1
00:00:53,262 --> 00:00:55,473
ಅಂತಿಮ ಯುದ್ಧ

2
00:02:41,537 --> 00:02:42,413
ಅಲ್ಲಿ.

3
00:02:42,496 --> 00:02:46,041
ನಮ್ಮ ಮೊತ್ತ ಮೊದಲ ಅಪಾರ್ಟ್ಮೆಂಟ್.
ಊಟ ಮತ್ತು ಬಿಯರ್ ಕೆಳಗಿಟ್ಟಿದ್ದೀವಿ.

4
00:02:50,629 --> 00:02:51,881
ಓ, ನನ್ನ ದೇವರೇ.

5
00:02:51,964 --> 00:02:53,507
ಸುಸ್ವಾಗತ, ಮಿಸೆಸ್ ರೀಸ್.

6
00:02:56,051 --> 00:02:58,053
-ಅಬ್ಬಾ!
-ಅದನ್ನು ನಂಬುವೆಯ? ಅಬ್ಬಾ!

7
00:02:59,680 --> 00:03:01,974
-ನಂಬಬಲ್ಲೆ. ಹೌದು.
-ಇದು ಹುಚ್ಚುತನ.

8
00:03:02,057 --> 00:03:06,562
ನನ್ನ ಪ್ರಕಾರ, 30 ವರ್ಷಕ್ಕೆ ಸಹಿ ಮಾಡುವ ಸಾಲವು
ಅದನ್ನು ಸಾರಿ ಹೇಳುತ್ತದೆ.

9
00:03:06,645 --> 00:03:09,732
30 ವರ್ಷಗಳು. ಇಲ್ಲಿ? ನಾವು ಹುಚ್ಚರಾ?

10
00:03:09,815 --> 00:03:12,109
ನನಗೆ ಗೊತ್ತಿಲ್ಲ. ಅದನ್ನೇನು ಕೇಳಬೇಕೇ?

11
00:03:13,068 --> 00:03:15,613
ಇದು ನಿಜವಾಗಿಯೂ ಕೆಟ್ಟದಾಗಿದೆ.

12
00:03:20,659 --> 00:03:23,329
-ಈ ವಾಲ್ಪೇಪರ್ನ್ನ ತೆಗಿಯಬೇಕು.
-ಹೌದು.

13
00:03:23,412 --> 00:03:25,873
-ಮತ್ತು ಕಾರ್ಪೆಟ್.
-ಖಂಡಿತ. ನೋಟ ಇರಬೇಕು.

14
00:03:27,917 --> 00:03:30,544
-ಉದಾಹರಣೆಗೆ, ಗನ್ ಸುರಕ್ಷಿತವಾಗಿಡಬಹುದು.
-ವಾವ್!

15
00:03:30,628 --> 00:03:34,006
ಕೆಲಸದ ಬೆಂಚ್, ಜೆಬಿಎಡಿ ಧ್ವಜ,
ಈ ಸ್ಥಳವನ್ನು ಸರಿಯಾಗಿ ಅಲಂಕರಿಸೋಣ.

16
00:03:34,548 --> 00:03:36,800
ಓಹ್, ಇಲ್ಲ, ಈ ಕೋಣೆ ನನ್ನ ಕಚೇರಿಯಾಗಲಿದೆ.

17
00:03:36,884 --> 00:03:38,052
ಏನು?

18
00:03:38,135 --> 00:03:40,638
ಇದು ನನ್ನ ಕಛೇರಿ. ನೀನು ಗ್ಯಾರೇಜ್ ಹೊಂದಬಹುದು.

19
00:03:41,513 --> 00:03:44,099
ಇಲ್ಲ. ಅದು ಆಗುವುದಿಲ್ಲ. ಆಗದ್ದು.

20
00:03:44,183 --> 00:03:46,852
-ನೋಡೋಣ.
-ಮಲಗುವ ಕೋಣೆಗಳನ್ನು ನೋಡ್ತೀಯಾ?

21
00:03:46,936 --> 00:03:51,398
ಹೌದು. ಆದರೆ ನಾವು ಕೆಲಸ ಮಾಡಲು ಇಲ್ಲಿದ್ದೇವೆ,
ಬೇರೆ ಆಲೋಚನೆ ಬೇಡ.

22
00:03:51,482 --> 00:03:53,025
ಅದನ್ನೂ ನೋಡೋಣ.

23
00:04:09,124 --> 00:04:13,337
15 ಗಂಟೆಗಳ ಹಿಂದೆ

24
00:04:17,424 --> 00:04:20,386
ಲೋ, ಬೇವರ್ಸಿಗಳಾ... ತೂಕ ಇದೆಯೇನ್ರೋ?

25
00:04:20,469 --> 00:04:23,013
-ಎಣಿಸ್ತಿರಿ!
-ಬನ್ರೋ ಬೀಚಿಂದ ಹೊರಕ್ಕೆ.

26
00:04:24,390 --> 00:04:25,307
ಎದ್ದೇಳ್ರೋ!

27
00:04:27,893 --> 00:04:30,604
ಆ ಗಂಟೆಯನ್ನು ಬಾರಿಸಿರೋ. ಅದೇ ನಿಮ್ಮ ಮೋಕ್ಷ.

28
00:04:31,313 --> 00:04:32,398
ಹೋಗಿ ಹೊಡೀರಿ.

29
00:04:32,982 --> 00:04:35,109
ಮೊದಲ ಸಲ ನೋವಾಗುತ್ತೆ ಅಷ್ಟೇ ಕಣ್ರೋ.

30
00:04:35,192 --> 00:04:37,653
-ತೂಕ ಇದೆಯೇನ್ರೋ?
-ನನಗೆ ತೂಕ ಇದೆ!

31
00:04:37,736 --> 00:04:40,364
-ನನಗೇನೋ ಕಾಣಿಸ್ತಿಲ್ಲಪ್ಪ.
-ಮೂರು!

32
00:04:40,447 --> 00:04:43,242
ಸೋಲೊಪ್ಪಿಕೊಳ್ಳೋರು ಬೇಡ.
ಒಂದು ದಿಮ್ಮಿ ಎತ್ತಕ್ಕಾಗಲ್ಲ,

33
00:04:43,325 --> 00:04:44,827
ಶತ್ರುವನ್ನ ಹೇಗೆ ಹೊಡೀತೀರ?

34
00:04:48,497 --> 00:04:52,251
ಸಾಗಿಸಿ! ಸಾಗಿಸಿ ಅದನ್ನ! ಮಧ್ಯ ಬಿಡೋ ಹಾಗಿಲ್ಲ.

35
00:04:55,796 --> 00:04:58,048
ಜೆಎಜಿ ಇಲ್ಲಿದ್ದಾರೆ. ಕ್ಯಾಪ್ಟನ್ ಹೋವಾರ್ಡ್.

36
00:05:06,098 --> 00:05:07,349
ಎಲ್ಲವೂ ಕ್ರಮದಲ್ಲಿದೆಯೇ?

37
00:05:08,142 --> 00:05:10,310
ಓಡಿನ್ಸ್ ಸ್ವೋರ್ಡ್ ಬಗ್ಗೆ,

38
00:05:10,394 --> 00:05:12,730
ನಾವು ನಿರಾಕರಣೆಯನ್ನು ಹೊಂದಿರಬೇಕು.

39
00:05:13,439 --> 00:05:15,232
"ಹೊಂದಿರಬೇಕು" ಅಂದ್ರೆ?

40
00:05:15,315 --> 00:05:16,817
ದುರಂತಗಳು ಸಂಭವಿಸುತ್ತವೆ.

41
00:05:16,900 --> 00:05:20,487
ಈ ಕಾರ್ಯ ಟೀಮ್ ಇಂಟೆಲಿಜೆನ್ಸ್
ಮೇಲೆ ಕಟ್ಟಿದರು. ನಾವು ಜವಾಬ್ದಾರರಲ್ಲ.

42
00:05:22,614 --> 00:05:24,199
ಪ್ರಯೋಗ ಏನಾಯ್ತು?

43
00:05:26,035 --> 00:05:29,955
ನ್ಯಾಯವಾಗಿ ಹೇಳಬೇಕಂದ್ರೆ,
ಇದ್ಯಾವುದರ ಪರೀಕ್ಷೆಯೂ ಆಗಿಲ್ಲ ಅನ್ನೋದು ಗಮನಿಸಿ.

44
00:05:30,456 --> 00:05:33,250
ಎನ್ಡಿಎಎ ಸ್ಪಷ್ಟವಿದೆ.
ಇದು ನ್ಯಾಯಾಲಯದ ಮುಂದೆ ಹೋದರೆ--

45
00:05:33,333 --> 00:05:34,585
ರಕ್ಷಣೆ ಇದೆಯಾ ಇಲ್ವಾ?

46
00:05:39,423 --> 00:05:40,507
ಆದೇಶ ಎಂದರೆ ಆದೇಶ.

47
00:05:41,258 --> 00:05:43,469
ಜೇಮ್ಸ್ ರೀಸ್ ಪರಿಗಣಿಸ್ತಾನಾ ಅನುಮಾನವಿದೆ.

48
00:05:47,097 --> 00:05:51,727
ಆಕಸ್ಮಿಕಗಳನ್ನು ಗಂಭೀರವಾಗಿ ಪರಿಗಣಿಸಲು
ಇದು ಸಮಯ ಎಂದು ನಾನು ನಂಬುತ್ತೇನೆ.

49
00:05:54,146 --> 00:05:55,731
ಯಾವ ರೀತಿಯ ಆಕಸ್ಮಿಕಗಳು?

50
00:05:56,315 --> 00:05:57,775
ಯುದ್ಧತಂತ್ರದ ಹಿಂದಿರುವಿಕೆ.

51
00:05:58,442 --> 00:06:00,736
ಹಸ್ತಾಂತರ ಮಾಡದ ದೇಶಗಳ ಪಟ್ಟಿ ಮಾಡಿದ್ದೀನಿ.

52
00:06:00,819 --> 00:06:02,654
-ಕಟ್ಟುಕತೆ.
-ಎಲ್ಲರೂ ಸತ್ತಿದ್ದಾರೆ.

53
00:06:03,572 --> 00:06:04,948
ನನಗೊಂದು ಕುಟುಂಬವಿದೆ.

54
00:06:05,032 --> 00:06:07,826
ಜೇಮ್ಸ್ ರೀಸ್ ಕಾರಣದಿಂದ
ನಾನು ಕ್ಯಾಮರೂನ್ಗೆ ಹೋಗಲ್ಲ.

55
00:06:07,910 --> 00:06:09,787
ಮಾತಾಡುವುದನ್ನು ನಿಲ್ಲಿಸು.

56
00:06:13,123 --> 00:06:14,333
ನಾವು ನೇವಲ್ ಕಮಾಂಡ್,

57
00:06:15,000 --> 00:06:17,044
ಯಾರೋ ವಾಲ್ ಸ್ಟ್ರೀಟ್ ದಡ್ಡರಲ್ಲ.

58
00:06:18,629 --> 00:06:22,800
ಕಾನೂನು ರಕ್ಷಣೆಯನ್ನು ಹೊಂದಿರುವವರೆಗೆ,
ನಾವು ರಕ್ಷಿಸುವ ಸ್ಥಾನವನ್ನು ಹೊಂದಿದ್ದೇವೆ.

59
00:06:23,884 --> 00:06:27,262
ಮತ್ತು ಅವಮಾನಿತ ಕಮಾಂಡರ್ ರೀಸ್
ಇಲ್ಲಿ ಬರಲು ಬಯಸಿದರೆ,

60
00:06:27,930 --> 00:06:31,058
ಇಲ್ಲಿನ 5000 ನಾವಿಕರಿಗೆ
ಹೇಳಿಕೊಳ್ಳೋಕಾದರೂ ಏನಾದರೂ ಇರುತ್ತೆ.

61
00:06:35,979 --> 00:06:36,980
ನನಗೆ ಕಾಣ್ತಿದಾರೆ.

62
00:06:38,941 --> 00:06:41,485
ನೀನು ಹಾರ್ನ್ನ ಎತ್ತಿದ ಮೇಲೆ
ದಿನಾ ಭೇಟಿಯಾಗ್ತಾರೆ.

63
00:06:44,154 --> 00:06:48,659
ಕಾಕ್ಸ್ ಮತ್ತು ಹೋವಾರ್ಡ್ ಸರ್ಕಾರಿ ಬೊಕ್ಕಸದಲ್ಲೇ
ಬದುಕುತ್ತಿರೋದ್ರಿಂದ ಆ ಅವಕಾಶ ಇದೆ.

64
00:06:49,535 --> 00:06:51,954
ಪಿಲ್ಲರ್ ಮಾತ್ರ...
ಬೇಸ್ ಬಿಟ್ಟು ಬರ್ತಿಲ್ಲ.

65
00:06:52,579 --> 00:06:55,874
ಪೂರ್ತಿ ಎನ್ಏಬಿಯನ್ನ ಎದುರು ಹಾಕಿಕೊಳ್ಳೋಕೆ
ನೋಡ್ತಿಲ್ಲ ತಾನೇ ನೀನು?

66
00:07:19,231 --> 00:07:22,192
ಬಹುಶಃ ನಾವು ಮೊದಲು ಇಬ್ಬರನ್ನ
ಕೊಂದು ಪಿಲ್ಲರ್ಗೆ ಕಾಯೋಣ.

67
00:07:23,652 --> 00:07:25,279
ಸ್ನೈಪರ್ ಶಾಟ್ ಹೊಡೆಯೋಣ.

68
00:07:26,113 --> 00:07:27,197
ದೋಣಿಯಿಂದಲಾ?

69
00:07:29,199 --> 00:07:31,160
ಅದು ಆಗಬಹುದು, ಆಗದಿರಬಹುದು.

70
00:07:33,245 --> 00:07:34,663
ಮಿಸ್ ಮಾಡ್ಕೊಳ್ಳೋ ಹಾಗಿಲ್ಲ.

71
00:07:39,960 --> 00:07:41,128
ಮೊಸುಲ್ ನೆನಪಿದೆಯೇ?

72
00:07:42,546 --> 00:07:43,755
ಹೌದು, ಅದರ ಬಗ್ಗೆ ಏನು?

73
00:07:45,924 --> 00:07:47,551
ಸಾಯಿದತಿ ಅಲ್ ಜಮೀಲಾ?

74
00:07:50,762 --> 00:07:52,139
ಹೋವಾರ್ಡ್ನ ಕುಟುಂಬವಿದೆ.

75
00:07:55,225 --> 00:07:56,226
ದಿಟ್ಟ ನಡೆ.

76
00:08:23,754 --> 00:08:25,756
ಕ್ಯಾಲಿಫೋರ್ನಿಯಾ ಗವರ್ನರ್ ತ್ವರಿತ
ಪ್ರತಿಕ್ರಿಯೆಯನ್ನು ಬಯಸುತ್ತಾರೆ

77
00:08:25,881 --> 00:08:28,383
ಸೈನಿಕರು ತಿರುಗಿಬಿದ್ದಾಗ:
ಆಂತರಿಕ ಭಯೋತ್ಪಾದನೆಯ ಇತಿಹಾಸ

78
00:08:32,471 --> 00:08:34,556
ಬೇರೆ ಏನೇ ಇದ್ದರೂ ಎಫ್ಬಿಐನ ಕೇಳಿ.

79
00:08:39,686 --> 00:08:42,898
ಜೇಮ್ಸ್ ರೀಸ್ ಮೈಕ್ ಟೆಡೆಸ್ಕೋನ ಕೊಂದಿಲ್ಲ,
ಅದು ನೀವು ನಿಮ್ಮವರು.

80
00:08:42,981 --> 00:08:46,568
ಟಾಲೋಸ್ ಸೆಕ್ಯೂರಿಟಿ ಕೊಡುತ್ತಾರೆ.
ಅವರು ಕೊಲೆಗಾರರಲ್ಲ.

81
00:08:47,152 --> 00:08:48,987
ನಿನ್ ಬಗ್ಗೆ ನಂಗ್ ಗೊತ್ತಿಲ್ವಾ?

82
00:08:49,071 --> 00:08:51,865
ಆರ್ಡಿ-4895ನ ನೇವಿ ಸೀಲ್ಗಳ
ಮೇಲೆ ಪರೀಕ್ಷಿಸಿದ್ದೀರಿ.

83
00:08:51,949 --> 00:08:55,452
ಪರೀಕ್ಷೆಗಳಿಂದ ಗಡ್ಡೆಗಳಾಗಿದ್ದಕ್ಕೆ
ಅವರನ್ನ ಕೊಂದಿರಿ ಅಂತನೂ ಗೊತ್ತು.

84
00:08:55,535 --> 00:08:59,122
ಇದು ನನ್ನ ಕಥೆ. ನೀವು ನನ್ನ ಕೊಂದರೆ
ಎಲ್ಲರಿಗೂ ನಿಜ ತಿಳಿಯುತ್ತದೆ.

85
00:08:59,206 --> 00:09:01,583
ನಿಮ್ಮ ಹಾಳಾದ ಡೀಲ್ ಬಿದ್ದುಹೋಗುತ್ತದೆ.

86
00:09:07,464 --> 00:09:09,508
ಇಂದು, ಭಯದಿಂದ ಎಚ್ಚರಗೊಳ್ಳುವುದು ಸುಲಭ.

87
00:09:10,801 --> 00:09:15,597
ನಾವು ಟಿವಿಯಲ್ಲಿ ಈ ವಾರ ನೋಡಿದ
ಹಿಂಸೆಯ ಕೃತ್ಯಗಳನ್ನ ನಿರ್ಲಕ್ಷಿಸಬಾರದು.

88
00:09:16,390 --> 00:09:22,271
ಆದರೆ ಆಡಳಿತ ಜೇಮ್ಸ್ ಸಲ್ಲಿವನ್ ರೀಸ್ನ
ದೇಶೀಯ ಭಯೋತ್ಪಾದಕನನ್ನಾಗಿ ವರ್ಗೀಕರಿಸಲು

89
00:09:22,854 --> 00:09:24,773
ಬೇಗ ಕಾರ್ಯನಿರ್ವಹಿಸಿದೆ.

90
00:09:32,114 --> 00:09:35,993
ಈಗ ಪ್ರಶ್ನೆಗಳಿಗೆ ತೆರೆಯೋಣ,
ಏಕೆಂದರೆ ಹಲವಾರು ಇವೆ ಎಂದು ನನಗೆ ಖಾತ್ರಿಯಿದೆ.

91
00:09:36,618 --> 00:09:37,577
ಹಿಂದಿನಲ್ಲಿ. ಹಾಂ.

92
00:09:37,661 --> 00:09:41,748
ಮೇಡಂ ಸೆಕ್ರೆಟರಿ, ನಿಮಗೆ ಕಮಾಂಡರ್ ರೀಸ್
ವೈಯಕ್ತಿಕವಾಗಿ ಗೊತ್ತು, ಹೌದಾ?

93
00:09:42,457 --> 00:09:44,793
ನಾವು ಹಲವಾರು ಬಾರಿ ಭೇಟಿಯಾಗಿದ್ದೇವೆ, ಹೌದು.

94
00:09:44,876 --> 00:09:47,629
ಅವರಿಗೇನಾದರೂ ಆಗಿರಬಹುದು
ಅಂತ ನಿಮಗೆ ಅನುಮಾನ ಬಂತಾ?

95
00:09:50,215 --> 00:09:52,050
ನೀವು ಸಶಸ್ತ್ರ ಪಡೆಗಳಿಗೆ ಸೇರಿದಾಗ,

96
00:09:52,134 --> 00:09:56,430
ಆಂತರಿಕ ಹಾಗೂ ಬಾಹ್ಯ ಬೆದರಿಕೆಗಳ ವಿರುದ್ಧ
ಸಂವಿಧಾನ ರಕ್ಷಿಸಲು ಪ್ರತಿಜ್ಞೆ ಮಾಡುತ್ತೀರಿ.

97
00:09:56,513 --> 00:10:00,392
ಕಮಾಂಡರ್ ರೀಸ್ ಆ ಪ್ರಮಾಣವನ್ನು
ಪೂರೈಸುತ್ತಿರೋದರ ಬಗ್ಗೆ ನನಗೆ ಅನುಮಾನವಿದೆ.

98
00:10:01,018 --> 00:10:02,269
ಯಾರ ವಿರುದ್ಧ, ಮೇಡಮ್?

99
00:10:05,605 --> 00:10:08,567
ಜೇಮ್ಸ್ ಒಂದು ಲಕ್ಷ್ಯದ ಮೇಲಿದ್ದೇನೆ
ಎಂದು ನಂಬಿದ್ದಾನೆ,

100
00:10:08,650 --> 00:10:10,694
ಅದು ಮುಗಿಯೋವರೆಗೂ ಅವನು ನಿಲ್ಲಲ.

101
00:10:10,777 --> 00:10:15,407
ಅವನನ್ನು ಹಿಡಿಯಲು, ಮುಂದಿನ ಬಲಿಪಶು ಯಾರಂತ
ನಿರ್ಧರಿಸಿ, ಅವನಿಗಿಂತ ಮುಂಚೆಯೇ ಹೋಗಬೇಕು.

102
00:10:15,532 --> 00:10:17,284
ಅಂದರೆ ಅಗ್ರಗಣ್ಯವಾಗಿ,

103
00:10:17,367 --> 00:10:21,371
ಸ್ಟೀವ್ ಹಾರ್ನ್ ಹಾಗೂ ಕ್ಯಾಪ್ಸ್ಟೋನ್
ಇಂಡಸ್ಟ್ರೀಸಿಗೆ ಸಂಬಂಧಿಸಿದವರ ಹುಡುಕುವುದು.

104
00:10:21,455 --> 00:10:24,249
ನಮ್ಮ ಮುಖ್ಯ ಗುರಿ ಸೆರೆಹಿಡಿಯುವುದು.
ಆದರೆ ಮೊದಲ ಆದ್ಯತೆ

105
00:10:24,333 --> 00:10:26,918
ಮುಂದೆ ಪ್ರಾಣಹಾನಿಯಾಗದಂತೆ ತಡೆಯುವುದು.

106
00:10:27,002 --> 00:10:30,964
ಆ ಎರಡು ವಿಷಯಗಳು ವಿರೋಧಾಭಾಸದಲ್ಲಿವೆ
ಅಂದರೆ ನಮ್ಮ ಕತೆ ಅಷ್ಟೇ.

107
00:10:33,008 --> 00:10:34,384
-ಅರ್ಥವಾಯಿತಾ?
-ಹಾಂ, ಸರ್.

108
00:10:35,844 --> 00:10:37,512
ಸರಿ, ನಾವು ಅವನನ್ನು ಹುಡುಕೋಣ.

109
00:10:42,601 --> 00:10:45,395
-ಹೇಗಿದ್ದೀರಾ?
-ತೋಳು ತುಂಬಾ ನೋಯುತ್ತಿದೆ.

110
00:11:02,788 --> 00:11:04,748
ಜೇಮ್ಸ್ ರೀಸ್ ಎಲ್ಲಿದ್ದಾರೆ ಗೊತ್ತಾ?

111
00:11:10,420 --> 00:11:13,298
ಸರಿ, ಇದೇ ವಿಷಯ. ನನಗೆ ಮಾಹಿತಿ ಬೇಕು.

112
00:11:13,382 --> 00:11:14,424
ಮತ್ತೆ ನೋಡು.

113
00:11:14,508 --> 00:11:18,136
ರೀಸ್ ಮೇಲೆ 5,000 ಪದಗಳನ್ನು ಬರೆದು
ನನ್ನ ಕಥೆಯನ್ನು ಪ್ರಕಟಿಸಲು--

114
00:11:18,220 --> 00:11:20,305
ನೀನು ಗಾಜಿನ ಮೇಲೆ ನಡೀತಿದ್ದೀಯ, ಕಣಮ್ಮ.

115
00:11:20,389 --> 00:11:21,890
ನೀವಿಲ್ಲದೆ ನಾನು ಮುಗಿಸಲಾರೆ.

116
00:11:22,432 --> 00:11:24,226
ನಾನು ಇಲ್ಲದೆ ನಿಮಗವನು ಸಿಗಲ್ಲ.

117
00:11:28,313 --> 00:11:31,149
ಏನು ಇದ್ದರೂ ಹೇಳು.
ಏನು ಮಾಡಬಹುದೆಂದು ನಾನು ನೋಡುತ್ತೇನೆ.

118
00:11:32,192 --> 00:11:33,735
ಅದೇ ಒಳ್ಳೆಯದು.

119
00:11:35,737 --> 00:11:38,198
ನಿಮಗೆ ಸ್ಟೀವ್ ಹಾರ್ನ್ ಕಂಪ್ಯೂಟರ್
ಪ್ರವೇಶ ಇದೆ.

120
00:11:38,281 --> 00:11:40,450
"ಕ್ಯಾಪ್ ಟೇಬಲ್" ಹುಡುಕಿ.

121
00:11:40,534 --> 00:11:43,412
ನ್ಯೂಬೆಲ್ಲಂ ಮಾರಿ
ದುಡ್ಡು ಮಾಡಿದವರೆಲ್ಲ ಅದರಲ್ಲಿದ್ದಾರೆ.

122
00:11:43,495 --> 00:11:45,497
ಅವುಗಳಲ್ಲಿ ಹೆಚ್ಚಿನ ಖಾತೆಗಳು ಅಸಲಿಯೇ,

123
00:11:45,580 --> 00:11:50,210
ಆದರೆ ಕೆಲವರು ನೇವಿ ಸೀಲ್ಗಳ ಮೇಲೆ ಆರ್ಡಿ-4895
ಎಂಬ ಮದ್ದನ್ನು ಕಾನೂನುಬಾಹಿರವಾಗಿ

124
00:11:50,293 --> 00:11:53,839
ಪರೀಕ್ಷಿಸುವ ಪಿತೂರಿಯ
ಪಾವತಿಗಳನ್ನು ಪ್ರತಿನಿಧಿಸುವವರಾಗಿದ್ದಾರೆ.

125
00:11:53,922 --> 00:11:56,216
ಇದರಲ್ಲಿ ರೀಸಿಂದ ಎಷ್ಟು ಬರುತ್ತಿದೆ?

126
00:11:56,299 --> 00:11:59,094
ಮೂರು ದಿನ ಕಾಡಿನಲ್ಲಿ
ದೆವ್ವಗಳೊಂದಿಗೆ ಮಾತಾಡ್ತಾ ಕಳೆದ.

127
00:11:59,177 --> 00:12:01,930
ನಿಮ್ಮ ಸ್ನೇಹಿತೆಯನ್ನು ಕೆಸರಿನಿಂದ ಎಳೆಯೋ ಮೊದಲಾ?

128
00:12:02,013 --> 00:12:04,474
ಅವನು ನನ್ನನ್ನು ಕೆಸರುಗದ್ದೆ ಒಳಗೆ ಹಾಕಿದನು.

129
00:12:04,558 --> 00:12:06,768
ಕೇಳಿ, ನಾನು ರೀಸ್ನ ರಕ್ಷಿಸಲು ಬಂದಿಲ್ಲ.

130
00:12:07,352 --> 00:12:09,146
ಅವನನ್ನು ನಿಲ್ಲಿಸಬೇಕೆಂದು ಗೊತ್ತು.

131
00:12:10,230 --> 00:12:12,941
ಆದರೆ ಇತರರಿಗೂ ಶಿಕ್ಷೆಯಾಗಬೇಕು.

132
00:12:27,164 --> 00:12:30,375
ಹಾರ್ನ್ನ ಕಂಪ್ಯೂಟರ್ನಲ್ಲಿ ಸಿಎಆರ್ಟಿ
ಡೀಪ್ ಡೈವ್ ರನ್ ಮಾಡಿ.

133
00:12:30,459 --> 00:12:31,460
ನಿಜವಾಗಲೂ?

134
00:12:33,253 --> 00:12:34,254
ಸರಿ, ಸರ್.

135
00:12:38,800 --> 00:12:41,428
ನಾನು ರಸ್ತೆ ಕೆಳಗಿರೋ
ಲೈಬ್ರರಿಯಲ್ಲಿ ಇರುತ್ತೇನೆ--

136
00:12:41,511 --> 00:12:45,056
ಕೊನೆಯ ಬಾರಿ ನಿನ್ನ ಬಿಟ್ಟಾಗ,
ನೀನು ಸ್ಯಾನ್ ಫ್ರಾನ್ಸಿಸ್ಕೋಗೆ ಓಡಿಹೋದೆ.

137
00:12:46,391 --> 00:12:48,727
ಜ್ಯೂನಿಯರ್, ಅವಳು ಈ ಕೋಣೆಯನ್ನು ಬಿಡಬಾರದು.

138
00:12:54,649 --> 00:12:56,818
ಕ್ಷಮಿಸಿ, ಸರ್. ಅವಳಿಗೆ ಕಾಯಲು ಕೇಳಿದೆ.

139
00:13:03,617 --> 00:13:05,785
ಆರಾಮಿರಿ, ಜೆರಾಲ್ಡ್. ಇದು ನಿಮ್ಮ ಕಛೇರಿ.

140
00:13:07,037 --> 00:13:09,206
ಮೇಡಂ. ನೀವು ಊರಿನಲ್ಲಿರುವುದು ನೋಡಿದೆ.

141
00:13:09,706 --> 00:13:11,958
ನೀವು ಇರ್ತೀರಿ ಎಂದು ನಿರೀಕ್ಷಿಸಿರಲಿಲ್ಲ.

142
00:13:12,709 --> 00:13:14,336
ಇದೊಂದು ಅನಪೇಕ್ಷಿತ ಭೇಟಿ.

143
00:13:18,215 --> 00:13:19,424
ಮತ್ತು ಇದು ಯಾರು?

144
00:13:19,508 --> 00:13:21,426
ಡಿಸಿಐಎಸ್ ಏಜೆಂಟ್ ಆಜಾದ್.

145
00:13:23,595 --> 00:13:26,932
ಈ ಸಂಭಾಷಣೆಗಾಗಿ ಎಲ್ಲವೂ ಪ್ರೋಟೋಕಾಲ್
ಪ್ರಕಾರವಾಗಿರಬೇಕಿತ್ತು ನನಗೆ.

146
00:13:31,102 --> 00:13:34,898
ಆಪರೇಷನ್ ಓಡಿನ್ಸ್ ಸ್ವೋರ್ಡಿಂದ
ಟಿಐಪಿ ತೆಗೆದಿದ್ದೀನಿ.

147
00:13:35,732 --> 00:13:39,653
ಇಡೀ ತುಕಡಿಯನ್ನು ಯಾವ ರೀತಿಯ ಬುದ್ಧಿವಂತಿಕೆ
ಕೊಂದಿತು ಎಂದು ಕುತೂಹಲವಿತ್ತು.

148
00:13:40,654 --> 00:13:42,864
ನನಗೆ ಇಂಟೆಲ್ ಪ್ಯಾಕೇಜಿನ ಪರಿಚಯವಿದೆ.

149
00:13:44,574 --> 00:13:47,285
ಸರಿ, ಆಗ ಇದು ಸಾಕಷ್ಟು ದುರ್ಬಲವಾಗಿದೆ
ಅಂತ ಒಪ್ತೀರ.

150
00:13:48,245 --> 00:13:52,040
ಒಬ್ಬ ಶಸ್ತ್ರಾಸ್ತ್ರ ವ್ಯಾಪಾರಿಯ ಆಗಮನ
ಆಧರಿಸಿದ ಪ್ರಮುಖ ಕಾರ್ಯಾಚರಣೆಯಾ?

151
00:13:52,832 --> 00:13:53,875
ಹೆಚ್ಚೇನು ಇಲ್ಲವಾ?

152
00:13:54,876 --> 00:13:56,461
ಯಾರಾದರೂ ಪರಿಶೀಲಿಸುತ್ತಾರೆಯೇ?

153
00:13:57,587 --> 00:14:00,966
ನನಗೆ ಪೆಂಟಗಾನಿಂದ ಸ್ಥಾಯಿ ಆದೇಶ ಇತ್ತು,

154
00:14:02,634 --> 00:14:05,845
ಯಾವುದೇ ಕ್ರಿಯಾಶೀಲ ಇಂಟೆಲ್ ಬಂದರೆ
ಕಹಾನಿಯ ಮೇಲೆ ದಾಳಿ ಮಾಡೋಕೆ.

155
00:14:06,888 --> 00:14:09,140
ವರದಿ ಎತ್ತಿ ಹಿಡಿದ ಅಧಿಕಾರಿ...

156
00:14:10,559 --> 00:14:11,393
ಯಾರದು?

157
00:14:14,521 --> 00:14:16,565
ಅದು ಲ್ಯಾಂಗ್ಲಿಗೆ ಸಂಬಂಧಿಸಿದ ಪ್ರಶ್ನೆ.

158
00:14:20,902 --> 00:14:21,987
ಥ್ಯಾಂಕ್ ಯೂ.

159
00:14:23,446 --> 00:14:24,281
ಅಷ್ಟೆನಾ?

160
00:14:24,990 --> 00:14:25,824
ಸದ್ಯಕ್ಕೆ.

161
00:14:30,287 --> 00:14:33,498
ಅಡ್ಮಿರಲ್, ನಿಮ್ಮ ಭೇಟಿ ಸಂತೋಷವಾಯಿತು.
ಸಂಪರ್ಕದಲ್ಲಿರುತ್ತೇನೆ.

162
00:14:40,171 --> 00:14:42,132
ಕ್ಯಾಪ್ಟನ್ ಹೋವಾರ್ಡ್ ಕರೆಯಿರಿ. ಈಗಲೇ.

163
00:14:59,190 --> 00:15:03,528
ಒಳಬರುವ ಕರೆ
ವಾರ್ಕಾಮ್

164
00:15:06,573 --> 00:15:09,743
ಅಮ್ಮ, ಕೋಚ್ ಹೇಳಿದರು,
ಗೆದ್ದರೆ ರಾಜ್ಯ ಮಟ್ಟಕ್ಕೆ ಹೋಗಿ

165
00:15:09,826 --> 00:15:12,412
ನಮ್ಮದೇ ಆದ ರೀತಿಯಲ್ಲಿ ಪಾವತಿಸಬೇಕಂತ. ಎಲ್ಲರಂತೆ.

166
00:15:12,495 --> 00:15:15,832
ಅದು ಎಂಥಾ ನ್ಯಾಯ?
ಶಾಲೆಯವರು ನಮಗೆ ಬಸ್ಸು ಕೊಡಬೇಕಲ್ಲವೇ?

167
00:15:15,915 --> 00:15:17,917
-ನಾನು ಮಾತಾಡ್ತೀನಿ.
-ಬೇಗ ಬಂದಿದ್ದೀರಿ.

168
00:15:18,001 --> 00:15:20,420
ಹೇ. ನಾನು…

169
00:15:23,423 --> 00:15:25,383
ಕೇಳಿ ಇಲ್ಲಿ, ನಾವು...

170
00:15:27,052 --> 00:15:28,845
-ಕೀಸ್ಗೆ ಹೋಗ್ತಿದ್ದೇವೆ.
-ಏನು?

171
00:15:28,928 --> 00:15:30,096
ಹೌದು. ಇಂದು ರಾತ್ರಿ.

172
00:15:30,180 --> 00:15:32,015
-ಏನು?
-ನನಗೆ ಟಿಕೆಟ್ ಸಿಕ್ಕಿತು.

173
00:15:33,224 --> 00:15:34,559
ಪ್ಯಾಕ್ ಮಾಡಬೇಕಾಗಿದೆ.

174
00:15:35,602 --> 00:15:37,228
ನನಗೆ ಸಾಧ್ಯವಿಲ್ಲ. ಸಾಕರ್ ಇದೆ.

175
00:15:37,312 --> 00:15:39,606
ಸಾಕರ್ ಇಲ್ಲ. ನಿಮ್ಮ ವಸ್ತುಗಳನ್ನು ತಗೊಳ್ಳಿ.

176
00:15:40,106 --> 00:15:41,066
ಏನಾಯ್ತ?

177
00:15:41,149 --> 00:15:41,983
ಇಲ್ಲ.

178
00:15:43,610 --> 00:15:47,405
ಇಲ್ಲ. ವಿಷಯಗಳು ಇತ್ಯರ್ಥವಾಗುವವರೆಗೆ
ಇದನ್ನು ರಜೆ ಎಂದು ಭಾವಿಸಿ.

179
00:15:48,114 --> 00:15:50,283
-ಏನು ಇತ್ಯರ್ಥ ಆಗೋವರೆಗೂ?
-ಕೇಳು,

180
00:15:50,367 --> 00:15:51,785
ಇದು ಮಜಾ ಇರುತ್ತೆ, ಓಕೆ?

181
00:15:51,868 --> 00:15:54,871
-ಇದು ಏನೇ ಇರಲಿ, ಇದು ತಮಾಷೆ ಅಲ್ಲ.
-ನನ್ನ ಮಾತು ಕೇಳು!

182
00:15:57,499 --> 00:16:01,127
ನೀವಿಬ್ಬರೂ ನಿಮ್ಮ ಬ್ಯಾಗ್
ಪ್ಯಾಕ್ ಮಾಡ್ಕೊಳ್ಳಿ. ಆಯ್ತಾ?

183
00:16:01,670 --> 00:16:04,881
-ಬನ್ನಿ. ಹೋಗೋಣ!
-ಅರ್ಥವಾಗಿಲ್ಲ. ಕೀಸ್ನ ದ್ವೇಷಿಸುತ್ತೀರಿ.

184
00:16:26,486 --> 00:16:30,031
ಹೇ. ನಾವು ಹೊರಡಬೇಕು.
ಹೋವಾರ್ಡ್ ಕೀ ವೆಸ್ಟ್ಗೆಟಿಕೆಟ್ಗಳ ಖರೀದಿಸಿದ.

185
00:16:33,493 --> 00:16:35,078
-ಯಾವಾಗ?
-ಇಂದು ರಾತ್ರಿ.

186
00:16:35,829 --> 00:16:36,913
ಓಡು, ಮೊಲವೇ, ಓಡು.

187
00:16:38,581 --> 00:16:39,582
ರೆಡಿ ಇರ್ತೀವಿ.

188
00:16:53,138 --> 00:16:55,598
ಕೇಳು, ಬ್ರದರ್. ನಾನು ಯೋಚಿಸುತ್ತಿದ್ದೆ...

189
00:16:57,642 --> 00:16:58,977
ಇದು ಹೇಗೇ ಆದರೂ,

190
00:17:00,395 --> 00:17:03,690
ಫೆಡ್ಗಳು ತನಿಖೆ ನಡೆಸ್ತಾ ಇರ್ತಾರೆ.
ನಡೆಸ್ತಾನೇ ಇರ್ತಾರೆ.

191
00:17:05,817 --> 00:17:09,237
ನಿನ್ನ ಏಜೆನ್ಸಿ ಕವರ್ನೊಂದಿಗೆ ಸಹ
ಏನನ್ನಾದರೂ ಕಂಡುಕೊಳ್ಳುತ್ತಾರೆ.

192
00:17:10,196 --> 00:17:11,114
ಉಪಾಯ ಇದೆಯಾ?

193
00:17:12,198 --> 00:17:13,032
ಹೌದು.

194
00:17:18,246 --> 00:17:19,748
ಮಂಕೋರಾ ಬಗ್ಗೆ ಕೇಳಿದ್ದೀಯಾ?

195
00:17:21,374 --> 00:17:23,626
ಪೆರುವಿನ ಕರಾವಳಿಯ ಪುಟ್ಟ ಸರ್ಫ್ ಪಟ್ಟಣ.

196
00:17:25,086 --> 00:17:27,088
ದೊಡ್ಡ, ದೊಡ್ಡ ಅಲೆಗಳಿಂದ ತುಂಬಿರುತ್ತೆ.

197
00:17:28,757 --> 00:17:32,677
ಬಿಸಿನೀರಿನ ಬುಗ್ಗೆ, ಮಣ್ಣಿನ ಸ್ನಾನ,
ಅಯಾಹುವಾಸ್ಕಾ, ಆಸ್ಟ್ರೇಲಿಯಾದ ಹುಡುಗೀರು.

198
00:17:34,387 --> 00:17:35,930
ನಿವೃತ್ತಿಗೆ ಕೆಟ್ಟ ಸ್ಥಳವಲ್ಲ.

199
00:17:39,559 --> 00:17:40,560
ನನ್ನನ್ನು ಕ್ಷಮಿಸು.

200
00:17:41,227 --> 00:17:42,270
ಯಾವುದಕ್ಕಾಗಿ?

201
00:17:44,272 --> 00:17:46,232
ನಿನ್ನ ಇದಕ್ಕೆ ಎಳೆದಿದ್ದಕ್ಕಾಗಿ.

202
00:17:47,317 --> 00:17:49,694
ಅವರು ನನ್ನನ್ನು ಇದಕ್ಕೆ ಕರೆತಂದರು, ಬ್ರದರ್.

203
00:17:51,654 --> 00:17:54,157
ನೀನಲ್ಲ. ನೆನಪಿರಲಿ.

204
00:17:55,158 --> 00:17:56,159
ಹೌದು.

205
00:18:29,692 --> 00:18:31,319
ನೀನಿದನ್ನು ಮಾಡಲೇಬೇಕಾ?

206
00:18:58,221 --> 00:18:59,681
-ಏಜೆಂಟ್ ಲಯೂನ್--
-ಅಲ್ಲೇ.

207
00:19:01,891 --> 00:19:03,393
ಕಂಪ್ಯೂಟರ್ಸ್ ಹುಡುಕಿದೆವು.

208
00:19:03,476 --> 00:19:08,064
ಪಿಲ್ಲರ್ ಆರ್ಡಿ-4895 ಔಷಧಿಯನ್ನ ಉಲ್ಲೇಖಿಸುವ
ಹಲವಾರು ಪತ್ರವ್ಯವಹಾರಗಳನ್ನು ಕಂಡುಕೊಂಡೆವು,

209
00:19:08,147 --> 00:19:10,149
ರೀಸ್ ತುಕಡಿಯ ವೈದ್ಯಕೀಯ ವರದಿ ಸಹ.

210
00:19:11,067 --> 00:19:13,278
ಟ್ಯುೂಮರ್ ಬಗ್ಗೆ ಪಿಲ್ಲರ್ಗೆ ಗೊತ್ತಿತ್ತು.

211
00:19:13,361 --> 00:19:16,948
ಅಷ್ಟೇ ಅಲ್ಲ, ಸರ್. ಪ್ರಯೋಗದಲ್ಲಿ ಅವರ ಪಾಲಿನ
ಹಣ ಸಹ ಪಡೆದರು.

212
00:19:17,031 --> 00:19:18,700
ಫಿನ್ಸೆನ್ ಟೇಬಲ್ ಬಿಡಿಸಿದೆ.

213
00:19:18,783 --> 00:19:21,411
ಗ್ಲೋಬಲ್ ಸಿಸ್ಟಮ್ಸ್ ಪ್ಲಸ್,
ಜೆರಾಲ್ಡ್ ಪಿಲ್ಲರ್.

214
00:19:21,494 --> 00:19:24,122
ಎಸ್ಎಕ್ಸ್ಎ ಕನ್ಸಲ್ಟಿಂಗ್,
ಲಿಯೊನಾರ್ಡ್ ಹೋವಾರ್ಡ್.

215
00:19:24,914 --> 00:19:26,958
ಅಲ್ಲಿರುವವನು ಬಿಲ್ ಕಾಕ್ಸ್.

216
00:19:27,041 --> 00:19:30,712
ಸೌಲ್ ಆಗ್ನನ್ ಮತ್ತು ಮಾರ್ಕಸ್ ಬೋಯ್ಕಿನ್ಗೆ
ಬೇರೆ ಕಂಪನಿಗಳಿವೆ.

217
00:19:30,795 --> 00:19:33,423
ಜೊತೆಗೆ ಇನ್ನೊಂದು, ಒಬೆರಾನ್ ಅನಲಿಟಿಕ್ಸ್.

218
00:19:33,506 --> 00:19:35,425
-ಅದು ಯಾರು?
-ಗೊತ್ತಿಲ್ಲ.

219
00:19:36,175 --> 00:19:38,761
ಬಹುಶಃ ವಾರ್ಕಾಮ್ ಕಮ್ಯಾಂಡ್
ಅವರಿಗೆ ಗೊತ್ತಿರಬಹುದು.

220
00:19:39,387 --> 00:19:40,930
ಎನ್ಸಿಐಎಸ್ಗೆ ವರ್ಗಾಯಿಸಬೇಕು--

221
00:19:41,014 --> 00:19:43,975
ಎನ್ಸಿಐಎಸ್ ಏಜೆಂಟ್ ಜೋಶ್,
ಹಾರ್ನ್ಗೆ ಕೆಲಸ ಮಾಡ್ತಿದ್ದ.

222
00:19:44,058 --> 00:19:47,103
ನಮ್ಮ ಬೇಸಿನ ಸಂಪರ್ಕದ ಮೂಲಕ
ನಾವು ನೇರವಾಗಿ ಹೋಗಬೇಕಾಗಿದೆ.

223
00:19:47,186 --> 00:19:49,898
ಇವರು ಉನ್ನತ ಅಧಿಕಾರಿಗಳು.
ಒಂದು ಪ್ರಕ್ರಿಯೆ ಇದೆ.

224
00:19:49,981 --> 00:19:51,733
ಜೇಮ್ಸ್ ರೀಸ್ ಇಲ್ಲಿದ್ದಾನೆ.

225
00:19:52,483 --> 00:19:55,528
ಈಗ ಕೊರೊನಾಡೋನಲ್ಲಿದ್ದಾನೆ.
ಅವನ ಪಟ್ಟಿಯನ್ನು ಹೊಂದಿದ್ದೇವೆ.

226
00:20:00,909 --> 00:20:02,035
ಒಪ್ಪಿಗೆಯಾ?

227
00:20:03,578 --> 00:20:06,497
ಡೆಪ್, ನೀನು ರೀಸ್ ಮನೆಗೆ ಹೋಗು.
ಅನುಮಾನ ಬಂದರೆ ತಿಳಿಸು.

228
00:20:06,581 --> 00:20:08,416
-ಏನಾಯ್ತು?
-ನೀನು ಹೋವಾರ್ಡ್ ಹಿಂದೆ.

229
00:20:08,499 --> 00:20:12,295
ಬರನೆಕ್ನ ಯಾರಾದ್ರೂ ನೋಡ್ಕೊಳಿ.
ಮ್ಯಾಕ್, ನಿನಗೆ ಕಾಕ್ಸ್. ಪೊಲೀಸರಿಗೆ ಹೇಳು.

230
00:20:12,378 --> 00:20:14,088
ನಿಮಗೆ ಮಾಹಿತಿ ಕೊಟ್ಟಿದ್ದು ನಾನು.

231
00:20:14,172 --> 00:20:17,634
ಕುಳಿತುಕೊ! ಅದೃಷ್ಟ ಇದ್ದರೆ
ಇದು ಹೇಗೆ ಕೊನೆಯಾಗುತ್ತೋ ನೋಡ್ತೀಯ.

232
00:20:23,222 --> 00:20:25,183
ಏನು ಮಾಡಿದ್ದೀರಿ ಎಂದು ಹೇಳುತ್ತೀರಾ?

233
00:20:25,266 --> 00:20:27,477
ನಾನು ಏನನ್ನೂ ಮಾಡಲಿಲ್ಲ, ಪ್ರತಿಯಾಗಿ.

234
00:20:27,560 --> 00:20:29,020
ಯಾಕೆ ಓಡುತ್ತಿದ್ದೀರಿ?

235
00:20:30,146 --> 00:20:33,107
ಅಡ್ಮಿರಲ್ ಯಾವುದರಲ್ಲೋ
ತೊಡಗಿಸಿಕೊಂಡಿದ್ದಾರೆ. ಏನೋ...

236
00:20:33,775 --> 00:20:37,278
ಏನೋ ಕೆಟ್ಟದ್ದು.
ಅದನ್ನ ಮುಚ್ಚಿಹಾಕೋಕೆ ನನಗೆ ಹೇಳಿದರು. ನಾನು--

237
00:20:39,280 --> 00:20:43,534
ನೋಡು, ಆಗ ನನಗೂ ಬೇಜಾರಾಯ್ತು,
ಜೆರಾಲ್ಡ್ ನನಗೆ ಒಳ್ಳೆಯವರಾಗಿದ್ದರು. ನಮಗೆ.

238
00:20:44,786 --> 00:20:47,413
ನಮ್ಮನ್ನ ಬೆಂಬಲಿಸಿ,
ನನಗೆ ಪ್ರಮೋಷನ್ ಕೊಡಿಸಿದರು--

239
00:20:47,497 --> 00:20:48,665
ಅವರಿಗೆ ತಿಳಿದಿದೆಯೇ?

240
00:20:48,748 --> 00:20:52,627
ಅದರ ಬಗ್ಗೆ ಅಲ್ಲ, ಆನ್.
ಇದು ಮುಂದೆ ಒಳ್ಳೇದಾಗುತ್ತೆ, ಈಗಲ್ಲ..

241
00:20:53,211 --> 00:20:54,796
-ಕೀಸಲ್ಲಾ?
-ಅಪ್ಪ!

242
00:20:54,879 --> 00:20:57,006
ನಾನು ಬರುತ್ತೇನೆ ಎಂದು ಡ್ರೈವರ್ಗೆ ಹೇಳು.

243
00:20:59,509 --> 00:21:00,885
ದಯವಿಟ್ಟು, ಆನ್, ಪ್ಲೀಸ್--

244
00:21:00,969 --> 00:21:03,221
ಅಪ್ಪಾ, ಟ್ಯಾಕ್ಸಿ ಅಲ್ಲ. ಎಫ್ಬಿಐ.

245
00:21:08,101 --> 00:21:11,145
ಪರವಾಗಿಲ್ಲ. ನಾನು ಅದನ್ನು ನಿಭಾಯಿಸುತ್ತೇನೆ.

246
00:21:11,229 --> 00:21:13,106
ಕ್ಷಮಿಸಿ. ನಾನು ಬರುತ್ತಿದ್ದೇನೆ.

247
00:21:17,735 --> 00:21:21,447
ಕೆಲವು ವಸ್ತುಗಳನ್ನ ಜೋಡಿಸ್ತಿದ್ದೀವಿ.
ಏನಾಗಬೇಕಿತ್ತು, ಏಜೆಂಟ್?

248
00:21:25,243 --> 00:21:26,995
ಎಲ್ಲಿಗೆ, ಕ್ಯಾಪ್ಟನ್?

249
00:21:41,759 --> 00:21:45,680
ಕೊರೊನಾಡೋ ಸೇವಾ ರಸ್ತೆಗಳಲ್ಲಿ
ಕಾಲು ಮೈಲಿವರೆಗೆ ಮಿಲಿಟರಿ ಬೆಂಗಾವಲಾ?

250
00:21:45,763 --> 00:21:49,934
ಏನಂದ್ರೆ, ಸರ್, ನೀವು ಬೇಸ್ ಒಳಗೆ ಬಂದಿದ್ದೇ,
ಕೊರೊನಾಡೋ ಬಿಟ್ಟಿರಿ.

251
00:22:09,954 --> 00:22:11,706
ಎಂಥಾ ದಿನವಪ್ಪಾ ಇದು.

252
00:22:11,789 --> 00:22:13,458
ಒಬ್ಬ ಹುಚ್ಚ ಸೀಲ್ ತಪ್ಪಿಸಿಕೊಂಡ,

253
00:22:13,541 --> 00:22:17,795
ಆದರೆ ಅವನಿಲ್ಲದಿರೋ ಬಾಗಿಲನ್ನೇ
ಎಫ್ಬಿಐ ಬಡಿಯುತ್ತಿದೆ.

254
00:22:17,879 --> 00:22:19,839
ನಾವು ವಾರಂಟ್ ಇರೋ ಫೆಡರಲ್ ಏಜೆಂಟ್ಸ್--

255
00:22:19,922 --> 00:22:21,382
ಅದನ್ನು ತೆಗೆಯಿರಿ.

256
00:22:21,466 --> 00:22:25,928
ಯಾವುದೋ ಪೇಪರ್ ಮೇಲೆ ರಬ್ಬರ್ ಸ್ಟ್ಯಾಂಪ್
ಮಾಡ್ಕೊಂಡು ತಂದರೆ ನಾನು ಭಯಪಡಬೇಕಾ?

257
00:22:26,012 --> 00:22:29,057
ನಾನು ಹೇಳದೇ ನನ್ನ ಕಛೇರಿಗೆ ಯಾರೂ ಬರಲ್ಲ.

258
00:22:32,477 --> 00:22:35,897
ಆದರೆ ಪರವಾಗಿಲ್ಲ, ಏಜೆಂಟ್.
ಏಕೆಂದರೆ ಮರೆಮಾಡಲು ನನಗೆ ಏನೂ ಇಲ್ಲ.

259
00:22:38,191 --> 00:22:41,319
ಅವರನ್ನು ಒಳಗೆ ಬಿಡಿ. ಅವರು ಫೆಡರಲ್ ಏಜೆಂಟರಲ್ವಾ?

260
00:22:42,737 --> 00:22:43,905
ಹೋಗಿ. ಹೋಗಿ.

261
00:22:50,078 --> 00:22:51,621
ಏನು ಬೇಕೋ ತಗೊಳ್ಳಿ, ಏಜೆಂಟ್.

262
00:22:52,830 --> 00:22:54,207
ಯಾಕೆ ಬಂದಿದ್ದೀರಾ ಗೊತ್ತು.

263
00:22:54,791 --> 00:22:58,669
ನಿಮ್ಮ ಯಾವುದೇ ಪ್ರಶ್ನೆಗಳಿಗೆ
ಉತ್ತರ ಸಿಗಬಹುದಂತ ಅಂದ್ಕೋತೀನಿ.

264
00:23:00,880 --> 00:23:05,009
ನೀವು ತಪ್ಪು ಹೆಜ್ಜೆ ಇಟ್ಟಿದ್ದೀರಿ
ಅಂತ ಗೊತ್ತಾದಾಗ

265
00:23:05,718 --> 00:23:09,055
ನಿಮ್ಮನ್ನ ಕಳಿಸಿದ ಆ ನಾಯಿಗೆ
ಹಾಳಾಗಿ ಹೋಗಕ್ಕೆ ಹೇಳಿ.

266
00:23:19,357 --> 00:23:20,441
ಏನಾಗ್ತಿದೆ, ಮ್ಯಾಕ್?

267
00:23:20,942 --> 00:23:22,276
ಹೊವಾರ್ಡ್ಸ್ ಕಾಣ್ತಿಲ್ಲ.

268
00:23:22,360 --> 00:23:25,905
ಬ್ಯಾಗ್ ಪ್ಯಾಕ್ ಆಗಿದೆ, ಮಯಾಮಿಗೆ ಟಿಕೆಟ್,
ಫ್ಲೈಟ್ ಮಿಸ್ ಮಾಡಿದ್ದಾರೆ.

269
00:23:25,988 --> 00:23:29,075
ಕಾಕ್ಸ್ ಕಾಣ್ತಿಲ್ಲ.
ವೇಗವಾಗಿ ಟ್ರ್ಯಾಕ್ ಮಾಡುತ್ತಿದ್ದೇವೆ.

270
00:23:46,592 --> 00:23:48,636
ಆರಾಮಾಗಿದ್ದೀಯಾ, ಬಿಲ್?

271
00:24:01,399 --> 00:24:03,359
ಜೇಮ್ಸ್ ರೀಸ್ ಇನ್ನೂ ಪತ್ತೆಯಾಗಿಲ್ಲ

272
00:24:07,780 --> 00:24:11,742
ಹೇ. ಅದು ನಿನ್ನ ತಪ್ಪಲ್ಲ.
ಯಾರೂ ಅದನ್ನ ಊಹಿಸಿಲ್ಲ.

273
00:24:24,130 --> 00:24:25,089
ಚಿಲ್ಲರೆ ಇಟ್ಕೋ.

274
00:24:55,661 --> 00:24:57,455
ಸರಿ, ಇದು ಹೇಗೆ ಆಗುತ್ತದೆ?

275
00:26:23,291 --> 00:26:25,001
ಓಲ್ಡ್ ಮಿಸೆರಿ ನೆನಪಿದೆಯಾ?

276
00:26:25,084 --> 00:26:26,043
ಹಾಂ?

277
00:26:26,127 --> 00:26:29,839
ಅದರಂತೆಯೇ ಒಂದು ಕಂಡುಕೊಂಡೆ,
400 ಪೌಂಡ್ಗಳ "ಸಾಯಿ, ಮಗನೇ" ಅಂತ.

278
00:26:29,922 --> 00:26:35,177
ಇದನ್ನ ಗೇಟರ್ ಬೀಚಲ್ಲಿ ಎಳೆಯುತ್ತಿದ್ದೆವು,
ಸೋಲುವವರು ಅಂತ ಕರೆಸಿಕೊಂಡು. ನೆನಪಿದೆ.

279
00:26:36,095 --> 00:26:38,264
-ತೋಳು ಮುರಿದಿದೆ.
-ಹೌದಾ?

280
00:26:39,682 --> 00:26:41,058
ನೋಯುತ್ತಿದೆಯೇನೋ?

281
00:26:42,977 --> 00:26:44,478
ನಿನಗೆ ಏನು ಬೇಕು, ರೀಸ್?

282
00:26:46,439 --> 00:26:47,815
ಯಾರ್ಯಾರಿಗೆ ಗೊತ್ತು ಹೇಳು.

283
00:26:56,991 --> 00:26:58,576
ಪಿಲ್ಲರ್ ಚಾಲನೆ ನೀಡಿದರು.

284
00:27:00,077 --> 00:27:03,539
ಇದನ್ನ ನಿಭಾಯಿಸೋಕೆ ಹೋವಾರ್ಡ್
ಎಲ್ಲಾ ವಿವರಗಳನ್ನು ಖಚಿತಪಡಿಸಿಕೊಂಡರು.

285
00:27:03,622 --> 00:27:05,750
ಸಾಗಾಣಿಕೆ? ವೈದ್ಯ ಸಿಬ್ಬಂದಿ?

286
00:27:06,876 --> 00:27:09,211
ಜನರು ಕೇವಲ ಆದೇಶಗಳನ್ನು ಅನುಸರಿಸುತ್ತಿದ್ದರು.

287
00:27:10,421 --> 00:27:13,049
ಬಿ-12 ಮದ್ದು
ಕೊಡುತ್ತಿದ್ದಾರೆ ಅಂದುಕೊಂಡಿದ್ರು.

288
00:27:13,674 --> 00:27:16,677
ಪ್ರಯೋಗದ ಬಗ್ಗೆ ನಮಗಷ್ಟೇ ಗೊತ್ತಿತ್ತು.

289
00:27:19,972 --> 00:27:23,392
ನಾವು ನಿವೃತ್ತರಾದಾಗ ಅವರು ಏನು
ನೀಡುತ್ತಾರೆಂದು ನಿನಗೆ ತಿಳಿದಿದೆ.

290
00:27:25,227 --> 00:27:26,729
ನಿಮ್ಮ ಜೀವನ ಕೊಡುತ್ತೀರಿ,

291
00:27:28,314 --> 00:27:30,441
ಪಿಂಚಣಿ ಮತ್ತು ಪ್ಯಾಡಲ್ ಪಡೆಯುತ್ತೀರಿ.

292
00:27:31,567 --> 00:27:33,819
"ನಿಮ್ಮ ಸೇವೆಗೆ ಧನ್ಯವಾದಗಳು."

293
00:27:39,325 --> 00:27:41,285
ನೀನು ಸಹೋದರತ್ವದ ಭಾಗವಾಗಿದ್ದೆ.

294
00:27:41,827 --> 00:27:43,579
ಅದೇ ನಿನಗೆ ಸಿಕ್ಕಿದ್ದು.

295
00:27:45,539 --> 00:27:47,666
ನಮ್ಮ ಸಹೋದರರನ್ನು ಸಾಯಲು ವಿದೇಶಿ ಭೂಮಿಯ

296
00:27:48,417 --> 00:27:53,130
ಹೇಲು ತುಂಬಿದ
ದರಿದ್ರ ಸುರಂಗಗಳಲ್ಲಿ ಕಳುಹಿಸಿದ್ದೀರಿ.

297
00:27:55,591 --> 00:27:58,427
ಹೇಳಿ, ಅದು ಏನು?
ನೀವೇ ಅದನ್ನು ಮಾಡಲು ಸಾಧ್ಯವಿಲ್ಲವೇ?

298
00:28:02,640 --> 00:28:03,641
ಹೇ.

299
00:28:04,642 --> 00:28:07,520
ಬಡ್ಸ್ನಲ್ಲಿ ನಾವೇ ತೂಕ ಹೊರಬೇಕಾಗಿರಲಿಲ್ಲ.

300
00:28:07,603 --> 00:28:10,606
ನಮ್ಮ ಎಡಕ್ಕೆ, ಬಲಕ್ಕೆ ಯಾವಾಗಲೂ ಗೆಳೆಯರಿದ್ದರು.

301
00:28:11,899 --> 00:28:14,402
ತಂಡದ ಅಗತ್ಯವಿದ್ದಾಗ ಅವರನ್ನ ಕರೆಸಿಕೊಳ್ತೀವಿ.

302
00:28:16,612 --> 00:28:18,114
ನಿಮ್ಮ ತಂಡ ಎಲ್ಲಿದೆ, ಬಿಲ್?

303
00:28:25,329 --> 00:28:26,622
ತೂಕ ನಿಮ್ಮ ಹತ್ತಿರ ಇದೆ.

304
00:29:36,609 --> 00:29:39,028
ದೇವರೇ, ರೀಸ್. ನೀನು ಏನು ಮಾಡಿದೆ?

305
00:29:39,862 --> 00:29:41,739
-ಸರಿ, ಕ್ಯಾಪ್ಟನ್.
-ದಯವಿಟ್ಟು.

306
00:29:43,824 --> 00:29:45,409
ನನಗಾ ಉಪಕಾರ ಮಾಡೋಕೆ ರೆಡಿನಾ?

307
00:29:45,493 --> 00:29:48,037
ದಯವಿಟ್ಟು. ಈಗಷ್ಟೇ ಕಾಗದ ಚಲಾಯಿಸಿದೆ, ರೀಸ್.

308
00:29:50,122 --> 00:29:53,000
ನಿನಗೆ ನಾನು ಗೊತ್ತು.
ಜೇಮ್ಸ್, ನಿನಗೆ ಗೊತ್ತು. ನಾ--

309
00:29:53,876 --> 00:29:57,129
ನಾನು ರೆಡ್ ಟೇಪ್ ನಿರ್ವಹಿಸುತ್ತೇನೆ.
ದಯವಿಟ್ಟು, ರೀಸ್.

310
00:29:58,672 --> 00:29:59,673
ಜೇಮ್ಸ್.

311
00:30:00,508 --> 00:30:01,550
ನನಗೆ ಕುಟುಂಬವಿದೆ.

312
00:30:02,676 --> 00:30:03,719
ನನಗೂ ಇತ್ತು.

313
00:30:05,221 --> 00:30:06,472
ರಾಮಿರೆಜ್ಗೂ ಇತ್ತು.

314
00:30:07,348 --> 00:30:09,558
-ಕಾರ್ಟೀಸ್ ಕುಟುಂಬವನ್ನು ಹೊಂದಿದ್ದ.
-ಇಲ್ಲ.

315
00:30:09,642 --> 00:30:14,897
ನಿನ್ ಗಂಡ ನನ್ನ ತುಕಡಿಗೆ ಮಾಡಿದ ಕೆಲಸದಿಂದ
ಡಾನಿ ಮಿಚೆಲ್ಗೆ ಅವನ ಮಗು ನೋಡೋ ಯೋಗ ಇಲ್ಲ.

316
00:30:14,980 --> 00:30:17,900
ಆ ನೆಪ ಹೇಳೋ ಕಾಲ ಮಿಂಚಿಹೋಗಿದೆ,
ಕ್ಯಾಪ್ಟನ್ ಹೋವಾರ್ಡ್.

317
00:30:17,983 --> 00:30:21,904
ಈಗ, ನಾನು ನಿನಗೆ ಹೇಳಿದ್ದ ಕೆಲಸ ಮಾಡ್ತೀಯಾ?

318
00:30:24,198 --> 00:30:25,783
ಅದು ಆಗಲ್ಲ, ರೀಸ್. ನಾ--

319
00:30:29,745 --> 00:30:30,579
ಸರಿ.

320
00:30:31,163 --> 00:30:32,748
-ಕ್ಷಮಿಸು.
-ಅರ್ಥವಾಯ್ತು.

321
00:30:33,958 --> 00:30:34,959
ಧನ್ಯವಾದಗಳು.

322
00:30:35,668 --> 00:30:39,213
ನನ್ನ ಮಗುವಿನ ಸಾವಿಗೆ ಸಹಾಯ ಮಾಡಿದ್ದೀರಿ,
ಈಗ ನಿಮ್ಮದಕ್ಕೆ ಮಾಡ್ತೀನಿ.

323
00:30:39,296 --> 00:30:40,923
ಇಲ್ಲ ರೀಸ್. ದೇವರೇ, ಬೇಡ ರೀಸ್.

324
00:30:41,006 --> 00:30:42,633
-ಏನ್ಮಾಡ್ತಿದ್ಯಾ?
-ಇಲ್ಲ! ಬೇಡ!

325
00:30:42,716 --> 00:30:45,344
-ಅವನನ್ನು ಹಿಡಿದುಕೋ! ಬೇಡ, ರೀಸ್!
-ಬೇಡ!

326
00:30:45,427 --> 00:30:47,596
-ನಿಲ್ಲಿಸು, ದೇವರೇ!
-ಬೇಡ!

327
00:30:48,264 --> 00:30:49,265
ದಯವಿಟ್ಟು.

328
00:30:53,227 --> 00:30:55,104
ದಯವಿಟ್ಟು. ದಯವಿಟ್ಟು ನಿಲ್ಲಿಸಿ.

329
00:30:55,646 --> 00:30:56,814
-ರೀಸ್.
-ಎದ್ದೇಳು.

330
00:30:57,314 --> 00:30:58,983
ಬಾ, ಎದ್ದೇಳು.

331
00:30:59,066 --> 00:31:01,485
ನನ್ನ ಮಾತು ಕೇಳು, ದಯವಿಟ್ಟು ಮಾತು ಕೇಳು. ಸರಿ.

332
00:31:02,778 --> 00:31:04,321
ನಿನಗೆ ಒಂದು ಅವಕಾಶವಿದೆ.

333
00:31:04,405 --> 00:31:06,824
ಈಗಲೇ, ನಿನಗೊಂದು ಅವಕಾಶ ನೀಡುತ್ತಿದ್ದೇನೆ.

334
00:31:06,907 --> 00:31:08,909
ಜೀವನದಲ್ಲಿ ಒಂದು ಸಲ ಒಳ್ಳೆಯದು ಮಾಡೋಕೆ.

335
00:31:10,035 --> 00:31:14,164
ನಿನ್ನ ಹೆಂಡತಿ ಮತ್ತು ಮಗ ಪೆಸಿಫಿಕ್ನಲ್ಲಿ
ಮುಳುಗದಂತೆ ರಕ್ಷಿಸು. ಮಾಡಬಹುದು. ಆಯ್ತಾ?

336
00:31:14,248 --> 00:31:15,249
ಸರಿ.

337
00:31:15,332 --> 00:31:16,584
ನೀನು ಇದನ್ನು ಮಾಡಬಹುದು.

338
00:31:22,798 --> 00:31:23,882
ಮಾಡ್ತೀಯಾ?

339
00:31:28,554 --> 00:31:31,098
ಹೌದು. ನಾನು ಮಾಡುತ್ತೇನೆ.

340
00:31:31,181 --> 00:31:32,391
ಒಳ್ಳೆಯ ವ್ಯಕ್ತಿ.

341
00:31:33,183 --> 00:31:34,226
ದೇವರೇ, ಕಾಪಾಡು.

342
00:31:39,273 --> 00:31:40,608
ಹೋವಾರ್ಡ್ನ ಶುದ್ಧಗೊಳಿಸು.

343
00:31:42,568 --> 00:31:44,528
ಮುಗಿಯುವವರೆಗೆ ಇವರನ್ನ ಹೋಗಲು ಬಿಡಬೇಡ.

344
00:31:45,946 --> 00:31:48,073
ಇರು, ನೀನೆಲ್ಲಿ ಹೋಗ್ತಿದ್ದೀಯ?

345
00:31:49,074 --> 00:31:50,075
ಮನೆಗೆ.

346
00:31:51,243 --> 00:31:52,745
"ಮನೆಗೆ" ಎಂದರೆ?

347
00:31:54,830 --> 00:31:55,998
ಅವರನ್ನ ನೋಡಬೇಕು.

348
00:32:36,664 --> 00:32:38,082
ನಿನಗೆ ಏನು ಬೇಕು, ರೀಸ್?

349
00:32:43,462 --> 00:32:47,216
ನಿನಗೆ ನೋವಾಗಬೇಕೆಂದು ನನ್ನ ಉದ್ದೇಶವಲ್ಲ.
ಅದು ಉದ್ದೇಶವಾಗಿರಲಿಲ್ಲ.

350
00:32:49,426 --> 00:32:53,055
ನಿನಗೇನಾದ್ರೂ ಬೇಕಾದ್ರೆ ಮಾತ್ರ ಮಾಡ್ತೀಯ
ಅನ್ನೋ ಭಾವನೆ ನನಗೆ ಬರ್ತಿಲ್ಲ.

351
00:32:54,932 --> 00:32:58,060
ಯುದ್ಧದ ಕೆಲವು ಸಂಗತಿಗಳು ಅಷ್ಟೇನೂ ಒಳ್ಳೆಯವಲ್ಲ.

352
00:32:58,727 --> 00:33:02,690
ಹೌದು, ಆದರೆ ನೀನು ಯುದ್ಧದಲ್ಲಿಲ್ಲ.
ಮನೆಯಲ್ಲಿದ್ದೀಯ. ಅದಕ್ಕೆ ವ್ಯತ್ಯಾಸವಿದೆ.

353
00:33:04,024 --> 00:33:05,025
ಇನ್ನು ಮುಂದೆ ಇಲ್ಲ.

354
00:33:39,309 --> 00:33:42,521
ಧನ್ಯವಾದಗಳು, ಲೆಫ್ಟಿನೆಂಟ್,
ಏನಾದರೂ ಇದ್ದರೆ ತಿಳಿಸುತ್ತೇವೆ.

355
00:33:43,313 --> 00:33:47,276
ಕೊರೊನಾಡೋ ಪಿಡಿ ಎಸ್ಡಿ ಜೊತೆ
ಹೆಚ್ಚಿನ ಘಟಕ ಪಡೆಯಲು ಯತ್ನಿಸ್ತಿದ್ದಾರೆ.

356
00:33:48,110 --> 00:33:49,528
ಅಡ್ಮಿರಲ್ ಬಗ್ಗೆ ಏನಾದರೂ?

357
00:33:49,611 --> 00:33:54,158
ಶಿಪ್ಪಿಂಗ್ ಲಾಗ್ಸ್, ಪರೀಕ್ಷಾ ಫಲಿತಾಂಶಗಳು
ನಾರ್ಮಲ್ ಇವೆ. ಕಾಪಿಗಳನ್ನ ಕೂಡ ಮಾಡಿದ್ದ.

358
00:33:55,033 --> 00:33:59,705
ಸೀಲ್ಗಳ ಮೇಲೆ ಔಷಧಿ ರಹಸ್ಯ ಪರೀಕ್ಷೆ ಮಾಡಿದರ
ಸಾಕ್ಷಿಯನ್ನ ಪಿಲ್ಲರ್ ಯಾಕೆ ಹಸ್ತಾಂತರಿಸುತ್ತಾನೆ?

359
00:34:02,833 --> 00:34:04,084
ಇದೇನು ದರಿದ್ರ ಇದು?

360
00:34:10,257 --> 00:34:11,717
ಸ್ವಲ್ಪ ಮಾತಾಡಬೇಕು.

361
00:34:13,177 --> 00:34:14,887
ಟೋನಿ. ಒಂದು ಮಾತು?

362
00:34:16,472 --> 00:34:18,432
-ಕುಳಿತುಕೋ.
-ಪರವಾಗಿಲ್ಲ.

363
00:34:19,391 --> 00:34:21,727
ನೀವು ಯಾರು, ಹೇಗೆ
ನನ್ನ ಜೀವನ ಹಾಳು ಮಾಡ್ತೀರಾ?

364
00:34:22,770 --> 00:34:24,188
ಬಿಜಾನ್ ಆಜಾದ್, ಡಿಸಿಐಎಸ್.

365
00:34:26,899 --> 00:34:28,025
ಒಂದು ಕ್ಷಣ ನಿಲ್ಲಿ.

366
00:34:33,447 --> 00:34:34,990
ನಿನ್ನ ಕೆಲಸ ನಿಲ್ಲಿಸಬೇಕಿದೆ.

367
00:34:35,657 --> 00:34:36,575
ಅಂದ್ರೆ?

368
00:34:36,658 --> 00:34:39,203
ನಿಮ್ಮ ತಂಡವನ್ನ ಆಯಾ ಇಲಾಖೆಗೆ ಒಪ್ಪಿಸಿದ್ದೀವಿ.

369
00:34:39,286 --> 00:34:43,415
ಪೆಂಟಗಾನಲ್ಲಾದ ದುಷ್ಕೃತ್ಯವನ್ನ ಎಫ್ಬಿಐ
ತನಿಖೆ ಮಾಡ್ತಾರೆ, ಬದಲಾಗಿ ಇವರಲ್ಲ.

370
00:34:43,499 --> 00:34:44,541
ಅದು ಸರಿ.

371
00:34:44,625 --> 00:34:48,003
ಏಜೆಂಟ್, ಈ ಕೇಸಿಂದ
ನಿಮ್ಮನ್ನ ಹೊರಗೆಳೆಯೋಕೆ ನನಗಿಷ್ಟ ಇಲ್ಲ.

372
00:34:48,086 --> 00:34:50,380
ನಾನು ಕೇಳಿದ ಹಾಗೆ, ಒಳ್ಳೆ ಕೆಲಸ ಮಾಡ್ತೀರ.

373
00:34:50,881 --> 00:34:52,466
-ಮಿತಿಮೀರಿದ್ದೀರ.
-ಮಿತಿ?

374
00:34:52,549 --> 00:34:55,636
ಈ ಅಡ್ಮಿರಲ್ ತನ್ನ ಸ್ವಂತ ಜನರ ಮೇಲೆ
ಅಕ್ರಮ ಪ್ರಯೋಗ ನಡೆಸಿದರು.

375
00:34:55,719 --> 00:34:57,846
ಅಕ್ರಮವಾಗಿರಲಿಲ್ಲ. ತಾಂತ್ರಿಕವಾಗಿ ಅಲ್ಲ.

376
00:34:57,930 --> 00:34:59,515
ಇದರ ಬಗ್ಗೆ ಮಾತಾಡುತ್ತಿದ್ದೀರ.

377
00:35:00,265 --> 00:35:04,186
ಪಿಲ್ಲರಿಗೆ ಪ್ರಯೋಗವನ್ನು ಅಧಿಕೃತಗೊಳಿಸೋಕೆ
ತುರ್ತುಪರಿಸ್ಥಿತಿಯ ಅಧಿಕಾರವಿತ್ತು.

378
00:35:07,272 --> 00:35:11,318
ಪ್ರಯೋಗ ಅಪರಾಧವಾಗಿರಲಿಲ್ಲ.
ಆದರೆ ಮುಚ್ಚಿಡಲಾಗಿದೆ ಎಂದು ನಾವು ನಂಬುತ್ತೇವೆ.

379
00:35:13,320 --> 00:35:15,030
ನಿಮಗೆ ಕಛೇರಿ ಬಿಡುತ್ತೇನೆ.

380
00:35:23,539 --> 00:35:27,584
ಪಿಲ್ಲರ್ ಮತ್ತು ಅವರ ಅಧಿಕಾರಿಗಳ ಬಗ್ಗೆ
ಗೊತ್ತಿರೋದೆಲ್ಲಾ ಡಿಸಿಐಎಸ್ಗೆ ಹೇಳಿಬಿಡು.

381
00:35:29,837 --> 00:35:31,463
ಆಮೇಲೆ ರಜೆ ಮೇಲೆ ಹೋಗು.

382
00:35:33,173 --> 00:35:34,675
ರೀಸ್ ಇನ್ನೂ ಹೊರಗಿದ್ದಾನೆ.

383
00:35:35,801 --> 00:35:36,927
ಒಂದು ಸಣ್ಣ ರಜೆ.

384
00:35:37,678 --> 00:35:40,222
ನಿನಗೆ ಇದರಿಂದ ಕಷ್ಟ ಕೊಡೋಕೆ ಯಾರೂ ನೋಡ್ತಿಲ್ಲ.

385
00:35:40,848 --> 00:35:45,227
ವಾಷಿಂಗ್ಟನ್ ಎಲ್ಎಗೆ ಕರೆಮಾಡಿದ್ದಾರೆ.
ಕೇಸ್ ವಹಿಸಿಕೊಳ್ಳೋಕೆ ಎಫ್ಟಿಎಫ್ ಕಳಿಸ್ತಿದ್ದಾರೆ.

386
00:35:47,813 --> 00:35:50,357
ಮೊದಲಿನಿಂದಲೂ ಕೇಸ್ ಅವರದಾಗಬೇಕಿತ್ತು.

387
00:36:05,372 --> 00:36:07,291
ನಿನಗೆ ಯಾಕೆ ಇದು ಇಷ್ಟು ಅವಶ್ಯಕ?

388
00:36:07,374 --> 00:36:08,834
-ಏನು?
-ಈ ಕತೆ.

389
00:36:09,751 --> 00:36:14,006
ಇದರಿಂದ ಹೆಸರು ಗಳಿಸೋಕೆ ನೋಡ್ತಿದ್ದೀಯಾ,
ಇಲ್ಲಾ ಇದರಿಂದ ಏನಾದರೂ ಆಗುತ್ತೆ ಅಂದ್ಕೊಂಡಾ?

390
00:36:14,089 --> 00:36:16,758
ನನ್ನ ಕೆಲಸದಲ್ಲಿ ಆಕಾಂಕ್ಷೆ
ಮತ್ತು ನಂಬಿಕೆ ಇರಬಾರದಾ?

391
00:36:16,842 --> 00:36:18,135
ಆಯ್ಕೆ ಮಾಡೋಹಾಗಿದ್ದರೆ.

392
00:36:28,437 --> 00:36:33,025
ನನಗೆ ನಾಲ್ಕು ವರ್ಷವಿದ್ದಾಗ ನನ್ನಪ್ಪ
ಸಿಸಿಪಿಯಿಂದ ದೂರವಾಗಿ ಕ್ಸಿಯೋಪಿಂಗ್ ಅಡಳಿತದ

393
00:36:33,609 --> 00:36:35,444
ವಿರುದ್ಧ ಹೋಗಲು ನಿರ್ಧರಿಸಿದರು.

394
00:36:36,278 --> 00:36:39,406
ಅದಕ್ಕೆ ನನ್ನ, ನನ್ನ ತಾಯಿ,
ಅಣ್ಣನನ್ನ ಅಮೆರಿಕಕ್ಕೆ ಕಳಿಸಿದರು.

395
00:36:41,992 --> 00:36:43,368
ಅವರನ್ನು ಮತ್ತೆ ನೋಡಲಿಲ್ಲ.

396
00:36:45,579 --> 00:36:49,207
ನಾನು ಆರು ವರ್ಷದವಳಾಗಿದ್ದಾಗ ನನ್ನ ಮನೆ,

397
00:36:49,291 --> 00:36:51,877
ನನ್ನ ಭಾಷೆ ಮತ್ತು ಹೆಸರನ್ನು ಕಳೆದುಕೊಂಡೆ,

398
00:36:52,502 --> 00:36:55,172
ಎಲ್ಲಾ ನನ್ನ ತಂದೆ ನಿಲುವು ತೆಗೆದುಕೊಂಡಿದ್ದಕ್ಕೆ.

399
00:36:56,965 --> 00:37:00,510
ಆದ್ದರಿಂದ, ಹೌದು,
ನನಗೂ ಸತ್ಯವೇ ಮುಖ್ಯ ಅನ್ನೋ ನಂಬಿಕೆ.

400
00:37:03,096 --> 00:37:05,641
ಅದರಲ್ಲೂ ಇದು
ಡೇವಿಡ್ ವಿರುದ್ಧ ಗೋಲಿಯತ್ ಅಂತಾದಾಗ.

401
00:37:06,308 --> 00:37:09,353
ಮತ್ತು ರೀಸ್ ಯಾರು? ಡೇವಿಡ್ ಅಥವಾ ಗೋಲಿಯತ್?

402
00:37:15,651 --> 00:37:17,277
ಅದನ್ನೇ ಯೋಚಿಸ್ತಾ ಇದ್ದೀನಿ.

403
00:37:35,003 --> 00:37:36,672
ಇವತ್ತೊಂದು ತಮಾಷೆ ನಡೀತು.

404
00:37:39,383 --> 00:37:43,553
ಆರ್ಡಿ-4895ನ ಪೆಂಟಗಾನೇ ಅಧಿಕೃತಗೊಳಿಸಿತು
ಅಂತ ಗೊತ್ತಾಯ್ತು.

405
00:37:44,930 --> 00:37:48,934
ವಿಚಿತ್ರ ಅಂದ್ರೆ ಫಿನ್ಸೆನ್ಗೂ ಅನಾವರಣ ಮಾಡಲಾಗದ
ಒಬ್ಬ ಪಾಲುದಾರರಿದ್ದಾರೆ.

406
00:37:49,017 --> 00:37:51,061
ಹಾರ್ನ್ ಜೊತೆ ಕೆಲಸ ಮಾಡುವ ಮತ್ತೊಬ್ಬರು.

407
00:37:52,354 --> 00:37:53,355
ಪೆಂಟಗಾನ್?

408
00:37:57,109 --> 00:37:58,485
ಅದು ನಿಮ್ಮ ಗೋಲಿಯತ್.

409
00:38:02,739 --> 00:38:05,367
ಬರ್ತಿನಿ. ನನ್ನ ತಂಡವನ್ನ
ಕೇಸ್ನಿಂದ ತೆಗೆದಿದ್ದಾರೆ.

410
00:38:06,034 --> 00:38:07,244
ಮತ್ತೆ ನಾನು?

411
00:38:11,081 --> 00:38:15,085
ನಿಮ್ಮ ಕಥೆಯನ್ನು ಮುಗಿಸಿ, ಮಿಸ್ ಬರನೆಕ್,
ಸಾಧ್ಯವಾದಷ್ಟು ಬೇಗ ಅದನ್ನು ಪ್ರಕಟಿಸಿ.

412
00:38:36,106 --> 00:38:39,109
ಮನೆಗೆ ಹೋಗು.
ಎಲ್ಏ ಬರೋವರೆಗೂ ನಾನು ಇಲ್ಲಿ ನೋಡಿಕೊಳ್ತೀನಿ.

413
00:38:52,289 --> 00:38:55,792
ಓಡಿನ್ಸ್ ಸ್ವೋರ್ಡ್ ಜೊತೆ ವ್ಯಾಪಿಸುವಂಥ
ಪಾವತಿಗಳ ಸಾಕ್ಷಿ ಎಫ್ಬಿಐ,

414
00:38:55,876 --> 00:38:58,170
ಕಾರ್ಟ್, ಮತ್ತು ಫಿನ್ಸೆನ್ ಹತ್ತಿರ ಇದ್ದರೂ

415
00:38:58,253 --> 00:39:01,006
ಆರ್ಡಿ-4895 ಅಧಿಕೃತಗೊಳಿಸುವುದರಲ್ಲಿ
ಲೊರೈನ್ ಹಾರ್ಟ್ಲೀ ಹೆಸರಿದೆ.

416
00:39:03,008 --> 00:39:05,635
$20 ಮಿಲಿಯನ್ ಮೌಲ್ಯದ

417
00:39:19,232 --> 00:39:21,068
-ಹಲೋ?
-ಹೇ, ಜೋರ್ಡ್, ನಾನು.

418
00:39:22,694 --> 00:39:24,362
ನನ್ನ ಬಳಿ ರೀಸ್ ಕಥೆ ಇದೆ.

419
00:39:24,446 --> 00:39:28,742
ಹೌದು, ನಾನು ಕೇಳಿದೆ. ದ ಅಟ್ಲಾಂಟಿಕ್ಗಾ?
ಇದನ್ನ ಇನ್ನೂ ಜಾಸ್ತಿ ಮಾಡೋಕಾ ಏನು?

420
00:39:28,825 --> 00:39:30,077
ಇಲ್ಲ, ಇದು ದೊಡ್ಡದು.

421
00:39:30,619 --> 00:39:34,414
ನನ್ನ ಹತ್ತಿರ ರಕ್ಷಣಾ ಕಾರ್ಯದರ್ಶಿ
ಲೊರೈನ್ ಹಾರ್ಟ್ಲೀ ಸಹಿ ಮಾಡಿದ ಇಯುಏ ಇದೆ.

422
00:39:34,498 --> 00:39:38,752
ರೀಸ್ ಮತ್ತವನ ತಂಡಕ್ಕೆ ಗೆಡ್ಡೆ ಉಂಟುಮಾಡಿದಂಥ
ಪ್ರಯೋಗಗಳನ್ನು ಆಕೆಯೇ ಆದೇಶಿಸಿದ್ದು.

423
00:39:38,835 --> 00:39:40,087
ದೇವರೇ.

424
00:39:40,170 --> 00:39:42,422
ಅದಕ್ಕಿಂತ ಹೆಚ್ಚಾಗಿ, ಸ್ಟೀವ್ ಹಾರ್ನೇ ತನ್ನ

425
00:39:42,506 --> 00:39:45,717
ಬಂಡವಾಳ ಕಾಪಾಡೋಕೆ ದುಡ್ಡು ಕೊಟ್ಟು
ಈ ವಿಷಯ ಮುಚ್ಚಿಹಾಕಿಸಿದ್ದು.

426
00:39:45,801 --> 00:39:47,511
ಇರು, ಸೆಕ್ ಡೆಫ್ ಪಾಲು ಕೊಂಡರಾ?

427
00:39:47,594 --> 00:39:51,723
ಎಫ್ಬಿಐಯಿಂದಲೂ ಪತ್ತೆಮಾಡಲಾಗದ ಷೇರುದಾರರಿದ್ದಾರೆ.
ಹಾರ್ಟ್ಲೀಯ ಒಳಗೊಳ್ಳುವಿಕೆಯಿಂದ

428
00:39:51,807 --> 00:39:54,559
ನಾನು ಮಾಡಿದ ಅದೇ ತೀರ್ಮಾನಕ್ಕೆ
ಓದುಗರು ಬರುತ್ತಾರೆ.

429
00:39:54,643 --> 00:39:57,813
ಕನಿಷ್ಠ ಅವಳು ಮಾಡಿರೋದಕ್ಕೆ
ಉತ್ತರಿಸಲು ಒತ್ತಾಯಿಸಕ್ಕಾದರೂ.

430
00:39:59,940 --> 00:40:04,027
ವೋಲ್ಟ್ ಸ್ಟ್ರೀಮ್ನ ಅನುಕೂಲ ತಕ್ಷಣದ ಪ್ರತಿಕ್ರಿಯೆ
ಅಂತೀಯ. ಯಾವಾಗ ಪ್ರಕಟಿಸಬಹುದು?

431
00:40:04,861 --> 00:40:08,323
ಅದನ್ನು ಕಳುಹಿಸು. ಅದೆಲ್ಲ ಇದ್ದರೆ
ಗಂಟೆಯೊಳಗೆ ಮಾಡಬಹುದು.

432
00:40:08,865 --> 00:40:09,866
ಸರಿ.

433
00:40:12,452 --> 00:40:14,412
ರಹಸ್ಯ ಪರೀಕ್ಷೆಗಳು ಮತ್ತು ಸ್ಟಾಕ್ ಪಾವತಿಗಳು:
ಜೇಮ್ಸ್ ರೀಸ್ ವಿರುದ್ಧ ಲೊರೈನ್ ಹಾರ್ಟ್ಲೀಯ ಯುದ್ಧ

434
00:40:14,496 --> 00:40:15,497
ಕೇಟೀ ಬರನೆಕ್ ಅವರಿಂದ

435
00:40:17,499 --> 00:40:18,917
ಕಳುಹಿಸಿ

436
00:40:19,000 --> 00:40:20,669
ಕಳುಹಿಸಲಾಗುತ್ತಿದೆ...

437
00:40:20,752 --> 00:40:22,087
ಸಂದೇಶ ಕಳುಹಿಸಲಾಗಿದೆ.

438
00:40:51,867 --> 00:40:55,537
ಇದು ನಿನಗಿಷ್ಟ ಅಂತ ಗೊತ್ತು,
ಆದರೆ ನಿನ್ನ ಹೊಸ ರಾತ್ರಿಯಂಗಿ ಸಿಕ್ಕಿತು.

439
00:40:55,620 --> 00:40:56,705
ಏನನ್ಸುತ್ತೆ?

440
00:40:58,081 --> 00:41:01,668
ಜೀವನದಲ್ಲಿ ಕನಿಷ್ಠ ಒಂದು ಉತ್ತಮ ನಿರ್ಧಾರ
ಮಾಡಿದೆ ಎಂದು ಭಾವಿಸುತ್ತೇನೆ.

441
00:41:04,462 --> 00:41:05,797
ಪಕ್ಕಾನಾ?

442
00:41:06,840 --> 00:41:08,884
-75% ಇರಬಹುದು.
-ತರಲೆ ಮಾಡಬೇಡ.

443
00:41:17,517 --> 00:41:18,685
ನಾನು ಗರ್ಭಿಣಿ.

444
00:41:22,397 --> 00:41:23,815
ಈಗ ಮುತ್ತು ಕೊಟ್ಟಿದ್ದಕ್ಕಾ?

445
00:41:24,399 --> 00:41:27,402
-ಗರ್ಭಿಣಿ ಅಂದ್ರೆ?
-ನಾನು ಗರ್ಭಿಣಿ.

446
00:41:27,485 --> 00:41:29,529
ಆದ್ದರಿಂದ ನೀನು ಮನೆಗೆ ಬರಬೇಕು.

447
00:41:30,113 --> 00:41:30,989
ನಿಜವಾಗಲೂ?

448
00:41:31,072 --> 00:41:33,200
ಹಾಗೆ, 75, 80 ಪ್ರತಿಶತ ಖಚಿತ.

449
00:41:42,459 --> 00:41:43,460
ಐ ಮಿಸ್ ಯೂ.

450
00:41:53,637 --> 00:41:55,305
ನೀನು ಉತ್ತಮ ತಾಯಿಯಾಗುತ್ತೀಯ.

451
00:41:58,433 --> 00:42:00,977
ಹುಡುಗ ಆದರೆ ಮ್ಯಾಥ್ಯೂ ಅಂತ ಇಟ್ರೆ ಹೆಂಗೆ?

452
00:42:03,313 --> 00:42:04,356
ಮ್ಯಾಥ್ಯೂ?

453
00:42:06,191 --> 00:42:07,943
ನನಗೆ ಗನ್ನರ್ ಹೆಸರು ತುಂಬಾ ಇಷ್ಟ.

454
00:42:08,026 --> 00:42:09,027
ಗನ್ನರ್?

455
00:42:10,111 --> 00:42:11,655
-ಹುಡುಗಿಯ ಬಗ್ಗೆ ಏನು?
-ಗೇಜ್.

456
00:42:12,405 --> 00:42:13,949
-ಹುಡುಗಿಗೆ ಗೇಜಾ?
-ಗೇಜ್.

457
00:42:14,532 --> 00:42:15,575
ಲ್ಯೂಸಿ ಆದರೆ?

458
00:42:18,078 --> 00:42:19,412
ಇಷ್ಟ ಆಯ್ತು. ಲ್ಯೂಸಿ.

459
00:42:34,469 --> 00:42:35,470
ಜೇಮ್ಸ್.

460
00:42:41,476 --> 00:42:42,519
ಲಾರೆನ್?

461
00:42:52,904 --> 00:42:53,738
ಜೇಮ್ಸ್.

462
00:42:54,489 --> 00:42:58,201
ರಾತ್ರಿಯಿಡೀ ಕುಟುಂಬಗಳಿಗೆ
ಕರೆ ಮಾಡಿದ್ದಾರೆ. ಏನಾಯ್ತು?

463
00:42:58,910 --> 00:42:59,911
ನನ್ ಜೊತೆ ಮಾತಾಡು.

464
00:43:00,578 --> 00:43:01,579
ಅಪ್ಪಾ.

465
00:43:05,292 --> 00:43:06,459
ಬನ್ನಿ.

466
00:43:07,919 --> 00:43:09,087
ಬಂದು ನೋಡ್ತೀರಾ?

467
00:43:09,754 --> 00:43:13,383
ನಿಂಗೊತ್ತಾ, ನಿಂಗೆ ಆಘಾತ ಆಗಿದೆ ಅಂತ ಮಾತ್ರ
ನಂಗೆ ಅವ್ರು ಹೇಳಿದ್ರು.

468
00:43:13,466 --> 00:43:14,759
ನೀನು ಅಡಗಿರ್ಬೇಕಂತೆ.

469
00:43:14,843 --> 00:43:15,885
ಬನ್ನಿ.

470
00:43:20,515 --> 00:43:21,349
ಐ ಲವ್ ಯೂ.

471
00:43:21,433 --> 00:43:24,728
ಅವರನ್ನು ತನ್ನಿ! ವಾಪಸ್ ತನ್ನಿ!
ಎಡಕ್ಕೆ! ಸಿಸಿಪಿ ಎಡಕ್ಕಿದೆ!

472
00:43:32,694 --> 00:43:33,862
ನಾನು ಬರುತ್ತಿದ್ದೇನೆ!

473
00:43:35,405 --> 00:43:36,406
ನಡೀರಿ!

474
00:43:39,034 --> 00:43:39,993
ಇಲ್ಲ, ಡಾನಿ!

475
00:43:43,038 --> 00:43:45,248
ಅಪ್ಪಾ. ಅಪ್ಪಾ.

476
00:43:46,416 --> 00:43:47,625
ಎಲ್ಲವೂ ಸರಿಯಾಗಿದೆಯಾ?

477
00:43:47,709 --> 00:43:50,837
ಹೇ! ಎಚ್ಚರವಾಗೋ! ಎದ್ದೇಳು!

478
00:43:56,051 --> 00:43:57,469
ಸಾಕು ಅಂತ ಹೇಳಿದ್ದೆ.

479
00:43:58,928 --> 00:44:01,723
ಮೂರು ಪ್ರವಾಸಗಳ ಹಿಂದೆ. ಮೂರು ಪ್ರವಾಸಗಳ ಹಿಂದೆ.

480
00:44:01,806 --> 00:44:05,060
-ಈ ಮಾತುಕತೆ ನನಗೆ ಬೇಡ.
-ಲ್ಯೂಸಿಗೆ ಏನು ಹೇಳಲಿ?

481
00:44:05,143 --> 00:44:07,979
-ನಾನು ಏನು ಹೇಳಬೇಕಂತೀಯಾ?
-ಅವಳಿಗೆ ಸತ್ಯವನ್ನು ಹೇಳು.

482
00:44:08,813 --> 00:44:11,691
ನಾನು ಅವಳು ಮತ್ತು ನಿನಗಾಗಿ ಹೋರಾಡುತ್ತಿದ್ದೇನೆ.

483
00:44:11,775 --> 00:44:13,568
ನಮಿಗ್ ಗೊತ್ತು ಅದು ಬೇಡ ಅಂತ.

484
00:44:13,651 --> 00:44:16,529
ನೀನು ಅಲ್ಲಿಗೆ ಹೋದಾಗ,
ನಿನಗಾಗಿ ಹೋರಾಡುತ್ತಿರ್ತೀಯ.

485
00:44:20,325 --> 00:44:21,618
ಲಾರೆನ್, ವಾಪಸ್ ಬಾ.

486
00:44:24,496 --> 00:44:26,748
"ಇರಲು ಸಾಧ್ಯವೇ ಇರಲಿಲ್ಲ ಒಂದು ಸುಂದರ ನೋಟ,

487
00:44:27,499 --> 00:44:30,502
ಅದನ್ನು ನೋಡಲು ಯಾರೂ ಇರಲಿಲ್ಲ,
ಚಿಕ್ಕ ಹುಡುಗನ ಹೊರತುಪಡಿಸಿ,

488
00:44:30,585 --> 00:44:32,670
ಕಿಟಕಿಯತ್ತ ನೋಡುತ್ತಿದ್ದವ.

489
00:44:33,296 --> 00:44:37,550
ಇತರ ಮಕ್ಕಳಿಗೆ ಅರಿವೇ ಇಲ್ಲದಷ್ಟು ಸಂಭ್ರಮಗಳನ್ನು
ಅವನಾಗಲೇ ಕಂಡಿದ್ದ,

490
00:44:37,634 --> 00:44:40,845
ಆದರೆ ಅವನನ್ನು ಶಾಶ್ವತವಾಗಿ ನಿರ್ಬಂಧಿಸಬೇಕಾದ
ಒಂದು ಸಂತೋಷದತ್ತ

491
00:44:40,929 --> 00:44:43,431
ಕಿಟಕಿಯಿಂದ ನೋಡುತ್ತಿದ್ದನು."

492
00:44:46,810 --> 00:44:49,104
ಅಧ್ಯಾಯ 17. "ವೆಂಡಿ ಬೆಳೆದಾಗ..."

493
00:44:50,730 --> 00:44:54,359
-ಅಪ್ಪಾ, ನಾನು ಗೆದ್ದೆ! ಸ್ಪೆಲ್ಲಿಂಗ್ ಬೀ ಗದ್ದೆ.
-ಬೂಟು ತೆಗಿ, ಲ್ಯೂಸಿ.

494
00:44:54,442 --> 00:44:56,820
ನಾನು ಏನು ಹೇಳಿದೆ? ಅಭ್ಯಾಸದಿಂದ ಸಿದ್ಧಿ.

495
00:44:57,654 --> 00:44:59,656
ಉತ್ತಮ ಕೆಲಸ! ಚಿನ್ನ, ಟ್ರೋಫಿ ಗೆದ್ದೆ.

496
00:44:59,739 --> 00:45:01,699
ಕೊನೆಯ ಪದವು "ಡಿಸಪ್ಪಿಯರ್".

497
00:45:02,700 --> 00:45:06,454
ಇನ್ನೊಬ್ಬ ಹುಡುಗಿಗೆ ಎರಡು ಪಿ ಇರೋದು
ತಿಳಿದಿರಲಿಲ್ಲ. ಆದರೆ ನಂಗೊತ್ತಿತ್ತು.

498
00:45:06,538 --> 00:45:07,622
ಖಂಡಿತ ನಿಂಗೊತ್ತು.

499
00:45:11,209 --> 00:45:12,419
ಡಿಸಪ್ಪಿಯರ್.

500
00:45:13,628 --> 00:45:14,629
ಡಿ...

501
00:45:15,797 --> 00:45:16,798
ಐ...

502
00:45:18,341 --> 00:45:19,342
ಎಸ್...

503
00:45:20,510 --> 00:45:21,594
ಎ...

504
00:45:21,678 --> 00:45:22,971
ಬಾ, ನಾವು ಹೋಗಬೇಕು.

505
00:45:23,513 --> 00:45:24,514
ಪಿ...

506
00:45:27,851 --> 00:45:28,852
ಇ...

507
00:45:29,310 --> 00:45:30,311
ಎ...

508
00:45:47,120 --> 00:45:48,371
ಹೇ.

509
00:45:48,455 --> 00:45:49,831
ಇನ್ನೇನು ಮಲಗ್ತಾಳೆ.

510
00:46:18,818 --> 00:46:21,488
ತ್ರೀಮಾ
ಕೇಟೀ ಸಂದೇಶ

511
00:46:21,571 --> 00:46:27,577
ಹಾರ್ಟ್ಲೀ ಅನುಮೋದಿಸಿದ್ದು.

512
00:47:15,333 --> 00:47:19,087
ಇಲ್ಲ, ಮೂರು ಹಡಗುಗಳ ತಂಡ ಮಾಡಿ.
ನಾನೇ ಅವರನ್ನು ಕಳಿಸಿಕೊಡ್ತೀನಿ.

513
00:47:28,429 --> 00:47:29,556
ನಮ್ಮಿಬ್ಬರನ್ನೇ ಬಿಡಿ.

514
00:47:31,224 --> 00:47:33,184
ನಾವು ಮುಗಿಸಿದಾಗ ನಿನಗೆ ಹೇಳುತ್ತೇನೆ.

515
00:47:40,233 --> 00:47:42,026
ನಿಮಗೆ ಗಂಟೆಗಟ್ಟಲೆ ಕರೆ ಮಾಡಿದೆ.

516
00:47:42,110 --> 00:47:45,822
ಇವತ್ತೆಂಥ ದೊಡ್ಡ ಅನಾಹುತ ಆಯ್ತು
ಅಂತ ನಿನಗೆ ಗೊತ್ತೇ ಇಲ್ವಾ?

517
00:47:47,865 --> 00:47:49,617
ನನಗೆ ಸ್ವಲ್ಪ ಗೊತ್ತಿದೆ, ಸರ್.

518
00:47:53,955 --> 00:47:58,334
ಹಾರ್ಟ್ಲೀ ನಮ್ಮನ್ನ ಸಿಲುಕಿಸೋಕೆ ನೋಡಿದಳು,
ಆದರೆ ನಾನು ನೀನು ಕೊಟ್ಟ ಉಪಾಯ ಹೂಡಿದೆ.

519
00:48:01,879 --> 00:48:06,384
ಇನ್ನೇನು ಗೊತ್ತು? ಏನಾದರೂ ಬೇಕು.
ಈ ಹೆಂಗಸು ಆಡುತ್ತಿರುವ ಆಟ ಯಾರಿಗೆ ಗೊತ್ತು.

520
00:48:08,511 --> 00:48:09,554
ಏನದು?

521
00:48:18,187 --> 00:48:19,397
ಅದು ನಿಮಗಾಗಿ, ಸರ್.

522
00:48:25,194 --> 00:48:26,029
ಹೇಳಿ?

523
00:48:26,738 --> 00:48:27,864
ಅಡ್ಮಿರಲ್ ಪಿಲ್ಲರ್.

524
00:48:30,742 --> 00:48:33,369
ನಿಮ್ಮ ಸಂಪೂರ್ಣ ವೃತ್ತಿಜೀವನವನ್ನ ಸುರಕ್ಷಿತವಾಗಿ

525
00:48:34,120 --> 00:48:36,247
ಗೋಡೆಗಳ ಹಿಂದೆ ಮರೆಮಾಚಿ, ನಿಮಗಾಗಿ

526
00:48:37,165 --> 00:48:39,334
ಹೋರಾಡಲು ಇತರರನ್ನು ಕಳುಹಿಸುತ್ತಿದ್ದೀರ.

527
00:48:41,252 --> 00:48:44,922
ನನಗನ್ನಿಸ್ತಿದೆ ನಿಮಗಿಂತ ಜಾಸ್ತಿ ಯುದ್ಧ
ನನ್ನ ಮಗಳೇ ನೋಡಿದ್ದಾಳೆ ಅಂತ.

528
00:48:48,551 --> 00:48:50,928
ಮತ್ತು ಅದನ್ನು ಸರಿಪಡಿಸಬೇಕು ಎಂದು ಭಾವಿಸಿದೆ.

529
00:48:51,012 --> 00:48:52,930
ಏನಂದುಕೊಂಡಿದ್ದೀಯಾ ನಿನ್ನ ನೀನು?

530
00:48:54,057 --> 00:48:55,558
ನೀನೇನು ದೊಡ್ಡ ಸ್ಪೆಷಲ್ಲಾ?

531
00:48:56,100 --> 00:48:57,935
ನೀನು ಏನೇನೂ ಅಲ್ಲ.

532
00:48:58,353 --> 00:49:02,065
ವಿಮಾನದ ಕೆಳಗೆ ಬೀಸೋ ಹೊಗೆಯ ತುಣುಕು ನೀನು ಅಷ್ಟೇ.

533
00:49:02,857 --> 00:49:04,067
ಹೌದೇನು?

534
00:49:06,152 --> 00:49:09,280
700 ಬಾಲ್ ಬೇರಿಂಗ್ಗಳಿವೆ ಕ್ಲೇಮೋರ್ ಗಣಿಯಲ್ಲಿ.

535
00:49:10,531 --> 00:49:12,992
ಅದರಲ್ ಎರಡು ಗಣಿಗಳು ನಿಮ್ಮ ಕಡೆ ತಿರುಗಿದ್ದರೆ,

536
00:49:13,076 --> 00:49:17,914
ಒಟ್ಟು 1,400 ಬಾಲ್ ಬೇರಿಂಗ್ಗಳು, 1,400.

537
00:49:18,498 --> 00:49:22,877
ನೀವು ಕೊಂದ ಒಂದೊಂದು ಸೀಲಿಗೂ ನೂರು.

538
00:49:24,128 --> 00:49:25,755
ಏನು ಮಾತಾಡ್ತಾ ಇದ್ದೀಯಾ?

539
00:49:31,010 --> 00:49:32,887
ನನಗೆ ಆಯ್ಕೆ ಇರಲಿಲ್ಲ, ಸರ್.

540
00:49:41,646 --> 00:49:43,314
ರೀಸ್. ಕಮಾಂಡರ್!

541
00:49:45,191 --> 00:49:46,442
ಇದನ್ನು ಮಾಡಬೇಡ!

542
00:49:47,485 --> 00:49:48,736
ನನ್ನ ಮಾತು ಕೇಳಿಸ್ತಾ?

543
00:49:48,820 --> 00:49:50,196
ನೀನು ನಿಲ್ಲಬೇಕು--

544
00:49:56,077 --> 00:49:59,580
ಇದು ವಾರ್ಕಾಮ್ ಮೀರಿ ಹೋಗುತ್ತದೆ.
ಅದು ನಿನಗೆ ಗೊತ್ತು, ತಾನೇ?

545
00:50:00,581 --> 00:50:03,918
ಬೇರೆ ಯಾರು ಭಾಗಿಯಾಗಿದ್ದರೆಂದು ಹೇಳ್ತೀನಿ,
ಆದರೆ ನಾನು ಸತ್ತರೆ...

546
00:50:05,420 --> 00:50:06,629
ನಾನು ಸತ್ತರೆ...

547
00:50:10,133 --> 00:50:11,134
ನಿನಗೆ ತಿಳಿಯಲ್ಲ.

548
00:50:11,217 --> 00:50:14,929
ಸರಿ, ನಾವು ಮಾತಿನ ಸಲುವಾಗಿ
ಅಂದುಕೊಳ್ಳೋಣ, ಅಡ್ಮಿರಲ್,

549
00:50:16,264 --> 00:50:17,765
ಈಗಾಗಲೇ ತಿಳಿದಿದ್ದೀನಂತ.

550
00:50:24,272 --> 00:50:27,191
ದ್ರೋಹಿ
ಹೋವಾರ್ಡ್

551
00:50:40,913 --> 00:50:42,248
ಯಾರಾದ್ರೂ ನೋಡ್ತಿದ್ದೀರಾ?

552
00:50:42,331 --> 00:50:46,586
ಎನ್ಏಬಿ ವಾಯುವ್ಯ ಮೂಲೆಯಲ್ಲಿ ಸ್ಫೋಟದ ವರದಿ.
ವಾರ್ಕಾಮ್ ಸ್ಫೋಟಿಸಿತು. ಮೇಲಿನ ಮಹಡಿ.

553
00:50:46,669 --> 00:50:49,213
ಅದನ್ನು ಲಾಕ್ ಮಾಡಿ. ಒಂದೊಂದಾಗಿ, ಒಂದೊಂದಾಗಿ.

554
00:51:01,768 --> 00:51:04,604
ರೀಸ್ ಬೇಸಲ್ಲಿದ್ದಾನಾ? ನೋಡಿ ದೃಢೀಕರಿಸಿದರಾ?

555
00:51:05,730 --> 00:51:09,817
ಅದು ಅಡ್ಮಿರಲ್ ಕಚೇರಿ. ಯಾವುದೋ ಬಾಂಬ್.
ರಿಮೋಟಿಂದ ಸ್ಫೋಟಿಸಿರಬಹುದು.

556
00:52:02,578 --> 00:52:03,579
ರೀಸ್!

557
00:52:30,106 --> 00:52:33,192
ಹೇ! ತಡಿ, ನಿನಗೆ ಏನಾಯಿತು ಎಂದು ನನಗೆ ತಿಳಿದಿದೆ.

558
00:52:33,276 --> 00:52:36,070
ನಿನಗೆ ಏನಾಯಿತು ನನಗೆ ಗೊತ್ತು.
ಅವರು ನಿನಗೆ ಮಾಡಿದ್ದು.

559
00:52:36,153 --> 00:52:37,655
ನೀನು ಇಲ್ಲಿ ಇರಬಾರದು.

560
00:52:37,738 --> 00:52:41,117
ನಿನ್ನ ಕುಟುಂಬವನ್ನು ಏಕೆ ಕೊಂದರಂತ.
ಇರು! ಹಾರ್ನಿಂದ ಸಾಕ್ಷ್ಯಇದೆ.

561
00:52:43,786 --> 00:52:45,079
ಮತ್ತು ಪಿಲ್ಲರ್.

562
00:52:46,330 --> 00:52:47,582
ನಮ್ಮ ಹತ್ರ ಇವೆ, ರೀಸ್.

563
00:52:49,542 --> 00:52:52,128
ಇಲ್ಲಿಂದ ನ್ಯಾಯವೇ ಇದನ್ನ
ಕರ್ಕೊಂಡು ಹೋಗೋಕೆ ಬಿಡು.

564
00:52:54,714 --> 00:52:56,090
ನಾನೇ ನ್ಯಾಯ.

565
00:53:01,345 --> 00:53:02,346
ನಾನು ಬಿಡಲ್ಲ.

566
00:53:04,724 --> 00:53:06,684
ನೀನು ಇದನ್ನು ಮಾಡುವುದಕ್ಕೆ ಬಿಡಲಾರೆ.

567
00:53:35,463 --> 00:53:37,173
ನಾನು ನಿನಗೆ ಮತ್ತೆ ಹೇಳುವುದಿಲ್ಲ.

568
00:53:39,550 --> 00:53:40,801
ಪಟ್ಟಿಯಿಂದ ಹೊರಗಿರು.

569
00:54:12,583 --> 00:54:15,294
-ಹಾಂ?
-ಏನಾಗುತ್ತಿದೆ? ಒಂದು ಗಂಟೆ ಕಳೆದಿದೆ.

570
00:54:15,378 --> 00:54:17,213
ನೀನು ಹೇಳು. ನಾನು ಕಾಯುತ್ತಿದ್ದೆ.

571
00:54:18,172 --> 00:54:21,050
-ಕಾಯ್ತಿದ್ಯಾ?
-ಇಂಟರ್ನೆಟ್ ಹೇಗೆ ಕೆಲಸ ಮಾಡುತ್ತೆ ನೋಡು.

572
00:54:21,133 --> 00:54:24,095
ನಾನೇನಾದರೂ ಪ್ರಕಟಿಸಬೇಕಂದ್ರೆ
ನೀನು ನನಗೆ ಮೊದಲು ಕಳಿಸಬೇಕು.

573
00:54:25,262 --> 00:54:26,514
ಅದನ್ನು ಕಳುಹಿಸಿದೆ.

574
00:54:27,181 --> 00:54:30,226
ಇವರಿಗೆ: ಜೋರ್ಡಾನ್ ಗ್ರಾಫ್ - ಕಥೆ

575
00:54:30,893 --> 00:54:31,811
ಇಲ್ಲವಲ್ಲ.

576
00:54:36,482 --> 00:54:37,942
ಜೋರ್ಡಾನ್, ನಾನು ಹೋಗಬೇಕು.

577
00:54:38,025 --> 00:54:41,529
ಇಲ್ಲ, ಕೇಟೀ,
ಮತ್ತೆ ನನಗೆ ಹೀಗೆ ಮಾಡಬೇಡ... ದಯವಿಟ್ಟು.

578
00:55:10,057 --> 00:55:13,436
ನಿಮ್ಮ ಕಥೆಯನ್ನು ಓದಿದ್ದೇನೆ, ಮಿಸ್ ಬರನೆಕ್.
ಅದ್ಭುತ ಬರವಣಿಗೆ.

579
00:55:18,190 --> 00:55:20,067
ದುರದೃಷ್ಟವಶಾತ್, ಅದು ತಪ್ಪು.

580
00:55:23,946 --> 00:55:27,116
ನೀವು ಹೊರಟು ಹೋಗಬೇಕೆಂದು ಬಯಸಿದರೆ,
ನಾವು ಹಿಂಬಾಲಿಸಲ್ಲ.

581
00:55:28,242 --> 00:55:32,163
ಆದರೆ ಅರ್ಧ ಕಥೆಯೊಂದಿಗೆ ಪ್ರೆಸ್ಸಿಗೆ
ಹೋಗುವಂಥ ಪತ್ರಕರ್ತರು ನೀವಲ್ಲ.

582
00:55:34,498 --> 00:55:36,000
ನಿಮಗೆ ಸತ್ಯ ಬೇಕಾದರೆ...

583
00:55:38,294 --> 00:55:39,336
ಸಂಪೂರ್ಣ ಸತ್ಯ,

584
00:55:40,129 --> 00:55:42,381
ಸಂದರ್ಶನವನ್ನು ನೀಡಲು ತಯಾರಾಗಿದ್ದೇನೆ.

585
00:55:44,050 --> 00:55:45,301
ನಿಮಗೆ ಆಸಕ್ತಿ ಇದ್ದರೆ.

