1
00:00:53,429 --> 00:00:55,514
ಅಂತಿಮ ಯುದ್ಧ

2
00:03:58,030 --> 00:04:00,115
ವಿಶ್ರಾಂತಿ ಪಡೆಯಲು ಒಳ್ಳೆಯ ಸ್ಥಳ, ಮಿಹೋ.

3
00:04:08,666 --> 00:04:12,962
ಅವರಿಗೆ, ದೇವರೇ, ಚಿರಶಾಂತಿ ಕೊಡು.

4
00:04:14,505 --> 00:04:16,966
ಮತ್ತು ಅವರಲ್ಲಿ ಶಾಶ್ವತವಾದ ಬೆಳಕು ಬೆಳಗಲಿ.

5
00:04:18,133 --> 00:04:21,387
ಅವರ ಆತ್ಮಕ್ಕೆ ಶಾಂತಿ ಸಿಗಲಿ.

6
00:04:25,891 --> 00:04:26,934
ಅಮೆನ್.

7
00:04:29,520 --> 00:04:34,566
ಬಾ. ಈಗ ಒಬ್ಬಂಟಿಯಾಗಿರ್ಬಾರ್ದು.

8
00:04:35,025 --> 00:04:36,652
ನಾನು ಅವನನ್ನು ಬಿಟ್ಟು ಬರಲ್ಲ.

9
00:04:37,236 --> 00:04:38,278
ಕ್ಲಾರೋ.

10
00:04:41,448 --> 00:04:43,701
ಸಂಪರ್ಕ ಸಾಧಿಸೋಕೆ ಬೇರೆ ದಾರಿಗಳಿವೆ.

11
00:04:48,247 --> 00:04:50,040
ಆಗಲೇ ನಾನು ಲೂಸಿಗೆ ಹೇಳಿದ್ದು.

12
00:04:50,124 --> 00:04:54,753
"ನನ್ನ ಯಾವ ಸಾಕು ಮಗಳೂ ಅವಳ ಚರ್ಚ್ ಬಟ್ಟೆಗಳು
ಮಣ್ಣಾಗೋ ಬಗ್ಗೆ ಚಿಂತೆ ಮಾಡಬಾರ್ದು."

13
00:04:59,425 --> 00:05:02,553
ಸರಿ, ನಂದೊಂದಿದೆ.

14
00:05:02,636 --> 00:05:04,471
-ಅಯ್ಯೋ ಬೇಡ.
-ಬೇಡ ಅಂದ್ರೆ?

15
00:05:04,638 --> 00:05:07,474
-ಇಲ್ಲ. ಇದನ್ನ ನೀನು ಮಾಡಬಾರ್ದು.
-ಏನು ಮಾಡಬಾರ್ದು?

16
00:05:07,766 --> 00:05:09,226
ಇವು ನೆನಪುಗಳು.

17
00:05:09,309 --> 00:05:11,770
ಅವನ ಬಾಯಿ ಮುಚ್ಚಿಸ್ಬೇಕಾ?
ಈಗ್ಲೇ ಸರಿ ಮಾಡ್ತೀನಿ.

18
00:05:11,937 --> 00:05:13,731
ಪರ್ವಾಗಿಲ್ಲ, ನಾನ್ ಆರಾಮಾಗಿರ್ತೀನಿ

19
00:05:15,733 --> 00:05:17,568
ನಾನು ಟೀಮ್ಸಲ್ಲಿದ್ದಾಗ,

20
00:05:18,485 --> 00:05:22,656
ಪ್ರತೀ ಕೆಲಸದ ನಂತ್ರ, ಲೋರೆನ್ ರೀಸ್
ರುಚಿಯಾಗಿರೋ ಬಾರ್ಬಿಕ್ಯೂ ಕೊಡ್ತಾ ಇದ್ರು.

21
00:05:23,407 --> 00:05:24,908
ಅದೊಂದು ಬಾರಿ,

22
00:05:24,992 --> 00:05:29,997
ಅದು ಸಬ್ರೀನಾ ನನ್ನನ್ನ ಅಧಿಕೃತವಾಗಿ
ಬಿಟ್ಟ ಮೇಲೆ ಅಂತ ಅನ್ಸುತ್ತೆ.

23
00:05:30,289 --> 00:05:31,540
ಅದು ಯಾವ ಹೆಂಡತಿ?

24
00:05:34,334 --> 00:05:37,755
ನನ್ನ ತಲೆ ಸರಿ ಇರ್ಲಿಲ್ಲ.
ಒಬ್ಬ ಒಳ್ಳೇ ಗೆಳೆಯನಾಗಿ

25
00:05:38,213 --> 00:05:40,632
ರೀಸ್ ಏನು ತಂದ, ನಾಲ್ಕೈದು ಕೇಸ್ ಬಿಯರಾ?

26
00:05:40,716 --> 00:05:43,135
ನಾನು ನಾಲ್ಕೈದು ಕೇಸ್ ಬಿಯರ್ ಕುಡಿದಿದ್ನಾ?

27
00:05:43,677 --> 00:05:47,347
ನಂತರ ರಾತ್ರಿಯಾಯ್ತು,
ಎಲ್ರೂ ಹೊರ್ಟಿದ್ರು, ನಾನು ಅಲ್ಲಿ ನೋಡಿದೆ.

28
00:05:47,431 --> 00:05:52,728
ಅಲ್ಲಿ ಈ ಅದ್ಭುತವಾದ, ಶುದ್ಧವಾದ ಕೆಂಪು ಹಾಸು
ನನ್ನ ಹೆಸರು ಹಿಡಿದು ಕರೀತಾ ಇತ್ತು.

29
00:05:53,562 --> 00:05:55,564
ನಾನಂತೂ ಹೋಗಿ ಮಲಗಿಬಿಟ್ಟೆ.

30
00:05:55,689 --> 00:05:59,109
ಆಮೇಲೆ ನೋಡಿದ್ರೆ ಬೆಳಗಾಗಿತ್ತು,
ಸಿಕ್ಕಾಪಟ್ಟೆ ಬೇಗ.

31
00:06:02,988 --> 00:06:04,406
ನಾನು ಮೇಲೆ ನೋಡಿದೆ,

32
00:06:07,659 --> 00:06:09,078
ಮತ್ತೆ ಅಲ್ಲಿ...

33
00:06:11,455 --> 00:06:13,624
ಲೋರೆನ್ ಇದ್ದಳು, ಲೂಸಿನ ಎತ್ಕೊಂಡು,

34
00:06:16,794 --> 00:06:21,632
ಅವಳ ಲಿವಿಂಗ್ ರೂಮ್ ಶೌಚಾಲಯದ ಥರ ಯಾಕೆ ವಾಸನೆ
ಹೊಡೀತಿದೆ ಅಂತ ಆಶ್ಚರ್ಯ ಪಡ್ತಾ ಇದ್ದಳು.

35
00:06:24,802 --> 00:06:26,470
ನೀನು ಉಚ್ಚೆ ಹೊಯ್ದಿದ್ದೆ.

36
00:06:27,805 --> 00:06:29,014
ನಾನು...

37
00:06:36,688 --> 00:06:38,065
ಒಂದು ಟೋಸ್ಟ್ ಮಾಡೋಣ.

38
00:06:39,733 --> 00:06:44,613
ರೀಸ್ ಕುಟುಂಬಕ್ಕೆ. ನಂಗೆ ಮೂರು ಪೀಳಿಗೆ
ಪರಿಚಯ ಇರೋದು ನನ್ನ ಅದೃಷ್ಟ.

39
00:06:45,114 --> 00:06:48,325
ನಮ್ಮ ಜೀವನ ಅವರ ಪ್ರೀತಿ ಮತ್ತೆ ಶೌರ್ಯದ ಭಿಕ್ಷೆ.

40
00:06:48,492 --> 00:06:50,035
-ಕೇಳಿ, ಕೇಳಿ!
-ಕೇಳಿ, ಕೇಳಿ.

41
00:06:59,962 --> 00:07:01,755
ಹೇಳ್ತಾ ಇದೀನಿ, ಅಣ್ಣಾ,

42
00:07:04,174 --> 00:07:07,344
ಅವ್ರಿಲ್ದೇ ಈ ಜಗತ್ತು
ಖಂಡಿತವಾಗೂ ಎಕ್ಕುಟ್ಟೋಗಿದೆ.

43
00:07:24,611 --> 00:07:26,321
ನಾನು... ನಾನು ಹೋಗ್ತೀನಿ.

44
00:07:27,406 --> 00:07:29,283
-ಮನೆಗೆ ಹೋಗ್ತೀಯಾ?
-ಆಗ್ಲೇ?

45
00:07:30,075 --> 00:07:33,287
ಹೌದು. ಮನೆಗೆ ಹೋಗಬೇಕು.

46
00:07:35,080 --> 00:07:37,583
ಬಾ. ನನ್ನ ಡ್ರೈವರ್ ನಿನ್ನ ಕರ್ಕೊಂಡು ಹೋಗ್ತಾನೆ.

47
00:08:42,606 --> 00:08:45,317
ಮಾರ್ಗರಿಟಾಗಳು ಇದ್ದಾಗ ಬಿಸಿಲು ಯಾರಿಗೆ ಬೇಕು?

48
00:08:59,790 --> 00:09:02,751
ಹೇಯ್. ಪಿಕಾಸೋ. ಆ ಚಿತ್ರ ನಂಗ್ ತೋರಿಸ್ತೀಯಾ?

49
00:09:02,876 --> 00:09:04,044
ಇನ್ನೂ ಮುಗಿದಿಲ್ಲ.

50
00:09:04,294 --> 00:09:07,297
ನಾಳೆ ನಾನು ಹೊರಡೋ ಮುಂಚೆ ಅದು ಮುಗೀದಿದ್ರೆ?

51
00:09:09,216 --> 00:09:13,136
ನಂಗೆ ಆ ಚಿತ್ರ ತೋರಿಸದಿದ್ರೆ ನಾನು
ಒಂದು ಹಾಡು ಹಾಡ್ತೀನಿ.

52
00:09:15,013 --> 00:09:16,431
ನಾನ್ ಹಾಡಲ್ಲ ಅನ್ಸುತ್ತಾ

53
00:09:17,933 --> 00:09:20,727
ನಂಗೆ ವೇಗದ ಕಾರ್ ಮತ್ತು ಕನಸಿನ ಶಾಪಿಂಗ್ ಇಷ್ಟ

54
00:09:21,478 --> 00:09:24,398
ಹುಚ್ಚುಚ್ಚಾಗಿ ಎಲ್ಲೆಲ್ಲೋ ಅಲೆದೆ

55
00:09:24,731 --> 00:09:28,610
ನನ್ನ ಪಾಲಿನ ಭಗ್ನ ತುಣುಕುಗಳನ್ನು ಹಿಂದೆ ಬಿಟ್ಟೆ.

56
00:09:28,819 --> 00:09:29,820
ಧನ್ಯವಾದಗಳು.

57
00:09:32,072 --> 00:09:34,783
ಈವತ್ತು ಬೆಳಿಗ್ಗೆ ನಂಗೆ 36 ಆಯ್ತು

58
00:09:35,617 --> 00:09:36,660
ಮೂವತ್ತಾರಾ?

59
00:09:38,453 --> 00:09:40,706
ನಾಲ್ಕು ವರ್ಷದ ಹಿಂದೆ ಈ ಹಾಡು ಬರೆದಿದ್ದು.

60
00:09:43,417 --> 00:09:46,628
ಆದರೆ ಸಾಲು
ಮತ್ತು ಗುಡ್ಡಗಳು ಗುಡುಗನ್ನು ತಂದವು

61
00:09:53,468 --> 00:09:54,678
ಏನದು?

62
00:10:06,565 --> 00:10:08,400
ಇದು ಹುಷಾರಾಗುತ್ತಾ, ಅಪ್ಪಾ?

63
00:10:12,362 --> 00:10:17,534
ಹೌದು. ಅದು ಭಯಪಟ್ಕೊಂಡಿದೆ ಅಂತ ಅನ್ಸುತ್ತೆ. ಅದು
ಮತ್ತೆ ಹಾರಿ ತನ್ನ ಕುಟುಂಬ ಇರೋ ಕಡೆ ಹೋಗುತ್ತೆ.

64
00:10:18,869 --> 00:10:20,620
ಅವಳಿಗೆ ಸುಳ್ಳು ಹೇಳ್ಬೇಡ.

65
00:11:19,554 --> 00:11:23,016
ಸಾರಿ ಕಮಾಂಡರ್.
ನಾನು ಸ್ಪೆಷಲ್ ಏಜೆಂಟ್ ಜೋಶುವಾ ಹೋಲ್ಡರ್,

66
00:11:23,100 --> 00:11:25,018
ಹೌದು. ನೀವು ನಂಗೆ ನೆನಪಿದ್ದೀರ.

67
00:11:25,102 --> 00:11:27,687
ಕೊಲೆ ತನಿಖೆಗೆ
ಎನ್ಸಿಐಎಸ್ನ ನಿಯೋಜಿಸಿದ್ದಾರೆ.

68
00:11:27,771 --> 00:11:29,314
ನನ್ನ ಕೇಸಿನ ಅಪ್ಡೇಟ್?

69
00:11:29,398 --> 00:11:33,693
ನಿಜ ಹೇಳ್ಬೇಕಂದ್ರೆ ಕೇಸಲ್ಲಿ ಒಂದು ವ್ಯತ್ಯಾಸದ
ಬಗ್ಗೆ ಮಾತಾಡೋಕೆ ನಾನು ಬಂದಿದ್ದೀನಿ.

70
00:11:35,445 --> 00:11:37,781
ಕೊಲೆಯ ಆಯುಧ, ನಿಮ್ಮ ಸಿಗ್ ಪಿ226?

71
00:11:38,281 --> 00:11:42,160
ಅದನ್ನ ಗ್ಯಾರೇಜಲ್ಲಿರೋ
ಗನ್ ಸೇಫಿಂದ ತಗೊಂಡಿದ್ರು, ಅಲ್ವಾ?

72
00:11:42,244 --> 00:11:45,997
ಇಲ್ಲ, ಅದನ್ನ ನನ್ ಬೆಡ್ ರೂಮಲ್ಲಿರೋ
ಹ್ಯಾಂಡ್ಗನ್ ಸೇಫ್ನಿಂದ ತಗೊಂಡಿದಾರೆ.

73
00:11:48,041 --> 00:11:49,709
ಅದನ್ನ ತೋರಿಸ್ತೀರಾ?

74
00:11:53,422 --> 00:11:54,297
ಹೇಯ್.

75
00:11:57,259 --> 00:12:01,430
ನಂಗೆ ಸ್ವಲ್ಪ ಕುತೂಹಲ... ಈ ಕೊಲೆಗಾರರು
ನಿಮ್ಮ ಸೇಫ್ ಹೇಗೆ ತೆಗೆದರು?

76
00:12:01,805 --> 00:12:03,306
ಬೆರಳಚ್ಚು ಕಾಪಿ ಮಾಡಿರ್ಬಹ್ದು

77
00:12:03,390 --> 00:12:05,392
ವಾವ್. ಅದು ನಿಜವಾಗ್ಲೂ ಬುದ್ಧಿವಂತಿಕೆ.

78
00:12:05,475 --> 00:12:08,520
ಇದನ್ನ ಅರ್ಧ ಒಡೆದಾಕಿರೋ
ಕೋಕ್ ಕ್ಯಾನ್ನಿಂದ ಒಡೆಯೋಕಾಗಲ್ಲ.

79
00:12:08,603 --> 00:12:12,190
ಇಲ್ಲ. ನಾನು ಹೇಳ್ತಾನೇ ಇದ್ದೀನಿ.
ಎದುರಾಳಿ ಬಹಳ ಜಾಣ.

80
00:12:12,274 --> 00:12:14,067
ನಾವು ಕೊಲೆಗಾರನ್ನ ಹುಡುಕ್ಬೇಕು.

81
00:12:14,151 --> 00:12:16,278
ಕ್ಲಿನಿಕ್ನಲ್ಲಿ 30 ಸೆಟ್ ನೋಡಿದ್ವಿ

82
00:12:16,361 --> 00:12:19,364
ನಾವು ಬ್ಯೂರೋ ಆಫ್ ಪ್ರಿಸನ್ಸ್ ಮತ್ತೆ NCICನೂ
ನೋಡ್ತಾ ಇದ್ವಿ-

83
00:12:19,448 --> 00:12:20,449
ಮತ್ತೆ ಇಂಟರ್ಪೋಲ್?

84
00:12:20,782 --> 00:12:22,742
ಅದರದ್ದೇ ಕೆಲಸ ಮಾಡ್ತಾ ಇದ್ದೀವಿ.

85
00:12:25,912 --> 00:12:27,330
ಗ್ಯಾರೇಜ್ ತೋರಿಸ್ತೀರಾ?

86
00:12:31,960 --> 00:12:35,172
ನೋಡಿ. ಈ ಸೇಫ್. ಪಾಸ್ಕೋಡ್ ಯಾರಿಗೆ ಗೊತ್ತು?

87
00:12:35,672 --> 00:12:36,631
ನಂಗೆ ಮಾತ್ರ.

88
00:12:36,715 --> 00:12:40,552
ನಂಗನ್ಸುತ್ತೆ, ಗನ್ನ ಈ ಸೇಫಲ್ಲಿಟ್ಟಿದ್ರೆ--

89
00:12:40,635 --> 00:12:42,554
ಇಲ್ಲ. ಅದು ನನ್ ಬೆಡ್ರೂಮಲ್ಲಿತ್ತು.

90
00:12:42,637 --> 00:12:45,891
ಅಯ್ಯೋ ನೀವೆಲ್ಲಾ ಏನ್ ಮಾಡ್ತಾ ಇದೀರಾ?
ನಿಮ್ ಬಾಲನೇ ಕಚ್ತಾ ಇದೀರಾ?

91
00:12:45,974 --> 00:12:48,477
ನೋಡು, ಎಲ್ಲಾದ್ನೂ ನೋಡೋದು ನನ್ ಕೆಲಸ--

92
00:12:48,560 --> 00:12:52,856
ನನ್ ಹುಡುಗ್ರು ಕುಡ್ದು ಗಲಾಟೆ ಮಾಡ್ಕೊಂಡಾಗ
ಎನ್ಸಿಐಎಸ್ ಯಾವಾಗ್ಲೂ ಸಹಾಯಕ್ ಬಂದಿದೆ.

93
00:12:52,939 --> 00:12:55,692
ನಿಮ್ಗೇನೋ ಹೇಳ್ಬೇಕು
ಬೂಜರ್ ವಿಷಯದಲ್ಲಿ ತಪ್ ಮಾಡಿದೀರಾ.

94
00:12:57,569 --> 00:12:59,779
ಅವ್ರು ಅತ್ಮಹತ್ಯೆ ಮಾಡ್ಕೊಂಡಿಲ್ಲ, ಸರೀನಾ?

95
00:12:59,863 --> 00:13:02,073
ಅದು ಡೌನ್ರೇಜ್ ಆಗಿದ್ರೆ ನಾನು ಬಾಗ್ಲು--

96
00:13:02,157 --> 00:13:04,409
-ಕಮಾಂಡರ್--
-ಜನ್ರನ್ನ ಹೊರ್ಗೆ ಎಳೀತಿದೀರಾ.

97
00:13:05,494 --> 00:13:08,788
ನೀವಿರೋ ಪರಿಸ್ಥಿತಿ ಬಗ್ಗೆ ನಂಗೆ ಅನುಕಂಪ ಇದೆ.
ನಿಜವಾಗ್ಲೂ.

98
00:13:08,872 --> 00:13:12,209
ನಾವು ಡೌನ್ರೇಂಜ್ ಅಲ್ಲ.
ನಾವಿರೋವಲ್ಲಿ ಇದಕ್ಕೊಂದು ಕ್ರಮ ಇದೆ.

99
00:13:14,044 --> 00:13:15,128
ಸರಿ.

100
00:13:27,807 --> 00:13:30,477
ನಾನು ಎಡ್ಮಿರಲ್ನ ಭೇಟಿ ಮಾಡ್ತೀನಿ.
ಫೋನ್ ಮಾಡಿದೀನಿ.

101
00:13:30,560 --> 00:13:32,103
ರೀಸ್. ಒಳ್ಗಡೆ ಬಾ.

102
00:13:34,064 --> 00:13:35,440
ಕೂತ್ಕೋ, ಮಗ್ನೇ.

103
00:13:40,487 --> 00:13:43,698
ಸುಂದರವಾದ ಅಂತ್ಯಕ್ರಿಯೆ
ಇಷ್ಟ್ ಬೇಗ ಮತ್ತೊಂದ್ ಬರಲ್ಲ ಅನ್ಸುತ್ತೆ

104
00:13:44,074 --> 00:13:45,158
ಹೌದು, ಸರ್.

105
00:13:46,034 --> 00:13:47,661
ನೀವೇನಾದ್ರೂ ಮಾತಾಡ್ಬೇಕಿತ್ತಾ?

106
00:13:47,744 --> 00:13:52,541
ಎನ್ಸಿಐಎಸ್, ಸರ್. ಅವ್ರಿಗೆ ಈ ಕೇಸ್ ನೋಡ್ಕೊಳ್ಳೋ
ಅರ್ಹತೆ ಇಲ್ಲ ಅಂತ ಅನ್ಸುತ್ತೆ.

107
00:13:53,959 --> 00:13:57,087
ಓಡಿನ್ ಕತ್ತಿಯ ವಿಚಾರಣೆ ಮುಗೀತು ಅಂತ ಹೇಳಿದ್ರು.

108
00:13:57,170 --> 00:14:00,131
ಮತ್ತೆ ಐಇಡಿ ಸ್ಫೋಟಿಸಿದ್ದು ಮಿಚೆಲ್
ಅಂತ ನೀವ್ ಒಪ್ಕೊಂಡ್ರಿ.

109
00:14:00,215 --> 00:14:03,969
ನಾನು ನನ್ನ ಕುಟುಂಬದ ಬಗ್ಗೆ ಮಾತಾಡ್ತಿದೀನಿ
ಕೇಸ್ ಇನ್ವೆಸ್ಟಿಗೇಷನ್ನಲ್ಲಿದೆ

110
00:14:05,262 --> 00:14:09,140
ಅದು ಬೇಹುಗಾರಿಕೆ ವಿರೋಧಿಯಾಗಿರ್ಬೇಕು.
ಇಲ್ಲಿ ನಡೀತಿರೋದು ವೈಯುಕ್ತಿಕ.

111
00:14:09,266 --> 00:14:10,267
ವೈಯುಕ್ತಿಕ?

112
00:14:10,350 --> 00:14:14,729
ಕಹಾನಿನ ವರ್ಷಗಳಿಂದ ನೋಡ್ತಾ ಇದೀನಿ.
ಅವನನ್ ಕೊಲ್ಲೋಕೆ ಇನ್ನೂ ಚೆನ್ನಾಗಿರೋರು ಇಲ್ಲ.

113
00:14:14,813 --> 00:14:16,815
ಅವ್ರು ಮತ್ತೆ ಕುಡ್ಸ್ಗಳಿಗೆ ಗೊತ್ತು.

114
00:14:17,190 --> 00:14:19,943
ಮಗನೇ, ಜಹಾನ್ ಕಹಾನಿ
ಕೊರೋನಾಡೋದಲ್ಲಿ ಕೆಲಸ ಮಾಡ್ತಿಲ್ಲ.

115
00:14:20,026 --> 00:14:21,778
ಅವ್ನು ಔಷಧಿಯವ್ನು ಪತ್ತೇದಾರ ಅಲ್ಲ

116
00:14:21,861 --> 00:14:25,156
ಅವ್ನು, ಬೂಜರ್ನ ನನ್ನ ಕೊಲ್ಲೋಕೆ
ಜನ್ರನ್ನ ಕಳ್ಸಿದ್ದ.

117
00:14:25,657 --> 00:14:28,451
ನನ್ನ ಕುಟುಂಬನ ಕೊಂದಿರೋರು
ಇನ್ನೂ ಹೊರ್ಗಡೆ ಇದಾರೆ.

118
00:14:28,535 --> 00:14:30,453
ಇಡೀ ಸಮಾಜಕ್ಕೆ ಅಪಾಯ ಇದೆ.

119
00:14:32,914 --> 00:14:36,835
ನೀನು ಮುಕ್ತವಾಗಿ ಮಾತಾಡ್ತಾ ಇದೀಯಾ,
ನಾನೂ ಹಾಗೇ ಮಾಡ್ತೀನಿ.

120
00:14:42,173 --> 00:14:45,302
ನಮ್ಮನ್ನ ವಾದ ಮಾಡೋಕಾಗ್ದೇ ಇರೋ ಸ್ಥಾನದಲ್ಲಿ
ಇಡ್ತಾ ಇದೀಯಾ.

121
00:14:45,927 --> 00:14:50,223
ಎರಡು ವಾರದ್ ಹಿಂದೆ ಸಾಕ್ಷಿ ವಿರುದ್ಧವಾಗಿದ್ರೂ
ನೀನು ಬಂದು ಒತ್ತಾಯ ಮಾಡ್ದೆ.

122
00:14:50,307 --> 00:14:53,476
ಒಬ್ಬ SDF ಸೈನಿಕ ಸಿರಿಯಾದಲ್ಲಿ
ಐಇಡಿ ಸ್ಫೋಟ ಮಾಡ್ದ ಅಂತ ಅಂದೆ.

123
00:14:53,560 --> 00:14:55,145
ಅದನ್ನ ವಾಪಸ್ ತಗೊಂಡಾಯ್ತು ಸರ್

124
00:14:55,228 --> 00:14:58,064
ನಾವು ನಿನ್ ಸಲ್ವಾಗಿ ಅಷ್ಟೊಂದು ಕಷ್ಟ ಪಟ್ ಮೇಲೆ.

125
00:14:58,690 --> 00:15:00,734
ಈಗ ನಾವೇನ್ ಮಾಡ್ಬೇಕು ಅಂತ ಹೇಳ್ತಿದೀಯಾ?

126
00:15:00,817 --> 00:15:05,238
ಕುಡ್ಸ್ ಸೈನ್ಯ ನಮ್ಮ ಕಣ್ಣೆದ್ರಿಗೇ
ನಮ್ಮ ಸೀಲ್ಗಳನ್ನ ಕೊಲ್ತಾ ಇದೆ ಅನ್ನೂ ವದಂತಿನ

127
00:15:05,322 --> 00:15:08,700
-ಎನ್ಸಿಐಎಸ್ ಜೊತೆ ಜಗಳ ಮಾಡ್ಬೇಕಾ?
-ಸರ್. ನೀವ್ ಕೇಳ್ತಾ ಇಲ್ಲ.

128
00:15:08,783 --> 00:15:10,994
ನೀನು ನಿನ್ನನ್ನೇ ಕೇಳ್ತಾ ಇಲ್ಲ, ಕಮಾಂಡರ್.

129
00:15:12,120 --> 00:15:16,791
ಓಡಿನ್ ಕತ್ತಿ ವಿಚಾರಣೆಲಿ
ನಾವು ನಿನ್ ಕೆಲಸ ಉಳಿಸಿದ್ವಿ.

130
00:15:17,208 --> 00:15:22,213
ಕ್ಯಾಪ್ಟನ್ ಹೋವಾರ್ಡ್ ಅವ್ರು ಯಾವಾಗ್ಲೂ
ನಿನ್ನ ತಪ್ಪನ್ನ ಮರೆಮಾಚೋ ಕೆಲಸನೇ ಮಾಡ್ತಿದಾರೆ.

131
00:15:23,340 --> 00:15:26,635
ನಿಜ ಹೇಳ್ಬೇಕು ಅಂದ್ರೆ,
ನಿಂಗೇನಾಗ್ತಿದೆ ಅಂತ ನಮಗೆ ಗೊತ್ತಿಲ್ಲ.

132
00:15:27,969 --> 00:15:32,182
ನಿಂಗೆ ನಿನ್ ಜನ್ರನ್ನ ಅಥವಾ ಕುಟುಂಬನ
ಉಳಿಸ್ಕೊಳ್ಳೋಕಾಗ್ಲಿಲ್ಲ ಅನ್ನೋದ್ ನೋಡಿದ್ರೆ,

133
00:15:32,265 --> 00:15:33,266
ನಾವು--

134
00:15:34,809 --> 00:15:37,854
ರೀಸ್! ಬಿಡು, ಕಮಾಂಡರ್.

135
00:15:55,121 --> 00:15:57,165
ಕೇಟೀ ಬರ್ನಾಕ್,
ವೋಲ್ಟ್ಸ್ಟ್ರೀಮ್.

136
00:15:57,248 --> 00:15:59,668
ಸಂಪರ್ಕದ ಕಛೇರಿಯವರು
ಇಲ್ಲಿ ಭೇಟಿ ಮಾಡು ಅಂದ್ರು.

137
00:15:59,834 --> 00:16:02,587
-ಇಲ್ಲ.
-ನಾನು ಬ್ರೆಂಡಾ ಫ್ರೀಮನ್ ಜೊತೆ ಮಾತಾಡಿದೆ.

138
00:16:02,879 --> 00:16:04,297
ಬ್ರೆಂಡಾ ಏನಾದ್ರೂ ಹೇಳಿದ್ರೆ

139
00:16:04,381 --> 00:16:07,133
ಎನ್ಸಿಐಎಸ್ ವರದಿಗಾರರನ್ನ
ಅಪರಾಧದ ಸ್ಥಳಕ್ಕೆ ಬಿಡಲ್ಲ.

140
00:16:07,217 --> 00:16:09,969
ಕೊಲೆಗಳ ೧ ದಿನ ಮೊದಲು
ನಾನು ಕಮಾಂಡರ್ ರೀಸ್ ಜೊತೆ ಇದ್ದೆ

141
00:16:10,053 --> 00:16:11,554
ನನ್ ಮುಖಕ್ಕೆ ಗನ್ ಹಿಡ್ದಿದ್ದ

142
00:16:12,305 --> 00:16:14,182
ಸಾಕ್ಷಿ ಹೇಳಿಕೆ ಬೇಕಾದ್ರೆ ಸಿಗುತ್ತೆ

143
00:16:14,265 --> 00:16:17,977
ಅಲ್ಲೇನಾಯ್ತು ಅಂತ ಅನಧಿಕೃತವಾಗಿ
ನಂಗ್ ಹೇಳೋಕಾಗುತ್ತಾ.

144
00:16:20,939 --> 00:16:25,068
ಕೊರೋನರ್ ರೀಸ್ ಈ ಕ್ಲಿನಿಕ್ ಒಳ್ಗಡೆ ಬಂದ
30 ನಿಮಿಷದಲ್ಲಿ ಹೆಂಡ್ತಿ ಮತ್ತೆ ಮಗುವಿನ

145
00:16:25,151 --> 00:16:26,820
ಟಿಒಡಿ ವಾಪಸ್ ತಗೊಳುತ್ತೆ.

146
00:16:26,903 --> 00:16:29,072
ಅವನ ಬಂದ 30 ನಿಮಿಷ ಮೊದ್ಲಾ ಇಲ್ಲಾ ಆಮೇಲಾ?

147
00:16:29,155 --> 00:16:32,367
ಗೊತ್ತಿಲ್ಲ,
ಆದ್ರೆ ಅದು ದೋಷದ ಗಡಿ ಒಳ್ಗಡೆನೇ ಇದೆ.

148
00:16:32,450 --> 00:16:36,830
ಅಂದ್ರೆ ಅವ್ನು ಹೋದ ಮೇಲೆ ಯಾರೋ ಅವನ ಕುಟುಂಬನ
ಕೊಂದಿದಾರೆ, ಅಥವಾ ರೀಸ್ ತನ್ನ ಕುಟುಂಬನ

149
00:16:36,913 --> 00:16:38,540
ಕೊಂದು ಇಲ್ಲಿ ಬಂದಿರ್ಬೇಕು.

150
00:16:39,374 --> 00:16:41,376
ರೀಸ್ ಜೊತೆ ಮಾತಾಡ್ದಾಗ ಚಿಂತೆಲಿದ್ದ.

151
00:16:41,459 --> 00:16:43,086
ಅದಿಕ್ಕೇ ಗನ್ ತೋರಿಸಿದ್ನಾ?

152
00:16:43,878 --> 00:16:47,132
ಆದ್ರೆ ಅವನು ತನ್ನ ಹೆಂಡ್ತಿ ಮಗೂನ
ಕೊಲ್ಲೋರ್ ಥರ ಕಾಣಿಸಲಿಲ್ಲ.

153
00:16:55,557 --> 00:16:56,433
ದೇವ್ರೇ.

154
00:16:56,891 --> 00:16:58,268
ಹೌದು. ಕೆಟ್ಟದಾಗಿತ್ತು.

155
00:16:59,602 --> 00:17:03,606
ಸರಿ. ಯಾರೋ ಬಂದ್ರು.
ಡಾಕ್ಟರ್ಗಳ ಮೇಲೆ ಗುಂಡು ಹಾರಿಸಿದ್ರು.

156
00:17:03,690 --> 00:17:05,191
ಬ್ಯಾಂಗ್ ಬ್ಯಾಂಗ್.

157
00:17:07,068 --> 00:17:08,403
ಇಲ್ಲೇನಾಯ್ತು?

158
00:17:09,821 --> 00:17:13,491
ಬಹುಶಃ ಇಲ್ಲಿ ರೀಸ್ ಇಬ್ರು
ಮಾಸ್ಕ್ ಹಾಕ್ಕೊಂಡಿರೋ ಕೊಲೆಗಾರರ ಜೊತೆ

159
00:17:13,575 --> 00:17:15,118
ಹೋರಾಟ ಮಾಡ್ದ.

160
00:17:15,368 --> 00:17:16,327
"ಬಹುಶಃ?"

161
00:17:16,411 --> 00:17:17,829
ಇಲ್ಲಿ ಯಾರೂ ಇಲ್ಲ.

162
00:17:17,912 --> 00:17:21,458
ಮತ್ತೆ ರೀಸ್ ಪ್ರಕಾರ, ಅವನ ಒಬ್ಬ
ಕೊಲೆಗಾರ ಇಲ್ಲೇ ಬಿದ್ದಿದ್ದ

163
00:17:21,541 --> 00:17:25,253
ರಕ್ತದ ಮಡುವಿನಲ್ಲಿ ಬಿದ್ದಿದ್ದ. ಶೂಟ್ ಮಾಡಿದೆ.
ಮೂರು ಬಾರಿ.

164
00:17:25,336 --> 00:17:27,130
ಯಾರಾದ್ರೂ ಸಾಕ್ಷಿ ಅಳಿಸಿದ್ರಾ?

165
00:17:27,213 --> 00:17:30,508
ಮೊದಲು ನಾನೇ ಬಂದಿದ್ದು.
ದಾಳಿಕೋರನ ಯಾವುದೇ ಸೂಚನೆ ನನಗೆ ಕಾಣಲಿಲ್ಲ,

166
00:17:30,592 --> 00:17:32,761
ಯಾವುದೇ ದಾಳಿಕೋರ, ಜೀವಂತ ಅಥವಾ ಮೃತ.

167
00:17:32,844 --> 00:17:36,222
ಸರ್, ಕ್ಲಿನಿಕ್ನಲ್ಲಿ
ಸೆಕ್ಯೂರಿಟಿ ಕ್ಯಾಮೆರಾಗಳಿಲ್ವಾ?

168
00:17:36,306 --> 00:17:38,308
ಇಲ್ಲ. ಗ್ರಾಹಕರ ಗೌಪ್ಯತೆ.

169
00:17:38,892 --> 00:17:40,185
ವೈದ್ಯಕೀಯ ನ್ಯಾಯಶಾಸ್ತ್ರ

170
00:17:40,268 --> 00:17:43,563
ಏನೂ ಇಲ್ಲ. ರೀಸ್ನ
ಒಂಬತ್ತು-ಮಿಲೀಮೀಟರ್ನಲ್ಲಿನ ಬುಲೆಟ್ ಬಿಟ್ಟು.

171
00:17:44,105 --> 00:17:46,316
ಹಾಗಾದ್ರೆ ಅವನು ಯಾಕೆ ಹೊರ್ಗಡೆ ಇದಾನೆ?

172
00:17:46,399 --> 00:17:48,526
ಯಾಕಂದ್ರೆ ಇದು ಯಾವ್ದೂ ಅರ್ಥ ಆಗ್ತಾ ಇಲ್ಲ.

173
00:17:48,985 --> 00:17:51,488
ಅವನಿಗೆ ಚಾಕು ಗಾಯ ಇದೆ.
ನನ್ನ ಹತ್ರ ಚಾಕು ಇಲ್ಲ.

174
00:17:51,571 --> 00:17:55,533
ಅಲ್ಲದೇ, ಮನೆಯ ಸೆಕ್ಯೂರಿಟಿ ಫೂಟೇಜ್
ರೀಸ್ ಆರಾಮಗಿ ಹೋಗ್ತಾ ಇರೋದು ತೋರಿಸ್ತಿದೆ.

175
00:17:55,617 --> 00:17:57,535
ನಂತರ ಹೆದರಿಕೊಂಡು ಬರ್ತಿದಾನೆ.

176
00:17:57,619 --> 00:18:02,165
ಜೇಮ್ಸ್ ರೀಸ್ ಒಂದೋ ಈ ಕೋಣೇಲಿ ಯಾರ್ ಜೊತೆಗೋ
ಹೊಡೆದಾಡಿದ ಅಥವಾ ಯಾರ್ ಜೊತೆಗೂ ಹೊಡ್ದಾಡಿಲ್ಲ.

177
00:18:02,957 --> 00:18:05,502
ನಾನು ಒಂದು ಮನವರಿಕೆ
ಮಾಡ್ಕೊಂಡ್ರೆ ಆಮೇಲೆ ಇನ್ನೊಂದು

178
00:18:06,336 --> 00:18:10,131
ನಂಗೆ ಗೊತ್ತಿರೋದಂದ್ರೆ ಜೇಮ್ಸ್ ರೀಸ್
ತಾನು ಹೇಳಿದ್ದನ್ನ ನಂಬಿದಾನೆ.

179
00:18:11,925 --> 00:18:14,219
ಅವನ ತಲೆ ಪರೀಕ್ಷೆ ಮಾಡೋದಕ್ಕೂ ಕಾರಣ ಇತ್ತು.

180
00:19:18,908 --> 00:19:21,077
ಎಲ್ಲಾ ಹೇಳಿದೀನಿ. ಇನ್ನೇನೂ ಉಳ್ದಿಲ್ಲ.

181
00:19:21,160 --> 00:19:25,206
ಎನ್ಗ್ರಾಂ ಕ್ಲಿನಿಕ್ನಲ್ಲಿ ದಾಳಿಕೋರರ
ಯಾವುದೇ ಲಕ್ಷಣ, ಮೃತ ದೇಹ ಇರ್ಲಿಲ್ಲ.

182
00:19:25,290 --> 00:19:26,749
ಅದನ್ನ ಹೇಗೆ ವಿವರಿಸ್ತೀಯಾ?

183
00:19:31,671 --> 00:19:34,007
ಗ್ಯಾರೇಜ್ ಪಕ್ಕದ ಗೇಟ್ನಲ್ಲಿ ಬೇಟಿ ಮಾಡು.

184
00:19:36,050 --> 00:19:37,427
ಇಎಂಎಸ್ ಅನ್ನ ಕೇಳಿದ್ಯಾ?

185
00:19:37,510 --> 00:19:41,180
ಕೆಲವೊಮ್ಮೆ ಅವ್ರಿಗೆ ತನಿಖೆ ಮೊದ್ಲು
ದೇಹನ ತೆಗ್ಯೋಕ್ ಹೇಳ್ತಾರೆ.

186
00:19:41,264 --> 00:19:43,892
ನಾನು ಇಎಂಎಸ್ ಎಂಇ, ಸಿಎಸ್ಐ, ಎಲ್ಲಾರ್ಗೂ ಕೇಳ್ದೆ.

187
00:19:43,975 --> 00:19:46,811
-ನಂಗೆ ಹುಚ್ ಹಿಡ್ದಿಲ್ಲ.
-ನಾನ್ ಹಾಗ್ ಹೇಳಿಲ್ಲ.

188
00:19:47,353 --> 00:19:49,522
ಅದನ್ನ ಸಾಬೀತು ಮಾಡೋಕೆ ಯಾರಾದ್ರೂ ಬೇಕು.

189
00:19:50,231 --> 00:19:52,859
MRI ಸ್ಕ್ಯಾನ್ ನಂತರ ನಿನ್ ಮೇಲೆ ದಾಳಿ ಆಯ್ತಲ್ವಾ?

190
00:19:52,942 --> 00:19:54,611
-ಹೌದು
-ಸರಿ ಹಾಗಾದ್ರೆ

191
00:19:54,694 --> 00:19:57,780
ನಿಂಗೆ ರಿಸಲ್ಟ್ ನೋಡೋಕ್ ಆಗಿಲ್ಲ ಅಂದ್ಕೋತೀನಿ.

192
00:19:57,864 --> 00:19:59,407
ತುಂಬಾ ಕೆಲಸ ಇತ್ತು.

193
00:19:59,490 --> 00:20:00,992
ಇದು ಬಿಡುಗಡೆ.

194
00:20:01,743 --> 00:20:05,747
ಸಹಿ ಮಾಡಿದ್ರೆ ಫೈಲ್ ನೋಡಿ ಸ್ಕ್ಯಾನ್
ಸರ್ಯಾಗಿದೆ ಅಂತ ಕೇಸ್ಗೆ ಸಹಾಯ ಮಾಡ್ಬಹ್ದು

195
00:20:05,830 --> 00:20:09,709
ಸ್ಕ್ಯಾನ್ ಸರ್ಯಾಗಿದೆ ಅಂತ ಸಾಬೀತಾದ್ರೆ
ಕೇಸ್ಗೆ ಸಹಾಯ ಆಗುತ್ತಾ. ಹೇಗೆ?

196
00:20:09,792 --> 00:20:11,961
ನನ್ನನ್ ಯಾರೂ ನಂಬಲ್ಲ. ಥ್ಯಾಂಕ್ಸ್.

197
00:20:12,045 --> 00:20:14,631
ನಿನ್ ಕೇಸಲ್ಲಿರೋ ಏಜೆಂಟ್ ನಿನ್ನನ್ ನಂಬ್ತಾನೆ.

198
00:20:15,298 --> 00:20:17,091
-ಹೋಲ್ಡರ್ ಭೇಟಿ ಮಾಡಿದ್ಯಾ?
-ಹೌದು

199
00:20:17,842 --> 00:20:21,930
ಅವನು ಎನ್ಸಿಐಎಸ್ ಏಜೆಂಟ್. ಯಾರಾದ್ರೂ ಸೀಲ್ನ
ಹಿಡ್ದು ಫೇಮಸ್ ಆಗೋದೇ ಅವ್ನ್ ಗುರಿ.

200
00:20:22,013 --> 00:20:24,849
ಅವ್ನು ಮೊದ್ಲು ಬಂದಿದ್ರೂ ನೀನ್ ಯಾಕ್ ಇನ್ನೂ
ಹೊರ್ಗಡೆ ಇದೀಯಾ?

201
00:20:33,024 --> 00:20:36,027
-ನಿನ್ ರಿಸರ್ಚ್ ನೀನೇ ಇಟ್ಕೋತೀಯಾ?
-ಯಾವ ರಿಸರ್ಚ್?

202
00:20:39,614 --> 00:20:40,823
ಹೌದು, ಇದೆ.

203
00:20:42,367 --> 00:20:43,576
ನಾನ್ ಅದನ್ನ ನೋಡ್ಬೇಕು.

204
00:20:45,954 --> 00:20:48,498
ನಾನು ನಂದೇ ಖಾಸಗಿ ವೈದ್ಯಕೀಯ
ಮಾಹಿತಿ ಪಡ್ಕೋಬಹ್ದು.

205
00:20:49,207 --> 00:20:51,668
ನಿನ್ ಹತ್ರ ಪೋಲೀಸ್ ರಿಪೋರ್ಟ್ ಕಾಪಿ ಇಲ್ಲ

206
00:20:52,794 --> 00:20:54,295
ತೋರ್ಸು, ಸಹಿ ಹಾಕ್ತೀನಿ.

207
00:21:07,517 --> 00:21:09,560
ಹೋಲ್ಡರ್ ಕ್ಲಿನಿಕ್ಗೆ ಮೊದ್ಲು ಬಂದಿದ್ನಾ

208
00:21:10,269 --> 00:21:12,438
ಅದನ್ನ ಅರ್ಥ ಮಾಡ್ಕೋತಿದೀನಿ ಅಂತ ಹೇಳ್ದ.

209
00:21:23,533 --> 00:21:26,035
ಥ್ಯಾಂಕ್ಸ್. ಸಂಪರ್ಕದಲ್ಲಿರ್ತೀನಿ, ಕಮಾಂಡರ್.

210
00:21:26,119 --> 00:21:28,746
ಇರು, ನಿನ್ ಹತ್ರ ಯಾವ್ ಥರದ್ ಫೋನ್ ಇದೆ?

211
00:21:30,665 --> 00:21:32,750
-ಇಂಥದ್ದು.
-ಇರು. ಇರು... ಯಾವ್ ಥರದ್ದು?

212
00:21:35,253 --> 00:21:36,587
ಇಲ್ಲೇ ಇರು.

213
00:22:13,791 --> 00:22:15,126
ನಿನ್ ಫೋನ್ ತೋರ್ಸು.

214
00:22:16,461 --> 00:22:17,545
ತೋರ್ಸು.

215
00:22:21,382 --> 00:22:25,386
ಇದು ಏರ್ಪ್ಲೇನ್ ಮೋಡ್ನಲ್ಲಿರಲಿ.
ಸರೀನಾ? ಆಫ್ ಮಾಡ್ಬೇಡ. ಏರ್ಪ್ಲೇನ್ ಮೋಡ್.

216
00:22:25,470 --> 00:22:26,929
ಇದು ಫಾರಡೇ ಬ್ಯಾಗ್.

217
00:22:27,013 --> 00:22:30,058
ನೀನು ಎಸ್ಸಿಐಎಫ್ಗೆ ಹೋಗಿದ್ರೆ
ಕೆಲಸ ಮಾಡೋದು ಅರ್ಥ ಆಗುತ್ತೆ.

218
00:22:31,184 --> 00:22:33,811
ಅನ್ಎನ್ಕ್ರಿಪ್ಟೆಡ್ ಸ್ಮಾರ್ಟ್ಫೋನ್ ಟ್ರಾಕಿಂಗ್

219
00:22:33,895 --> 00:22:35,813
ಡಿವೈಸ್, ಅದ್ರಿಂದ ಫೋನೂ ಮಾಡ್ಬಹ್ದು

220
00:22:35,897 --> 00:22:38,399
ನಾನ್ ಹೀಗೇ ವಿದೇಶೀ ಬೇಹುಗಾರಿಕೆ ಮಾಡ್ತಿದ್ದೆ.

221
00:22:38,483 --> 00:22:42,779
ಅದನ್ನ ಬ್ಯಾಗಲ್ಲಿಡು.
ಇದು... ಇದು ಪ್ರಿಪೇಡ್ ಫೋನ್.

222
00:22:42,862 --> 00:22:45,698
ಅದ್ರಿಂದ ನನ್ನ ಕಾಂಟಾಕ್ಟ್ ಮಾಡು.
ಕಾಲ್, ಟೆಕ್ಸ್ಟ್ ಬೇಡ.

223
00:22:45,782 --> 00:22:49,202
ನೀನು ಕ್ಯಾಶ್ ಕೊಟ್ಟು ಗೂಗಲ್
ಗಿಫ್ಟ್ ಕಾರ್ಡ್ ತಗೋ.

224
00:22:49,285 --> 00:22:50,828
ಇದನ್ನ ಬರ್ಕೋ, ಪ್ಲೀಸ್.

225
00:22:50,912 --> 00:22:54,248
ಇದನ್ನ ಬಳಸಿ ಥ್ರೀಮಾ ಅಕೌಂಟ್ ಸೆಟ್ ಮಾಡು.

226
00:22:54,332 --> 00:22:58,044
ವಾಟ್ಸಾಪ್ ಬೇಡ. ಅದು ಬಹಳ ವರ್ಷದಿಂದ ರಾಜಿಯಾಗಿದೆ.
ಸರೀನಾ?

227
00:22:58,127 --> 00:23:00,713
ಥ್ರೀಮಾ, ಟಿ-ಎಚ್-ಆರ್-ಇ-ಇ-ಎಂ-ಎ.

228
00:23:02,048 --> 00:23:03,049
ಪೆನ್.

229
00:23:05,093 --> 00:23:09,430
ನನ್ನ ಖಾಸಗಿ ಯೂಸರ್ನೇಮ್ ಕೊಡುತ್ತಿದ್ದೇನೆ
ಇದರಿಂದ ಥ್ರೀಮಾದಲ್ಲಿ ನನ್ನನ್ನು ಸಂಪರ್ಕಿಸು

230
00:23:14,060 --> 00:23:15,728
ನೆನಪಿಟ್ಟುಕೊಂಡು ಇದನ್ನು ಅಳಿಸಿಬಿಡು

231
00:23:18,397 --> 00:23:20,858
ಹೌದು. ಇದು ಬಹಳ ಎಚ್ಚರಿಕೆ.

232
00:23:22,902 --> 00:23:25,446
ಕಹಾನಿ ಬಗ್ಗೆ ನಾನು ಸರಿ ಇದ್ದಲ್ಲಿ,
ಇದೂ ಸಾಕಾಗಲ್ಲ.

233
00:23:28,783 --> 00:23:31,744
ಸರಿ. ಥ್ಯಾಂಕ್ಸ್, ಕಮಾಂಡರ್.

234
00:23:35,498 --> 00:23:36,999
ನನ್ನನ್ನ ರೀಸ್ ಅಂತ ಕರೀಬಹ್ದು

235
00:23:37,834 --> 00:23:40,628
ನೀನು ನನ್ನ ಕಥೆ ಹೇಳ್ತಾ ಇದ್ರೆ,
ನನ್ನ ಹೆಸರೂ ಬಳಸಬಹ್ದು.

236
00:23:41,212 --> 00:23:44,465
ಸರಿ. ರೀಸ್. ಇಲ್ಲೇ ಇರು.

237
00:24:32,930 --> 00:24:34,182
ಯಾವನೋ ನೀನು?

238
00:24:41,772 --> 00:24:43,858
ಅಯ್ಯೋ.

239
00:27:53,547 --> 00:27:55,174
ಏನು? ನಿದ್ದೆ ಮಾಡ್ತಿದ್ಯಾ?

240
00:27:55,257 --> 00:27:59,178
ಜಿಎಂಟಿ ಪ್ಲಸ್ ಮೂರು, ಅಣ್ಣಾ.
ನಂದು ಹಾಳಾದ್ ಯೆಮೆನ್ ಟೈಮ್. ಏನ್ ನಡೀತಾ ಇದೆ?

241
00:28:04,517 --> 00:28:05,518
ನಮ್ ಹುಡುಗ ಸಿಕ್ಕಿದ

242
00:28:07,686 --> 00:28:08,729
ನಮ್ ಹುಡುಗ?

243
00:28:19,281 --> 00:28:21,826
ರೀಸ್, ಇದು... ಇದು ಟಾರ್ಗೆಟ್ ಪ್ಯಾಕೇಜ್.

244
00:28:21,909 --> 00:28:24,703
ಕುಡ್ಸ್ ಕೊರೊನಾಡೋದಲ್ಲಿ ಸೀಲ್ಗಳನ್ನ
ಗುರಿ ಮಾಡಿದ್ರೆ

245
00:28:24,787 --> 00:28:27,957
ತನಿಖೆ ಅವ್ರ್ ಪರ್ವಾಗಿರೋಕೆ ಅವ್ರಿಗೆ
ಯಾರಾದ್ರೂ ಬೇಕು ಅಂದಿದ್ದೆ

246
00:28:28,040 --> 00:28:32,378
ಎನ್ಸಿಐಎಸ್ಯ ಏಜೆಂಟ್ ಜೋಶ್ ಹೋಲ್ಡರ್ನ
ನನ್ನ ಮತ್ತೆ ಬೂಜರ್ ಕೇಸ್ಗೆ ಹಾಕಿದಾರೆ.

247
00:28:32,461 --> 00:28:37,299
ಯೋಚ್ನೆ ಮಾಡು. ಸಿಪಿಡಿ ಪ್ರತಿಕ್ರಿಯೆ ಕೊಡ್ತು ಅಂತ
ಹೇಳಿದ್ರೂ ಇಲ್ಲಿ ಅವ್ನೇ ಮೊದ್ಲು ಬಂದಿದ್ದು.

248
00:28:37,383 --> 00:28:42,304
ಇದನ್ನೂ ನೋಡು, ಅವ್ನು ಇಎಂಟಿಗಿಂತ
ಮೊದ್ಲು ಎಂಆರ್ಐ ಕ್ಲಿನಿಕ್ಗೆ ಹೋದ.

249
00:28:42,972 --> 00:28:45,141
ಅವ್ನು ಇಲ್ಲೇ ಇರ್ದೇ ಇದ್ದಿದ್ರೆ ಹೀಗಾಗಲ್ಲ.

250
00:28:46,142 --> 00:28:49,854
ಅವ್ನೇ ಟ್ರಿಗರ್ ಎಳ್ದಿದ್ದು.
ಅವ್ನೇ ತಪ್ಪಿಸ್ಕೊಂಡ.

251
00:28:52,731 --> 00:28:54,024
ಒಂದ್ ಮಾತ್ ಕೇಳ್ತೀನಿ.

252
00:28:57,445 --> 00:28:58,654
ನಿಂಗೆ ಹೇಗನಿಸ್ತಿದೆ?

253
00:28:59,738 --> 00:29:00,781
ನಾನ್ ಚೆನ್ನಾಗಿದೀನಿ

254
00:29:08,622 --> 00:29:11,709
ಅದು ತಲೆನೋವಿಗೆ ತುಂಬಾ ಒಳ್ಳೇದು. ಒಂದೇ ಸಾಕು.

255
00:29:13,169 --> 00:29:16,255
ಇನ್ನೂ ಹೆಚ್ಚು ತಗೊಂಡ್ರೆ ಖಂಡಿತ ಅಪಾಯ.

256
00:29:19,800 --> 00:29:20,926
ಸರಿ.

257
00:29:21,886 --> 00:29:25,347
ಮೊದಲನೆಯದಾಗಿ, ನಿಮ್ಮ ಕಣ್ಗಾವಲು ಕೆಟ್ಟದಾಗಿದೆ.

258
00:29:25,723 --> 00:29:29,185
ಆ ದೊಡ್ ಗಾಡಿ ತಗೊಂಡು ನೀವು ಇಷ್ಟ್ ಹತ್ರ ಬಂದ್ರೆ
ಸಿಕ್ ಹಾಕ್ಕೋತೀರಾ.

259
00:29:29,268 --> 00:29:32,813
ಗೊತ್ತಪ್ಪಾ. ನಾನು ಏಜೆನ್ಸಿಯವನು ಅಲ್ದೇ ಇದ್ರೂ
ಮುಠ್ಠಾಳ ಅಲ್ಲ.

260
00:29:32,897 --> 00:29:36,442
ನಾನು ಟೀಮ್ಸ್ನಿಂದ ಲೆಕ್ರಾನ್ ಉಂಗುರ ತಂದಿದೀನಿ
ಅವ್ನು ನನ್ನ ನೋಡಿಲ್ಲ.

261
00:29:44,074 --> 00:29:47,495
ಲೈಟ್ ಬಿಯರ್ ಕುಡೀತಾನೆ. ಅದು ಅನುಮಾನ.

262
00:29:51,999 --> 00:29:53,250
ಇದಕ್ಕೆ ಏನ್ ಮಾಡ್ತಿದೀಯಾ

263
00:29:55,044 --> 00:29:56,879
ಕಣ್ಣಲ್ ಕಣ್ಣಿಟ್ ನೋಡ್ದೆ, ಬೆನ್.

264
00:30:00,299 --> 00:30:01,342
ಅದು ಅವ್ನೇ.

265
00:30:09,725 --> 00:30:10,809
ಈಗೇನ್ ಮಾಡೋದು?

266
00:30:19,944 --> 00:30:21,403
ರಾಯ್? ಬೋಹೆಮ್?

267
00:30:21,654 --> 00:30:23,739
ಕಾರ್ಮೆನ್? ತುಂಬಾ ಸಂತೋಷ ಆಯ್ತು.

268
00:30:23,822 --> 00:30:26,742
-ನಿಮ್ಗೆ ಎರಡು ಬೆಡ್ರೂಮ್ ಬೇಕಿತ್ತಲ್ವಾ?
-ಹೌದು.

269
00:30:26,825 --> 00:30:29,828
-ಅದ್ಭುತ. ಮೇಲ್ಗಡೆ ಒಂದು ಶೋ ಯೂನಿಟ್ ರೆಡಿ ಇದೆ.
-ಸರಿ.

270
00:30:31,580 --> 00:30:34,583
ಮೊದ್ಲು ಬೀಚ್ ನೋಡ್ಬಹ್ದು ಅಂದ್ಕೊಂಡೆ.

271
00:30:34,708 --> 00:30:37,711
-ಖಂಡಿತ. ಈ ಕಡೆ ಬನ್ನಿ.
-ಅದ್ಭುತ.

272
00:30:41,257 --> 00:30:43,509
ಬೆಲ್ಲೋಜೆಂಟೆ ಒಂದು ಒಳ್ಳೇ ಕಮ್ಯೂನಿಟಿ.

273
00:30:45,511 --> 00:30:47,638
ಇಲ್ಲಿ ನಿಮ್ಮಂಥ ಕಸಿಗಳು ತುಂಬಾ ಇದಾರೆ.

274
00:30:47,721 --> 00:30:50,140
ನೀವು ಸಕ್ರಿಯವಾಗಿದೀರಾ ಅಂತ ನಂಗೊತ್ತು,

275
00:30:50,224 --> 00:30:53,686
ಇಲ್ಲಿ ಮಹಡಿ ಮೇಲೆ ಹೀಟೆಡ್ ಪೂಲ್,
ಫಿಟ್ನೆಸ್ ಸೆಂಟರ್ ಎಲ್ಲಾ ಇದೆ.

276
00:30:53,769 --> 00:30:56,647
ಮತ್ತೆ ಸ್ಯಾನ್ ಡಿಯಾಗೋದಲ್ಲೇ
ಅತ್ಯುತ್ತಮ ಸರ್ಫ್ ಬ್ರೇಕ್.

277
00:30:56,730 --> 00:30:59,733
ಇವ್ನು ಸರ್ಫ್ ಮಾಡೋದು ಬರೀ ಇಂಟರ್ನೆಟ್ ಮಾತ್ರ.

278
00:31:07,616 --> 00:31:08,659
ಬೈಕ್ ದಾರಿ.

279
00:31:25,509 --> 00:31:27,344
ಇಲ್ಲಿ ಯಾವ್ ಥರದ್ ಸೆಕ್ಯುರಿಟಿ ಇದೆ?

280
00:31:27,428 --> 00:31:29,847
-ಬಾಗ್ಲು ಯಾವತ್ತೂ ಬೀಗ ಹಾಕಿರುತ್ತೆ.
-ಸರಿ.

281
00:31:29,930 --> 00:31:32,850
-ಇದು ಸುರಕ್ಷಿತ ಪ್ರದೇಶ.
-ಅಲಾರ್ಮ್ ಸಿಸ್ಟಮ್ ಬೇಕಾಗಲ್ಲ.

282
00:31:32,933 --> 00:31:35,352
ಕಳ್ಳತನದ ಸಮಸ್ಯೆ ಇಲ್ಲ ಅಂತ ಮಾತ್ ಕೊಡ್ತೀನಿ.

283
00:31:35,436 --> 00:31:38,022
ಸರಿ. ನಾನ್ ಮೇಲ್ಗಡೆ ಹೋಗೋಕ್ ರೆಡಿಯಾಗಿದೀನಿ.

284
00:31:38,105 --> 00:31:39,398
ನಡೀರಿ.

285
00:31:39,690 --> 00:31:41,900
ಎಲ್ಲಾ ಯೂನಿಟ್ಗಳನ್ನ ವಿಶೇಷವಾಗಿ ಮಾಡಿದಾರೆ

286
00:31:41,984 --> 00:31:44,653
ಉನ್ನತೀಕರಿಸಿದ ಸೌಲಭ್ಯಗಳು,
ಪರಿಸರ-ಸ್ನೇಹಿ ಕಿಟಕಿಗಳು.

287
00:31:44,945 --> 00:31:47,781
ಹಿಂದಿನ ವರ್ಷ ಇಡೀ ಬಿಲ್ಡಿಂಗ್ಗೆ
ಸೋಲಾರ್ ಹಾಕ್ಸಿದೀವಿ.

288
00:31:47,865 --> 00:31:50,159
-ಹೌದಾ?
-ಹೌದು.

289
00:31:50,826 --> 00:31:52,077
ಹಸಿರು ಕ್ರಾಂತಿ.

290
00:31:53,037 --> 00:31:55,539
ಅಂಗಳಕ್ಕೆ ಮುಖವಾಗಿರೋ ಕೆಲವು ಯೂನಿಟ್ಗಳಿದಾವೆ.

291
00:31:55,623 --> 00:31:58,292
ಆದ್ರೆ ನಿಜವಾದ್ ಬಹುಮಾನ ಅಂದ್ರೆ ಪಸಿಫಿಕ್.

292
00:32:05,507 --> 00:32:07,176
ಹೇಯ್, ಇದು ಲಿಜ್.

293
00:32:07,718 --> 00:32:11,597
ನನ್ ಬಾಸ್ ದೇಶದಲ್ಲಿಲ್ಲ, ನಾನು ಗ್ಯಾಸ್ ಇಟ್ಕೊಂಡು
ಕೆಲಸ ಇಲ್ದೇ ಕೂತಿದೀನಿ

294
00:32:11,680 --> 00:32:15,768
ಸ್ಯಾನ್ ಡಿಯಾಗೋಗೆ ಬಂದು ನಿನ್ನ
ಕರ್ಕೊಂಡ್ ಹೋಗ್ಬಹ್ದು ಅಂತ ಅಂದ್ಕೊಂಡೆ.

295
00:32:15,851 --> 00:32:17,394
ಸ್ನೇಹಪರ ಆಕಾಶ ತೆರೆದಿದೆ.

296
00:32:18,062 --> 00:32:19,021
ನಾನು...

297
00:32:20,064 --> 00:32:25,069
ನನ್ನ ಹುಡುಗೀರು ನೆನಪಾಗ್ತಾ ಇದಾರೆ, ರೀಸ್.
ಆಮೇಲೆ ಮಾತಾಡ್ತೀನಿ.

298
00:32:36,163 --> 00:32:37,247
ಕಾಲ್ಗೆ ಒಂದು.

299
00:32:40,209 --> 00:32:41,210
ಆಯ್ಕೆ.

300
00:32:44,296 --> 00:32:47,508
ನೀನು ಇದನ್ನ ಮಾಡ್ಬೇಕು ಅಂತಿಲ್ಲ.
ನೀನು ಬಿಗ್ ಬ್ಲೈಂಡ್.

301
00:32:47,591 --> 00:32:50,260
ಏನೇ ಆದ್ರೂ ನೀನು ಈ ಆಟ ಆಡ್ತೀಯಾ ಅಲ್ವಾ?

302
00:32:51,387 --> 00:32:53,097
ನೀನ್ ನಿನ್ ಕಾರ್ಡ್ ಇಟ್ಕೋ.

303
00:32:53,555 --> 00:32:55,265
ಸಲಹೆ ಕೊಟ್ಟಿದ್ದಕ್ಕೆ ಥ್ಯಾಂಕ್ಸ್.

304
00:32:59,728 --> 00:33:02,022
ಚೆಕ್ ಹೇಳ್ಬೇಕಾ? ಚೆಕ್.

305
00:33:03,816 --> 00:33:04,817
ಚೆಕ್.

306
00:33:06,985 --> 00:33:08,237
ಕಾಲ್ಗೆ ಇಪ್ಪತ್ತು.

307
00:33:15,869 --> 00:33:17,454
ತಮಾಷೆ ಮಾಡ್ತಾ ಇದೀಯಾ?

308
00:33:18,288 --> 00:33:19,164
ಜೋರ್ಡಾನ್.

309
00:33:19,248 --> 00:33:20,708
೧ ವಾರ ನನ್ ಫೋನ್ ಎತ್ತಲ್ಲ.

310
00:33:20,791 --> 00:33:24,545
ಏನಾದ್ರೂ ಸರಿ ಇಲ್ಲ ಅಂತ ಅನ್ನಿಸ್ದಾಗ.
ನಿಂಗೆ ತೊಂದ್ರೆ ಇರ್ಬಹ್ದು, ಇಲ್ಲ.

311
00:33:24,628 --> 00:33:27,923
ಪೋಕರ್ ಟೇಬಲ್ನಲ್ಲಿ ಕಾಲೇಜ್ ಹುಡುಗರನ್ನ
ಲೂಟಿ ಮಾಡ್ತಾ ಇದೀಯಾ ಹಲೋ.

312
00:33:28,006 --> 00:33:28,924
ಬಾಯ್ ಮುಚ್ಚು ಮಗಾ

313
00:33:30,551 --> 00:33:31,927
ಸರಿ. ಬೆಟರ್ ಚೆಕ್.

314
00:33:36,640 --> 00:33:38,434
-ಎಲ್ಲವೂ ಒಳಗೆ.
-ಎಲ್ಲವೂ ಒಳಗೆ.

315
00:33:40,310 --> 00:33:43,313
ಬೇಗ ನಿಲ್ಸು.
ನೀನು ಉಸ್ತಾದ್ ಜೊತೆ ಆಡ್ತಾ ಇದೀಯಾ.

316
00:33:43,397 --> 00:33:44,815
-ಸರ್.
-ಹೌದು, ಮೇಡಮ್.

317
00:33:50,070 --> 00:33:51,321
-ಮಡಚಿ.
-ಒಳ್ಳೇ ಕೆಲಸ.

318
00:33:51,405 --> 00:33:52,865
ಏನ್ ಕರ್ಮ, ಮಗಾ.

319
00:33:56,243 --> 00:33:58,328
ಕೆಲಸ ಮಾಡ್ತಾ ಇದೀನಿ. ಏನ್ ಹೇಳಲಿ?

320
00:33:58,412 --> 00:34:00,748
ಹಿಂದಿನ್ ೬ ತಿಂಗ್ಳು ವ್ಯರ್ಥ ಆಯ್ತು ಅಂತ ಹೇಳು

321
00:34:01,540 --> 00:34:05,627
ನಿನ್ನ ಸಿರಿಯಾ ಮತ್ತೆ ಟರ್ಕಿಲಿ
ದಿನಕ್ಕೆ $1,000ದ ಖರ್ಚಲ್ಲಿಟ್ಟಿದ್ದು ನಿನ್ನ,

322
00:34:05,711 --> 00:34:08,464
ನನ್ನ, ಮತ್ತೆ ವೋಲ್ಟ್ಸ್ಟ್ರೀಮ್ನ
ಲಾಭಕ್ಕಾಗಿತ್ತು.

323
00:34:08,547 --> 00:34:11,258
ಅಲೆಪ್ಪೋದಲ್ಲಿ ಕೊಡ್ಸಿದ್ ಹೋಟೆಲ್
ರೂಮ್ ಕೆಟ್ಟದಾಗಿತ್ತು

324
00:34:11,341 --> 00:34:13,218
-ಉಳ್ಕೋಳೋಕೆ ಹಣ ಕೊಡ್ಬೇಕಿತ್ತು
-ಹೌದು

325
00:34:13,302 --> 00:34:17,264
ನಿಂಗೆ ಹಣ ಕೊಟ್ಟಿಲ್ಲ, ಅಲ್ವಾ
ನಾನು ಅದಕ್ಕೆ ಮತ್ತೆ ನಿನ್ ಸೆಕ್ಯೂರಿಟಿಗೆ ಕೊಟ್ಟೆ

326
00:34:17,347 --> 00:34:19,933
ಅದ್ ಹ್ಯಾಗೋ ನಿಂಗೆ ಈ ವರ್ಷದ್ ದೊಡ್ ಕಥೆ ಸಿಕ್ತು.

327
00:34:20,017 --> 00:34:22,603
-ಚೆನ್ನಾಗ್ ಕೆಲಸ ಮಾಡ್ತೀನಿ.
-ಹಾಗಾದ್ರೆ ಸುಮ್ನಿರು.

328
00:34:22,686 --> 00:34:26,190
ಇದ್ರ್ ಜೊತೆಗೆ, ನಾನು ಎಬಿಸಿ೭ನಲ್ಲಿ ಜೇಮ್ಸ್ ರೀಸ್
ಬಗ್ಗೆ ತಿಳ್ಕೋಬೇಕಾ?

329
00:34:27,775 --> 00:34:31,153
ಎಬಿಸಿ೭ಗೆ ಅವನಿಂದ ಸಹಿ ಮಾಡಿರೋ
ವೈದ್ಯಕೀಯ ಬಿಡುಗಡೆ ಸಿಕ್ಕಿಲ್ಲ.

330
00:34:34,990 --> 00:34:36,200
ಹೇಳು.

331
00:34:37,659 --> 00:34:40,537
ರೀಸ್ ಮಾನಸಿಕ ಸಾಮರ್ಥ್ಯದ
ಬಗ್ಗೆ ಕೆಲವು ಪ್ರಶ್ನೆಗಳಿವೆ.

332
00:34:40,913 --> 00:34:43,874
ಪೋಲೀಸರು ಕ್ರೈಮ್ ಸೀನ್ಗೆ
ಬರುವುದನ್ನೇ ಕಾಯುತ್ತಿದ್ದೇನೆ.

333
00:34:46,543 --> 00:34:48,837
ಅವನು ಕುಟುಂಬನ ಕೊಲೆ ಮಾಡಿದ್ನಾ?

334
00:34:49,546 --> 00:34:51,173
ಅದ್ರ್ ಮೇಲೇ ಕೆಲಸ ಮಾಡ್ತಿದೀನಿ.

335
00:34:53,133 --> 00:34:56,053
ನನ್ ಅಲ್ಸರ್ಗೆ ನಿನ್ ಹೆಸ್ರಿಟ್ಟಿದೀನಿ,
ಅಲ್ಸರ್ ಕೇಟಿ.

336
00:34:56,136 --> 00:34:58,347
-ನೀನು ಬಹಳ ಚಿಂತೆ ಮಾಡ್ತೀಯಾ.
-ಹೌದು.

337
00:35:00,182 --> 00:35:03,936
ನೀನು ಪ್ರಭಾವವಿರೋ ಕೆಲಸ ಚೆನ್ನಾಗ್ ಮಾಡ್ತೀಯಾ.
ಇದಕ್ಕೆ ತುಂಬಾ ಕಾದಿದೀನಿ.

338
00:35:04,311 --> 00:35:06,897
ವೋಲ್ಟ್ಸ್ಟ್ರೀಮ್ನ ದೊಡ್ಡ ಲಾಭ ಅಂದ್ರೆ ನೇರತನ.

339
00:35:06,980 --> 00:35:10,150
24 ಗಂಟೆ ಇದೆ,
ಆಮೇಲೆ ನನ್ನ ಉಪಯೋಗಕ್ಕೆ ಬರೋದೇನಾದ್ರೂ ಬೇಕು.

340
00:35:11,944 --> 00:35:13,195
ಸರಿ. ಅವಳು ಮಾಡ್ತಾಳೆ.

341
00:35:30,337 --> 00:35:34,842
ಮೊಲ ಹೋಗ್ತಾ ಇದೆ. ಅವನು 180ರಲ್ಲಿ ಹೋಗ್ತಾ ಇದಾನಾ
ಅಂತ ತಿಳಿಸ್ತೀನಿ. ಚೆನ್ನಾಗ್ ಬೇಟೆಯಾಡು.

342
00:37:43,178 --> 00:37:44,221
ಸಿಟ್ರೆಪ್?

343
00:37:45,389 --> 00:37:48,809
ಬೇವರ್ಸಿ ಈಗ್ ತಾನೇ ಫ್ರೀವೇಗೆ ಹೋದ.
ನೀನೂ ಹೊರಡು.

344
00:38:29,224 --> 00:38:30,267
ಬಿಯರ್.

345
00:38:32,769 --> 00:38:33,770
ಏನಾದ್ರೂ?

346
00:38:34,104 --> 00:38:38,108
ಇಲ್ಲ. ಬೇಬಿಸಿಟ್ಟರ್ ಪಾರ್ನ್ ಬಗ್ಗೆ
ತುಂಬಾ ತಲೆ ಕೆಡಿಸ್ಕೊಂಡಿದಾನೆ ಅಷ್ಟೇ.

347
00:38:42,237 --> 00:38:43,280
ತಲೆನೋವುಗಳು.

348
00:38:44,781 --> 00:38:47,242
ನಾನು ನಿನ್ನೆ ರಾತ್ರಿ ನಿದ್ದೆ ಮಾಡಿಲ್ಲ ಅಷ್ಟೇ.

349
00:38:47,325 --> 00:38:51,705
ಆ ಮನೇಲಿದ್ರೆ ನಾನೂ ಮಾಡ್ತಿರ್ಲಿಲ್ಲ.
ನೀನು ಇಲ್ಲೇ ನಿದ್ದೆ ಮಾಡು.

350
00:38:51,788 --> 00:38:55,751
ನೀನು ಅದ್ರ ಮೇಲೆ ನಿದ್ದೆ ಮಾಡ್ದಾಗಿಂದ
ನಾನು ಅ ಶೀಟ್ಗಳನ್ನ ತೊಳೆದೇ ಇಲ್ಲ.

351
00:38:55,834 --> 00:38:58,253
ನೀನು ಯಾವತ್ತೂ ಆ ಶೀಟ್ಗಳನ್ನ ತೊಳ್ದಿಲ್ಲ.

352
00:38:58,336 --> 00:38:59,463
ಅದೇ.

353
00:39:03,050 --> 00:39:06,928
ರಿಂಗ್ ಆಗ್ತಿದೆ. ಏಯ್! ಫೋನ್ ರಿಂಗ್ ಆಗ್ತಿದೆ.

354
00:39:08,680 --> 00:39:10,515
-ಅಯ್ಯೋ.
-ವಾಷಿಂಗ್ಟನ್.

355
00:39:10,849 --> 00:39:13,894
-ವಾಷಿಂಗ್ಟನ್ನಿಂದ ಯಾರ್ ಫೋನ್ ಬಂದಿದೆ?
-ಒಳ್ಳೇ ಪ್ರಶ್ನೆ.

356
00:39:28,033 --> 00:39:29,076
ಹೇಗಿದೀಯಾ ರಿಕ್?

357
00:39:29,743 --> 00:39:30,952
ಹೇಯ್, ಅಣ್ಣಾ.

358
00:39:32,746 --> 00:39:35,499
ಹಿಂದೆ ಒಬ್ಬ ಪರಿಚದಯವರು
ನಿನಗಾಗಿ ಕಾಯ್ತಾ ಇದಾರೆ.

359
00:39:42,506 --> 00:39:43,715
ಮೇಡಮ್ ಸೆಕ್ರೆಟರಿ

360
00:39:45,425 --> 00:39:46,593
ಕಮಾಂಡರ್.

361
00:39:47,677 --> 00:39:49,554
ವಾರ್ಕಾಮ್ನಲ್ಲಿ ಏನಾಯ್ತು ಕೇಳ್ದೆ.

362
00:39:49,638 --> 00:39:52,390
ಎಡ್ಮಿರಲ್ ಮೇಲೆ ದಾಳಿ ನಿನ್ ಕೇಸಿಗೆ ಒಳ್ಳೇದಲ್ಲ.

363
00:39:52,474 --> 00:39:55,185
ನಿಮಗಿಂತ ಕಡಿಮೆ ಸಂಬಳದ ಸೀಲ್ಗಳಿಗೆ
ಇದು ಮೋಸ ಅಲ್ವಾ?

364
00:39:55,268 --> 00:39:58,355
ನಾನು ಮೋಸ ಮಾಡ್ತಾ ಇಲ್ಲ.
ಜೆರಿ ಆಗಾಗ ತುಂಬಾ ಕೊಚ್ಕೋತಾನೆ.

365
00:40:01,233 --> 00:40:02,943
ನಿಮ್ಮ ತಂದೆ ಸೀಲ್ ಆಗಿದ್ದರಲ್ವಾ?

366
00:40:04,111 --> 00:40:05,112
ಹೌದು, ಮೇಡಮ್.

367
00:40:06,905 --> 00:40:10,951
ಸೈನಿಕನ ಮಗ ಆಗಿರೋದು ವಿಶೇಷ ಹೆಮ್ಮೆ.
ಹಾಗೇ ವಿಶೇಷವಾದ ಹೊರೆ ಕೂಡ.

368
00:40:13,036 --> 00:40:14,663
ಐರಿಷ್ ಕುಡೀತೀಯಾ ಕಮಾಂಡರ್?

369
00:40:15,872 --> 00:40:17,749
ಇತ್ತೀಚಿಗೆ ನಾನು ತುಂಬಾ ಆರಿಸಲ್ಲ.

370
00:40:26,800 --> 00:40:30,971
ರಿಕ್. ೨ ಯೆಲ್ಲೋ ಸ್ಪಾಟ್ಸ್ ತರ್ತೀಯಾ ಪ್ಲೀಸ್?

371
00:40:31,263 --> 00:40:32,347
ಸರಿ, ಮೇಡಮ್.

372
00:40:35,600 --> 00:40:39,229
ಸೀಲ್ಗಳು ಅವ್ರ್ ಕೆಲವು ದಾಳಿ ತಂತ್ರಗಳನ್ನ
ಆರ್ಮಿ ಹೆಲಿಕಾಪ್ಟರ್ ಬಳಸಿ

373
00:40:39,312 --> 00:40:40,856
ತಯಾರಿಸಿದಾರೆ ಅಂತ ಗೊತ್ತಾ?

374
00:40:42,023 --> 00:40:46,903
ಯುವ ಸೀಲ್ ಆದ ನಿಮ್ಮಪ್ಪ, ಮತ್ತೆ ಹಿರಿಯ ಪೈಲಟ್ ಆದ
ನಮ್ಮಪ್ಪ, ಒಬ್ಬರಿಗೊಬ್ಬರು ಅಡ್ಡ ಬಂದಿದ್ರೆ

375
00:40:46,987 --> 00:40:48,822
ಆಗಿರಬಹುದಾದ ಅನಾಹುತನ ಊಹೆ ಮಾಡು.

376
00:40:49,239 --> 00:40:51,032
ಅಪ್ಪಂಗೆ ಹಾರಾಟ ಇಷ್ಟ ಇರ್ಲಿಲ್ಲ.

377
00:40:52,409 --> 00:40:54,494
ಬಹುಶಃ ನನ್ನ ಅಪ್ಪನ್ ಜೊತೆ ಹೋಗಿದ್ದಕ್ಕೆ.

378
00:40:56,413 --> 00:40:59,416
ಮೇಡಮ್, ಇದು ನಮ್ ಕಡೆಯಿಂದ.

379
00:41:03,712 --> 00:41:05,672
ವಾರ್ಕಾಮ್ ನನ್ ಥಿಯರಿ ಬಗ್ಗೆ ಕೇಳ್ತಾ?

380
00:41:07,174 --> 00:41:11,303
ಕಹಾನಿ ನಮಗೆ ಸಿರಿಯಾದಲ್ಲಿ
ಬರೀ ಸುಳ್ಳು ಹೇಳಿರೋದಷ್ಟೇ ಅಲ್ಲ.

381
00:41:11,386 --> 00:41:16,349
ಎನ್ಸಿಐಎಸ್ ಸ್ಯಾನ್ ಡಿಯಾಗೋದಲ್ಲಿ ಕನಿಷ್ಠ
ಒಬ್ಬರಾದರೂ ಸಹಾಯ ಮಾಡ್ತಿದಾರೆ ಅಂತ ನಂಗನ್ಸುತ್ತೆ.

382
00:41:17,350 --> 00:41:21,897
ಅದಕ್ಕೂ ಮೀರಿ ನಂಗೊತ್ತಿಲ್ಲ.
ಆದ್ರೆ ನಾವು ಈ ಬಗ್ಗೆ ಈಗಲೇ ಕ್ರಮ ಕೈಗೊಳ್ಳಬೇಕು.

383
00:41:21,980 --> 00:41:24,733
ಅವನು ಕೇವಲ ನನ್ನ ಸೈನ್ಯದವರೆಗೆ
ಬರೋ ಹಾಗೆ ಮಾಡ್ಬೇಕು.

384
00:41:24,816 --> 00:41:27,027
ಕಹಾನಿಯಿಂದ ನಿನಗೆ ಅಪಾಯ ಇಲ್ಲ, ಕಮಾಂಡರ್.

385
00:41:27,110 --> 00:41:28,737
ಮೇಡಮ್. ಅದು ನಮಗೆ ಗೊತ್ತಿಲ್ಲ.

386
00:41:30,447 --> 00:41:31,823
ಹೇಯ್, ನ್ಯೂಸ್ ಹಾಕಿ.

387
00:41:33,491 --> 00:41:34,659
ನಾವು ಹಾಗೇ ಮಾಡ್ತೀವಿ.

388
00:41:34,743 --> 00:41:35,577
ಮುಂದೆ ಹೋಗೋಣ.

389
00:41:35,660 --> 00:41:38,163
ಇರಾನೀ ಶಸ್ತ ತಜ್ಞ ಡಾ.ಜಹಾನ್ ಕಹಾನಿ

390
00:41:38,246 --> 00:41:42,292
ಉತ್ತರ ಸಿರಿಯಾದಲ್ಲಿ ನಡೆದ ಉನ್ನತ ಮಟ್ಟದ
ಸೇನಾ ಕಾರ್ಯಾಚರಣೆಯಲ್ಲಿ ಮೃತನಾದನು.

391
00:41:42,375 --> 00:41:46,087
ಈ ದಾಳಿ 12 ನೇವಿ ಸೀಲ್ಗಳ ಸಾವಿನಲ್ಲಿ
ಪರ್ಯವಸಾನವಾದ ಕಹಾನಿಯನ್ನು ಬಂಧಿಸುವ

392
00:41:46,171 --> 00:41:48,506
ವಿಫಲ ಕಾರ್ಯಾಚರಣೆಯ ಕೆಲವೇ ವಾರಗಳಲ್ಲಿ ಆಗಿದೆ.

393
00:41:48,590 --> 00:41:50,508
ಪೆಂಟಗಾನ್ ಈ ಹೇಳಿಕೆಯನ್ನು ನೀಡಿದೆ:

394
00:41:50,592 --> 00:41:52,219
"ವಿಶ್ವ ವಿಶೇಷವಾಗಿ ಸಿರಿಯನ್ನರು

395
00:41:52,302 --> 00:41:56,556
ಮಧ್ಯ ಏಷ್ಯಾದ ಉನ್ನತ ರಾಸಾಯನಿಕ ತಜ್ಞನಿಂದ
ಸ್ವಾತಂತ್ರ್ಯವನ್ನು ಗೌರವಿಸುವವರಿಗೆ ಇನ್ನು

396
00:41:56,640 --> 00:41:59,100
ಅಪಾಯವಿಲ್ಲವೆಂದು ತಿಳಿದು ಸಮಾಧಾನವಾಗಿರಬಹುದು."

397
00:42:07,525 --> 00:42:10,487
ಯುದ್ಧ ಮನೆವರೆಗೂ ಬಂದ್ರೆ
ಹೇಗನಿಸುತ್ತೆ ಅಂತ ನಂಗೊತ್ತು.

398
00:42:11,029 --> 00:42:14,574
ಆದರೆ ಈ ಉದ್ದೇಶ ಈಡೇರಿದೆ ಅನ್ನೋದನ್ನ ಕೇಳಿ
ನಿಂಗೆ ಶಾಂತಿ ಸಿಗುತ್ತೆ

399
00:42:15,116 --> 00:42:16,493
ಅಂತ ಅಂದ್ಕೋತೀನಿ.

400
00:42:18,203 --> 00:42:19,537
ಗುಡ್ ನೈಟ್, ಕಮಾಂಡರ್.

401
00:42:30,966 --> 00:42:34,511
ಆಪರೇಷನ್ ಓಡಿನ್ಸ್ ಸ್ವೋರ್ಡ್ನ
ಹಿಂದಿನ ವೈಫಲ್ಯದ ಬಗ್ಗೆ ಈಗಲೂ

402
00:42:34,594 --> 00:42:36,388
ತನಿಖೆ ನಡೆಯುತ್ತಿದೆ.

403
00:42:48,692 --> 00:42:49,693
ಯೋ.

404
00:42:50,235 --> 00:42:51,736
ಏನು? ಏನಾದ್ರೂ ಇದ್ಯಾ?

405
00:42:51,820 --> 00:42:55,907
ಹೌದು. ನಮ್ ಹುಡುಗ ನಿನ್ನ ಬಯೋಮೆಟ್ರಿಕ್ಸ್ನ
ಟೀಮ್ ಡೇಟಾಬೇಸ್ನಿಂದ ಹೊರಗಡೆ ತೆಗೆದ.

406
00:42:56,783 --> 00:42:58,535
ಸರಿ. ನಾನು ಅವನ ಮುಖ್ಯ ಆರೋಪಿ.

407
00:42:58,618 --> 00:43:02,706
ಆದ್ರೆ ಹೋಲ್ಡರ್ ಹಾಳಾದ್ ಕೊಲೆ ನಡ್ಯೋ 2 ದಿನ
ಮೊದ್ಲು ನಿನ್ ಪ್ರಿಂಟ್ಗಳನ್ನ ತಗೊಂಡ.

408
00:43:04,374 --> 00:43:06,001
ನಮಗೆ ಬೇಕಾದವನು ಅವನೇನಾ.

409
00:43:10,005 --> 00:43:11,381
ತಿಳ್ಕೊಳ್ಳೋ ಒಂದು ದಾರಿ.

410
00:43:15,552 --> 00:43:17,178
ಚಾಕು ಗಾಯ, ಎಡ ಮುಂದೋಳು.

411
00:43:17,554 --> 00:43:20,098
ಹೌದು. ನಿಂಗೇನೋ ತಂದಿದೀನಿ.

412
00:43:33,278 --> 00:43:36,406
ಹುಡುಗಿಯರು, ಮತ್ತೆ ಬೂಜರ್ಗಾಗಿ.

413
00:43:53,048 --> 00:43:55,425
-ಹೇಯ್.
-ನೀನ್ ಪೋಲೀಸಾ?

414
00:43:55,508 --> 00:43:59,304
ಇಲ್ಲ. ಪ್ರೆಸ್. ಜೇಮ್ಸ್ ರೀಸ್ ಮಿದುಳಿನ
ಸ್ಕ್ಯಾನ್ ಬಗ್ಗೆ ಫೋನ್ ಮಾಡಿದ್ದೆ.

415
00:43:59,387 --> 00:44:00,430
ನಾನೇ ಮಾತಾಡಿದ್ದು.

416
00:44:00,513 --> 00:44:03,683
ನಾವು ಮಾಹಿತಿ ಕೊಡೋ ಮೊದ್ಲು
ಹೊಸಾ ಡಾಕ್ಟರ್ನ ನಿಯೋಜಿಸಬೇಕು.

417
00:44:03,767 --> 00:44:05,769
ನಂಗಿದು ನಿನ್ನೆನೇ ಬೇಕಿತ್ತು.

418
00:44:14,611 --> 00:44:16,279
-ಒಂದು ನಿಮಿಷ
-ಥ್ಯಾಂಕ್ಸ್

419
00:44:34,089 --> 00:44:36,633
ಹೇಯ್, ಜೋರ್ಡಾನ್. ಹೌದು, ಅದು ಸಿಕ್ತು!

420
00:44:37,133 --> 00:44:40,887
ಹೌದು, ಕೇಳು. ನೀನು ಈಗ್ಲೇ ಎಲ್.ಎ.ಯಲ್ಲಿ
ಒಬ್ಬ ನರರೋಗತಜ್ಞರನ್ನ ಹುಡುಕಬೇಕು.

421
00:44:41,721 --> 00:44:43,848
ನನ್ನನ್ನ ನಂಬು. ಕಥೆ ಇನ್ನೂ ಸಖತ್ತಾಗಿದೆ.

422
00:47:09,077 --> 00:47:11,371
ಇದು ಬೂಜರ್ನ ಮೆಚ್ಚಿನ ಗನ್ ಆಗಿತ್ತು.

423
00:47:12,830 --> 00:47:17,460
ಕಿಂಬರ್ 1911, 45. ಅವನು ಟೆಕ್ಸಾಸ್ನಲ್ಲಿ
ಇದೇ ಪಾಪುನ ಆಡಿಸ್ಕೊಂಡ್ ಬೆಳೆದಿದಾನೆ.

424
00:47:17,919 --> 00:47:20,964
ಆತ್ಮಹತ್ಯೆ ಮಾಡ್ಕೋಬೇಕು ಅಂತಿದ್ರೆ
ಅವನು 1911 ಬಳಸ್ತಾ ಇದ್ದ.

425
00:47:22,382 --> 00:47:24,842
ದಡ್ಡ ನನ್ ಮಕ್ಳು ತಪ್ಪು ಗನ್ನಿಂದ ಸಾಯಿಸಿದ್ರಿ.

426
00:47:26,886 --> 00:47:28,721
ಆರಾಮಾಗಿ ಮಾತಾಡೋಣ.

427
00:47:29,514 --> 00:47:32,350
ಶಾಂತವಾಗಿದ್ರೆ ಜೀವಂತವಾಗಿರ್ತೀಯಾ,
ಅರ್ಥ ಆಯ್ತಾ?

428
00:47:37,397 --> 00:47:41,985
ಸರಿ, ಸರಿ.
ನಾನು... ನಾನು ನಿನ್ನ ಗೆಳೆಯನ್ನ ಸಾಯಿಸಲಿಲ್ಲ.

429
00:47:42,068 --> 00:47:43,236
-ಸಾಯಿಸಿದೆ.
-ಇಲ್ಲ.

430
00:47:43,319 --> 00:47:46,406
ನೀನು ನನ್ನ ಹೆಂಡತಿನ ಕೊಂದೆ.
ನನ್ನ ಮಗಳನ್ನ ಕೊಂದೆ.

431
00:47:47,156 --> 00:47:50,201
-ನನ್ನ ಕೊಲ್ಲೋಕೆ ನೋಡ್ದೆ.
-ಇಲ್ಲ, ನಾನ್ ಯಾರನ್ನೂ ಕೊಂದಿಲ್ಲ.

432
00:47:50,285 --> 00:47:51,202
ಆಯುಧ ತೋರಿಸು.

433
00:47:51,286 --> 00:47:54,330
-ನಾನ್ ಯಾರನ್ನೂ ಕೊಂದಿಲ್ಲ.
-ನಿನ್ನ ಆಯುಧ ತೋರಿಸು.

434
00:48:01,629 --> 00:48:03,089
ಎಡ ತೋಳು ಆ ಕಡೆ ತಿರುಗಿಸು.

435
00:48:09,429 --> 00:48:10,930
ಇನ್ನೊಂದು ತೋಳನ್ನ ತಿರುಗಿಸು.

436
00:48:18,104 --> 00:48:19,105
ಸರಿ.

437
00:48:24,902 --> 00:48:28,197
ನೀನು ಅವರನ್ನ ಕೊಲ್ಲದೇ ಇದ್ರೂ ಬಹುಶಃ
ಅದನ್ನ ಮುಚ್ಚಿ ಹಾಕಿರಬಹುದು.

438
00:48:28,865 --> 00:48:29,866
ಯಾರ್ ಕಳ್ಸಿದ್ದು?

439
00:48:30,700 --> 00:48:32,243
ದರಿದ್ರ ಕೈ ಒಳಗಡೆ ಇಡು.

440
00:48:36,581 --> 00:48:39,125
ನಾನೊಂದು ಪ್ರಶ್ನೆ ಕೇಳ್ದೆ.

441
00:48:42,670 --> 00:48:44,881
-ಅಳಬೇಡ.
-ನಂಗೊತ್ತಿಲ್ಲ.

442
00:48:44,964 --> 00:48:47,925
ಇರಾನ್? ಸಿರಿಯಾ?

443
00:48:50,011 --> 00:48:53,598
ಮತ್ತೆ ಕೇಳೋ ಹಾಗೆ ಮಾಡಬೇಡ.
ಯಾರಿಗಾಗಿ ಕೆಲಸ ಮಾಡ್ತೀಯಾ?

444
00:48:54,599 --> 00:48:56,726
ಅಯ್ಯಪ್ಪಾ, ಬೋರ್ ಹೊಡೀತಾ ಇದೆ, ಬಾಸ್.

445
00:49:10,448 --> 00:49:14,118
ಅವನು ಇಡೀ ದಿನ ಸುಳ್ಳು ಹೇಳಬಹುದು.
ನಮಗೆ ಗೊತ್ತಿರೋದು ನಮಗೇ ಗೊತ್ತು.

446
00:49:14,702 --> 00:49:17,330
ಇದು ಪ್ರಶ್ನೆಯಲ್ಲ
ಇವನ ಬಗ್ಗೆ ನಮಗೆ ಎಲ್ಲಾ ಗೊತ್ತು.

447
00:49:21,376 --> 00:49:23,419
ಪ್ಲೀಸ್, ನಂಗೇನೂ ಮಾಡಬೇಡಿ.

448
00:49:30,843 --> 00:49:33,012
ಸಾಯ್ಲಿ. ಇದು ಈಗಲ್ಲ. ಹಾಳಾಗ್ ಹೋಗ್ಲಿ.

449
00:49:33,596 --> 00:49:34,972
ಅವನಿಗೆ ಮರೆವಿನ ರೋಗ ಇದೆ.

450
00:49:35,973 --> 00:49:37,350
ಬೇಡ್ಕೋತೀನಿ. ಬೇಡ್ಕೋತೀನಿ.

451
00:49:38,393 --> 00:49:41,312
-ಕಮಾಂಡರ್...
-ನನ್ ಜೊತೆ ಯಾಕೆ ನೇರವಾಗಿ ಮಾತಾಡಲ್ಲ?

452
00:49:41,396 --> 00:49:42,605
ಯಾರ ಜೊತೆ ಮಾತು?

453
00:49:43,898 --> 00:49:47,402
ಕೇಳು, ಸರೀನಾ? ಬರೀ ಕೇಳು.
ನಾನು ನಿನ್ನ ಮೇಲೆ ದಾಳಿ ಮಾಡಲ್ಲ.

454
00:49:47,735 --> 00:49:50,279
ನಾನು ಬರೀ... ಇದೆಲ್ಲದೂ ದೂರ ಹೋಗುತ್ತೆ.

455
00:49:51,197 --> 00:49:52,907
-ಎಲ್ಲಾನೂ ದೂರ ಹೋಗುತ್ತಾ?
-ಹೌದು.

456
00:49:52,990 --> 00:49:55,493
ಸೀಲ್ ಬಯೋಮೆಟ್ರಿಕ್ಸ್ ಇಂದ
ಥಂಬ್ಪ್ರಿಂಟ್ ತಗೊಂಡೆ.

457
00:49:55,576 --> 00:49:58,162
ನಾನು ಓಡಿನ್ಸ್ ಸ್ವೋರ್ಡ್ಗೆ ಸಹಾಯ ಮಾಡ್ತಿದ್ದೆ.

458
00:50:02,375 --> 00:50:06,963
-ನೀನು ಎಲ್ಲಾ ಹಾಳು ಮಾಡಿದೆ.
-ಕಮಾಂಡರ್. ನಾನೊಬ್ಬ ಫೆಡರಲ್ ಏಜೆಂಟ್.

459
00:50:07,046 --> 00:50:10,508
ಫೆಡರಲ್ ಏಜೆಂಟಾ? ನಾನು 9-1-1 ಡಯಲ್ ಮಾಡ್ದೆ.
ಅದು ಪೋಲೀಸ್.

460
00:50:10,591 --> 00:50:12,844
ನೀನು ಅಲ್ಲಿ ಮೊದಲು ಬರೋಕೆ ಸಾಧ್ಯನೇ ಇಲ್ಲ.

461
00:50:12,927 --> 00:50:15,179
ಇಲ್ಲ. ನೀನೇ ಮೊದಲು ಅಲ್ಲಿ ಇರದಿದ್ರೆ.

462
00:50:15,263 --> 00:50:18,349
ಡಿಸ್ಪ್ಯಾಚ್ನಿಂದ ಫೋನ್ ಬಂದಿತ್ತು. ನೀನು ನೇವಿ
ಅಂತ ಗೊತ್ತು.

463
00:50:18,433 --> 00:50:19,809
ನೀನು ನೇವಿ ಅಂತ ಗೊತ್ತು.

464
00:50:23,688 --> 00:50:24,647
ಸುಳ್ಳು ಹೇಳಬೇಡ.

465
00:50:25,898 --> 00:50:26,941
ಇಲ್ಲ.

466
00:50:29,360 --> 00:50:31,988
ಹಾಳಾಗ್ ಹೋಗ್ಲಿ.

467
00:50:32,321 --> 00:50:34,240
ಬೂಜರ್ನ ಹತ್ತಿರನೇ ಇದು ಗೊತ್ತಿತ್ತು.

468
00:50:34,323 --> 00:50:37,326
ಅವನು ಆತ್ಮಹತ್ಯೆ ಮಾಡಿಕೊಂಡಿಲ್ಲ ಅಂತ
ಅಲ್ಫಾ ಪ್ಲಟೂನ್ ಜೊತೆ

469
00:50:37,410 --> 00:50:40,413
ಸುರಂಗದಲ್ಲಿರುವಾಗಲೇ ಗೊತ್ತಿತ್ತು,
ಈಗ್ಲೂ ಗೊತ್ತು, ಸರೀನಾ?

470
00:50:40,496 --> 00:50:42,790
-ಕಮಾಂಡರ್...
-ನನ್ನ ಬಲೆಗೆ ಬೀಳಿಸ್ದೆ.

471
00:50:43,416 --> 00:50:48,004
ನೀನು... ನಿಂಗೆ ಹುಶಾರಿಲ್ಲ. ಹುಶಾರಿಲ್ಲ.

472
00:50:51,632 --> 00:50:56,387
ನೀನ್ ಹೇಳ್ತಾ ಇರೋದು ನಿಜಾನೇ ಆದ್ರೆ,
ಇಲ್ಲಿ ಯಾವ್ದೇ ಕೊಲೆಗಾರ ಇಲ್ಲ.

473
00:50:58,222 --> 00:50:59,849
ನಾನೇ ನನ್ ಕುಟುಂಬನ ಕೊಂದೆ.

474
00:51:01,601 --> 00:51:04,854
ಇಲ್ಲ, ಇಲ್ಲ, ಅಯ್ಯೋ.

475
00:51:09,942 --> 00:51:12,737
ನೀನ್ ಏನೇ ಹೇಳಿದ್ರೂ
ನಾನು ಅದನ್ನ ಮಾತ್ರ ಒಪ್ಪಲ್ಲ.

476
00:51:12,987 --> 00:51:15,490
-ಕಮಾಂಡರ್, ಇಲ್ಲ, ಬೇಡ, ಬೇಡ!
-ಅಲ್ಲಾಡಬೇಡ.

477
00:51:15,573 --> 00:51:16,824
-ಗಲ್ಲ ಮೇಲೆತ್ತು.
-ಇಲ್ಲ!

478
00:51:16,908 --> 00:51:18,493
ನಿನ್ ಹಾಳಾದ್ ಗಲ್ಲ ಮೇಲೆತ್ತು.

479
00:51:19,410 --> 00:51:23,664
ಸೌಲ್ ಆಗ್ನನ್. ಸೌಲ್ ಆಗ್ನನ್. ಸೌಲ್ ಆಗ್ನನ್.

480
00:51:25,333 --> 00:51:28,795
ಏನು? ಏನ್ ಹೇಳ್ತಾ ಇದೀಯಾ?

481
00:51:28,878 --> 00:51:31,714
ಸೌಲ್ ಆಗ್ನನ್. ಅವನೇ. ಅವನೇ ನಂಗೆ ಹಣ ಕೊಡ್ತಾನೆ.

482
00:51:32,256 --> 00:51:36,886
ಅದೇ ಅವನ ಹೆಸರು. ಅವನು ನಂಗೆ ಮಾಹಿತಿ ಕೊಡ್ತಾನೆ.
ನನ್ನ ಖಾತೆಲಿ ಹಣ ಬರುತ್ತೆ.

483
00:51:38,805 --> 00:51:41,057
ನಂಗಷ್ಟೇ ಗೊತ್ತು. ಅಷ್ಟೇ ನಾನು...

484
00:54:38,359 --> 00:54:40,361
ಉಪ ಶೀರ್ಷಿಕೆ ಅನುವಾದ: ರಾಜು

