ಕೆ ಹಣ ಪಡೆದಿದ್ದರೂ ಅಥವಾ ಪಡೆಯದಿದ್ದರೂ.

366
00:33:40,561 --> 00:33:41,854
ನೀನು ಹೇಳ್ದಾಗ, ಬ್ರದರ್.

367
00:33:44,732 --> 00:33:46,775
ನಾನು ಸ್ಥಾನದಲ್ಲಿದ್ದೇನೆ. ಹೊಡಿ...

368
00:33:48,610 --> 00:33:51,238
ನೀವು ಈ ಕತೆಯನ್ನ ಪ್ರಕಟಿಸುತ್ತಿಲ್ಲ,
ಮಿಸ್ ಬರನೆಕ್.

369
00:33:51,321 --> 00:33:56,452
ನೀವು ಮಾಡಿದರೆ,
ಆ ಪುರುಷರ ತ್ಯಾಗ ಅರ್ಥಹೀನವಾಗುತ್ತೆ.

370
00:33:57,661 --> 00:33:58,787
ರೆಡಿ ಇದೆ.

371
00:33:58,871 --> 00:34:02,207
ಅವರ ಸಾವುಗಳ ಮೂಲಕ ನಿಮ್ಮ ವೃತ್ತಿಯ ಉದ್ಧಾರ
ಮಾಡೋಕೆ ನಾನು ಬಿಡಲ್ಲ.

372
00:34:03,333 --> 00:34:04,334
ಮೂರರಲ್ಲಿ...

373
00:34:07,671 --> 00:34:08,547
ಎರಡು...

374
00:34:12,050 --> 00:34:13,010
ಒಂದು.

375
00:34:20,517 --> 00:34:21,518
ಅಯ್ಯೋ!

376
00:34:23,520 --> 00:34:24,855
ನಡೀರಿ, ನಡೀರಿ, ನಡೀರಿ!

377
00:34:31,236 --> 00:34:33,238
ಮೇಡಂ, ನಿಮ್ಮನ್ನ ಸ್ಥಳಾಂತರಿಸಬೇಕು. ಈಗ.

378
00:34:33,322 --> 00:34:34,990
ಸರಿ. ಪ್ಲಾನ್ ಪ್ರಕಾರವೇ ಆಗಲಿ.

379
00:34:35,699 --> 00:34:36,700
ನನ್ನ ಜೊತೆ ಬಾ.

380
00:34:38,035 --> 00:34:40,412
ಇಲ್ಲಿ. ದೃಷ್ಟಿ ಮೇಲಕ್ಕೆ. ಜಾಗರೂಕರಾಗಿರಿ.

381
00:34:40,496 --> 00:34:41,371
ಗೊತ್ತಾಯ್ತು.

382
00:34:41,455 --> 00:34:42,289
ಹೊರಟಿದ್ದೀವಿ.

383
00:34:57,513 --> 00:34:59,431
ಗನ್ ಬೆಳಕು, ಬಲಭಾಗದ ಕ್ವಾರ್ಟರ್!

384
00:35:00,015 --> 00:35:04,269
ಹೇ, ನಾವು ತೀರ ಮುಟ್ಟಿದಾಗ, ನೀವು ಲೋವ್ನ
ಕರ್ಕೊಂಡು ಆ ದರಿದ್ರ ಲೈಟ್ಹೌಸ್ಗೆ ಹೋಗಿ!

385
00:35:04,353 --> 00:35:06,730
-ನನಗೆ ಆ ಶೂಟರ್ ಬೇಕು.
-ಹಾಂ, ಸರ್! ಮಾಡ್ತೀವಿ.

386
00:35:26,083 --> 00:35:27,459
ಬೆನ್. ಬಾಲ್ಕನಿ.

387
00:35:27,543 --> 00:35:28,502
ಆಯ್ತು.

388
00:35:32,214 --> 00:35:33,298
ಕ್ಲಿಯರ್ ಆಗಿದೆ.

389
00:35:58,532 --> 00:36:00,534
ಸರಿ, ಬೀಚಿಗೆ ಹೋಗಿ, ಹರಡಿಕೊಳ್ಳಿ.

390
00:36:02,202 --> 00:36:03,036
ಛೆ!

391
00:36:03,453 --> 00:36:06,790
ಎಫ್ಬಿಐ ಈಗಷ್ಟೇ ಇಳಿದಿದೆ. ಈಗಲೇ ನಿಲ್ಲಿಸು.

392
00:36:06,874 --> 00:36:07,958
ಅರ್ಥವಾಗಿದೆಯೇ?

393
00:36:10,210 --> 00:36:11,295
ಏನು ಇದು?

394
00:36:11,378 --> 00:36:14,923
ಪಶ್ಚಿಮದ ತೀರದಿಂದ ಒಂದು ಡಜನ್
ಶಸ್ತ್ರಸಜ್ಜಿತ ಅಪರಿಚಿತರು ಬರ್ತಿದ್ದಾರೆ.

395
00:36:23,891 --> 00:36:25,267
ಎಲ್ಲರೂ ಹಿಂದಕ್ಕೆ ಹೋಗಿ.

396
00:36:27,811 --> 00:36:30,564
ಎಫ್ಬಿಐ! ಶರಣಾಗಿ! ಶರಣಾಗಿ!

397
00:36:34,776 --> 00:36:36,111
ರೀಸ್. ಬಾರೋ, ಮಗಾ.

398
00:36:39,239 --> 00:36:41,074
ಮುಂದಿನ ಜನ್ಮದಲ್ಲಿ ಸಿಗುವೆ, ಬೆನ್.

399
00:36:43,785 --> 00:36:44,786
ಛೆ.

400
00:36:49,499 --> 00:36:50,500
ಸರಿ.

401
00:36:52,961 --> 00:36:56,173
ಫೆಡರಲ್ ಏಜೆಂಟ್ಸ್! ಗುಂಡಿನ ದಾಳಿ ನಿಲ್ಲಿಸಿ!

402
00:36:57,257 --> 00:36:58,258
ಫೈರಿಂಗ್ ನಿಲ್ಲಿಸಿ!

403
00:37:01,720 --> 00:37:02,930
ನಾವು ಶತ್ರುಗಳಲ್ಲ.

404
00:37:08,977 --> 00:37:12,439
ಇದೆಲ್ಲಾ ಎಚ್ಆರ್ಟಿಯ ಜವಾಬ್ದಾರಿ.
ಎಸ್ಟೇಟನ್ನ ವಶಪಡಿಸಿಕೊಳ್ತಿದ್ದೀವಿ.

405
00:37:12,522 --> 00:37:14,483
ನಿಮ್ಮ ಭದ್ರತಾ ಸಿಬ್ಬಂದಿಯನ್ನ ನಿಲ್ಸಿ.

406
00:37:14,566 --> 00:37:15,734
ಸೆಕ್ ಡೆಫ್ ಎಲ್ಲಿ?

407
00:37:15,817 --> 00:37:17,611
ಎರಡನೇ ಮಹಡಿ, ಈಶಾನ್ಯ ಮೂಲೆ.

408
00:37:17,694 --> 00:37:20,113
ಅವರ ಸ್ವಂತ ಸುರಕ್ಷತೆಗೆ ತಕ್ಕಂಥ ರೂಂ ಇದೆ.

409
00:37:20,197 --> 00:37:21,448
ಜೇಮ್ಸ್ ರೀಸ್ ಎಲ್ಲಿ?

410
00:37:29,206 --> 00:37:30,332
ನನ್ನ ಹಿಂದೆ. ಬನ್ನಿ.

411
00:37:44,930 --> 00:37:47,849
ಛೆ. ನಮ್ಮ ಗಾರ್ಡ್ ಬಿದ್ದಿದ್ದಾನೆ!
ಗಾರ್ಡ್ ಬಿದ್ದಿದ್ದಾನೆ!

412
00:37:55,107 --> 00:37:56,191
ಬರ್ತಿದ್ದೀವಿ.

413
00:38:23,885 --> 00:38:26,221
-ಮೂಲೆಯಲ್ಲಿ ಹೊಗೆ ಇದೆ.
-ಪರಿಶೀಲಿಸಿ.

414
00:38:26,304 --> 00:38:27,514
ಎಲ್ರೂ ಅಲ್ಲೇ ಇರಿ.

415
00:38:36,982 --> 00:38:38,525
ನೀವು ಅಲ್ಲಿಗೆ ಹೋಗಬೇಕು.

416
00:38:39,568 --> 00:38:41,445
ಎಫ್ಬಿಐ ಸ್ಥಳದಲ್ಲಿದೆ. ನಾವು ಸೇಫ್.

417
00:38:41,528 --> 00:38:43,739
ನಾವು ಕಾಯುತ್ತಿಲ್ಲ. ಹೋಗಿ. ಹೋಗಿ!

418
00:38:46,742 --> 00:38:48,577
ಸರಿ, ಮೇಡಂ. ನಾವು ನೋಡಿಕೊಳ್ತೀವಿ.

419
00:40:30,137 --> 00:40:31,179
ಅದನ್ನು ತಗೆ!

420
00:40:52,367 --> 00:40:53,618
ರೀಸ್, ನಿಲ್ಲು! ನಿಲ್ಲು!

421
00:40:54,578 --> 00:40:55,579
ಜರುಗು.

422
00:40:55,662 --> 00:40:57,122
ಆಕೆ ಹಣ ತೆಗೆದುಕೊಳ್ಳಲಿಲ್ಲ.

423
00:40:57,205 --> 00:41:02,085
ಕೊನೆಯ ಖಾತೆ. ಒಬೆರಾನ್ ಅನಲಿಟಿಕ್ಸ್.
ಏಜೆನ್ಸಿಯಲ್ಲಿ ಬೇರೆ ಯಾರೋ ಇದ್ದಾರೆ.

424
00:41:02,627 --> 00:41:04,880
ಓಡಿನ್ಸ್ ಸ್ವೋರ್ಡ್ ಸ್ಥಾಪಿಸಿದ ಬೇರೊಬ್ಬರು.

425
00:41:04,963 --> 00:41:08,466
ಕಮಾಂಡರ್, ನಿಮ್ಮನ್ನು ನೋಯಿಸಲು
ಎಂದಿಗೂ ಉದ್ದೇಶಿಸಿಲ್ಲ. ನನ್ನಾಣೆ.

426
00:41:09,009 --> 00:41:10,343
ಸಹಾಯ ಮಾಡಬೇಕಂತಿದ್ದೆ.

427
00:41:11,303 --> 00:41:13,763
ಪರವಾಗಿಲ್ಲ. ಬತ್ತಿ ಹಚ್ಚಿದ್ದು ಅವಳೇ.

428
00:41:14,890 --> 00:41:16,349
ಅವಳೇ ಬತ್ತಿ ಹಚ್ಚಿದ್ದು.

429
00:41:23,815 --> 00:41:24,816
ರೀಸ್.

430
00:41:42,459 --> 00:41:45,128
ನೋಡು. ನಿನ್ನ ಮಗಳು
ನಿನಗಾಗಿ ಇದನ್ನು ಬರೆದಳು, ತಾನೇ?

431
00:41:45,921 --> 00:41:47,380
ಇದನ್ನು ನೋಡು, ನೋಡು.

432
00:41:48,089 --> 00:41:50,675
ಆಕೆ ನಿನ್ನನ್ನು ನೋಡಿದರು, ಇದೇ ಆಕೆಗೆ ಕಂಡಿದ್ದು.

433
00:41:59,809 --> 00:42:01,186
ನೀನು ಈಗಲೂ ಹೀಗಿರಬಹುದು.

434
00:42:06,316 --> 00:42:07,776
ನನಗೆ ಬಿಡು, ನೋಡ್ಕೋತೀನಿ.

435
00:42:07,859 --> 00:42:09,819
ಸಿಕ್ಕಿದ್ದಳು. ರೆಕಾರ್ಡ್ ಮಾಡಿದ್ದೀನಿ.

436
00:42:09,903 --> 00:42:13,281
ಇಡೀ ಪ್ರಪಂಚಕ್ಕೆ ಇವಳು ದುಷ್ಟೆ
ಅಂತ ಗೊತ್ತಾಗುತ್ತೆ.

437
00:42:13,365 --> 00:42:17,619
ಅವಳ ಪರಂಪರೆಯೇ ಅವಮಾನಕರವಾಗಿರುತ್ತೆ,
ಆದರೆ ನೀನು ಅವಳನ್ನ ಕೊಂದರೆ, ಕೊಲೆ ಆಗುತ್ತೆ.

438
00:42:21,081 --> 00:42:23,625
ನಾವು ಲೈಟ್ಹೌಸಲ್ಲಿದ್ದೇವೆ. ಶೂಟರ್ ಸುಳಿವು ಇಲ್ಲ.

439
00:42:23,708 --> 00:42:26,378
ಟೀ, ಗಾಯಾಳುಗಳ ನೋಡು.
ಮ್ಯಾಕ್, ಸ್ಮಿಟ್ಟಿ, ನನ್ನ ಜತೆ.

440
00:42:26,461 --> 00:42:28,255
-ಒಳಗಡೆ ಹೋಗೋಣ.
-ಆಯ್ತು.

441
00:42:28,838 --> 00:42:30,632
ಪೂರ್ವ ದಡಕ್ಕೆ, ನಾನು ಪಶ್ಚಿಮಕ್ಕೆ.

442
00:42:39,975 --> 00:42:41,393
ರೀಸ್. ಇದನ್ನು ಮಾಡಬೇಡ.

443
00:42:46,648 --> 00:42:48,900
ಇಲ್ಲ. ಅವಳು ನಿನ್ನ ಪ್ರಪಂಚದಲ್ಲಿ ಇಲ್ಲ.

444
00:42:53,947 --> 00:42:55,532
ಅವಳು ಯುದ್ಧಭೂಮಿಯಲ್ಲಿದ್ದಾಳೆ.

445
00:43:05,333 --> 00:43:06,251
ಇಲ್ಲ!

446
00:43:21,683 --> 00:43:23,476
ಸೇಫ್ ರೂಮಿಗೆ ಹೋಗ್ತಿದ್ದೇವೆ.

447
00:44:05,685 --> 00:44:06,686
ರೀಸ್!

448
00:44:11,524 --> 00:44:12,901
ನಿನ್ನ ಆಯುಧ ಕೆಳಗಿಡು.

449
00:44:35,715 --> 00:44:36,716
ರೀಸ್!

450
00:44:45,392 --> 00:44:46,851
ಗುಂಡು ಹಾರಿಸುವಂತೆ ಮಾಡಬೇಡ.

451
00:44:56,611 --> 00:44:58,113
ನಾನು ಈಗಾಗಲೇ ಸತ್ತಿದ್ದೇನೆ.

452
00:45:00,698 --> 00:45:03,618
ಟೋನಿ, ಸುರಕ್ಷಿತ ಕೋಣೆಯಲ್ಲಿ ಒಂದು ಘಟನೆಯಾಗಿದೆ.

453
00:45:03,701 --> 00:45:06,788
ವರದಿಗಾರ್ತಿ ಬದುಕಿದ್ದಾಳೆ.
ಹಾರ್ಟ್ಲೀ ಜೀವ ಬಿಟ್ಟಿದ್ದಾಳೆ.

454
00:45:08,540 --> 00:45:09,707
ಅರ್ಥವಾಯ್ತಾ?

455
00:45:13,795 --> 00:45:15,755
ಟೋನಿ, ರೀಸ್ ನಿನಗೆ ಕಾಣುತ್ತಿದ್ದಾನಾ?

456
00:45:23,054 --> 00:45:24,055
ಇಲ್ಲ.

457
00:45:52,876 --> 00:45:56,796
ಮೂರು ವಾರಗಳ ನಂತರ

458
00:45:56,880 --> 00:46:00,842
ಪ್ರಚಲಿತ ಕಥೆ
ಪೆಂಟಗಾನಲ್ಲಿ ವ್ಯಾಪಕವಾದ ಸುಧಾರಣೆ

459
00:46:06,014 --> 00:46:07,891
ಅಪ್ಡೇಟ್: ಸತ್ಯ ಮತ್ತು ಪರಿಣಾಮ

460
00:46:07,974 --> 00:46:09,434
ಕಮಾಂಡರ್ ಜೇಮ್ಸ್ ರೀಸಿಗೆ
ಪೆಂಟಗಾನ್ ದ್ರೋಹ ಮಾಡಿದೆ

461
00:46:09,517 --> 00:46:12,687
ಮುಂದೆ ಬಂದದ್ದು ರಾಷ್ಟ್ರವನ್ನೇ ಬೆಚ್ಚಿಬೀಳಿಸಿತು.

462
00:46:15,148 --> 00:46:19,194
ಒಬೆರಾನ್ ಅನಲಿಟಿಕ್ಸ್

463
00:46:24,449 --> 00:46:28,411
ರೀಸ್
ಸಂದೇಶ

464
00:46:28,495 --> 00:46:34,501
ನೀನು ಹೇಳಿದ್ದು ಸರಿ.
ನಿನ್ನ ಕಥೆಯು ಕೆಲವು ಒಳ್ಳೆಯದನ್ನು ಮಾಡಿದೆ.

465
00:46:36,961 --> 00:46:40,507
ಅಂತಿಮ ಪ್ರಶ್ನೆಯ ಬಗ್ಗೆ ಏನು?

466
00:46:45,803 --> 00:46:51,809
ಒಬೆರಾನ್ ಅನಲಿಟಿಕ್ಸ್ ಪೆರುವಿನಲ್ಲಿರುವ
ಬ್ಯಾಂಕ್ ಮೂಲಕ ರೂಟಿಂಗ್ ಮಾಡ್ತಿದೆ.

467
00:47:01,653 --> 00:47:05,698
ಧನ್ಯವಾದಗಳು.
ಈಗ ನನ್ನನ್ನು ಹುಡುಕುವುದನ್ನು ನಿಲ್ಲಿಸು.

468
00:47:08,076 --> 00:47:11,788
ಅದು ಆಗುವುದಿಲ್ಲ.

469
00:47:18,920 --> 00:47:21,881
ಜೇಮ್ಸ್ ರೀಸ್ಗಾಗಿ ಹುಡುಕಾಟ ನಡೆಯುತ್ತಿದೆ
ಎಲ್ಸಿಡಿಆರ್ ರೀಸ್ ಬಹುಶಃ ನಿಧನರಾಗಿದ್ದಾರೆ

470
00:47:37,522 --> 00:47:43,528
ಮಂಕೋರಾ
ಪೆರು

471
00:49:00,021 --> 00:49:01,939
ನಿನ್ನ ಮತ್ತೆ ನೋಡ್ತಿನಿ ಅನ್ಸಿತ್ತು.

472
00:49:03,608 --> 00:49:04,942
ಒಬೆರಾನ್ ಅನಲಿಟಿಕ್ಸ್.

473
00:49:07,695 --> 00:49:10,198
ಆ ಶೆಲ್ ಕಂಪನಿಯನ್ನ ಪಟ್ಟಿಯಿಂದ ಬಿಟ್ಟಿದ್ದೀಯ.

474
00:49:14,202 --> 00:49:15,620
ಪಿಲ್ಲರ್ ಹೇಳಲು ಯತ್ನಿಸಿದ.

475
00:49:17,538 --> 00:49:21,042
ಒಂದು ಹೆಸರು ಹೇಳೋಕಿದೆ ಅಂದ.
ಅದು ಹಾರ್ಟ್ಲೀ ಎಂದು ನಾನು ಭಾವಿಸಿದೆ.

476
00:49:24,879 --> 00:49:27,632
ಅದು ನೀನೇ, ಬೆನ್.

477
00:49:29,217 --> 00:49:31,177
ನೀನೇ ಕಣೋ ಅದು.

478
00:49:33,513 --> 00:49:34,931
ನನ್ನ ಮೂಲ ನಿನಗೆ ಗೊತ್ತು.

479
00:49:37,725 --> 00:49:40,353
ಎಸ್ಡಿಎಫ್ ಮೂಲಕ ತಪ್ಪು ಮಾಹಿತಿ ಕಳಿಸಿದ್ದೀಯ.

480
00:49:40,436 --> 00:49:43,690
ಓಡಿನ್ಸ್ ಸ್ವೋರ್ಡ್ ಸ್ಥಾಪಿಸಲು
ಸೂಕ್ತವಾದ ಸ್ಥಾನದಲ್ಲಿದ್ದೆ ನೀನು.

481
00:49:48,152 --> 00:49:49,779
ನಾನದನ್ನ ನಿನ್ನಿಂದಲೇ ಕೇಳಬೇಕು.

482
00:49:53,533 --> 00:49:54,701
ಅಡ್ಮಿರಲ್ ಆಣೆ ಮಾಡಿದ.

483
00:49:56,786 --> 00:49:58,162
ನೀನು ಸತ್ತಿದ್ದೆ ಅಂತ.

484
00:49:59,706 --> 00:50:01,666
ನಿಮ್ಮೆಲ್ಲರಿಗೂ ಗೆಡ್ಡೆಗಳಿವೆ ಎಂದರು.

485
00:50:03,126 --> 00:50:07,088
ಮತ್ತು ನಾನು ಯೋಚಿಸಿದೆ,
ಯಾವುದೋ ಆಸ್ಪತ್ರೆಯ ಹಾಸಿಗೆಯಲ್ಲಿ ಸಾಯೋ ಬದಲು

486
00:50:09,382 --> 00:50:12,176
ಸೇವೆಯಲ್ಲೇ ಇದ್ದುಕೊಂಡು ಪ್ರಾಣ ಬಿಡಲಿ ಅಂತ.

487
00:50:19,142 --> 00:50:21,602
ನಮಗೋಸ್ಕರ ಮಾಡಿದೆಯಾ ಅಥವಾ $20 ಮಿಲಿಯನ್ನಿಗಾ?

488
00:50:25,148 --> 00:50:26,232
ಬಹುಶಃ ಎರಡಕ್ಕೂ...

489
00:50:30,403 --> 00:50:31,612
ಮೊದಲಲ್ಲಿ.

490
00:50:33,239 --> 00:50:36,367
ನಾನು ಒಂದು ಪೈಸೆಯನ್ನೂ ಖರ್ಚು ಮಾಡಿಲ್ಲ.
ನನಗೆ ಸಾಧ್ಯವಿಲ್ಲ.

491
00:50:39,203 --> 00:50:40,580
ಆದರೆ ನಿನಗೆ ಗೊತ್ತಿರಲಿ...

492
00:50:43,541 --> 00:50:45,334
ನನಗೆ ನೀನು ತಿಳಿದುಕೊಳ್ಳಬೇಕು...

493
00:50:47,545 --> 00:50:49,839
ಇದನ್ನ ಶಾಸನವಾಗಿ ಬರೆದಿದ್ದಾರೆ.

494
00:50:58,097 --> 00:50:59,724
ಲಾರೆನ್ ಮತ್ತು ಲ್ಯೂಸ್...

495
00:51:04,979 --> 00:51:06,689
ನನಗೂ ಅದಕ್ಕೂ ಸಂಬಂಧವೇ ಇರಲಿಲ್ಲ.

496
00:51:10,526 --> 00:51:11,819
ಮತ್ತು ನನಗೆ ಗೊತ್ತಾದಾಗ,

497
00:51:12,528 --> 00:51:15,490
ಪ್ರಪಂಚವನ್ನೇ ಸುಡಬೇಕು ಅನ್ನಿಸ್ತು, ಬ್ರದರ್.

498
00:51:20,161 --> 00:51:24,040
ನಾನು ಪ್ರತಿ ಹೆಜ್ಜೆಯಲ್ಲೂ ನಿನ್ನ ಜೊತೇನೇ ಇದ್ದೆ,

499
00:51:27,001 --> 00:51:30,713
ಅವರನ್ನ ಕೊಂದ ಆ ಸೂಳೆಮಕ್ಕಳನ್ನ
ಕೊಲ್ಲೋವರೆಗೂ ಜೊತೆಗಿದ್ದೆ.

500
00:51:31,631 --> 00:51:33,090
ಅದೇ ಸತ್ಯ.

501
00:51:41,516 --> 00:51:42,517
ನನಗೆ ಗೊತ್ತು.

502
00:51:44,477 --> 00:51:45,686
ನನ್ನನ್ನು ಕ್ಷಮಿಸು.

503
00:51:48,981 --> 00:51:49,982
ಗೊತ್ತು, ಬೆನ್.

504
00:51:53,861 --> 00:51:54,695
ನಾನು...

505
00:51:57,114 --> 00:51:58,491
ಹೊಸ ಹಚ್ಚೆ ಹಾಕಿಸಿಕೊಂಡೆ.

506
00:52:02,537 --> 00:52:06,582
ಇದು ನಿನಗಾಗೋ ಅಥವಾ ನನಗಾಗೋ ಗೊತ್ತಿರಲಿಲ್ಲ.

507
00:52:12,463 --> 00:52:13,548
ಈಗ ನನಗೆ ಗೊತ್ತು.

508
00:52:26,227 --> 00:52:27,186
ಪರವಾಗಿಲ್ಲ.

509
00:52:33,192 --> 00:52:34,610
ಪಟ್ಟಿಯನ್ನು ಮುಗಿಸೋಣ.

510
00:53:22,867 --> 00:53:24,577
ಅದು ಹುಷಾರಾಗುತ್ತಾ, ಅಪ್ಪಾ?

511
00:53:34,795 --> 00:53:36,547
ನೀನವಳಿಗೆ ಸುಳ್ಳು ಹೇಳಬೇಕಿಲ್ಲ.

512
00:53:41,093 --> 00:53:43,763
ಏನಂದ್ರೆ, ಚಿನ್ನಿ, ಅದು ಹುಷಾರಾಗಲ್ಲ.

513
00:53:44,305 --> 00:53:45,348
ಅದು ಸತ್ತಿದೆ.

514
00:53:45,806 --> 00:53:47,475
ಹೌದು, ಅದು ಸರಿ, ಚಿನ್ನ.

515
00:53:49,352 --> 00:53:50,353
ಅಪ್ಪಾ,

516
00:53:52,188 --> 00:53:54,357
ನೀವು ಮನೆಗೆ ಬರದಿದ್ದರೆ ಏನಾಗುತ್ತದೆ?

517
00:53:57,109 --> 00:53:59,236
ಚಿನ್ನ, ನಾನು ಯಾವಾಗಲೂ ಮನೆಗೆ ಬರುತ್ತೇನೆ.

518
00:54:03,866 --> 00:54:05,201
ಆದರೆ ನೀವು ಬರದಿದ್ದರೆ?

519
00:54:13,584 --> 00:54:14,627
ಇಲ್ಲಿ ಬಾ.

520
00:54:31,644 --> 00:54:34,021
ಒಂದು ದಿನ ನಾನು ಕೆಲಸದಿಂದ ಮನೆಗೆ ಬರದಿದ್ದರೆ,

521
00:54:34,438 --> 00:54:36,774
ನೀನು ಇದನ್ನು ತಿಳಿದಿರಬೇಕು...

522
00:54:38,901 --> 00:54:41,696
ನಿನ್ನ ತಂದೆ ಯಾವುದೋ ಮಹತ್ವದ ಕೆಲಸ
ಮಾಡುತ್ತಾ ಸತ್ತರಂತ,

523
00:54:42,947 --> 00:54:46,534
ನನ್ನ ಸುತ್ತಲೂ ನಾನು ತುಂಬಾನೇ ಪ್ರೀತಿಸಿದಂಥ

524
00:54:47,660 --> 00:54:48,536
ಜನ ಇದ್ದರು ಅಂತ.

525
00:54:50,162 --> 00:54:51,789
ನನ್ನ, ಅಮ್ಮನ್ನ ಪ್ರೀತಿಸ್ತೀಯಾ?

526
00:54:55,876 --> 00:54:57,336
ಇಲ್ಲ, ಚಿನ್ನ.

527
00:54:57,420 --> 00:55:00,339
ನಾನು ನಿನ್ನನ್ನ, ನಿಮ್ಮಮ್ಮನ್ನ ಪ್ರೀತಿಸುವ ರೀತಿ

528
00:55:00,423 --> 00:55:02,258
ಇನ್ಯಾರನ್ನೂ ಪ್ರೀತಿಸೋಕಾಗಲ್ಲ.

529
00:55:07,596 --> 00:55:09,432
ನಿನ್ನ ತಾಯಿ ಇನ್ನೂ ಇಲ್ಲಿರುತ್ತಾರೆ.

530
00:55:09,515 --> 00:55:12,810
ನಾನು ನಿಯೋಜನೆಯಾದಾಗ
ಎಂದಿನಂತೆ ನಿನ್ನನ್ನು ಅವಳು ನೋಡಿಕೊಳ್ತಾಳೆ.

531
00:55:12,893 --> 00:55:15,688
ನಿನಗೆ ಭಾನುವಾರಗಳು ಸಾಕರ್

532
00:55:16,188 --> 00:55:18,232
ಮತ್ತು ಕುದುರೆ ಸವಾರಿ ಇರುತ್ತೆ...

533
00:55:18,315 --> 00:55:20,317
ಮತ್ತು ಹಿತ್ತಲಿನಲ್ಲಿ ನೃತ್ಯ.

534
00:55:20,401 --> 00:55:21,944
ಹಿತ್ತಲಿನಲ್ಲಿ ನೃತ್ಯ.

535
00:55:29,660 --> 00:55:33,581
ತದನಂತರ, ಒಂದು ದಿನ, ನೀನು ದೊಡ್ಡವಳಾಗುತ್ತೀಯ.

536
00:55:35,583 --> 00:55:37,543
ಮತ್ತು ನಿನ್ನ ತಾಯಿಯನ್ನ ನೋಡಿಕೊಳ್ತೀಯ.

537
00:55:38,294 --> 00:55:41,964
ಮತ್ತು ಅದನ್ನು ನೋಡೋಕೆ ನಾನು ಇಲ್ಲಿ ಇರದಿದ್ದರೂ,

538
00:55:43,340 --> 00:55:48,262
ನಿನ್ನನ್ನ ನೋಡದೇ ಅಂತೂ ನಾನಿರಲ್ಲ, ಯಾವಾಗ್ಲೂನೂ.

539
00:55:49,388 --> 00:55:52,475
ಆದರೆ... ಬೇರೆ ಕಡೆಯಿಂದ.

540
00:55:54,602 --> 00:55:55,728
ಎಲ್ಲಿಂದ?

541
00:56:00,775 --> 00:56:04,070
ಇಲ್ಲಿಂದ, ಬಂಗಾರ. ಇಲ್ಲಿಂದ.

542
00:56:07,782 --> 00:56:08,783
ಇಲ್ಲಿ ಬಾ.

543
00:56:26,383 --> 00:56:32,389
ನನ್ನ ಕುಟುಂಬ

544
00:57:15,766 --> 00:57:20,813
ನಿಯಾಸ್ಸಾ
ಮೊಜಾಂಬಿಕ್

