1
00:00:53,304 --> 00:00:55,514
ಅಂತಿಮ ಯುದ್ಧ

2
00:01:32,802 --> 00:01:38,307
ಸೌಲ್ ಆಗ್ನನ್

3
00:01:54,615 --> 00:01:57,535
ಕ್ಯಾಪ್ಸ್ಟೋನ್ ಇಂಡಸ್ಟ್ರೀಸ್
ಅಸೆಟ್ ಮ್ಯಾನೇಜ್ಮೆಂಟ್ನ ವಿಪಿ

4
00:02:17,137 --> 00:02:21,559
ಭೇಟಿಯಾಗಬೇಕು ಜಾಗ ಹೇಳು.
ಗಲಾಟೆಯಿದ್ದಷ್ಟೂ ಒಳ್ಳೆಯದು.

5
00:02:33,612 --> 00:02:35,281
-ಥ್ಯಾಂಕ್ಸ್.
-ಮೇಡಮ್ ಸೆಕ್ರೆಟರಿ.

6
00:02:35,656 --> 00:02:37,491
-ಗುಡ್ ಮಾರ್ನಿಂಗ್
-ಮೇಡಮ್ ಸೆಕ್ರೆಟರಿ

7
00:02:38,409 --> 00:02:42,288
ನನ್ನ ವೃತ್ತಿಯನ್ನು ನಾನು ಸೈನ್ಯದಲ್ಲಿ
ಅಪಘಾತಗಳನ್ನು ಕಡಿಮೆ ಮಾಡಲು ಹಾಗೂ

8
00:02:42,371 --> 00:02:45,541
ಮಾನಸಿಕ ಆರೋಗ್ಯವನ್ನ
ಸುಧಾರಿಸಲು ಬದ್ಧವಾಗಿಟ್ಟಿದ್ದೇನೆ.

9
00:02:45,624 --> 00:02:49,295
ಆದರೆ ನಾವು ನಮ್ಮ ಸಾಂಪ್ರದಾಯಿಕ ಸೈನ್ಯದಲ್ಲಿ
ಯಶಸ್ಸು ಕಾಣುತ್ತಿರುವಾಗ,

10
00:02:49,378 --> 00:02:53,674
ದೈಹಿಕ ಹಾಗೂ ಭಾವನಾತ್ಮಕ ಹೊರೆ
ಸ್ಪೆಕ್ ಆಪ್ಸ್ ಸಮುದಾಯದ ಮೇಲೆ ಬೀಳುತ್ತಿದೆ

11
00:02:53,757 --> 00:02:56,427
ಇದನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

12
00:02:57,636 --> 00:03:00,764
ನಮ್ಮ ಶೂರ ಸೈನಿಕರು ಯಂತ್ರಗಳಾಗಿರಬೇಕು ಅಂತ ನಾವು
ಅಂದುಕೊಂಡರೂ,

13
00:03:01,265 --> 00:03:02,266
ಅವರು ಹಾಗಿಲ್ಲ.

14
00:03:02,933 --> 00:03:07,438
ನಮ್ಮ ಬಜೆಟ್ ಮನವಿ ವಿನಿಯೋಗಕ್ಕೆ ಹೋಗುವ ಮೊದಲು
ಅದನ್ನು ಮತ್ತೆ ಪರೀಕ್ಷಿಸುತ್ತೇವೆ.

15
00:03:07,521 --> 00:03:09,148
ಯಾವ ರೀತಿಯ ಪರೀಕ್ಷೆ?

16
00:03:09,231 --> 00:03:13,527
ನಮ್ಮ ವಿಶೇಷ ಆಪರೇಟರ್ಗಳ
ಜೀವಾವಧಿ ನಿಯೋಜನೆಯಲ್ಲಿ ಗಣನೀಯ ಕುಸಿತ.

17
00:03:14,111 --> 00:03:17,448
-ಭತ್ಯೆಗಳನ್ನ ಮತ್ತೆ ಲೆಕ್ಕ ಹಾಕ್ತಿದೀರಾ?
-ಹಾರ್ಡ್ ಕ್ಯಾಪ್ಸ್.

18
00:03:17,531 --> 00:03:21,368
ಕಡ್ಡಾಯ ನಿವೃತ್ತಿ. ಎಲ್ಲಾ ಖಾಲಿಯಾಗುವವರೆಗೂ
ಬಳಸ್ತಾ ಇರೋಕಾಗಲ್ಲ.

19
00:03:21,452 --> 00:03:23,829
ತಯಾರಾಗಿರುವಿಕೆಯಲ್ಲಿ ಅವನತಿ ಕಂಡು ಬರ್ತಿದೆ.

20
00:03:23,913 --> 00:03:26,916
-ಮತ್ತೆ ಹಣಕಾಸು...
-ಒಪ್ಪಿಕೊಳ್ಳೋ ಮಟ್ಟಗಳನ್ನ ಹುಡುಕಬಹ್ದು.

21
00:03:27,416 --> 00:03:29,960
ಜೂನ್ನಿಂದ ಬಜೆಟ್ ಮೇಲೆ ಕೆಲಸ ಮಾಡ್ತಾ ಇದೀವಿ.

22
00:03:30,044 --> 00:03:32,546
ಕಡಿಮೆ ಸಮಯದಲ್ಲಿ ಬದಲಾವಣೆ ಮಾಡ್ಬೇಕು ಅಂತಿದೀರಾ?

23
00:03:32,630 --> 00:03:36,592
ನಿಮ್ಮ ಮನೆಗೆ ಫೋನ್ ಮಾಡಿ ಒಂದಿಷ್ಟ್ ದಿನ
ಅವ್ರು ಒಂಟಿಯಾಗಿರ್ತಾರೆ ಅಂತ ಹೇಳಿ.

24
00:03:36,675 --> 00:03:39,386
ಆಪರೇಟರ್ಗಳು ನಮಗೋಸ್ಕರ
ತಮ್ಮ ಜೀವನೇ ಪಣಕ್ಕಿಡ್ತಾರೆ.

25
00:03:39,470 --> 00:03:42,598
ನಾವು ಅವರ ಸಲುವಾಗಿ ಒಂದು ವೀಕೆಂಡ್ ಆದ್ರೂ
ಹೋರಾಡಬಹುದು. ನಡೀರಿ!

26
00:03:50,648 --> 00:03:52,816
ಅದು ಜೇಮ್ಸ್ ರೀಸ್ ಬಗ್ಗೆ, ಅಲ್ವಾ?

27
00:03:53,692 --> 00:03:55,069
ಅವನು ಒಂದು ಡೇಟಾ ಪಾಯಿಂಟ್.

28
00:04:37,903 --> 00:04:42,700
ಇದು ಮುಂದಿನ 12 ತಾಸಲ್ಲಿ ಸಿಗದಿದ್ರೆ, ಬಜ್
ಫೀಡ್ ನಮ್ಮನ್ನ ಸೋಲಿಸಿ ಮುಜುಗರ ಉಂಟುಮಾಡುತ್ತೆ.

29
00:04:42,783 --> 00:04:47,621
ನಂಗೆ ಇನ್ನೊಂದು ಮೀಟಿಂಗ್ ಇದೆ. ಥ್ಯಾಂಕ್ಸ್.
ಇದನ್ನ ಮಾಡಿ. ಒಳ್ಳೆ ಕೆಲಸ. ಥ್ಯಾಂಕ್ಸ್. ಸರಿ.

30
00:04:55,671 --> 00:04:57,172
ಇದು ಅವರಿಗೆ ಹೇಗೆ ಕಂಡಿಲ್ಲ?

31
00:04:57,256 --> 00:04:59,591
ಇನ್ಸಿರ್ಲಿಕ್ನಲ್ಲಿ ರಸೆಲ್ ಜೊತೆ ಮಾತಾಡಿದೆ.

32
00:04:59,675 --> 00:05:03,345
ಇನ್ನೂ ಪರೀಕ್ಷೆ ಬೇಕು ಅಂತಿದ್ರು,
ರೀಸ್ ತಾನಾಗೇ ಎ.ಎಂ.ಎದಿಂದ ಹೊರಗಡೆ ಬಂದ್ರು

33
00:05:03,429 --> 00:05:05,222
-ಶವಸಂಸ್ಕಾರಕ್ಕೆ ಹೋಗ್ಬೇಕಿತ್ತು.

34
00:05:05,305 --> 00:05:07,057
-ನೇವಿಲಿ ಯಾರೂ ಇದನ್ನ ನೋಡಿಲ್ವಾ?

35
00:05:07,141 --> 00:05:09,351
ಇವನು ಒಂದು ಸೈನ್ಯದ ಮುಖಂಡನಾಗಿದ್ದ.

36
00:05:09,435 --> 00:05:12,646
ಅವನ ವೈದ್ಯಕೀಯ ಪರೀಕ್ಷೆ ಐಚ್ಛಿಕನಾ?
ಇದು ಸಂಪೂರ್ಣ ನಿರ್ಲಕ್ಷ್ಯ.

37
00:05:14,523 --> 00:05:16,150
ಸರಿ. ಈಗೇನು?

38
00:05:16,233 --> 00:05:18,610
ರೀಸ್ ಭೇಟಿಯಾಗ್ಬೇಕಂತೆ, ಯಾಕೆ ಅಂತ ತಿಳೀಬೇಕು.

39
00:05:18,694 --> 00:05:21,947
ಹೇಗಿದ್ರೂ ಈವತ್ತು ರಾತ್ರಿ
ನಂಗೇನಾದ್ರೂ ಸಿಗುತ್ತೆ.

40
00:05:22,031 --> 00:05:23,365
ಸುರಕ್ಷಿತವಾಗಿದೀಯಾ?

41
00:05:23,949 --> 00:05:27,453
ಗಡಾಫಿನ ಹಿಡಿಯೋಕ್ ಬಂದಾಗ
ನಾನು ಸರ್ಟ್ನಲ್ಲಿದ್ದೆ. ತೊಂದ್ರೆ ಇಲ್ಲ.

42
00:05:29,580 --> 00:05:31,123
ನಾನೂ ನಿನ್ ಜೊತೆ ಬರಬಹುದೇನೋ.

43
00:05:31,707 --> 00:05:36,253
ರೀಸ್ ಮತ್ತೆ ನಮ್ಗೆ ಸಿಗೋದೇ ಬೇಡ್ವಾ?
ಇಲ್ಲ. ಅವನಿಗೆ ನನ್ ಮೇಲೆ ನಂಬಿಕೆ ಇದೆ.

44
00:06:54,832 --> 00:06:55,833
ನಂಗೆ ಆ ಸೀಟ್ ಬೇಕು.

45
00:07:06,385 --> 00:07:08,303
ರೀಸ್. ಯಾಕೆ ಭೇಟಿಯಾಗ್ಬೇಕಿತ್ತು?

46
00:07:08,387 --> 00:07:13,684
ಸೌಲ್ ಆಗ್ನನ್ ಬಗ್ಗೆ, ಕ್ಯಾಪ್ಸ್ಟೋನ್
ಇಂಡಸ್ಟ್ರೀಸ್ ಅನ್ನೋ ಕಂಪನಿ ಬಗ್ಗೆ ಕೇಳಿದೀಯಾ?

47
00:07:13,767 --> 00:07:15,686
ಆರ್ಡರ್ ಹೇಳ್ತೀರಾ?

48
00:07:15,769 --> 00:07:19,690
ನಾನು ಲಿಟ್ಲ್ ಜೆಮ್ಸ್ ಮತ್ತೆ ಸ್ಟ್ರೈಪಡ್
ಬಾಸ್ ತಗೋತೀನಿ.

49
00:07:19,773 --> 00:07:21,900
-ಸರಿ.
-ನಂಗೇನೂ ಬೇಡ. ಥ್ಯಾಂಕ್ಸ್.

50
00:07:21,984 --> 00:07:24,862
-ಅವರು ಬುಕಟೀನಿ ತಗೋತಾರೆ.
-ಸರಿ. ಈಗಲೇ ತಂದೆ.

51
00:07:25,612 --> 00:07:26,947
ಕ್ಯಾಪ್ಸ್ಟೋನ್?

52
00:07:27,030 --> 00:07:29,908
ಅವರ ವೆಬ್ಸೈಟ್ನಲ್ಲಿ ಬರೀ
ಲೋಗೋ ಮಾತ್ರ ಇರೋವಂಥ ಜಾಗ.

53
00:07:29,992 --> 00:07:32,202
ಅಗ್ನಾನ್ ಅಸೆಟ್ ಮ್ಯಾನೇಜ್ಮೆಂಟ್ ವಿಪಿ.

54
00:07:32,286 --> 00:07:36,039
ನಾನೂ ಸ್ವಲ್ಪ ಹುಡುಕಿದೆ.
ಅವರ ಎಲ್ಲಾ ಮಾರ್ಕೆಟ್ ಇನ್ವೆಸ್ಟ್ಮೆಂಟ್ಗಳು.

55
00:07:36,123 --> 00:07:39,960
ಸುಳ್ಳು. ಕಾರ್ನಿವಾಲ್ ಕ್ರೂಸ್ ಲೈನ್ಸ್,
ಪ್ಲಾನೆಟ್ ಫಿಟ್ನೆಸ್, ಎಚ್&ಎಂ...

56
00:07:40,043 --> 00:07:43,338
ಇರು. ಈಗ ಪ್ಲಾನೆಟ್ ಫಿಟ್ನೆಸ್ ಹಿಂದಿರೋರು
ಇದರಲ್ಲಿ ಇದಾರಾ?

57
00:07:43,422 --> 00:07:45,632
ಹೇಳೋದ್ ಕೇಳು. ಏನಪ್ಪಾ ಅಂದ್ರೆ...

58
00:07:45,716 --> 00:07:49,803
ಅವರ ಹತ್ತಿರ $60 ಬಿಲಿಯನ್ಗಳ
ಹೂಡಿಕೆ ಮಾಡಿರೋ ಹಣ ಇದೆ.

59
00:07:49,887 --> 00:07:52,723
ಅದನ್ನ ಪಬ್ಲಿಕ್ ಹೋಲ್ಡಿಂಗ್ನಲ್ಲಿ
ಲೆಕ್ಕ ಹಾಕೋಕಾಗಲ್ಲ.

60
00:07:52,806 --> 00:07:54,474
ಉಳಿದದ್ದು ಎಲ್ಲಿದೆ?

61
00:07:54,558 --> 00:07:56,393
ಅದನ್ನೇ ತಿಳ್ಕೋಬೇಕು.

62
00:07:58,103 --> 00:07:59,688
ಇರಾನಿಯನ್ರ ಬಗ್ಗೆ?

63
00:08:00,814 --> 00:08:04,318
ಇದು ಕಹಾನಿ ಬಗ್ಗೆ ಅಲ್ವೇ ಅಲ್ಲ.
ಅವನು ದೊಡ್ಡ ಗಾಳ. ಇದು...

64
00:08:04,401 --> 00:08:09,198
ಇದು ದೇಶದ ಒಳಗಿನದ್ದು,
ಕಂಪನಿಗಳದ್ದು, ಇದು ಇನ್ನೂ ಮುಗಿದಿಲ್ಲ..

65
00:08:14,494 --> 00:08:16,622
ಕ್ಯಾಪ್ಸ್ಟೋನ್ ಸುಳಿವು ಎಲ್ಲಿಂದ ಬಂತು?

66
00:08:16,705 --> 00:08:18,624
-ಮುಖ್ಯವಲ್ಲ.
-ಇದು ಮುಖ್ಯ.

67
00:08:18,707 --> 00:08:22,961
ನಾನು ಈ ಮಾಹಿತಿನ ಬಹಿರಂಗಪಡಿಸೋಕೆ ಅದರ
ಮೂಲನ ನಂಬಬಹುದು ಅತ ನಂಗೊತ್ತಿರ್ಬೇಕು.

68
00:08:23,670 --> 00:08:24,755
ನಾನೇ ಆ ಮೂಲ.

69
00:08:31,678 --> 00:08:33,889
ನಿಂಗೇನೋ ತೋರಿಸ್ಬೇಕು.

70
00:08:35,307 --> 00:08:37,559
ಇದು ಎನ್ಗ್ರಾಮ್ ಕ್ಲಿನಿಕ್ನಿಂದ ಸಿಕ್ಕಿತು.

71
00:08:38,143 --> 00:08:41,480
ಸಮಯ ಬಂದಾಗ ಇದನ್ನ ನಿನಗೆ ತೋರಿಸ್ಬೇಕು ಅಂತಿದ್ದೆ.

72
00:08:50,530 --> 00:08:52,074
ಇದು ಗಡ್ಡೆ, ರೀಸ್...

73
00:08:53,700 --> 00:08:55,953
ಇದು ಒಂದು ಅಡಿಕೆ ಗಾತ್ರದಲ್ಲಿದೆ.

74
00:08:56,495 --> 00:09:00,415
ಇದು ಹಿಪೊಕ್ಯಾಂಪಸ್ ಮತ್ತೆ ಅಮಿಗ್ಡಾಲಾ
ಮಧ್ಯ ಇರೋ ಗಂಟಿನಲ್ಲಿದೆ.

75
00:09:00,832 --> 00:09:05,504
ನರ ತಜ್ಞರ ಜೊತೆ ಮಾತಾಡಿದೆ.
ರೋಗಲಕ್ಷಣಗಳಲ್ಲಿ ತಲೆನೋವು, ಬುದ್ಧಿಭ್ರಮಣೆ...

76
00:09:05,587 --> 00:09:09,007
ನೆನಪಿನ ಶಕ್ತಿಯ ಗೊಂದಲ ಇರುತ್ತೆ ಅಂತ ಹೇಳಿದಾರೆ.

77
00:09:13,929 --> 00:09:16,723
-ನಾನಲ್ಲ.
-ನೀನು ಬರೋ ಸಯಮಕ್ಕೆ ಟೈಮ್ ಸ್ಟಾಂಪ್ ಆಗಿದೆ.

78
00:09:16,807 --> 00:09:21,019
-ಇದನ್ನ ಎನ್ಸಿಐಎಸ್ ಕೊಡ್ತಾ?
-ಇಲ್ಲ. ಹೋಲ್ಡರ್ ಈ ಬಗ್ಗೆ ಹೇಳಲೇ ಇಲ್ಲ.

79
00:09:21,103 --> 00:09:23,855
ನಮಗೆ ಮಾತ್ರ ಗೊತ್ತು ಅಂತ ನನಗೆ ಖಚಿತತೆ ಇದೆ.

80
00:09:24,314 --> 00:09:26,400
ನರತಜ್ಞರು ಬಯಾಪ್ಸಿ ಶಿಫಾರಸು ಮಾಡಿದ್ರು.

81
00:09:26,483 --> 00:09:29,486
ಅದನ್ನ ಬಿಟ್ಟು, ನಿಖರವಾದ ರೋಗಪತ್ತೆಗೆ
ಬೇರೆ ದಾರಿನೇ ಇಲ್ಲ.

82
00:09:29,569 --> 00:09:34,408
ನಿಂಗೆ ಭ್ರಮೆ ಆಗ್ತಾ ಇರೋದು
ನಮಗಿಬ್ಬರಿಗೂ ಗೊತ್ತು.

83
00:09:35,367 --> 00:09:39,496
ಜಹಾನ್ ಕಹಾನಿ ಜೊತೆ ಈ ವಿವರಣೆ ಕೊಡೋಕಾಗಲ್ಲ.

84
00:09:39,579 --> 00:09:40,831
ಅಥವಾ ಕ್ಯಾಪ್ಸ್ಟೋನ್...

85
00:09:42,291 --> 00:09:45,961
ಹಿಂದಿರೋ ಕನ್ನಡಿ ನೋಡು.
ಟೋಪಿ ಮತ್ತೆ ಶೇಡ್ ಹಾಕ್ಕೊಂಡು ಒಬ್ಬ ಇದಾನೆ.

86
00:09:46,044 --> 00:09:50,048
-ನೋಡಿದ್ಯಾ?
-ಇಲ್ಲ, ಊಟ ಮುಗಿಸಿ ಹೋಗ್ತಿದಾರೆ ಅಷ್ಟೇ.

87
00:09:50,173 --> 00:09:51,258
ಹೋಗ್ಬೇಕು. ಈಗಲೇ!

88
00:09:52,134 --> 00:09:54,678
ಇರು! ರೀಸ್! ಹೇಯ್!

89
00:09:55,470 --> 00:09:56,680
ಇನ್ನೂ ಮುಗಿದಿಲ್ಲ...

90
00:10:05,689 --> 00:10:06,857
ರೀಸ್. ರೀಸ್. ಇರು!

91
00:10:07,816 --> 00:10:09,609
ನಿನ್ ಸ್ಮಾರ್ಟ್ಫೋನ್ ತಂದಿದೀಯಾ?

92
00:10:09,693 --> 00:10:11,945
ಇಲ್ಲ. ಬರ್ನರ್ ಮಾತ್ರ. ಏನ್ ನಡೀತಿದೆ ಇಲ್ಲಿ?

93
00:10:12,029 --> 00:10:13,572
ಅವರಿಗೆ ಆಕಾಶದಲ್ಲೂ ಕಣ್ಣಿದೆ.

94
00:10:13,655 --> 00:10:15,490
ಅಂದ್ರೆ ಡ್ರೋನಾ?

95
00:10:15,574 --> 00:10:20,287
ನಾನು ಈಗ ನೋಡಿದವನು ಆಪರೇಟರ್.
ಅವನು ಬಂದಿರೋದು ನನ್ನ... ಅಥವಾ ನಿನ್ ಸಲುವಾಗಿ.

96
00:10:20,370 --> 00:10:23,457
ರೀಸ್, ಇಲ್ಲಿ ಯಾರೂ ಇಲ್ಲ.
ನಿಂದು ಬರೀ ಊಹೆ.

97
00:10:23,540 --> 00:10:27,461
ಇಲ್ಲಿ ಬರೋಕೆ ಎಸ್ಡಿಆರ್ ಬಳಸಿದೀನಿ.
ಯುಎವಿ ಮಾತ್ರ ಟ್ರಾಕ್ ಮಾಡುತ್ತೆ. ಇರು.

98
00:10:30,505 --> 00:10:33,133
ಇದು ನನ್ನ ಸವಾರಿ. ನಡಿ. ನಡಿ!

99
00:10:38,013 --> 00:10:39,222
ಬೆಲ್ಟ್ ಹಾಕು.

100
00:10:39,306 --> 00:10:43,685
ಸಾರಿ. ಯಾರೋ ಶೇಡ್ಸ್ ಹಾಕ್ಕೊಂಡಿದ್ದು ನೋಡಿ
ನಾವು ಓಡ್ ಹೋಗ್ತಿದೀವಾ?

101
00:10:43,769 --> 00:10:45,103
ಓಡ್ ಹೋಗ್ತಿಲ್ಲ.

102
00:10:47,564 --> 00:10:48,857
ಇರು.

103
00:10:54,654 --> 00:10:55,781
ಇಲ್ಲೇ ಇರು.

104
00:10:56,531 --> 00:10:58,158
ಹುಶಾರಾಗಿದೀಯಾ? ನಿನ್ನ ನೋಡಿಲ್ಲ

105
00:11:44,162 --> 00:11:45,705
ಅದನ್ನು ಓದು. ತೆಗಿ!

106
00:11:48,250 --> 00:11:50,502
ಅದು ವೃತ್ತಿಪರ ಟಾರ್ಗೆಟ್ ಪ್ಯಾಕೇಜ್.

107
00:11:51,878 --> 00:11:53,964
ಇನ್ನೂ ನಂಗೆ ತಲೆ ಸರಿ ಇಲ್ಲ ಅನ್ಸುತ್ತಾ?

108
00:12:22,159 --> 00:12:24,202
-ನಾವು ಪೋಲೀಸರಿಗೆ ಹೇಳ್ಬೇಕು.
-ಬೇಡ.

109
00:12:24,286 --> 00:12:28,415
-ಅವನು ಹಾಡಹಗಲೇ ನಿಮ್ಮ ಮೇಲೆ ದಾಳಿ ಮಾಡಿದ್ದ.
-ಎನ್ಸಿಐಎಸ್ ಸರಿ ಇಲ್ಲ.

110
00:12:28,498 --> 00:12:30,834
ಪಿಡಿಯಲ್ಲೂ ಇರಬಹುದು. ಹೇಳೋಕಾಗಲ್ಲ.

111
00:12:30,917 --> 00:12:33,086
ನಾವು ನಾಪತ್ತೆಯಾಗಬೇಕು.

112
00:12:43,972 --> 00:12:46,183
ಇವುಗಳನ್ನ ಬಳಸೋದು ಗೊತ್ತಾ?

113
00:12:46,266 --> 00:12:49,853
-ಹೌದು.
-ನಿಂಗೆ ಇದೆಲ್ಲಾ ಬರುತ್ತೋ ಇಲ್ವೋ ಗೊತ್ತಿಲ್ಲ.

114
00:12:49,936 --> 00:12:54,441
ಇದು ಮುಗಿಯೋವರೆಗೂ ನೀನು ಅಡಗಿರಬೇಕು.
ಹೋಗೋಕೆ ಯಾವುದಾದರೂ ಜಾಗ ಇದ್ಯಾ?

115
00:12:56,526 --> 00:12:57,861
-ನಿಂಗೆ?
-ಹೌದು.

116
00:13:06,745 --> 00:13:09,915
ನಿನ್ನ ಇದರಲ್ಲಿ ನೂಕಿದ್ದಕ್ಕೆ ಸಾರಿ.
ಮತ್ತೆ ನನ್ನನ್ನ ನೋಡಲ್ಲ.

117
00:13:10,790 --> 00:13:11,875
ರೀಸ್.

118
00:13:14,669 --> 00:13:16,671
ಕ್ಯಾಪ್ಸ್ಟೋನ್ ಬಗ್ಗೆ ಏನ್ ಗೊತ್ತಿದೆ.

119
00:13:17,380 --> 00:13:19,549
ನಿಮ್ಮವರ ಮಧ್ಯ ಸಂಪರ್ಕ ಇದ್ರೆ,
ಕಂಡುಹಿಡೀತೀನಿ.

120
00:13:45,659 --> 00:13:47,160
ನನ್ನ ತಲುಪೋದು ನಿಂಗೊತ್ತು.

121
00:14:24,739 --> 00:14:25,824
ಎಲ್ಲ ತೆರವಾಗಿದೆ!

122
00:14:27,784 --> 00:14:28,785
ಹೊಡೀರಿ!

123
00:14:34,833 --> 00:14:36,001
ಒಳಗೆ ನುಗ್ಗಿ!

124
00:14:40,130 --> 00:14:41,298
ನಿನ್ನ ಮೇಲೆ.

125
00:14:43,967 --> 00:14:44,968
ಎಲ್ಲ ತೆರವಾಗಿದೆ!

126
00:14:54,185 --> 00:14:55,186
ತೆರವಾಗಿದೆ!

127
00:14:55,895 --> 00:14:56,980
ಹೋಗಿ, ಹೋಗಿ, ಹೋಗಿ!

128
00:14:57,147 --> 00:14:58,273
ಹೋಗಿ, ಹೋಗಿ!

129
00:15:00,191 --> 00:15:01,234
ಒಳಗೆ ನುಗ್ಗಿ!

130
00:15:05,989 --> 00:15:07,282
ಕೊನೆಯ ಕೋಣೆ.

131
00:15:07,365 --> 00:15:09,701
-ಅದೇನಾಗಿತ್ತು ಹಾರ್ಗ್ರೋವ್?
-ಸರ್!

132
00:15:09,784 --> 00:15:12,621
ನೀವು ಬಾಗಿಲಲ್ಲಿದ್ದೀರಾ,
ನೀವು ಕೋಣೆಗೆ ಹೋಗ್ಬೇಕಿತ್ತು.

133
00:15:12,704 --> 00:15:14,873
ನಂದು ನೆಕ್ಕೋಕೆ ನಿಂಗೆ ಹಣ ಕೊಡ್ತಾ ಇಲ್ಲ.

134
00:15:14,956 --> 00:15:17,208
ನನಗೆ ವೆರಿಸಿಮಿಲಿಟ್ಯೂಡ್ ಬೇಕು, ತಿಳೀತಾ?

135
00:15:18,126 --> 00:15:20,670
ಇದನ್ನ ಮತ್ತೆ ಮಾಡಿದ್ರೆ, ಹೊಗೆ ಹಾಕ್ಕೋತೀಯಾ.

136
00:15:27,761 --> 00:15:32,182
ನಿಖರತೆ 83 ಶೇಕಡಾ,
ವೇಗ 71ನೆಯದ್ದು.

137
00:15:32,724 --> 00:15:34,392
ಅತ್ಯುತ್ತಮ ಸಾಧನೆ ಏನಲ್ಲ. ಪರವಾಗಿಲ್ಲ.

138
00:15:34,476 --> 00:15:37,020
ದೇವರಾಣೆಗೂ ಶತ್ರು ಯೋಧನಾಗಿರಬಾರದು

139
00:15:37,729 --> 00:15:40,649
ನನ್ನ ಪ್ರತಿಕ್ರಿಯೆ ಈಗಲೂ ಕೆಟ್ಟದಾಗಿದೆ.

140
00:15:41,149 --> 00:15:42,859
ಮತ್ತೆ ನೋಡ್ತೀರಾ ಸರ್?

141
00:15:44,027 --> 00:15:45,362
ನೋಡಬಹುದಿತ್ತು. ಬೇಡ.

142
00:15:45,445 --> 00:15:47,739
ಲಂಚ್ ವಿರಾಮ ಮುಗೀತು. ನಡೀರಿ.

143
00:15:56,331 --> 00:16:00,627
ಕ್ಯಾಪ್ಸ್ಟೋನ್ ಇಂಡಸ್ಟ್ರೀಸ್

144
00:16:29,614 --> 00:16:30,490
ಸ್ಟೀವ್!

145
00:16:31,408 --> 00:16:33,243
-2 ಗಂಟೆಗೆ ಜೆನೆಟ್ ಜೊತೆ
-ಸ್ಟೀವ್!

146
00:16:33,326 --> 00:16:37,038
ಸಂಜೆ 2:45, ಆಲ್ ಖಲೀಪ್.
ಸಂಜೆ 3.30 ರಿಪ್ಜಿಯಾನ್ ಬೋರ್ಡ್,

147
00:16:37,122 --> 00:16:40,291
-ಸಂಜೆ, ಸುರಿ ರತ್ನಾವನ್...
-ರತ್ನಾವನ್. ಅದು ಬೇಡ.

148
00:16:40,375 --> 00:16:42,836
-ಸ್ಟೀವ್...
-ಇರು, ಗೇರಿ ಮಾಥಿಸ್ಗೆ ಫೋನ್ ಮಾಡು

149
00:16:42,919 --> 00:16:45,004
-ನಾವು ಮಾತಾಡ್ಬೇಕು.
-ಇರು ಅಂದೆ ಸೌಲ್.

150
00:16:45,088 --> 00:16:48,717
ಒಡೆತನ ತಗೋತಾ ಇದೀವಿ ಅಂತ ಹೇಳು.
ಕೂಗಬೇಕು ಅಂದ್ರೆ, ಗೋಡೆ ಹುಡುಕಲಿ.

151
00:17:08,611 --> 00:17:09,696
ಅವನನ್ನ ಒಳಗೆ ಕಳಿಸು.

152
00:17:20,498 --> 00:17:22,959
ನೀನು ಸಾಂಟಾ ಬಾರ್ಬರಾದಲ್ಲಿ ಇರಬೇಕಿತ್ತು.

153
00:17:23,501 --> 00:17:24,753
ಒಂದು ಸಮಸ್ಯೆ ಬಂದಿದೆ.

154
00:17:26,463 --> 00:17:28,798
ಅದಿಕ್ಕೇ ನೀನು ಸಾಂಟಾ ಬಾರ್ಬರಾಗೆ ಹೋಗಿಲ್ವಾ?

155
00:17:33,052 --> 00:17:35,972
-ಏನ್ ಸಮಸ್ಯೆ?
-ಜೋರಾಗಿ ಹೇಳದೇ ಇರೋ ಸಮಸ್ಯೆ,

156
00:17:36,055 --> 00:17:40,018
-ಕೋರ್ಟ್ನಲ್ಲಿ ಕೇಳೋಕೆ ಭಯ ಆಗೋ ಸಮಸ್ಯೆ.
-ಇಲ್ಲಿ ನಾವು ಸುರಕ್ಷಿತವಾಗಿದೀವಿ.

157
00:17:45,732 --> 00:17:46,775
ಗೋರ್ಡೋ ಸತ್ತು ಹೋದ.

158
00:17:47,692 --> 00:17:48,693
ರೀಸ್ ಸತ್ತಿಲ್ಲ.

159
00:17:49,611 --> 00:17:53,156
-ನಾನು ನೋಡ್ಕೋತೀನಿ.
-ಇದನ್ನ ಸಿರಿಯಾದಲ್ಲಿ ಮಾಡಬೇಕಿತ್ತು.

160
00:17:53,239 --> 00:17:55,700
ಈಗ ಆ ಸೈಕೋ ಕ್ಯಾಲಿಫೋರ್ನಿಯಾಗೆ ಬಂದಿದಾನೆ...

161
00:17:55,784 --> 00:17:58,286
ಅವನು ಸೈಕೋ ಅಲ್ಲ, ಅವನು ಸೀಲ್ ಕಮಾಂಡರ್.

162
00:17:58,369 --> 00:17:59,204
ಗೌರವವಿರಲಿ.

163
00:18:03,750 --> 00:18:09,005
ಇದು ಕೆಟ್ಟದಾಗಿದೆ, ಸ್ಟೀವ್. ರೀಸ್ ಅಲ್ಲಿದ್ದರೆ,
ಹೋಲ್ಡರ್ ಉಲ್ಲಂಘನೆ ಆಗಿದ್ದರೆ...

164
00:18:09,088 --> 00:18:11,508
ಅವನಿಗೆ ಕೆಲಸಕ್ಕೆ ಬರೋವಂಥದ್ದೇನೂ ಗೊತ್ತಿರಲಿಲ್ಲ

165
00:18:11,591 --> 00:18:13,259
ನಾ ಗೊತ್ತು. ಕೆಲಸಕ್ಕೆ ಬರ್ತೀನಿ.

166
00:18:13,343 --> 00:18:16,471
ಹಾರ್ಗ್ರೋವ್ ಜೊತೆ ಮಾತಾಡು.
ಟ್ರಿಪ್ ವಿವರ ನಾನು ಕೊಡ್ತೀನಿ.

167
00:18:16,554 --> 00:18:18,681
ನಾನು ಸಾಂಟಾ ಬಾರ್ಬರಾಗೆ ಹೋಗಲ್ಲ.

168
00:18:18,765 --> 00:18:22,435
-ಮೈಕ್ ಟೆಡ್ಸ್ಕೋ ತನ್ನ ಕಂಪನಿನ ಮಾರಬಹುದು.
-ಮೈಕ್ ಸೇಲ್ಸ್ಮ್ಯಾನ್ ಅಲ್ಲ.

169
00:18:23,520 --> 00:18:24,938
ಅವನಿಗೆ ಆಸೆಗಳಿವೆ.

170
00:18:25,814 --> 00:18:28,274
ಈಗ ಗಮನ ಕೊಡಬೇಕು, ಸೌಲ್, ಸರೀನಾ?

171
00:18:29,234 --> 00:18:31,861
ಪ್ಲಾನೋ ಡೀಲ್ ಕೆಲಸ ಮಾಡ್ಬೇಕು. ಮಾಡ್ಲೇಬೇಕು.

172
00:18:31,945 --> 00:18:35,740
ಕ್ಯಾಪ್ಸ್ಟೋನ್ ಬಹಳ ಹಣ ಹಾಕಿದೆ.
ಈಗ ಅದನ್ನ ಮಾರೋ ಸಮಯ.

173
00:18:35,824 --> 00:18:40,370
ಎಲಾಯಸ್ ರೈಬರ್ಗ್ ಧೈರ್ಯ ತೋರಿಸೋಕೆ ಕಾಯ್ತಾ
ಕೂರೋಕಾಗಲ್ಲ. ನೀನ್ ಅಲ್ಲಿ ಹೋಗು, ಸರೀನಾ?

174
00:18:42,038 --> 00:18:43,039
ನೀನೇ ನನ್ನ ಸಮಾಪ್ತಿ

175
00:18:46,292 --> 00:18:47,544
ಕರ್ಟ್, ಜಾನೆಟ್ನ ಕಳಿಸು

176
00:19:46,978 --> 00:19:48,396
ನೀನು ಮಲಗೋಕೆ ಬಾ.

177
00:19:49,898 --> 00:19:51,441
ಇಲ್ಲ. ಹೋಂವರ್ಕ್ ಇದೆ.

178
00:19:56,654 --> 00:20:00,700
ವಾರ್ಕಾಮ್ ನಿಂದಾಗಿ ಬೆಂಕಿ
ಮೇಲಿಂದ ಜಿಗೀತಾ ಇದೀಯಾ?

179
00:20:00,867 --> 00:20:03,870
ಅದು ಝೋರಾಸ್ಟ್ರಿಯನ್ನರ ಹೊಸ ವರ್ಷಾಚರಣೆ.
ನ್ಯೂರಾಜ್.

180
00:20:03,953 --> 00:20:06,623
ಅದು ನಿನ್ನ ಕೆಲಸಕ್ಕೆ ಸೂಕ್ತ ಅಂತ ಅನಿಸುತ್ತೆ.

181
00:20:08,041 --> 00:20:10,710
ಅವರು ನಮ್ಮ ಸಿರಿಯನ್ ಸೈನ್ಯದ ಜೊತೆ ಇಟ್ರು.

182
00:20:11,336 --> 00:20:13,338
ಕರ್ಡಿಸ್ತಾನ್ ಬಗ್ಗೆ ಕಲಿತೆ.

183
00:20:13,421 --> 00:20:14,547
ಒದೀತಾ ಇದಾಳೆ.

184
00:20:15,590 --> 00:20:16,674
ಹೌದಾ?

185
00:20:19,260 --> 00:20:20,470
ನಾನು...

186
00:20:24,724 --> 00:20:26,309
ಅಪ್ಪನ ತಿಕ ಒದ್ಯೋಳು

187
00:20:26,434 --> 00:20:29,020
ಅದನ್ನ ಅವಳ ಅಮ್ಮನಿಂದ ಕಲಿತಿದಾಳೆ.

188
00:20:32,440 --> 00:20:35,693
ನೀನು ಅಲ್ಲಿ ಸಿಕ್ಕಿ ಹಾಕಿಕೊಂಡರೂ,
ನಾನಿಲ್ಲಿ ಹುಶಾರಾಗಿರ್ತೀನಿ.

189
00:20:35,777 --> 00:20:38,154
ನನ್ನ ಅಪ್ಪ ಅಮ್ಮ ಇಲ್ಲಿ ಬಂದು ಸಹಾಯ ಮಾಡ್ತಾರೆ.

190
00:20:42,200 --> 00:20:44,869
ನಾನು ವಾಪಸ್ ಬಂದ್ರೆ ನಾನು ಬಹುಶಃ ಮೀನು ಹಿಡಿಯೋಕೆ
ಹೋಗಬಹುದೇನೋ.

191
00:20:47,413 --> 00:20:51,834
ನಾನು ಒಂದು ಹಕ್ಕಿನ ಬಿಟ್ಟರೂ ಸರಿ,
ನಾನು ಮನೇಗೇ ಹಾರಿ ಬರ್ತೀನಿ. ಇಲ್ಲಿರ್ತೀನಿ.

192
00:20:53,336 --> 00:20:55,421
ದಾರಿಲಿ ನಿನ್ನ ಕೈ ಹಿಡಿದಿರ್ತೀನಿ.

193
00:20:55,505 --> 00:20:59,926
ಸ್ಯಾಂಡ್ಬಾಕ್ಸ್ನಿಂದ ಸೂಲಗಿತ್ತಿ
ನನ್ನ ಸಲುವಾಗಿ ಮಾತ್ರ ಬರಬಹುದು.

194
00:21:07,767 --> 00:21:09,018
ಅಯ್ಯೋ, ಇಲ್ಲ.

195
00:21:21,030 --> 00:21:22,740
ಅದು ಹುಶಾರಾಗುತ್ತಾ, ಅಪ್ಪಾ?

196
00:21:22,824 --> 00:21:24,492
ಹೌದು. ಅದು ಹುಶಾರಾಗುತ್ತೆ.

197
00:21:24,575 --> 00:21:27,662
ಅದು ಹೆದರಿದೆ.
ಮತ್ತೆ ತನ್ನ ಕುಟುಂಬ ಇದ್ದಲ್ಲಿ ಹೋಗುತ್ತೆ.

198
00:21:49,892 --> 00:21:50,727
ಬರ್ತಿದೀನಿ.

199
00:21:52,437 --> 00:21:53,438
-ಥ್ಯಾಂಕ್ಸ್.
-ಸರಿ.

200
00:21:56,190 --> 00:21:58,818
ಹನಿಮೂನ್ ಸೂಟ್ಗೆ ತಯಾರಿ ಮಾಡಿರೋ
ಥರ ಕಾಣ್ತಾ ಇದೆ.

201
00:22:01,654 --> 00:22:05,116
ನೀನ್ ಹೇಳಿದ್ದೇ ಸರಿ,ಎನ್ಸಿಐಎಸ್
ರಾತ್ರಿ ಒಂದು ಬೋಲೋ ಹಾಕಿತ್ತು.

202
00:22:05,199 --> 00:22:08,119
ನಾನ್ ನೀನಾಗಿದ್ರೆ,
ಇಷ್ಟ್ ಬೇಗ ಮನೇಗ್ ಹೋಗ್ತಿರ್ಲಿಲ್ಲ.

203
00:22:08,202 --> 00:22:12,457
ಎಲ್ಎದಲ್ಲಿ ನಿನ್ ಶೂಟರ್ನ ಅಲ್ಲಿನವರು
ಏಡ್ರಿಯನ್ ಗೊರ್ಡೋನಸ್ ಅಂತ ಗುರುತಿಸಿದಾರೆ.

204
00:22:12,540 --> 00:22:16,377
ಮಾಜಿ ಮಾರ್ಸಾಕ್, ಅಥವಾ ರೇಡರ್ಸ್,
ಅಥವಾ ಅವರು ಏನಂತ ಕರ್ಕೋತಾರೋ ಅದು.

205
00:22:16,461 --> 00:22:18,546
ಟಾಲೋಸ್ ಟಾಕ್ಟಿಕಲ್ ಜೊತೆ ಕೆಲಸ ಮಾಡ್ತಾನೆ

206
00:22:19,422 --> 00:22:21,507
ಅವರನ್ನ ನೇರವಾಗಿ ಭೇಟಿ ಮಾಡಿಲ್ಲ...

207
00:22:21,591 --> 00:22:24,761
ಅವರಿಗೆ ಯಾವುದೇ ನೈತಿಕತೆ ಇಲ್ಲ ಅಂತ ಹೇಳಬಹುದಾ?

208
00:22:24,844 --> 00:22:27,472
ಅಯ್ಯೋ ದೇವರೇ! ಸ್ವಲ್ಪ ಉಸಿರಾಡು.

209
00:22:28,723 --> 00:22:31,851
ಬರಿಟೋ ಎಲ್ಲೂ ಓಡ್ ಹೋಗಲ್ಲ, ಅಣ್ಣಾ.

210
00:22:31,934 --> 00:22:33,895
ನಂಗೆ ಬುಕಾಟಿನಿ ಸಿಕ್ಕಿಲ್ಲ ಕಣೋ.

211
00:22:33,978 --> 00:22:38,107
-ಹಾಗಂದ್ರೆ ಏನು.
-ಅಂದ್ರೆ ಬರಿಟೋ ಕೊಟ್ಟಿದ್ದಕ್ಕೆ ಥ್ಯಾಂಕ್ಸ್ ಅಂತ.

212
00:22:38,191 --> 00:22:39,859
-ಸ್ವಾಗತ.
-ಥಾಂಕ್ ಯೂ.

213
00:22:54,540 --> 00:22:59,087
ಲ್ಯೂಸ್. ಅವಳಲ್ಲಿ ಕಲೆ ಇತ್ತು, ಅಲ್ವಾ?

214
00:22:59,587 --> 00:23:04,175
ಹೌದು. ಹಾಡ್ತಾ ಇದ್ಳು.
ವಾದ್ಯ ನುಡಿಸ್ತಾ ಇದ್ಳು.

215
00:23:09,222 --> 00:23:11,224
ಅವಳು ಬಿಡು, ಅಣ್ಣಾ.

216
00:23:21,275 --> 00:23:25,196
ಅವಳು ಈ ಚಿತ್ರ ಯಾವಾಗ ಬಿಡಿಸಿದ್ದು
ಅಂತ ನಂಗೆ ನೆನಪೇ ಆಗ್ತಿಲ್ಲ.

217
00:23:25,279 --> 00:23:27,448
ನಂಗೆ ಹಿಂದಿನ ಭಾನುವಾರನೇ ನೆನಪಿರಲ್ಲ.

218
00:23:29,200 --> 00:23:31,619
ಸಿರಿಯಾದ ಹಿಂದಿನ ದಿನ ಬೆಳಿಗ್ಗೆ ಇರಬಹುದು.

219
00:23:32,995 --> 00:23:35,957
ಅಲ್ಲೊಂದು ಹಕ್ಕಿ ಇತ್ತು.

220
00:23:37,166 --> 00:23:41,129
ಬಹುಶಃ ಸ್ಟಾರ್ಲಿಂಗ್,
ಕಿಟಕಿಗೆ ಬಡಿದು ಸತ್ತು ಹೋಯಿತು.

221
00:23:41,212 --> 00:23:43,631
ನಿನ್ನ ನೆನಪು ತುಂಬಾ ಚೆನ್ನಾಗಿರೋ ಹಾಗಿದೆ.

222
00:23:43,714 --> 00:23:46,759
ಇದೆ. ಬರೀ ಅರ್ಧ ಮಾತ್ರ.
ಬೇರೆ ಭಾಗ...

223
00:23:46,843 --> 00:23:48,845
ಹಾಳಾಗ್ ಹೋಗಿದೆ. ಎಲ್ಲಾ ಗೊಂದಲ.

224
00:23:52,557 --> 00:23:54,892
ಬೇರೆ ನೆನಪುಗಳ ಜೊತೆ ಸೇರಿದೆ. ಒಂಥರಾ...

225
00:23:56,144 --> 00:23:58,479
ಕಲೈಡೋಸ್ಕೋಪ್ ನೋಡ್ತಿರೋ ಹಾಗೆ.

226
00:23:59,856 --> 00:24:04,569
ನಿಂಗೆ ತುಂಬಾ ಕಷ್ಟ ಆಗಿದೆ.
ಅಂದ್ರೆ, ನಿಂಗೆ ಈಗ್ಲೂ ತಲೆನೋವ್ ಬರುತ್ತಾ?

227
00:24:09,490 --> 00:24:10,575
ಇಲ್ಲ.

228
00:24:14,912 --> 00:24:17,165
-ಟಾರ್ಗೆಟ್ ಪ್ಯಾಕೇಜ್ ನೋಡಿದ್ಯಾ?
-ಹೌದು.

229
00:24:18,875 --> 00:24:24,046
ಹೌದು. ಅವನು ಪೂರ್ತಿ
ಎಕ್ಕುಟ್ಟೋಗಿರೋ ಥರ ಕಾಣ್ತಾನೆ.

230
00:24:24,130 --> 00:24:25,756
ಅವನ ಚಿಕ್ಕ ನಾಯಿ ನೋಡಿದ್ಯಾ?

231
00:24:27,508 --> 00:24:31,053
ಅವನನ್ನ ನೋಡಿದ್ರೆ ಮಾಸ್ಟರ್ಮೈಂಡ್ ಥರ ಕಾಣಲ್ಲ.

232
00:24:31,137 --> 00:24:33,139
ನಂಗೂ ಹಾಗೆ ಅನಿಸಲಿಲ್ಲ.

233
00:24:33,222 --> 00:24:35,349
ನಾನು ಕ್ಯಾಪ್ಸ್ಟೋನ್ ನೋಡ್ತೀನಿ.

234
00:24:35,433 --> 00:24:38,561
ಪರವಾಗಿಲ್ಲ. ನನ್ನವರು ಆಗ್ಲೇ
ಆ ಕೆಲಸ ಶುರು ಮಾಡಿದಾರೆ.

235
00:24:39,061 --> 00:24:43,482
ಒಬ್ಬಳು ಪತ್ರಕರ್ತೆ ಯಾರಿಗೂ ಅನುಮಾನ ಬರದೇ ಇರೋ
ಹಾಗೆ ನಂಗೆ ಸಹಾಯ ಮಾಡ್ತಾ ಇದಾಳೆ.

236
00:24:43,566 --> 00:24:44,567
ಪತ್ರಕರ್ತೆನಾ?

237
00:24:45,276 --> 00:24:46,277
ಹೌದು.

238
00:24:47,111 --> 00:24:48,779
ಒಳ್ಳೇದು.

239
00:24:50,323 --> 00:24:52,200
-ಇಲ್ಲಿರೋದ್ ಅವಳಿಗೆ ಗೊತ್ತಾ?
-ಇಲ್ಲ.

240
00:24:52,283 --> 00:24:53,993
-ನಾನಿಲ್ಲಿರೋದು ಗೊತ್ತಾ?
-ಇಲ್ಲ.

241
00:24:54,076 --> 00:24:57,705
ಇಲ್ಲಿ ನೀನಷ್ಟೇ ಇಲ್ಲ. ನಾನೂ ಸಿಐಎ ತಾನೇ.

242
00:24:57,830 --> 00:25:00,124
ನೀನು ಯುದ್ಧ ಮಾಡ್ತಿರೋದು ಗೊತ್ತಾದ್ರೆ.

243
00:25:00,208 --> 00:25:01,918
-ಗೊತ್ತಾಯ್ತು.
-ಎಲ್ಎಯಲ್ಲಿ...

244
00:25:02,001 --> 00:25:04,670
ಹೇಳ್ತಿದೀನಲ್ಲ. ನಿಂಗೇನೂ ಆಗಲ್ಲ. ಪ್ರಾಮಿಸ್.

245
00:25:06,214 --> 00:25:07,882
ಅವಳು ಒಂದು ಆಸ್ತಿ.

246
00:25:09,592 --> 00:25:11,344
ಅವಳನ್ನ ಯಾವ ವರ್ಗದಲ್ಲಿಡಬೇಕು ಗೊತ್ತು.

247
00:25:12,553 --> 00:25:13,888
ಯಾವುದೇ ಒತ್ತಾಯ ಇಲ್ಲ.

248
00:25:13,971 --> 00:25:17,433
-ನೀನು ಹೋದ್ರೆ, ನಂಗರ್ಥ ಆಗುತ್ತೆ.
-ಲೋ, ನಾನೆಲ್ಲೂ ಹೋಗ್ತಿಲ್ಲ.

249
00:25:17,516 --> 00:25:19,936
ಇದು ನಂಗೆ ಒತ್ತಾಯ ಅಲ್ಲ, ಅಣ್ಣಾ.

250
00:25:21,103 --> 00:25:24,190
ನಾವು ಒಬ್ಬರನ್ನೊಬ್ಬರು ನೋಡ್ಕೋಬೇಕು, ಅಷ್ಟೇ.

251
00:25:24,273 --> 00:25:25,441
ಯಾವತ್ತೂ.

252
00:25:27,777 --> 00:25:29,153
ಸರಿ.

253
00:25:35,660 --> 00:25:37,745
ಇಲ್ಲಿ ಸಿಕ್ಕಾಪಟ್ಟೆ ಜನರು ನಿನ್ನ ಟ್ರಾಕ್

254
00:25:37,828 --> 00:25:40,623
ಮಾಡ್ತಿದಾರೆ, ಸ್ವಲ್ಪ ದಿನ ಅಡಗಿರು. ಪ್ಲೀಸ್.

255
00:25:43,167 --> 00:25:46,295
-ಅದೇ ನಾನೂ ಹೇಳ್ತಿರೋದು
-ನಾನ್ ಆರಾಮಾಗಿದೀನಿ.

256
00:25:46,379 --> 00:25:48,965
ಏನಾದ್ರೂ ಗೊತ್ತಾದ್ರೆ ಹೇಳ್ತೀನಿ.

257
00:25:49,924 --> 00:25:52,301
ಕಾಪಿ. ಬೆನ್.

258
00:25:54,428 --> 00:25:58,808
ದೊಡ್ಡ ಲೆಬಾಸ್ಕಿ ಥರ ಬಟ್ಟೆ ಹಾಕ್ಕೊಂಡು
ಗಾಲ್ಫ್ ಟೂರ್ನ್ಮೆಂಟ್ಗೆ ಹೋಗ್ತಿಲ್ಲ, ಅಲ್ವಾ?

259
00:25:58,891 --> 00:26:00,101
ಗಾಲ್ಫ್ ಇಷ್ಟ ಇಲ್ಲ.

260
00:26:18,995 --> 00:26:20,288
ಮಿಸ್ ಮಾಡ್ತೀಯಾ.

261
00:26:23,207 --> 00:26:24,500
ಅವನು ಮಿಸ್ ಮಾಡ್ತಾನೆ.

262
00:26:26,419 --> 00:26:29,588
ಅವನು ಹೊಳೆಯೋ ಸ್ಕಾಟಿ ಕ್ಯಾಮರೂನ್
ಪ್ರೋಟೋಟೈಪ್ ಖರೀದಿಸಿದಾನೆ.

263
00:26:29,672 --> 00:26:31,590
ಅವನ ಆಟ ಸುಧಾರಿಸುತ್ತೆ ಅನ್ನೋ ಭ್ರಮೆ.

264
00:26:32,758 --> 00:26:37,430
ಅವನು ಬುದ್ಧಿವಂತ, ಆದ್ರೆ ಭಾವನೆನ
ಖರೀದಿಸೋಕಾಗಲ್ಲ ಅಂತ ಹೇಳ್ತಿರ್ತೀನಿ.

265
00:26:40,474 --> 00:26:42,643
ವಿಮಾನದಲ್ಲಿ ನಿನ್ ಚೆನ್ನಾಗ್ ನೋಡ್ಕೋತಾರಾ?

266
00:26:42,768 --> 00:26:45,229
ಗಗನಸಖಿ ಜೊತೆ ಲಲ್ಲೆ ಹೊಡೀತೀಯಾ?

267
00:26:45,313 --> 00:26:50,192
ಇಲಾಯಸ್ 13 ತಾಸು ಪ್ರಯಾಣ ಮಾಡಿ ಬಂದು
ಗಗನಸಖಿಯರಿಗೆ ಕಿರುಕುಳ ಕೋಡೋ ಬಗ್ಗೆ ಮಾತಾಡ್ತಾನಾ.

268
00:26:50,276 --> 00:26:51,444
ಕಿರುಕುಳದ ಬಗ್ಗೆ ಅಲ್ಲ.

269
00:26:51,527 --> 00:26:55,990
ಚೆನ್ನಾಗ್ ದುಡ್ಡಿದ್ರೆ ಆಗೋ
ಆಕರ್ಷಣೆ ಬಗ್ಗೆ ಹೇಳ್ತಿದೀನಿ.

270
00:26:57,616 --> 00:27:01,203
ಮಿ. ಆಗ್ನನ್. ಯಾವತ್ತೂ ತಮಾಷೆ ಮಾಡೋ ಸ್ವಭಾವ.

271
00:27:01,287 --> 00:27:02,371
ತಮಾಷೆ ಮಾಡ್ತಿಲ್ಲ.

272
00:27:02,455 --> 00:27:07,043
ಜಗತ್ತಿನಲ್ಲಿ ಪ್ಲಾನೋ ಮೈಕ್ ಕಂಪನಿ ಖರೀದಿ ಮಾಡೋ
ಸಾಮರ್ಥ್ಯ ಇರೋ ನಾಲ್ಕು ಕಂಪನಿಗಳಲ್ಲಿ ಒಂದು.

273
00:27:07,126 --> 00:27:09,211
ನ್ಯೂಬೆಲ್ಲಮ್ ಬಗ್ಗೆ ಡೀಲ್ ಮಾಡೋಣ.

274
00:27:09,295 --> 00:27:11,589
ಕ್ಯಾಪ್ಸ್ಟೋನ್ ಇಂಡಸ್ಟ್ರೀಸ್? ಒಳ್ಳೇದು.

275
00:27:11,672 --> 00:27:14,425
ಅದ್ಬುತ. ನಾವ್ ಯಾರ್ ಜೊತೆಗಿದೀವಿ?

276
00:27:14,508 --> 00:27:16,302
ನಾನು ಬ್ರೈಸನ್ ಡುಶಾಂಬೋ ಬೇಕು ಅಂದೆ

277
00:27:16,385 --> 00:27:18,929
ನೀನು ಸ್ಟೀವ್ ಡೇವಿ ಜೊತೆ ಇದೀಯಾ.

278
00:27:19,889 --> 00:27:21,140
ಯಾವ್ ನನ್ ಮಗ ಅವನು?

279
00:27:21,682 --> 00:27:25,102
ಇಲ್ ಬಾ. ನೀಗೇನೋ ಹೇಳ್ಬೇಕು.

280
00:27:29,023 --> 00:27:33,736
ಈಗ ಕ್ಯಾಪ್ಸ್ಟೋನ್ ಇಂಡಸ್ಟ್ರೀಸ್ಗಾಗಿ
ಬ್ರೈಸನ್ ಡುಶಾಂಬೋ.

281
00:27:58,594 --> 00:27:59,595
ಅಷ್ಟೇ, ಅಣ್ಣಾ.

282
00:28:06,102 --> 00:28:10,648
ಆರು ವರ್ಷದ ಹಿಂದೆ ಒಂದು ಆಫರ್ ನಬಹಳ ಗಂಭೀರವಾಗಿ
ಪರಿಗಣಿಸಿದ್ವಿ ಅಂತ ನಾನ್ ಹೇಳ್ಕೋತೀನಿ.

283
00:28:10,815 --> 00:28:12,024
ನಂಗೆ ಗೊತ್ತಿರ್ಲಿಲ್ಲ.

284
00:28:12,108 --> 00:28:14,193
ನಿನ್ನ ಕೆಲಸ ತುಂಬಾ ಚೆನ್ನಾಗಿದೆ.

285
00:28:14,276 --> 00:28:15,694
ಹೊಗಳಲೇ ಬೇಕು.

286
00:28:15,778 --> 00:28:18,572
ಕ್ಯಾಪ್ಸ್ಟೋನ್ ಮಿಲಿಟರಿ ಒಪ್ಪಂದಗಳನ್ನ
ಮಾಡೋ ಮೊದಲು.

287
00:28:18,656 --> 00:28:21,867
ನ್ಯೂಬೆಲ್ಲಮ್ಗೆ ಒಂದು ಪ್ಲಾನ್ ಇತ್ತು
ಮತ್ತೆ ಈ ಸೇಲ್ ಆಗಿದ್ರೆ

288
00:28:21,951 --> 00:28:26,163
-ನಾವು ಆ ಮೂಲನ ಹುಡುಕಿ...
-ಆಯ್ತು. ಕುಣಿಯೋಕೆ ಶುರು ಮಾಡಿದ.

289
00:28:27,415 --> 00:28:33,254
ಜ್ಞಾನಿಗಳು ಯಾವತ್ತೂ ಬಹಳಷ್ಟು
ಸಾಧ್ಯತೆಗಳನ್ನ ಕಾಣ್ತಾರೆ.

290
00:28:33,337 --> 00:28:36,424
ಪಾಲುದಾರರು, ಆಶ್ರಯದಾತರಾಗಿ ನಮ್ಮ ಕೆಲಸ,

291
00:28:37,007 --> 00:28:39,760
ಅದನ್ನ ಸ್ವಲ್ಪ ಮಾತ್ರ ಕಡಿಮೆ ಮಾಡೋದಾಗಿದೆ.

292
00:28:40,469 --> 00:28:44,515
ಕ್ಯಾಪ್ಸ್ಟೋನ್ ಬಂದ ಮೇಲೆ,
ಸ್ಟೀವ್ ನಾಯಕತ್ವ ವಹಿಸಿಕೊಂಡ ಮೇಲೆ...

293
00:28:44,598 --> 00:28:46,892
ಅದಿಕ್ಕೇ ಅಲ್ವಾ ನಾವಿಲ್ಲಿರೋದು?

294
00:28:48,853 --> 00:28:51,939
ನಿಮ್ಮ ಈಗಿನ ದೃಷ್ಟಿಕೋನ ಚೆನ್ನಾಗಿದೆ,
ಮಿ. ಟೆಡೆಸ್ಕೋ.

295
00:28:52,481 --> 00:28:53,941
ಖಂಡಿತ. ಸರಿ.

296
00:28:54,024 --> 00:28:56,110
ಅಂದ್ರೆ ಪ್ಲೇನೋ ತಿರುಗಿ ಬೀಳೋಕೆ ಸಿದ್ಧನಾ

297
00:28:58,112 --> 00:29:02,783
ಮಿ. ಆಗ್ನನ್, ನಿಮ್ ಛಲ ನಂಗಿಷ್ಟ ಆಯ್ತು.
ಆದ್ರೆ ಇದನ್ನ ಬೇಕು ಅಂತ ಮಾಡಿದ್ದು.

298
00:29:02,867 --> 00:29:04,118
ಒಂದು ಸಾಮಾಜಿಕ ಭೇಟಿ

299
00:29:04,201 --> 00:29:05,327
ಸಾಮಾಜಿಕ?

300
00:29:05,703 --> 00:29:07,413
ಸರಿ, ಇದೆ ಹೇಗಿದೆ?

301
00:29:08,914 --> 00:29:11,208
ನಾನು 16ರಲ್ಲಿ ಒಂದು ಮನೆ ಬಾಡಿಗೆ ತಗೊಂಡೆ.

302
00:29:12,084 --> 00:29:14,295
ಈವತ್ತು ರಾತ್ರಿ ಪುಟ್ಟ ಸ್ವಾರಿ ಮಾಡಿದ್ರೆ?

303
00:29:14,920 --> 00:29:16,422
ಹುಡುಗಿಯರಿಗೆ ಫೋನ್ ಮಾಡ್ತೀನಿ

304
00:29:16,505 --> 00:29:19,717
ನನ್ ಹತ್ರ ನಿಮ್ಮನ್ ಫ್ಲಾಟ್ ಮಾಡೋ
ಬಾಸ್-ಅರ್ಮಾನಾಕ್ ಬಾಟಲ್ ಇದೆ.

305
00:29:20,509 --> 00:29:24,138
ನಾನು ಒಂದಿಷ್ಟ್ ಸಂಖ್ಯೆಗಳನ್ನ ಹೇಳ್ತೀನಿ.
ಅದು ಸರಿಯಾಗಿದ್ರೆ, ಒಳ್ಳೇದು.

306
00:29:24,221 --> 00:29:26,599
ಇಲ್ಲ ಅಂದ್ರೆ ಬ್ರೈಸನ್ ಇದ್ದೇ ಇದಾನೆ.

307
00:29:29,935 --> 00:29:33,564
ನೀನ್ ಹೇಳಿದ್ ಮನೆ ಎಲ್ಲಿದೆ?

308
00:30:19,652 --> 00:30:22,404
ಹೌದು. ಅವನ ಮೇಲೆ ಕಣ್ಣಿಟ್ಟಿದೀನಿ.

309
00:30:24,198 --> 00:30:27,493
ಸುಲಭವಾದ ದಿನ, ಅಣ್ಣಾ. ಸುಲಭವಾದ ದಿನ.

310
00:30:28,327 --> 00:30:29,370
ಹೌದು.

311
00:30:53,769 --> 00:30:55,854
ಎಕ್ಸ್ಕ್ಯೂಸ್ ಮೀ. ಹಲೋ?

312
00:30:55,938 --> 00:30:59,149
-ಜಾರ್ಡ್, ನಾನು.
-ಕೇಟೀ, ನಿಂಗೆ ಕಾಲ್ ಮಾಡ್ತಾ ಇದ್ದೆ.

313
00:30:59,233 --> 00:31:00,484
ಏನಾಯ್ತು?

314
00:31:01,151 --> 00:31:04,446
-ಸಾರಿ. ನನ್ ಫೋನ್ ಕಳೆದುಹೋಯ್ತು.
-ಹುಶಾರಾಗಿದೀಯಾ?

315
00:31:05,322 --> 00:31:07,992
ಕೇಳು, ರೀಸ್ ಬಗ್ಗೆ ನಾನು ಅಂದ್ಕೊಂಡಿದ್ದು ತಪ್ಪು.

316
00:31:08,075 --> 00:31:10,869
-ಎಲ್ಲಾ ತಪ್ಪಾಗಿತ್ತು.
-ಎಲ್ಲಾ ತಪ್ಪಾಗಿತ್ತು ಅಂದ್ರೆ?

317
00:31:12,746 --> 00:31:15,666
ಸ್ವಲ್ಪ ದಿನ ಊರು ಬಿಟ್ ಹೋಗ್ಬೇಕೇನೋ.

318
00:31:15,749 --> 00:31:17,918
ತುಂಬಾ ಸುಸ್ತಾಗಿದೀನಿ. ಗೊತ್ತಾ?

319
00:31:18,002 --> 00:31:21,130
ಇಲ್ಲ. ಗೊತ್ತಿಲ್ಲ. ಏನ್ ಹೇಳ್ತಾ ಇದೀಯಾ?

320
00:31:22,089 --> 00:31:25,926
ಇದನ್ನ ಮಾಡ್ತಾ ಇದೀಯಾ ಅಲ್ವಾ?
ನನ್ನ ಅರ್ಧಕ್ ಬಿಟ್ಟು ಹೋಗ್ತಾ ಇದೀಯಾ ತಾನೇ?

321
00:31:26,010 --> 00:31:27,803
ಸಾರಿ. ನೀನು ಒಳ್ಳೆಯವನು.

322
00:31:27,886 --> 00:31:31,307
ದೇವ್ರೇ, ಕೇಟೀ.
ನಿನ್ನ ನಂಬಿದ್ದಕ್ಕೆ ನಂಗೆ ಹೀಗಾಗ್ತಾ ಇದ್ಯಾ?

323
00:31:49,491 --> 00:31:52,161
ಚೆನ್ನಾಗ್ ನಡೀತಾ ಇದೆ ಅಲ್ವಾ?

324
00:31:52,745 --> 00:31:55,914
ಕೆಲಸ ಚೆನ್ನಾಗಿದೆ. ನಾವು ಗುರಿ ಮುಟ್ತೀವಿ.

325
00:32:02,796 --> 00:32:04,757
ಬಣ್ಣದ್ ಮಾತಾಡೋಕೆ ನಿನ್ನ ನೇಮಿಸಿಲ್ಲ.

326
00:32:10,971 --> 00:32:13,724
ಇದು ನಮ್ಮನ್ನ 05 ಲೆವೆಲ್
ಕೆಳ್ಗಡೆ ತಗೊಂಡ್ ಹೋಗುತ್ತೆ.

327
00:32:15,017 --> 00:32:16,143
ಹೌದು.

328
00:32:18,562 --> 00:32:24,360
ಎಲ್ಲರೂ ಒಟ್ಟಾಗಿ ಸಂಪನ್ಮೂಲಗಳ ಕೈಬಿಡೋದು
ಬುದ್ಧಿವಂತಿಕೆ ಅಲ್ಲ ಅಂತಾರೆ.

329
00:32:27,905 --> 00:32:29,448
ಅದು ಬುದ್ಧಿವಂತಿಕೆ ಅಲ್ವಾ?

330
00:32:32,493 --> 00:32:34,703
ಲೊರೇನ್, ನಿನ್ ಹತ್ರ ನಾಲ್ಕು ತಿಂಗಳಿದೆ.

331
00:32:34,995 --> 00:32:37,956
ನಿಜ ಹೇಳ್ಬೇಕು ಅಂದ್ರೆ ಇದು
ಕಮಿಟಿಗಿಂತ ಮುಂದೆ ಹೋಗಲ್ಲ.

332
00:32:38,499 --> 00:32:40,501
ನೀನು ಸೋಲೋಕ್ ತಯಾರಾಗಿದೀಯಾ?

333
00:32:43,128 --> 00:32:46,757
ಆಗ ನಾವು ಓಟು ಹಾಕಿಸೋಣ.
ಅರ್ಧ ಚೇಂಬರ್ ಗೆಲ್ಲುತ್ತೆ.

334
00:32:46,840 --> 00:32:50,219
ಕಾಂಟ್ರಾಕ್ಟರ್ಗಳ ಬಗ್ಗೆ?
ಇದು ಗೆಲುವು ಅಂತ ಅವರಿಗೂ ಅನಿಸುತ್ತಾ?

335
00:32:50,302 --> 00:32:51,970
ನನ್ನ ಒಪ್ಪಿಸೋಕೆ ನೋಡ್ತಿದೀಯಾ

336
00:32:52,054 --> 00:32:55,307
-ವಿಶೇಷ ಆಸಕ್ತಿಗಳ ಬಗ್ಗೆ ಮರುಕ ತೋರಿಸೋಕೆ?
-ಅವರಲ್ಲಿ ಅಧಿಕಾರ ಇದೆ

337
00:32:55,391 --> 00:32:57,142
ಅಂದ್ರೆ, ಅವರ ಮಾತು ನಡೆಯುತ್ತೆ.

338
00:32:58,268 --> 00:32:59,895
ನಿನ್ನ ಪರಂಪರೆ ಜೀವಂತವಾಗಿದೆ.

339
00:32:59,978 --> 00:33:03,565
-ಯಾವುದೇ ವಿರೋಧ ಇಲ್ದೇ.
-ಹೇಯ್.

340
00:33:03,649 --> 00:33:04,900
ಇದು ನನ್ನ ಪರಂಪರೆ.

341
00:33:06,610 --> 00:33:09,238
ವಸ್ತುಗಳನ್ನ ಸಿಕ್ಕಿದ್ದಕ್ಕಿಂತ ಚೆನ್ನಾಗಿ ಇಡೋದು.

342
00:33:50,404 --> 00:33:52,406
ಕ್ರಿಪ್ಟೆಕ್ಸ್

343
00:34:00,289 --> 00:34:04,543
ಹೌದು. ಅಲ್ಲೇನೋ ನಡೀತಿದೆ.
ನಿಂಗೆ ಹೇಳ್ಬೇಕು ಅಂದ್ಕೊಂಡೆ.

344
00:34:30,194 --> 00:34:34,072
ಹೇಯ್. ಚಿನ್ನಾ, ನಾನು ರೇವೆನ್.

345
00:34:36,241 --> 00:34:37,910
ಕಂಪನಿ ಬೇಕಾ?

346
00:34:37,993 --> 00:34:41,163
ಹಾಯ್. ರೇವೆನ್. ಹೌದು ಬೇಕು.

347
00:34:45,876 --> 00:34:47,628
ನೀನ್ ಒಳ್ಗಡೆ ಬರೋದು ನೋಡಿದೆ.

348
00:34:48,212 --> 00:34:51,089
ನಮ್ ಹುಡುಗಿ ಸಾಶಾ ಇಲ್ಲಿಗೆ ಬಂದು,
"ಅವನು ನಂಗೇ

349
00:34:51,173 --> 00:34:54,343
ಬೇಕು ಅಂತ ಹೇಳಿದ್ಳು.

350
00:34:54,426 --> 00:34:55,594
ನೀನು ಹಾಗೆ ಹೇಳಿದ್ಯಾ?

351
00:34:57,721 --> 00:35:02,643
ನಾವು ಹಿಂದೆ ಹೋಗಿ ಖಾಸಗಿಯಾಗಿ
ಒಂದ್ ಡ್ರಿಕ್ ಮಾಡೋಣ್ವಾ?

352
00:35:03,268 --> 00:35:05,103
ಇಲ್ಲೇ ಕೂತು ಮಾತಾಡ್ಬಹ್ದಲ್ವಾ?

353
00:35:06,355 --> 00:35:07,731
ಓಹ್ ನಂಗೆ ಮಾತಾಡೋದು ಇಷ್ಟ.

354
00:35:11,527 --> 00:35:13,070
ನಾವೇನ್ ಮಾತಾಡ್ತಾ ಇದೀವಿ?

355
00:35:13,862 --> 00:35:16,782
ನಂಗೆ ಪಾರ್ಟಿ ಮಾಡ್ಬೇಕು.
ಸಹಾಯ ಮಾಡೋಕಾಗುತ್ತಾ?

356
00:35:21,995 --> 00:35:23,121
ನೀನ್ ಪೋಲೀಸಾ?

357
00:35:25,165 --> 00:35:26,166
ಇಲ್ಲ.

358
00:35:27,000 --> 00:35:31,755
-ಆಗಿದ್ರೆ ಹೇಳ್ಬೇಕು.
-ಅದು ನಿಜನೋ ಗೊತ್ತಿಲ್ಲ. ನಾನ್ ಪೋಲೀಸ್ ಅಲ್ಲ.

359
00:35:36,093 --> 00:35:39,638
ನಿನ್ ಸೆಟ್ ಮಾಡ್ತೀನಿ.
ನಿಂಗೇನ್ ಬೇಕೋ ಹೇಳು.

360
00:35:39,721 --> 00:35:41,765
-ನಂಗೆ ತಲೆನೋವು ಬರ್ತಾ ಇದೆ.
-ಹೌದಾ?

361
00:35:42,599 --> 00:35:45,185
-ಎಷ್ಟು?
-ಸಿಕ್ಕಾಪಟ್ಟೆ.

362
00:35:48,438 --> 00:35:51,900
ಡಿಜೆ ಹತ್ರ ಮೆಥಾಡೋನ್ ವೇಫರ್ಸ್ ಇದೆ.
ಅದ್ರಿಂದ ಸಹಾಯ ಆಗ್ಬಹ್ದಾ?

363
00:35:53,694 --> 00:35:55,362
ಸಹಾಯ ಆಗ್ಬಹ್ದು ಅನ್ಸುತ್ತೆ.

364
00:35:56,905 --> 00:36:01,201
ಒಂದಕ್ಕೆ $100 ನಿಂಗೆ ಅಂತ ಒಳ್ಳೇ ರೇಟ್.

365
00:36:02,035 --> 00:36:03,078
ನಂಗೆ ಅಂತನಾ?

366
00:36:12,921 --> 00:36:14,548
ಥ್ಯಾಂಕ್ಸ್, ಅಲ್ಲಾಡ್ಬೇಡ.

367
00:36:22,973 --> 00:36:26,894
ಹ್ಯಾಪಿ ಬರ್ತ್ಡೇ, ಡಿಯರ್ ಡಾನಿ

368
00:36:26,977 --> 00:36:31,607
ಹ್ಯಾಪಿ ಬರ್ತ್ಡೇ ಟೂ ಯೂ

369
00:36:32,524 --> 00:36:34,776
ಬಾಸ್, ಏನ್ ಮಾಡ್ತಾ ಇದೀಯಾ?

370
00:36:34,860 --> 00:36:36,945
-ನಡೀ ಬಾಸ್, ನಡಿ.
-ಹೋಗೋಣ.

371
00:36:37,779 --> 00:36:39,823
ಹೋಗೋಣ. ಇಲ್ ಬಾ, ರೀಸ್.

372
00:36:40,616 --> 00:36:43,118
ಹೇಯ್, ಬೇಬಿಒ, ಎಲ್ಲಾ ಸರಿ ಇದ್ಯಾ?

373
00:36:48,248 --> 00:36:49,499
ನೆನಪು ಮಾಡ್ಕೋತಾ ಇದೀನಿ.

374
00:36:52,961 --> 00:36:55,756
ಇದು ಮರೆಯೋಕೆ ಸಹಾಯ ಮಾಡುತ್ತೆ.

375
00:37:15,859 --> 00:37:19,279
ಆ ಕಡೆ ನೀನು ಈ ರೀತಿ ಕೆಲಸ ತಾವತ್ತೂ ಮಾಡಿಲ್ಲ.

376
00:37:26,161 --> 00:37:27,621
ಆ ಕಡೆ ರೂಲ್ಸ್ ಇತ್ತು.

377
00:37:27,955 --> 00:37:29,831
ಹೌದು. ತುಂಬಾನೇ.

378
00:37:40,759 --> 00:37:43,011
ನೀನ್ ಹೋದ ಮೇಲೆ ಎಲ್ಲಾ ಬದಲಾಯ್ತು.

379
00:37:46,014 --> 00:37:48,767
ನಿಂಗೊತ್ತಾ, ನಾನು...
ನಾನೂ ಹೋಗ್ಬೇಕು ಅಂದ್ಕೊಂಡೆ.

380
00:37:49,518 --> 00:37:53,355
ನೀನು ಮತ್ತೆ ಟೀಮ್, ನೀವೊಂಥರಾ
ಕೆಸರಿನಲ್ಲಿ ಅರಳಿದ ಕಮಲಗಳ ಹಾಗೆ, ಅಣ್ಣಾ.

381
00:37:53,438 --> 00:37:56,942
ನೀನು ಎಲ್ಲೂ ಹೋಗ್ತಿರ್ಲಿಲ್ಲ,
ನಿಂಗೆ ನಾನೂ ಬೇಕಿರ್ಲಿಲ್ಲ.

382
00:38:02,614 --> 00:38:05,409
ಅದು ನಿಜ ಅನ್ಸಲ್ಲ,
ಎಲ್ಲಾನೂ ನೋಡಿದ್ರೆ.

383
00:38:07,744 --> 00:38:10,956
ಹೇಯ್. ನಾನ್ ತಗೋತೀನಿ.

384
00:38:15,627 --> 00:38:19,673
ಏನು? ಎಲ್ಲಾ ಮಜಾ ನಿಂಗೇ ಸಿಗ್ಬೇಕಾ?

385
00:38:23,343 --> 00:38:24,386
ಸರಿ...

386
00:38:25,095 --> 00:38:27,431
ಯಾರಿಗೋ ಸಖತ್ತಾಗಿರೋ ರಾತ್ರಿ ಸಿಕ್ತಾ ಇದೆ.

387
00:38:29,766 --> 00:38:31,977
-ತಗೊಳ್ಳಿ, ಲೇಡೀಸ್.
-ಥಾಂಕ್ ಯೂ.

388
00:38:33,520 --> 00:38:35,939
ಇಲ್ಲ. ಇಲ್ಲ, ಇಲ್ಲ, ನಾನ್ ಹೇಳ್ತಾ ಇದೀನಿ.

389
00:38:36,023 --> 00:38:41,111
ಇದು ನಿನ್ನ ಜೀವನದಲ್ಲಿ ತಿಂದ ಬೆಸ್ಟ್ ಸುಶಿ.

390
00:38:41,194 --> 00:38:43,155
ತಮಾಷೆ ಮಾಡ್ಬೇಡ. ಪ್ಲೀಸ್.

391
00:38:43,238 --> 00:38:45,657
ಇದು ಅದ್ಭುತವಾದ ಅನಾವರಣ.

392
00:38:46,158 --> 00:38:50,120
ನಿಂಗೆ ಬೆಸ್ಟ್ ಬಗ್ಗೆ ಮಾತಾಡ್ಬೇಕಾ?
ಸುಕಿಯಾಬಾಶಿಗೆ ಹೋಗಿದ್ಯಾ ಜೀರೋ?

393
00:38:50,203 --> 00:38:54,958
ಜೀರೋ ಬಿಟ್ಬಿಡು. ಅವನು ಚೆನ್ನಾಗಿದಾನೆ.
ಆರಾಮಾಗಿದಾನೆ. ಏನೋ ಒಂದು.

394
00:38:55,042 --> 00:38:57,753
ಆದ್ರೆ ಸ್ಟೀವ್ಗೆ ತೈಷಿ ಅನ್ನೋ
ಹುಡುಗ ಸಿಕ್ಕಿದಾನೆ.

395
00:38:57,836 --> 00:39:00,505
ಈ ಕುಳ್ಳನ್ನ ನಾವು ಹೊಕೈಡೋದಿಂದ
ಕರ್ಕೊಂಡ್ ಬಂದ್ವಿ.

396
00:39:00,589 --> 00:39:04,176
ಹೇಳ್ತಾ ಇದೀನಲ್ಲ.
ಬಡ್ಡೀಮಗ ಮೀನಿನ್ ಜೊತೆ ಮಾತಾಡ್ತಾನೆ.

397
00:39:04,259 --> 00:39:07,763
ಅವನು ಏರಿ ಕೆಳಗೆ ಹೋಗಿ ಬಂಗಡೆ,
ಸ್ಕಿಪ್ಜಾಕ್ ಜೊತೆ ಮಾತಾಡ್ತಾನೆ.

398
00:39:07,846 --> 00:39:11,266
ಅವೆಲ್ಲಾ ಏನ್ ಹೇಳ್ತಾವೋ ಗೊತ್ತಿಲ್ಲ.
ಆದ್ರೆ ಅದ್ರ ಅರ್ಥ ಹೀಗಿರ್ಬೇಕು,

399
00:39:11,349 --> 00:39:13,310
"ನನ್ನ ಹಿಡಿ, ನಾನ್ ರುಚಿಯಾಗಿದೀನಿ."

400
00:39:15,270 --> 00:39:17,397
ನಾನೂ ರುಚಿ ನೋಡಬೇಕು ಅನ್ನಿಸ್ತಿದೆ.

401
00:39:17,481 --> 00:39:20,358
ಸರಿ. ನಾನು ರಿಸರ್ವೇಷನ್ ಮಾಡ್ತೀನಿ. ಯಾವಾಗ?

402
00:39:23,779 --> 00:39:27,199
ನನ್ನ ಹತ್ತಿರ ಸಮಯಾವಧಿ ಇಲ್ಲ.
ನಾನು ಬೋರ್ಡ್ ಜೊತೆ ಮಾತನಾಡಬೇಕು.

403
00:39:27,282 --> 00:39:29,826
ಬೋರ್ಡ್ ಹಾಳಾಗ್ಲಿ. ನಿನ್ನ ಕೇಳ್ತಾ ಇದೀನಿ.

404
00:39:30,368 --> 00:39:31,703
ಸೌಲ್, ಬೇಡ.

405
00:39:35,540 --> 00:39:36,625
ತಡ ಆಗಿದೆ.

406
00:39:36,708 --> 00:39:40,545
ನಾನು ಎಂಜಾಯ್ ಮಾಡಿದ್ರೂ ಬೆಳಿಗ್ಗೆ ಫ್ಲೈಟ್ ಇದೆ.

407
00:39:43,673 --> 00:39:46,134
ಎಲಿಯಾಸ್, ಎಷ್ಟೋ ತಿಂಗಳಿಂದ ಆಟ ಆಡ್ತಾ ಇದೀವಿ.

408
00:39:47,177 --> 00:39:49,846
ಗಾಲ್ಫ್ ಆಡ್ಬೇಕಾ, ಆಡ್ತೀವಿ.
ಮೀನು ತಿನ್ಬೇಕಾ...

409
00:39:52,057 --> 00:39:55,894
ಆದ್ರೆ ಈಗ ಒಂದೋ ನೀನು ಕೆಲಸ ಮಾಡೋ
ಅಥವಾ ಹಾಳಾಗ್ ಹೋಗೋ

410
00:39:55,977 --> 00:39:58,480
ಸಮಯ ಬಂದಿದೆ.

411
00:39:59,147 --> 00:40:01,608
ಪ್ಲಾನೋಗೆ ನ್ಯೂಬೆಲ್ಲಮ್ ಬೇಕಾ ಬೇಡ್ವಾ?

412
00:40:07,447 --> 00:40:09,282
ಸ್ವಾಧೀನದ ಟೀಮ್ಗೆ ಫೋನ್ ಮಾಡ್ತೀನಿ.

413
00:40:09,991 --> 00:40:13,620
ಮಿ. ಹಾರ್ನ್ಗೆ ನಾನು ಬೆಳಿಗ್ಗೆ
ಒಂದು ಪ್ರಸ್ತಾಪ ಕೊಡ್ತೀನಿ ಅಂತ ಹೇಳು.

414
00:40:14,996 --> 00:40:16,123
ಗುಡ್ ನೈಟ್.

415
00:40:26,550 --> 00:40:28,260
ಇದು ಅತಿಯಾಯ್ತು.

416
00:40:28,343 --> 00:40:32,139
ಎಲಾಯಸ್ ರೈಬರ್ಗ್ ಥರದವ್ರನ್ನ
ತಿರಸ್ಕಾರದಿಂದ ಅಲ್ಲ, ಗೌರವದಿಂದ ನೋಡ್ಬೇಕು.

417
00:40:36,476 --> 00:40:41,106
ನಿಂಗೆ ನಾನು ಎಷ್ಟ್ ಹಣ ಗಳಿಸಿದೀನಿ
ಅನ್ನೋ ಪ್ರಜ್ಞೆ ಇದ್ಯಾ ನಿಂಗೆ?

418
00:40:41,189 --> 00:40:45,777
ಅಯ್ಯೋ ದೇವ್ರೇ, ಮೈಕ್,
ನೀನು ನಂಗೆ ಥ್ಯಾಂಕ್ಸ್ ಹೇಳ್ಬೇಕು.

419
00:40:49,698 --> 00:40:53,994
ಎಲ್ಲಾರೂ ಇಲ್ಲಿ ಕೇಳಿ
ನಿಮ್ಮ ಗಮನ ಈ ಹಡೆ ಹರಿಸ್ತೀರಾ, ಎಲ್ಲರೂ?

420
00:40:55,537 --> 00:40:56,913
ಹಾಳಾಗ್ ಹೋಗಿ.

421
00:40:58,123 --> 00:41:01,877
ಅಂದ್ರೆ, ಮುಗೀತು, ಮನೇಗ್ ಹೋಗಿ,
ಎಲ್ಲರೂ, ಮುಗೀತು, ನಡೀರಿ.

422
00:41:02,669 --> 00:41:04,171
-ನಿಜವಾಗ್ಲೂ?
-ಹೌದು.

423
00:42:12,197 --> 00:42:16,826
ಹೌದು. ಈವತ್ತು ಸಿಕ್ಕಾಪಟ್ಟೆ ದುಡ್ಡು ಗಳಿಸಿದ್ವಿ,
ಗೆಳೆಯಾ ಸಿಕ್ಕಾಪಟ್ಟೆ ದುಡ್ಡು ಗಳಿಸಿದ್ವಿ.

424
00:42:16,952 --> 00:42:18,620
ನನ್ನ ಪುಟ್ಟ

425
00:43:41,911 --> 00:43:45,749
ದ ಡೈಮಂಡ್ಸ್ "ಲಿಟ್ಲ್ ಡಾರ್ಲಿಂಗ್"
ಅಮೇರಿಕದ ಮೆಚ್ಚಿನ ಹಾಡು

426
00:44:53,817 --> 00:44:54,901
ಅಲ್ಲಿದಾನೆ.

427
00:45:19,467 --> 00:45:22,262
-ಸಾರಿ, ಆ ಬ್ಯಾಗ್ ಜೊತೆ ಸೌಲ್...
-ಪ್ಲೀಸ್!

428
00:45:22,387 --> 00:45:26,641
ಕೇಳು, ಹೇಯ್, ಆ ಬ್ಯಾಗ್ ಜೊತೆ,
ಅದು...

429
00:45:26,766 --> 00:45:29,727
ನಮ್ಮಿಬ್ರಿಗೂ ಬೇಜಾರಾಗಿದೆ, ಸರಿನಾ?

430
00:45:30,979 --> 00:45:33,898
ಹೆಲ್ಪ್! ಸಹಾಯ ಮಾಡಿ! ಸಹಾಯ ಮಾಡಿ!

431
00:45:34,065 --> 00:45:38,153
ಯಾರಾದ್ರೂ ಸಹಾಯ ಮಾಡಿ! ಸಹಾಯ ಮಾಡಿ...

432
00:45:40,822 --> 00:45:44,951
ಯಾರಾದ್ರೂ ಸಹಾಯ ಮಾಡಿ!

433
00:45:48,788 --> 00:45:50,123
ಸಹಾಯ ಮಾಡಿ!

434
00:45:53,376 --> 00:45:54,461
ಆಯ್ತಾ?

435
00:46:10,393 --> 00:46:12,896
ಕ್ಯಾಪ್ಸ್ಟೋನ್ ಯಾಕೆ ನನ್ನ
ಕೊಲ್ಲೋಕ್ ನೋಡ್ತಿದೆ?

436
00:46:15,940 --> 00:46:20,278
-ನೀನ್ ಏನ್ ಹೇಳ್ತಾ ಇದೀಯಾ ಅಂತ ನಂಗೊತ್ತಿಲ್ಲ.
-ಸುಳ್ಳು ಬೊಗಳಬೇಡ.

437
00:46:20,361 --> 00:46:21,237
ಇಲ್ಲ.

438
00:46:21,321 --> 00:46:23,114
ನಮ್ಮಮ್ಮನ್ ಮೇಲಾಣೆ.

439
00:46:23,198 --> 00:46:25,742
ಇದು ಗಡ್ಡೆಗೆ ಸಂಬಂಧಪಟ್ಟಿದ್ಯಾ?

440
00:46:26,826 --> 00:46:29,037
-ಏನು?
-ಗಡ್ಡೆ ನನ್ ತಲೇಲಿದೆ, ಸೌಲ್.

441
00:46:29,120 --> 00:46:30,997
ನಿಂಗೆ ಮಿದುಳಿನ ಟ್ಯೂಮರ್ ಇದ್ಯಾ?

442
00:46:31,956 --> 00:46:35,126
ನನ್ನ ಕೈ ಬಿಚ್ಚು, ನಾನೇನೂ ಮಾಡಿಲ್ಲ.

443
00:46:47,222 --> 00:46:50,099
ಜನರು ತುಂಬಾ ಕೆಟ್ಟದನ್ನ
ತಡ್ಕೊಂಡಿರದನ್ನ ನೋಡಿದಿದೀನಿ.

444
00:46:52,185 --> 00:46:55,647
ನೋವು ಮತ್ತೆ ಅವಮಾನ.

445
00:46:58,566 --> 00:47:01,361
ನಿನ್ ಕೈಲಿ ಅದನ್ನ ಊಹಿಸ್ಕೊಳ್ಳೋಕೂ ಸಾಧ್ಯ ಇಲ್ಲ.

446
00:47:02,362 --> 00:47:04,197
ಆದ್ರೂ ಅವರು ಬಾಯಿ ಮುಚ್ಕೊಂಡಿದ್ರು.

447
00:47:04,280 --> 00:47:09,118
ಅವರು ಯಾವುದ್ರಲ್ಲೋ ನಂಬಿಕೆ ಇಟ್ಟಿದ್ರು,
ಅವರ ಉದ್ದೇಶ ಅವರಿಗಿಂತ ದೊಡ್ಡದಾಗಿತ್ತು.

448
00:47:09,202 --> 00:47:13,623
ಸೋಲೊಪ್ಪೋ ಬದಲು ತಮ್ಮ ಉದ್ದೇಶದ ಬಗ್ಗೆ ಕೂಗುತ್ತಾ

449
00:47:13,706 --> 00:47:15,375
ಸಾಯೋಕೆ ಇಷ್ಟ ಪಡ್ತಾ ಇದ್ರು.

450
00:47:18,419 --> 00:47:20,838
ಆದ್ರೆ ನೀನು ಹಾಗಿಲ್ಲ, ಅಲ್ವಾ, ಸೌಲ್?

451
00:47:20,922 --> 00:47:23,675
ನಿನ್ನಲ್ಲಿ ನಂಬಿಕೆ ಇಲ್ಲ.
ನೀನು ಸಾಧಾರಣ ವ್ಯಕ್ತಿ

452
00:47:23,758 --> 00:47:27,762
ನಿಂಗೆ ಅರ್ಥ ಆಗದೇ ಇರೋ ಜಗತ್ತಲ್ಲಿ
ಸಿಕ್ಕು ಒದ್ದಾಡ್ತಾ ಇದೀಯಾ.

453
00:47:27,845 --> 00:47:32,392
ಇದರ ಸಲುವಾಗಿ ನೀನು ಸಾಯೋಕ್ ಇಷ್ಟಪಡ್ತೀಯಾ, ಸೌಲ್.

454
00:47:33,268 --> 00:47:34,602
ಹಾಗಾದ್ರೆ, ಹೇಳು.

455
00:47:36,729 --> 00:47:41,776
ಅವನು... ಅವನು...
ಅವನು ನಂಗೇನೂ ಹೇಳಲ್ಲ.

456
00:47:41,859 --> 00:47:44,404
-ಯಾರು?
-ಅದು ಡೇಟಾ ಪ್ರತ್ಯೇಕತೆ.

457
00:47:45,405 --> 00:47:47,490
ಬೇರೆ ಮಾಡೋದು. ನೀವು ಮಾಡೋ ಹಾಗೇ.

458
00:47:47,574 --> 00:47:50,410
-ಅವನು ತಪ್ಪಿಸ್ಕೋತಾನೆ.
-ಅದ್ರಿಂದ ಯಾರು ತಪ್ಪಿಸ್ಕೋತಾರೆ?

459
00:47:54,289 --> 00:47:57,166
ಸ್ಟೀವ್. ಹಾರ್ನ್.

460
00:47:58,418 --> 00:48:03,506
ಸ್ಟೀವ್ ಹಾರ್ನ್. ಅದೇ.
ಸ್ವಲ್ಪ ಕುಡಿ.

461
00:48:13,099 --> 00:48:14,183
ಮುಂದುವರಿಸು.

462
00:48:14,309 --> 00:48:16,436
ಸ್ಟೀವ್ ಒಬ್ಬ ದಾರ್ಶನಿಕ. ಅವನು...

463
00:48:17,145 --> 00:48:20,815
ಅವನು ತಂತ್ರಜ್ಞಾನದಲ್ಲಿ ಶ್ರೀಮಂತ ಆಗಿ
ಆಮೇಲೆ ವಿಸಿಗೆ ಹೋದ.

464
00:48:21,482 --> 00:48:26,279
ಅವನಿಗೆ ಜನರು, ಮಾರುಕಟ್ಟೆ,
ಯುದ್ಧ ಅರ್ಥ ಆಗುತ್ತೆ.

465
00:48:29,407 --> 00:48:34,329
ನಾನ್ ಜೊತೆ ಇರ್ತೀನಿ ಅಷ್ಟೇ
ಮಧ್ಯ ಇರೋನು. ಸಮಸ್ಯೆ ಪರಿಹಾರ ಮಾಡ್ತೀನಿ.

466
00:48:36,748 --> 00:48:39,500
ಸ್ಟೀವ್ ಸಿರಿಯಾದಲ್ಲಿ ದಾಳಿನ ಹೇಗೆ ನಡೆಸಿದ?

467
00:48:39,584 --> 00:48:44,088
ಸ್ಟೀವ್ಗೆ ಎಲ್ಲಾ ಕಡೆ ಗೆಳೆಯರಿದಾರೆ.
ಬಿಲಿಯನೇರ್ ಆಗಿರೋ ಲಾಭಗಳು.

468
00:48:44,213 --> 00:48:47,342
-ಅವನ ಗುರಿ ಏನು?
-ಅದು ನನ್ನ ಇಲಾಖೆ ಅಲ್ಲ.

469
00:48:47,425 --> 00:48:50,887
ಆದ್ರೆ ಇದೆಲ್ಲದೂ ನಡೀತಿರೋದು...

470
00:48:53,097 --> 00:48:55,725
ಪ್ರಾಜೆಕ್ಟ್ ಆರ್ಡಿ4895 ಗಾಗಿ.

471
00:48:56,392 --> 00:48:57,435
ಏನದು?

472
00:48:57,518 --> 00:49:02,690
ಪ್ರಾಜೆಕ್ಟ್ ಆರ್ಡಿ4895. ಅದು ಏನು
ಅಂತ ನಂಗೊತ್ತಿಲ್ಲ.

473
00:49:04,400 --> 00:49:08,404
ಅದ್ರಲ್ಲಿ ಅಹಳ ದುಡ್ಡಿದೆ ಅಂತ ಮಾತ್ರ ನಂಗೊತ್ತು.

474
00:49:10,948 --> 00:49:12,200
ಅದು ಸಾಕಾಗಲ್ಲ.

475
00:49:14,702 --> 00:49:19,207
ಇಲ್ಲ. ಇರು! ಇರು!
ಕೇಳು, ನಾನ್ ಹೇಳ್ತಿದೀನಲ್ಲ.

476
00:49:19,332 --> 00:49:22,835
ನಂಗೇನೂ ಗೊತ್ತಿಲ್ಲ! ನಾನು ಸಾಧಾರಣ ವ್ಯಕ್ತಿ!
ನೀನೇ ಹೇಳ್ದೆ,

477
00:49:22,919 --> 00:49:24,545
ನಾನು ಸಾಧಾರಣ ವ್ಯಕ್ತಿ ಅಷ್ಟೇ!

478
00:49:35,098 --> 00:49:36,099
ಸರಿ.

479
00:49:36,724 --> 00:49:38,267
ನಾನು ನಿನ್ನನ್ ನಂಬ್ತೀನಿ.

480
00:49:39,727 --> 00:49:43,731
ಸ್ಟೀವ್ ಹಾರ್ನ್ ಎಲ್ಲಾ ಮಾಡ್ತಾನೆ
ಮತ್ತೆ ನೀನು ಚಿಕ್ಕ ಪುಟ್ಟ ಕೆಲಸ ಮಾಡ್ತೀಯಾ.

481
00:49:43,815 --> 00:49:45,024
-ಹೌದು!
-ಅಲ್ವಾ?

482
00:49:45,108 --> 00:49:47,652
-ಹೌದು, ಅಷ್ಟೇ!
-ನೀನು ನಿರ್ಧಾರ ಕೈಗೊಳ್ಳಲ್ಲ.

483
00:49:47,735 --> 00:49:51,197
-ಇದು ಯಾವುದೂ ಆಗೋದು ನಿಂಗೆ ಬೇಕಿರಲಿಲ್ಲ.
-ದೇವರಾಣೆಗೂ.

484
00:49:51,948 --> 00:49:55,201
ನನ್ನ ಕುಟುಂಬನ ಕೊಲ್ಲೋಕೆ ಯಾರನ್ನ ಕಳಿಸಿದೆ?

485
00:50:04,877 --> 00:50:07,422
-ಇನ್ನೂ ಸ್ವಲ್ಪ ಕುಡಿ.
-ನಾನು ಮನೆಗೆ ಹೋಗ್ಬೇಕು.

486
00:50:12,802 --> 00:50:14,345
ನಾನೊಂದು ಪ್ರಶ್ನೆ ಕೇಳ್ದೆ.

487
00:50:27,024 --> 00:50:29,277
ಜಾಕ್ಸನ್ ಹೋಲ್ನಲ್ಲಿ ಒಬ್ಬ ವಕೀಲ ಇದಾನೆ.

488
00:50:29,360 --> 00:50:31,028
ಮಾರ್ಕಸ್ ಬಾಯ್ಕಿನ್.

489
00:50:31,112 --> 00:50:36,367
ಅವನು ಮೆಕ್ಸಿಕೋ ಸೇರಿದಂತೆ ಜಗತ್ತಿನ ಎಲ್ಲಾ ಕಡೆ
ಕಚ್ಚಾ ತೈಲದ ಬ್ಲಾಕ್ ಮಾರ್ಕೆಟ್ ಮಾಡ್ತಾನೆ.

490
00:50:36,451 --> 00:50:37,452
ಮೆಕ್ಸಿಕೋ?

491
00:50:40,580 --> 00:50:42,039
ಅವನು ಸಿಕಾರಿಯೋಸ್ ನೇಮಿಸಿದ.

492
00:50:44,417 --> 00:50:46,586
ಟ್ರಿಗರ್ ಎಳೆಯೋನು, ಅವನೆಲ್ಲಿ ಸಿಕ್ತಾನೆ?

493
00:50:46,669 --> 00:50:49,172
-ಮೆಕ್ಸಿಕೋ, ನಾನ್ ಹೇಳ್ದೆ.
-ನಿಖರವಾಗಿ ಹೇಳು.

494
00:50:49,255 --> 00:50:53,426
"ಸಿಕಾರಿಯೋನ ವಿಳಾಸ ಏನು?"
ಇದು ಕೇಳೋ ಪ್ರಶ್ನೆನೇ ಅಲ್ಲ!

495
00:50:53,509 --> 00:50:54,635
ಬಾಯ್ಕಿನ್ಗೆ ಗೊತ್ತಾ?

496
00:50:54,719 --> 00:50:56,471
ಬಾಯ್ಕಿನ್ಗೆ ಏನೂ ಗೊತ್ತಿಲ್ಲ.

497
00:50:56,554 --> 00:51:02,518
ಅವನಿಗೆ ಕೊಲೆಗಾರರಿಗೆ
ನಂಬರ್ ಕಳಿಸೋದು ಮಾತ್ರ ಗೊತ್ತು.

498
00:51:04,437 --> 00:51:06,439
ಅವನು ನನಗಿಂತ ನಿಷ್ಪ್ರಯೋಜಕ.

499
00:51:12,028 --> 00:51:15,615
ಆ ಕಡೆ ಅವರು ತಾವು ಮಾಡೋದೆಲ್ಲಾ
ಸ್ವಾತಂತ್ರ್ಯಕ್ಕಾಗಿ ಅಂತ ಹೇಳ್ತಾರೆ.

500
00:51:15,698 --> 00:51:18,284
ಆದ್ರೆ ನಿಜ ಏನಂದ್ರೆ, ಸೌಲ್,

501
00:51:19,285 --> 00:51:22,079
ಈ ಜಗತ್ತಿನಲ್ಲಿ ಕೆಟ್ಟದ್ದಿದೆ.

502
00:51:24,373 --> 00:51:27,627
ಜನರು ಹೇಡಿಗಳು, ಅದಕ್ಕೇ ನಾವು
ಕಣ್ಣಲ್ಲಿ ಕಣ್ಣಿಟ್ಟು ನೋಡ್ತೀವಿ.

503
00:51:27,710 --> 00:51:29,629
ಅದು ನಾವು ಮಾಡೋ ಕಲಸ.

504
00:51:29,712 --> 00:51:33,132
ನೀವು ಬರೀ ತೆರಿಗೆ ಕಟ್ಟಿ
ನಮ್ ದಾರಿಗೆ ಅಡ್ಡ ಬರ್ದೇ ಇದ್ರೆ ಸಾಕು.

505
00:51:33,216 --> 00:51:35,468
ಆದ್ರೆ ನೀನು, ಸೌಲ್,

506
00:51:36,636 --> 00:51:40,515
ಸ್ಟೀವ್ ಹಾರ್ನ್, ಕ್ಯಾಪ್ಸ್ಟೋನ್ ಇಂಡಸ್ಟ್ರೀಸ್,

507
00:51:42,517 --> 00:51:44,727
ನಿನಗೆ ಬಾಣಲೆಗೆ ಬೀಳಬೇಕಿತ್ತು.

508
00:51:45,770 --> 00:51:48,815
ಈಗ ಬೆಂಕಿಗೆ ಬಿದ್ದಿದೀಯಾ.

509
00:51:52,819 --> 00:51:55,404
ಇದು ಮೆಥಡೋನ್ ಕಾಕ್ಟೇಲ್, ಸೌಲ್.

510
00:51:56,030 --> 00:51:59,534
ಆರಾಮಾಗ್ ಸಾಯ್ತೀಯಾ. ನೀನು ಅದೃಷ್ಟವಂತ.

511
00:52:00,701 --> 00:52:02,328
ನಿನ್ ಯೋಗ್ಯತೆಗೆ ಇದೇ ಹೆಚ್ಚು.

512
00:53:10,813 --> 00:53:11,898
ರೀಸ್
ಮೆಸೇಜ್

513
00:53:11,981 --> 00:53:15,943
ಕ್ಯಾಪ್ಸ್ಟೋನ್ ಪ್ರಾಜೆಕ್ಟ್ ಆರ್ಡಿ4895...
ಸುರಕ್ಷಿತವಾಗಿರು

514
00:53:35,588 --> 00:53:39,675
ಪ್ರಾಜೆಕ್ಟ್ ಆರ್ಡಿ4895

515
00:54:10,623 --> 00:54:13,292
ತಾಹೋದಲ್ಲಿರೋ ಒಂದು ಜಾಗನ ನೋಡ್ತಿದೀವಿ,
ಹೇಳ್ತಿದೀನಿ?

516
00:54:14,168 --> 00:54:16,003
ಪಶ್ಛಿಮ ದಂಡೆಯಲ್ಲಿ ಪುಟ್ಟ ಕ್ಯಾಬಿನ್

517
00:54:17,338 --> 00:54:21,008
ಲಾರೆನ್ ಎತ್ತರದಲ್ಲಿ ಅಥ್ಲೀಟ್ಗಳಿಗೆ
ತರಬೇತಿ ಕೊಡ್ಬೇಕು ಅಂದ್ಕೊಂಡಿದ್ಳು.

518
00:54:21,759 --> 00:54:25,137
ಲ್ಯೂಸಿಗೆ ನಕ್ಷತ್ರಗಳನ್ನು ನೋಡೋಕಾಗೋ
ಜಾಗದಲ್ಲಿ ಬದುಕೋ ಆಸೆ ಇತ್ತು.

519
00:54:30,393 --> 00:54:32,395
ಅವರಿಗೆ ಅಷ್ಟೇ ಬೇಕಿತ್ತು.

520
00:54:33,354 --> 00:54:36,315
ಬದಲಾಗಿ, ಅವರಿಗೆ ಏನೂ ಸಿಗಲಿಲ್ಲ.

521
00:54:37,942 --> 00:54:42,863
ಯಾವುದೋ ಕಂಪನಿ ಪ್ರಾಜೆಕ್ಟ್ ಸೇವೆಗೆ
ಅವರಿಗೆ ಸಿಕ್ಕಿದ್ದು ಅಂಧಕಾರ.

522
00:54:42,947 --> 00:54:43,990
ಸ್ಟೀವ್ ಹಾರ್ನ್

523
00:54:45,366 --> 00:54:47,994
ಅದಿಕ್ಕೇ ನನ್ನ ಹೆಂಡತಿ ಮತ್ತೆ
ಮಗಳು ಸಾಯಬೇಕಾಯ್ತು.

524
00:54:49,745 --> 00:54:51,247
ನಂಗೆ ಇದೇ ಅರ್ಥ ಆಗಲ್ಲ.

525
00:54:52,790 --> 00:54:55,126
ಅವ್ರನ್ನ ಇದರಲ್ಲಿ ಯಾಕೆ ತಂದ್ರು?

526
00:54:58,504 --> 00:55:00,506
ಕೊಲೆ ಮಾಡ್ದಾಗ ಗಲಾಟೆ ಆಗುತ್ತೆ.

527
00:55:03,175 --> 00:55:06,053
ಶೂರ ಸೈನಿಕನ ತಲೆ ಕೆಟ್ಟು,
ತನ್ನ ಕುಟುಂಬನ ಕೊಲ್ಲುತ್ತಾನೆ.

528
00:55:06,137 --> 00:55:08,556
ಡಾಕ್ಟರ್ನ ಕೊಂದು ಆತ್ಮಹತ್ಯೆ ಮಾಡ್ಕೋತಾನೆ.

529
00:55:08,639 --> 00:55:12,893
ಜನ ಕಣ್ಣೂ ಮಿಟುಕಿಸಲ್ಲ.
ಅವರಿಗೆ ಅದು ಇನ್ನೂ ಜೀರ್ಣ ಆಗೋ ಹಾಗಿರಬೇಕು.

530
00:55:14,645 --> 00:55:17,481
ಸ್ಟೀವ್ ಹಾರ್ನ್,
ಅವನು ಸ್ಯಾನ್ ಫ್ರಾನ್ಸಿಸ್ಕೋದಲ್ಲಿದಾನೆ.

531
00:55:18,024 --> 00:55:21,986
ಹಾವಿನ ತಲೆ.
ಅವನು ಆರ್ಡಿ4895 ಬಗ್ಗೆ ನಿಜ ಹೇಳಬಹುದು.

532
00:55:22,820 --> 00:55:25,489
ಬಾಯ್ಕಿನ್ನಿಂದ ಟ್ರಿಗರ್
ಎಳೆದವನವರೆಗೂ ಹೋಗಬಹುದು.

533
00:55:26,282 --> 00:55:28,492
ಲಾರೆನ್ ಮತ್ತೆ ಲ್ಯೂಸಿನ ಕೊಂದವನು.

534
00:55:28,576 --> 00:55:31,954
ಸರಿ. ಉತ್ತರ ಅಥವ ರಕ್ತ.

535
00:55:33,998 --> 00:55:35,166
ಶೂಟರ್ನ ಆಯ್ಕೆ.

536
00:55:40,963 --> 00:55:42,006
ರಕ್ತ.

537
00:57:36,537 --> 00:57:38,539
ಉಪ ಶೀರ್ಷಿಕೆ ಅನುವಾದ: ರಾಜು

