1
00:00:14,724 --> 00:00:16,767
ನ್ಯಾಯಸ್ಥಾಪಕರ ಪುಸ್ತಕದಲ್ಲಿ,

2
00:00:16,851 --> 00:00:20,771
ಯುದ್ದಕ್ಕೆ ತನ್ನ ಜನರನ್ನು ಆರಿಸುವುದು ಹೇಗೆಂದು
ಗಿಡಿಯನ್ ದೇವರನ್ನು ಕೇಳಿದ.

3
00:00:23,607 --> 00:00:28,279
ದೇವರು ಗಿಡಿಯನ್ಗೆ ಅವನ ಜನರನ್ನು
ನದಿಗೆ ಕರೆದುಕೊಂಡು ಹೋಗಿ ಕುಡಿಸುವಂತೆ ಹೇಳಿದರು.

4
00:00:30,364 --> 00:00:34,952
ತಮ್ಮ ಹೊಟ್ಟೆಯ ಮೇಲೆ ಮಲಗಿ ನಾಯಿಗಳಂತೆ
ಕುಡಿಯುವವರು ಅವನಿಗೆ ಪ್ರಯೋಜನವಿರಲಿಲ್ಲ.

5
00:00:37,455 --> 00:00:38,914
ಗಿಡಿಯನ್ ನೋಡಿದ,

6
00:00:39,582 --> 00:00:43,836
ಕೆಲವರು ಮಂಡಿಯೂರಿ ದಿಗಂತದತ್ತ
ದೃಷ್ಟಿ ನೆಟ್ಟು ಕುಡಿಯುತ್ತಿದ್ದರು,

7
00:00:44,962 --> 00:00:46,422
ಕೈಯಲ್ಲಿ ಈಟಿಗಳಿದ್ದವು.

8
00:00:48,966 --> 00:00:50,760
ಅವರು ಕೆಲವರು ಮಾತ್ರವೇ ಇದ್ದರೂ,

9
00:00:52,511 --> 00:00:54,597
ಅವನಿಗೆ ಅವರೇ ಬೇಕಿದ್ದರು.

10
00:00:55,639 --> 00:00:57,391
ಪೋರ್ಟ್ಸ್, ಆರ್ಮ್ಸ್.

11
00:00:59,268 --> 00:01:02,104
ರೆಡಿ. ಗುರಿಯಿಡಿ. ಫೈರ್.

12
00:01:04,231 --> 00:01:06,275
ಹಿಂದೆ. ಹಿಂದೆ.

13
00:01:08,110 --> 00:01:10,988
ರೆಡಿ. ಗುರಿಯಿಡಿ. ಫೈರ್.

14
00:01:12,698 --> 00:01:15,826
ಇನ್ಸಿರ್ಲಿಕ್ ಏರ್ ಬೇಸ್
ಎರಡು ವಾರಗಳ ಹಿಂದೆ

15
00:01:15,951 --> 00:01:17,328
ಅಲ್ಫಾ, ಒಳಗೆ ತಾ.

16
00:01:24,251 --> 00:01:26,629
ಕೆಮಿಕಲ್ ಕಹಾನಿಯ ವಶಕ್ಕೆ ಪರವಾನಗಿ ಸಿಕ್ಕಿದೆ.

17
00:01:26,712 --> 00:01:27,838
ಒಳ್ಳೇದಾಯ್ತು!

18
00:01:29,715 --> 00:01:33,594
ಅವನು ಸಿರಿಯಾದಲ್ಲಿದ್ದಾನೆ.
ಇಂಟೆಲ್ ಇನ್ನೊಂದು ದಾಳಿಯಾಗಲಿದೆ ಎನ್ನುತ್ತಿದೆ.

19
00:01:33,677 --> 00:01:34,887
ಇರು, ಡಾನಿ ಎಲ್ಲಿ?

20
00:01:34,970 --> 00:01:37,765
ಆಸ್ಪತ್ರೆಯಲ್ಲಿ ಐವಿ ಹಾಕಿಕೊಂಡಿದ್ದಾನೆ.
ತಲೆನೋವು.

21
00:01:37,848 --> 00:01:38,682
ತಲೆನೋವಾ?

22
00:01:38,766 --> 00:01:40,392
ಓಡಿ ಸುಸ್ತಾಗಿದ್ದಾನೆ.

23
00:01:40,476 --> 00:01:41,560
ಓಡಿ ಅಲ್ಲ.

24
00:01:41,644 --> 00:01:43,854
ಎಲೆಕ್ಟ್ರೋಲೈಟ್ ಕೊಡ್ತೀನಿ.
ಸುಧಾರಿಸ್ತಾನೆ.

25
00:01:43,938 --> 00:01:46,732
ಅವನ ಹೆಂಡತಿಯ ಡೆಲಿವರಿ ಇರೋದಕ್ಕೆ
ಅವನಿಗೆ ಟೆನ್ಷನ್.

26
00:01:46,816 --> 00:01:47,775
ಬೂಜರ್ನ ಮಗುವಿಗೆ!

27
00:01:48,526 --> 00:01:50,361
ಹೌದು. ಹೋಗೋ ಮುಚ್ಕೊಂಡು, ಲೆಕ್ರಾನ್.

28
00:01:50,444 --> 00:01:52,404
ಚಿಕ್ಕ ಬೂಜರ್ ಬರೋದೇ ನಮ್ ಭಾಗ್ಯ.

29
00:01:52,488 --> 00:01:54,490
ಅವನು ಐದಡಿ ಎರಡಿಂಚು ಇದ್ದರೂ!

30
00:01:54,573 --> 00:01:56,283
ನೀನು ಮುಠ್ಠಾಳ. ಐದಡಿ ಮೂರು ಇಂಚು.

31
00:01:56,367 --> 00:01:58,118
ಸರಿ. ಇದನ್ನು ಮುಗಿಸೋಣ.

32
00:01:58,619 --> 00:02:00,204
ಡಾನಿ,ೆೇಗಿದ್ಹೀಯದ?

33
00:02:00,287 --> 00:02:01,956
ಒಳ್ಳೆ ಪಿಟ್ ಬುಲ್ ಥರ ಇದ್ದೀನಿ.

34
00:02:02,915 --> 00:02:05,125
ಸರಿ ಹಾಗಾದ್ರೆ. ತಿನ್ನೋಣ.

35
00:02:06,085 --> 00:02:06,961
ಸರಿ. ಹುಡುಗ್ರಾ.

36
00:02:07,044 --> 00:02:10,881
ನಾವು ದೇಸೀ ಮೀನು ದೋಣಿಯಲ್ಲಿ ದಡದಿಂದ
800 ಮೀಟರ್ ದೂರದಲ್ಲಿ ಪ್ರವೇಶಿಸೋಣ.

37
00:02:10,965 --> 00:02:13,050
ನಮ್ಮ ಗುರಿಯ ಕಡೆಗೆ ಪೂರ್ವಕ್ಕೆ ಈಜೋಣ.

38
00:02:13,133 --> 00:02:14,718
ಇಲ್ಲಿ 0232 ಉಬ್ಬರವಿದೆ.

39
00:02:14,802 --> 00:02:15,928
ಮೆಡಿಟೇರಿನಿಯನ್ ಸಮುದ್ರ
ಸಿರಿಯನ್ ಕಿನಾರೆಯಿಂದ 5 ಕಿಮೀ

40
00:02:16,011 --> 00:02:18,889
ಅಲ್ಲಿ ಕತ್ತಲಿರುತ್ತೆ.
ಬೆಳದಿಂಗಳು 14% ಪ್ರಕಾಶವಿರುತ್ತೆ.

41
00:02:29,275 --> 00:02:30,860
ಈ ಸುರಂಗಗಳು 20 ಅಥವಾ 30 ಅಡಿ

42
00:02:30,943 --> 00:02:33,737
ಗಟ್ಟಿಯಾದ ಸುಣ್ಣದ ಕಲ್ಲಿನ ಅಡಿಯಲ್ಲಿರಬಹುದು.

43
00:02:33,821 --> 00:02:35,865
ಬ್ಯಾಟ್ಮ್ಯಾನ್ ಮತ್ತು ಸಿಗ್ನೋರ್ ಸ್ಕ್ವಾಡ್

44
00:02:35,948 --> 00:02:37,199
ಬಂದರೂ ಅಲ್ಲಿ ಹೋಗಬಾರದು.

45
00:02:38,075 --> 00:02:41,704
ವಿಷಯ ತಿಳಿಸುವ ಒಳ್ಳೆಯ ವಿಧಾನ
ಅಂದ್ರೆ ಪ್ರವೇಶದ್ವಾರ ಮತ್ತು ದಾರಿಯಲ್ಲಿ

46
00:02:41,787 --> 00:02:43,706
ಕವಲುಗಳ ಬಗ್ಗೆ ರಿಲೇ ಕೊಡುವುದು.

47
00:02:43,789 --> 00:02:48,168
ನೆಲಮಾಳಿಗೆಯಲ್ಲಿನ ಪ್ರವೇಶ ದ್ವಾರಕ್ಕೆ ಹೋದ ತಕ್ಷಣ
ನಮಗೆ ಮತ್ತೆ ಸಂಪರ್ಕ ಸಿಗಬೇಕು.

48
00:02:48,294 --> 00:02:50,546
ಈ ಸುರಂಗದ ನಕ್ಷೆಗಳನ್ನ ನಂಬಬಹುದಾ, ಸರ್?

49
00:02:50,629 --> 00:02:53,132
ಸಿರಿಯಾದ ಸೈನ್ಯ ಸ್ಥಳೀಯ
ಸೈನಿಕನನ್ನು ಕೊಟ್ಟಿದೆ

50
00:02:53,215 --> 00:02:55,843
ಅವನು ಕಂಪೌಂಡ್ ಕೆಳಗಿನ
ಸುರಂಗಗಳಲ್ಲಿ ಆಟವಾಡುತ್ತಿದ್ದ

51
00:02:55,926 --> 00:02:57,386
ಇದು ಇವನಿಗೆ ವೈಯಕ್ತಿಕ.

52
00:02:57,469 --> 00:03:00,639
ಕಹಾನಿ ಅವನವರನ್ನು ಸಾಯಿಸಿದ್ದಾನೆ.
ಅವನು ನಮ್ ಜೊತೆ ಇರುತ್ತಾನೆ.

53
00:03:01,098 --> 00:03:02,099
ರೋಜರ್.

54
00:03:03,434 --> 00:03:04,810
ಐದು ಕಿಲೋಮೀಟರ್ ಹೊರಗೆ.

55
00:03:06,562 --> 00:03:09,064
ಮೇಲ್ಬದಿಯಿಂದ ತೆಗೆದುಕೊಳ್ಳಲು ತಯಾರಾಗಿ.

56
00:03:13,152 --> 00:03:15,404
ಒಳಬದಿ ಚೆನ್ನಾಗಿದೆ, ಚೀಫ್. ಏನ್ ಹೇಳ್ತೀರಾ?

57
00:03:15,487 --> 00:03:17,156
ಕಹಾನಿ ರೇಡಾರ್ನಲ್ಲಿದ್ದಾನೆ

58
00:03:17,239 --> 00:03:20,492
ಕಂಪೌಂಡ್ನಲ್ಲಿ ಸ್ವಲ್ಪ ರಕ್ಷಣೆ
ಇರಬಹುದು ಅಂತ ಅನ್ನಿಸ್ತಿದೆ.

59
00:03:20,576 --> 00:03:24,747
ಇದು ಮಿಸ್ ಆದ್ರೆ, ಕ್ಯೂಆರ್ಎಫ್ನಲ್ಲಿ 10 ನಿಮಿಷ
ದೂರದಲ್ಲಿ ನಮ್ ರೇಂಜರ್ಗಳಿದ್ದಾರೆ.

60
00:03:25,331 --> 00:03:26,457
ವಿಶ್ವಾಸವಿದೆ, ಸರ್.

61
00:03:28,125 --> 00:03:28,959
ಒಪ್ಪುತ್ತೀನಿ.

62
00:03:30,210 --> 00:03:34,131
ನಿಶ್ಯಬ್ದವಾಗಿ ಹೋಗಿ ಬರೋಣ.
ನಾವು ಬಂದಿದ್ದು ಕೂಡ ಯಾರಿಗೂ ತಿಳಿಯಲ್ಲ.

63
00:04:05,287 --> 00:04:07,581
ಬ್ರಾವೋ ತುಕಡಿ ಬಂದಿರೋದು ನಿಮಗೆ ಗೊತ್ತು.

64
00:04:07,665 --> 00:04:12,086
ಕಾಕ್ಸ್ ಹಿಂದೆ ಸರಿಯುವ ಆಯ್ಕೆ ನೀಡಿದ್ದಾರೆ,
ಹಸ್ತಾಂತರದ ಭಾಗವಾಗಿ ಇದನ್ನು ನಿಲ್ಲಿಸಬಹುದು.

65
00:04:12,795 --> 00:04:15,464
ನಾವಿಲ್ಲಿ ಮಜಾ ಮಾಡಲು ಬಂದಿಲ್ಲ
ಎಂದು ಹೇಳಿದ್ದೇನೆ.

66
00:04:15,547 --> 00:04:18,175
ಈ ಬೋಳೀಮಗ ನಮಗೆ ಬೇಕು. ನಾವು ಅಲ್ಫಾಗಳು.

67
00:04:18,759 --> 00:04:20,636
-ಹೌದು.
-ಖಂಡಿತ ಸರಿ.

68
00:04:20,719 --> 00:04:22,304
ಸರಿ. ಒಳ್ಳೆಯದು.

69
00:04:23,555 --> 00:04:25,140
ದಿಗಂತದ ಮೇಲೆ ಕಣ್ಣಿರಲಿ.

70
00:04:26,517 --> 00:04:27,726
ಇದನ್ನು ಬಳಸಿಕೊಳ್ಳೋಣ.

71
00:04:43,826 --> 00:04:44,827
ನಡೀರಿ.

72
00:04:47,538 --> 00:04:48,372
ಹೋಗೋಣ.

73
00:05:36,128 --> 00:05:38,630
ಲೆಕ್ರಾನ್, ಫ್ಲೆಚರ್, ಸಂಪರ್ಕದಲ್ಲಿರಿ.

74
00:05:39,840 --> 00:05:41,216
-ಕಾಪಿ
-ಒಳ್ಳೆಯದು, ಕಾಪಿ.

75
00:06:24,343 --> 00:06:25,928
ಪ್ರವೇಶ ಬಿಂದು, 60 ಅಡಿ.

76
00:06:42,152 --> 00:06:43,445
ಝೀಕ್ ಸೂಚಿಸ್ತಿದ್ದಾನೆ.

77
00:06:44,238 --> 00:06:46,907
ನಿಲ್ಲಿ! ಇಓಡಿ ಮೇಲಕ್ಕೆ. ಸಂಪರ್ಕ ಬೇಡ!

78
00:06:56,792 --> 00:06:58,210
ನಾವು ಬಿಳೀ ಲೈಟ್ ಹಾಕೋಣ.

79
00:07:19,940 --> 00:07:21,900
ಇದು ಹಾಳಾದ ಭೂಕುಸಿತ, ಸರ್.

80
00:07:23,152 --> 00:07:25,112
ಈ ಸುರಂಗ ಸಿಡಿಯಲು ಸಿದ್ಧವಾಗಿದೆ.

81
00:07:25,195 --> 00:07:28,699
ಹೊರಗಡೆ ಸಂಪರ್ಕಿಸಿ. ಪ್ರವೇಶ ಸ್ಥಾನಕ್ಕೆ
ಹೋಗಲು ಸಾಧ್ಯವಿಲ್ಲವೆನ್ನಿ.

82
00:07:28,782 --> 00:07:29,700
ಸರಿ, ಸರ್.

83
00:07:34,329 --> 00:07:36,707
ಸಂಪರ್ಕ! ಸಂಪರ್ಕ, ಪ್ರವೇಶ ಸ್ಥಾನ!

84
00:07:37,666 --> 00:07:38,709
ಅಲ್ಲೇನಿದೆ?

85
00:07:38,959 --> 00:07:41,378
ಭಾರೀ ಸಂಪರ್ಕವಿದೆ, ಹಿಂದಕ್ಕೆ.
ಬ್ಯಾಕಪ್ ಬೇಕು!

86
00:07:41,461 --> 00:07:44,089
ಅಡ್ಡ ಸ್ಥಾನಕ್ಕೆ ಅಗ್ನಿ
ತಂಡವನ್ನು ತರುತ್ತಿದ್ದೇವೆ.

87
00:07:44,173 --> 00:07:45,340
-ರೋಜರ್ ದಟ್.
-ಸರಿಸಿ!

88
00:07:46,466 --> 00:07:47,968
ಲೆಕ್ರಾನ್! ಅಲ್ಲೇನಿದೆ?

89
00:07:49,178 --> 00:07:50,679
ಲೆಕ್ರಾನ್, ಹಿಂದೆ ನೋಡು!

90
00:07:56,351 --> 00:07:57,603
ಲೆಕ್ರಾನ್ಗೆ ಗಾಯವಾಗಿದೆ.

91
00:07:57,853 --> 00:07:59,021
ಹೋಗಿ, ಹೋಗಿ, ಹೋಗಿ!

92
00:08:01,315 --> 00:08:03,233
ಹೋಗಿ! ಹೋಗಿ! ಹೋಗಿ! ಚಲಿಸಿ!

93
00:08:04,526 --> 00:08:05,485
ನಿಲ್ಲಿ!

94
00:08:08,614 --> 00:08:09,489
ಸರಿಯಿರಿ!

95
00:08:13,994 --> 00:08:15,871
ಬಾರ್ನ್ಸ್, ಆ ಬೋಳೀಮಗನ್ನ ಸಾಯ್ಸು!

96
00:08:18,540 --> 00:08:19,499
ಬಿಡಬೇಡ!

97
00:08:25,130 --> 00:08:25,964
ಕ್ಲಿಯರ್!

98
00:08:26,048 --> 00:08:28,133
ಅವರನ್ನು ಬಿಡಬೇಡಿ! ಈಗಲೇ ಹೊರಕ್ಕೆ ತನ್ನಿ

99
00:08:28,217 --> 00:08:29,801
ಒಳಗೆ ಬರುತ್ತಿದ್ದೇವೆ ಕೆಳಗಿಡಿ

100
00:08:33,013 --> 00:08:34,973
ಸುರಂಗಕ್ಕೆ ವಾಪಸ್ ಹೋಗಿ! ಈಗ! ಹೋಗಿ!

101
00:08:47,694 --> 00:08:49,613
ಅವನನ್ನು ವಾಪಸ್ ತನ್ನಿ! ವಾಪಸ್ ತನ್ನಿ

102
00:08:49,738 --> 00:08:51,865
ಎಡಕ್ಕೆ! ಎಡಕ್ಕೆ 50 ಅಡಿ!

103
00:08:51,949 --> 00:08:52,824
ಹೋಗಿ, ಹೋಗಿ!

104
00:08:53,784 --> 00:08:54,826
ಹೋಗ್ತಾ ಇದೀವಿ!

105
00:09:01,124 --> 00:09:02,334
ಬಾರ್ನ್ಸ್! ಸ್ವಚ್ಛಮಾಡು

106
00:09:08,882 --> 00:09:11,218
ಬಾ. ಇಲ್ಲಿದ್ದೀನಿ ಅಣ್ಣಾ. ಇಲ್ಲಿದೀನಿ.

107
00:09:14,471 --> 00:09:16,306
-ಕೊನೆಯವನು!
-ಕೊನೆಯವನು! ಹಾಂ!

108
00:09:17,266 --> 00:09:19,268
ಏನ್ ಮಾಡ್ತಾ ಇದೀಯಾ? ನಡಿ!

109
00:09:29,861 --> 00:09:32,281
ಸರ್, ಆ ಇಂಧನದ ಅಪಾಯವನ್ನು
ಈಗಲೇ ಹೆಚ್ಚಿಸಬೇಕು!

110
00:09:32,614 --> 00:09:35,742
ಏಯ್! ನಿಮ್ಮವನನ್ನು ಶಾಂತವಾಗಿಸು!
ಗಾಯಗಳ ಸ್ಥಿತಿಯೇನು, ರೆಲ್?

111
00:09:35,867 --> 00:09:39,037
ಇಬ್ಬರು ಕೆಐಎ ಮತ್ತು
ಬಾರ್ನ್ಸ್ ಉಸಿರಾಡಲೂ ಕಷ್ಟಪಡ್ತಿದಾನೆ.

112
00:09:39,871 --> 00:09:43,041
ಏಯ್, ಏಯ್ ತಮ್ಮಾ!
ಏಯ್, ಏಯ್, ಏಯ್! ಇಲ್ಲಿ ಕೇಳು.

113
00:09:43,667 --> 00:09:46,753
ನಾನು ನಿನ್ನ ಹೊರ್ಗಡೆ ಕರ್ಕೊಂಡ್ ಹೋಗ್ತೀನಿ.
ನಿನ್ ಜೊತೆ ಇದೀನಿ

114
00:09:49,965 --> 00:09:51,967
-ಮಲೋರಿಗೆ ಗಾಯವಾಗಿದೆ!
-ಬರ್ತಾನೇ ಇದಾರೆ!

115
00:09:57,014 --> 00:09:59,099
ಬೂಜರ್! ನನ್ನ ಹಿಂದೆ! ಸಂಪರ್ಕ ಮಾಡಬೇಕು.

116
00:09:59,182 --> 00:10:01,268
ಕ್ಯೂಆರ್ಎಫ್ ಮೇಲಕ್ಕೆ ಹೋಗಬೇಕು! ನಡೀರಿ!

117
00:10:01,893 --> 00:10:04,479
ಕ್ರೌಲಿ! ಇದು ಪ್ರವೇಶ ಸ್ಥಾನಕ್ಕೆ ಹೋಗಲಿ! ನಡಿ!

118
00:10:04,563 --> 00:10:05,772
ಹೋಗಿ, ಹೋಗಿ, ಹೋಗಿ!

119
00:10:08,025 --> 00:10:10,027
ಟ್ರಿಪ್ ವೈರ್. ದಾಟಲು ತಯಾರಾಗಿ. ಇಲ್ಲೇ.

120
00:10:10,110 --> 00:10:11,278
-ಹುಶಾರು!
-ಎಲ್ಲಿದೆ?

121
00:10:11,361 --> 00:10:13,905
-ಟ್ರಿಪ್ ವೈರ್, ಕಾಲು ನೋಡ್ತಾ ಇರಿ!
-ಎಲ್ಲಿದೆ?

122
00:10:13,989 --> 00:10:16,742
ಕ್ರೌಲಿ, ಟ್ರಿಗರ್ ಮೇಲೆ ಕಣ್ಣಿಡು.
ಅಲ್ಲೇನಿದೆ!

123
00:10:16,825 --> 00:10:17,826
ಮಾಡ್ತಾ ಇದೀನಿ ಸರ್.

124
00:10:21,246 --> 00:10:22,497
ಅಲ್ಲೇನಿದೆ ಬೂಜರ್?

125
00:10:22,581 --> 00:10:23,665
ಹೊರಗಡೆ ದಾರಿಯಿದೆ.

126
00:10:23,832 --> 00:10:26,084
ಸಂಪರ್ಕ ಮಾಡು,
ಕ್ಯೂಆರ್ಎಫ್ ತಿರುಗಿಸು!

127
00:10:32,257 --> 00:10:36,511
ತುಕಡಿಯನ್ನು ಸಂಪರ್ಕಿಸಬೇಕು.
ಈಗಲ್ಗಳಿಗೆ ಗಾಯವಾಗಿದೆ. QRF ಲಾಂಚ್ ಮಾಡಿ. ಓವರ್

128
00:10:37,679 --> 00:10:39,306
ಬೇಡ! ಬೇಡ, ಹಿಂದಕ್ಕೆ ಹೋಗು.

129
00:10:39,806 --> 00:10:41,016
ಆ ಸೈನಿಕನನ್ನು ನಿಲ್ಸು!

130
00:11:16,593 --> 00:11:19,805
ಏಯ್. ಪಿಕಾಸೋ.
ಏನ್ ಬಿಡಿಸ್ತಾ ಇದೀಯಾ ಅಂತ ತೋರಿಸ್ತೀಯಾ?

131
00:11:33,527 --> 00:11:34,694
ಏನದು?

132
00:11:57,843 --> 00:11:59,803
ಅದು ಹುಶಾರಾಗುತ್ತಾ, ಅಪ್ಪಾ?

133
00:12:05,934 --> 00:12:06,935
ಅಪ್ಪಾ!

134
00:12:21,116 --> 00:12:21,950
ಲ್ಯೂಸಿ!

135
00:12:46,349 --> 00:12:48,810
ಡಾನಿ. ಹುಶಾರಾಗಿದೀಯಾ? ಡಾನಿ!

136
00:12:53,857 --> 00:12:55,567
ಎದ್ದೇಳು, ರೀಸ್, ಏಳು!

137
00:12:58,361 --> 00:13:00,655
ರೀಸ್! ಪ್ಲೀಸ್. ನಡಿ!

138
00:13:03,033 --> 00:13:04,659
ಬಾರೋ! ಎದ್ದೇಳು!

139
00:13:08,205 --> 00:13:10,248
ಕಾರ್ಟೀಸ್, ನಿನ್ ಹತ್ರ ಬರ್ತಿದೀನಿ!

140
00:13:17,214 --> 00:13:18,215
ಕಾರ್ಟೀಸ್!

141
00:13:21,718 --> 00:13:22,719
ನನ್ನ ಹಿಂದೆ!

142
00:13:26,640 --> 00:13:28,183
ಫೈರಿಂಗ್ ನಿಲ್ಸು, ನೋಡ್ಕೋ!

143
00:13:28,266 --> 00:13:30,143
-ಫೈರ್ ನಿಲ್ಸು! ನೀಲಿ! ನೀಲಿ!
-ರೀಸ್!

144
00:13:30,227 --> 00:13:31,895
-ಮಾತಾಡು, ಕಾರ್ಟೀಸ್.
-ಜನರ ಎಣಿಕೆ?

145
00:13:31,978 --> 00:13:33,230
ಅಣ್ಣಾ, ಅಲ್ಲೇನಿದೆ?

146
00:13:45,575 --> 00:13:47,244
ನಡಿ. ಹೋಗೋಣ. ಹೋಗೋಣ.

147
00:14:20,986 --> 00:14:23,196
ಸ್ಥಳಾಂತರಿ ವಿಮಾನ ಬರ್ತಿದೆ! ಆಚೆ ಹೋಗು!

148
00:14:23,280 --> 00:14:25,323
-ಎರಡು ನಿಮಿಷ!
-ಕಾರ್ಟೀಸ್, ಹೋಗೋಣ!

149
00:14:25,407 --> 00:14:27,284
-ಮೇಲೆ, ಮೇಲೆ!
-ಮೇಲೆ ಬಾರೋ!

150
00:14:27,367 --> 00:14:29,995
-ಮೇಲೆ, ಮೇಲೆ, ಬಾ!
-ನಿನ್ನ ಆಚೆ ಕಳಿಸಬೇಕು!

151
00:14:30,161 --> 00:14:33,206
-ಬಾ.
-ಬೇಗ! ನಡೀರಿ, ನಡೀರಿ!

152
00:14:33,290 --> 00:14:36,334
-ಅದರಿಂದ ತಪ್ಪಿಸ್ಕೋ.
-ಅವರ ಮೇಲೆ ಗುಂಡಿನ ದಾಳಿ ಮಾಡಿ!

153
00:14:36,793 --> 00:14:38,670
ಹೋಗೋಣ! ಅವರಿಗೆ ಬೆಂಬಲ ಕೊಡೋಣ!

154
00:14:44,467 --> 00:14:46,344
ಸರ್! ನೀವು ಇದರ ಮೇಲೆ ಬರಬೇಕು!

155
00:14:46,428 --> 00:14:47,971
ನನ್ನ ಜನರನ್ನ ಎಣಿಸಬೇಕು!

156
00:14:48,054 --> 00:14:50,223
ಗೊತ್ತು.
ಈ Xನಿಂದ ನಿಮ್ಮನ್ನು ಹೊರತರಬೇಕು!

157
00:14:50,307 --> 00:14:51,683
ಇವರನ್ನು ಬೀಚ್ನಿಂದ ತೆಗೆ!

158
00:14:51,766 --> 00:14:54,519
ನೀನು ಕೊನೆಯವನು.
ಖಂಡಿತವಾಗಿಯೂ! ಖಂಡಿತವಾಗಿಯೂ!

159
00:14:56,855 --> 00:14:58,481
ಯಾರಾದ್ರೂ ಆ ಕಾಲನ್ನ ನೋಡಿ!

160
00:14:58,898 --> 00:15:00,233
ನಾಡಿ ಸಿಗುತ್ತಿಲ್ಲ.

161
00:15:04,362 --> 00:15:06,698
ಕಾರ್ಟೀಸ್! ಇಲ್ಲಿ ನೋಡು! ನನ್ನನ್ನು ನೋಡು!

162
00:15:06,990 --> 00:15:09,409
ಕಾರ್ಟೀಸ್! ಕಣ್ಣು ತೆಗೆ!

163
00:15:09,868 --> 00:15:11,453
ನನ್ ಜೊತೆ ಇರು, ತಮ್ಮಾ.

164
00:15:11,536 --> 00:15:13,371
-ರಕ್ತಸ್ರಾವ ನಿಯಂತ್ರಿಸು
-ಎಚ್ಚರವಿರು

165
00:15:13,455 --> 00:15:15,957
-ಹೆಚ್ಚು ಒತ್ತಡ, ಹೆಚ್ಚು ಒತ್ತಡ.
-ಬಾರೋ.

166
00:15:49,407 --> 00:15:50,408
ಹಲೋ?

167
00:15:51,910 --> 00:15:52,911
ಶ್ರೀಮತಿ ರೀಸ್?

168
00:15:53,536 --> 00:15:56,373
ನಿಮ್ಮ ಸೇವಾ ಸದಸ್ಯರು
ಮಾತಾಡಲು ಕಾಯುತ್ತಿದ್ದಾರೆ.

169
00:15:58,958 --> 00:15:59,876
ಜೇಮ್ಸ್?

170
00:16:01,628 --> 00:16:04,422
-ಲಾರೆನ್? ಲಾರೆನ್? ಅದು ನೀನಾ?
-ಜೇಮ್ಸ್, ಅಬ್ಬಾ!

171
00:16:05,632 --> 00:16:08,176
ರಾತ್ರಿಯಿಡೀ ಕುಟುಂಬಗಳಿಗೆ
ಕರೆ ಮಾಡಿದ್ದಾರೆ.

172
00:16:12,305 --> 00:16:14,683
ಏನಾಯ್ತು? ನನ್ ಜೊತೆ ಮಾತಾಡು.

173
00:16:19,229 --> 00:16:21,523
ಒಳ್ಳೇ ಸುದ್ದಿ ಅಲ್ಲ. ಅವರು...

174
00:16:24,359 --> 00:16:26,444
ಎಲ್ರೂ ಹೋಗ್ಬಿಟ್ರು. ಎಲ್ರೂ ಹೋಗ್ಬಿಟ್ರು.

175
00:16:27,696 --> 00:16:31,366
ನಾನು ಮತ್ತೆ ಬೂಜರ್ ಅಷ್ಟೇ.
ಬೇರೆ ಎಲ್ರೂ...

176
00:16:33,535 --> 00:16:35,537
ಬೇರೆ ಯಾರೂ ಹೊರ್ಗಡೆ ಬರ್ಲಿಲ್ಲ.

177
00:16:37,747 --> 00:16:38,873
ಇದು ಕೆಟ್ಟದ್ದು.

178
00:16:39,958 --> 00:16:40,917
ಸರಿ.

179
00:16:44,587 --> 00:16:45,714
ಐ ಲವ್ ಯೂ.

180
00:16:46,172 --> 00:16:48,174
ಮನೆ... ಮನೆಗೆ ಬಾ ಸಾಕು.

181
00:16:48,883 --> 00:16:52,345
ನಾನು... ನಿನ್ನ ಸಲುವಾಗಿ ಇಲ್ಲಿದ್ದೇನೆ, ಸರೀನಾ?

182
00:17:01,354 --> 00:17:04,232
ಸ್ಪೆಷಲ್ ಏಜೆಂಟ್
ರಾಬರ್ಟ್ ಬ್ರಿಡ್ಜರ್, ಎನ್ಸಿಐಎಸ್.

183
00:17:04,816 --> 00:17:08,278
ಇನ್ಸಿರ್ಲಿಕ್ ಏರ್ ಫೋರ್ಸ್ ಬೇಸ್ನಲ್ಲಿ
ಡೇನಿಯಲ್ ಸ್ಟಬ್ಸ್ ಜೊತೆ

184
00:17:08,361 --> 00:17:13,116
ಲೆಫ್ಟಿನೆಂಟ್ ಕಮಾಂಡರ್ ಜೇಮ್ಸ್ ರೀಸ್
ಅವರ ಸಂದರ್ಶನಕ್ಕೆ, ಸೀಲ್ ಟೀಮ್ ಸೆವೆನ್,

185
00:17:13,199 --> 00:17:15,744
ಮಿಷನ್ ನಂಬರ್ 6-4-4 ಬಗ್ಗೆ,
ಓಡಿನ್ನ ಕತ್ತಿ.

186
00:17:17,078 --> 00:17:20,290
ಕಮಾಂಡರ್, ನಿಮ್ಮ ಮಿಶನ್ನ
ವಿವರಗಳನ್ನು ಹೇಳುತ್ತೀರಾ?

187
00:17:20,707 --> 00:17:24,294
ನಾವು ಎಸ್ಡಿಎಫ್ಗೆ ಬೆಂಬಲ ನೀಡಿ
ಡಾ.ಜಹಾನ್ ಕಹಾನಿಯನ್ನು ಬಂಧಿಸಬೇಕಿತ್ತು

188
00:17:24,377 --> 00:17:26,546
ರಾಸಾಯನಿಕ ಆಯುಧಗಳ
ಬಗ್ಗೆ ತಿಳಿಯಬೇಕಿತ್ತು.

189
00:17:26,629 --> 00:17:29,048
-2 ವಾರಗಳ ಹಿಂದೆ ಸುಳಿವು ಬಂತು
-ಯಾರಿಂದ?

190
00:17:29,758 --> 00:17:32,343
ತಬಾರಿ ಮೂಸಾ.
ಅಲೆಪ್ಪೋ ಹೊರಗಿನ ಆಯುಧ ವ್ಯಾಪಾರಿ.

191
00:17:33,428 --> 00:17:34,763
ಉನ್ನತ ಎಸ್ಡಿಎಫ್ ಮೂಲ.

192
00:17:37,515 --> 00:17:39,809
ನೀವು ಇದನ್ನು ಕಮಾಂಡರ್ ವಿಲಿಯಂ ಕಾಕ್ಸ್ ಜೊತೆ

193
00:17:39,893 --> 00:17:41,269
ರೆಡ್ ಟೀಮ್ ಮಾಡಿದಿರಿ.

194
00:17:42,145 --> 00:17:43,146
ತಪ್ಪಾಯ್ತಾ?

195
00:17:43,563 --> 00:17:46,566
ಇಲ್ಲ. ಮೂಸಾನ ಬೇಹುಗಾರಿಕೆ ಪ್ರಬಲವಾಗಿದೆ.

196
00:17:46,649 --> 00:17:49,527
ಕಹಾನಿಯ ವಷಕ್ಕೆ 2 ವರ್ಷದಲ್ಲಿ
2 ಅವಕಾಶ ಕೊಟ್ಟ. ಕ್ಷಮಿಸಿ.

197
00:17:49,611 --> 00:17:52,030
ಕಂಪೌಂಡಲ್ಲಿ ಕಹಾನಿ ಬಗ್ಗೆ ಸುಳಿವಿತ್ತಾ?

198
00:17:52,947 --> 00:17:53,948
ಇಲ್ಲ.

199
00:17:54,073 --> 00:17:58,870
ಅಡಿಯೋ ಲಾಗ್ಗಳ ಪ್ರಕಾರ, ಸುಮಾರು ೪ ಮೈಲಿ
ದೂರದಲ್ಲಿ ನಿಮ್ಮ ಸಂಪರ್ಕ ತಪ್ಪಿತು. ಏಕೆ?

200
00:18:00,079 --> 00:18:02,457
ಪ್ರತಿರೋಧಗಳು,
ಪ್ರವೇಶ ಸ್ಥಾನಗಳಲ್ಲಿ ಐಇಡಿಗಳು.

201
00:18:02,540 --> 00:18:06,044
ಸಂಪರ್ಕ ತಪ್ಪುವುದು ಸಹಜ.
ಅವನು ಕಂಪೌಂಡ್ನಲ್ಲಿರುವ ಚಿಹ್ನೆಯಿತ್ತಾ?

202
00:18:06,211 --> 00:18:08,129
ಐಇಡಿಗಳಿದ್ದ ಜಾಗವನ್ನು ತೋರಿಸ್ತೀರಾ?

203
00:18:08,213 --> 00:18:11,090
-ಕ್ಯೂಆರ್ಫ್ಗೆ ಮೊಬೈಲ್ ಲ್ಯಾಬ್ ಸಿಕ್ಕಿತು.
-ಗಮನ ಇರಲಿ.

204
00:18:11,257 --> 00:18:13,009
ಐಇಡಿಗಳು ಎಲ್ಲಿದ್ದವು?

205
00:18:19,432 --> 00:18:20,308
ಇಲ್ಲೇ.

206
00:18:21,518 --> 00:18:23,686
ಬರೀ ಐಇಡಿಗಳು,
ಅಸಹಜವಾದದ್ದು ಏನೂ ಇಲ್ಲ.

207
00:18:23,770 --> 00:18:26,314
ದಾಳಿ ಮಾಡಲು ಆಯುಧಧಾರಿ
ನಿಷ್ಠಾವಂತರು ಕಾಯ್ತಿದ್ರು.

208
00:18:26,397 --> 00:18:27,982
ನಾಬರೋದು ಅವರಿಗೆ ಗೊತ್ತಿತ್ತು.

209
00:18:28,066 --> 00:18:31,611
ಕಮಾಂಡರ್. ಆಪರೇಷನ್ನ ಯಾವ ಭಾಗದಲ್ಲಿ
ವಿಶೇಷ ಯುದ್ಧ ಪರಿಣತರಾದ ಸೆಕೆಂಡ್

210
00:18:31,694 --> 00:18:35,907
ಇನ್-ಕ್ಲಾಸ್ ಡಾನಿ ಮಿಚೆಲ್ಗೆ ಹುಶಾರಿಲ್ಲವೆಂದು
ನಿಮಗೆ ತಿಳಿಯಿತು?

211
00:18:41,996 --> 00:18:43,164
ಇರಿ, ಏನು?

212
00:18:45,166 --> 00:18:48,169
SO-ಟೂ ಮಿಚೆಲ್.
ನಿಮ್ಮ ಸೈನ್ಯದ ಎಲ್ಲರಿಗಿಂತ ಕಿರಿಯ ಸದಸ್ಯ,

213
00:18:48,253 --> 00:18:50,421
ಕಾರ್ಯಾಚರಣೆಯಲ್ಲಿ ಒಂದು ಘಟನೆ ನಡೆಯಿತು

214
00:18:50,505 --> 00:18:52,841
ಅವರು ಸ್ಫೋಟವನ್ನು ಹೊಂದಿಸುವ ಸ್ವಲ್ಪ ಮೊದಲು.

215
00:18:55,718 --> 00:18:56,719
ಜಂಟಲ್ಮೆನ್.

216
00:18:58,304 --> 00:19:00,265
ನೀವು ಒಂದು ಅರ್ಥ ಮಾಡ್ಕೋಬೇಕು.

217
00:19:00,849 --> 00:19:03,601
ಈಗ ಶವಪೆಟ್ಟಿಗೆಯಲ್ಲಿ 12 ಜನರು
ಮನೆಗೆ ಬರುತ್ತಿದ್ದಾರೆ.

218
00:19:04,394 --> 00:19:07,188
ನಿಮಗೆ ಡಾನಿ ಮಿಚೆಲ್ ಬಗ್ಗೆ ಪ್ರಶ್ನೆ ಕೇಳ್ಬೇಕಾ?

219
00:19:08,731 --> 00:19:11,860
ಹೆದರಿದ್ದು ಎಸ್ ಡಿ ಎಫ್ ಸೈನಿಕ. ಡಾನಿ ಅಲ್ಲ.

220
00:19:12,694 --> 00:19:15,947
-ಮಿಷನ್ ಲಾಗ್ಗಳ ಪ್ರಕಾರ ಡಾನಿ ಮಿಚೆಲ್.
-ಇಲ್ಲ. ನಾನಲ್ಲಿದ್ದೆ.

221
00:19:16,030 --> 00:19:17,782
-ಡಾನಿ ಅಲ್ಲ.
-ಆರಾಮಾಗಿ, ಕಮಾಂಡರ್.

222
00:19:17,866 --> 00:19:19,617
ಗೊತ್ತಿದ್ದನ್ನು ಹೇಳುತ್ತಿದ್ದೇವೆ.

223
00:19:27,584 --> 00:19:30,086
ಸದ್ದು ತುಂಬಾ ಜೋರಾಗಿದೆ ಬೂಜರ್.
ತುಂಬಾ ಜೋರಾಗಿದೆ.

224
00:19:30,211 --> 00:19:31,796
ರಮಿರೆಜ್. ಡಾನಿಗೆ ಸಹಾಯ ಬೇಕು

225
00:19:31,880 --> 00:19:33,798
ಡಾನಿ! ಬಾಯ್ ಮುಚ್ಕೊಂಡ್ ಆರಾಮಾಗಿರು!

226
00:19:34,132 --> 00:19:35,091
ಹಾಳಾದ್ ಬೆಂಕಿ!

227
00:19:35,174 --> 00:19:36,634
ಡಾನಿ! ಏನ್ ನಡೀತಾ ಇದೆ--

228
00:19:52,442 --> 00:19:54,110
ಅದು ಹೀಗೆ ನಡೆದಿಲ್ಲ.

229
00:19:55,987 --> 00:19:57,947
ಅದು ಯಾವುದನ್ನೂ ನಾನು ಹೇಳೇ ಇಲ್ಲ.

230
00:20:01,159 --> 00:20:03,161
ಬಹುಶಃ ಈ ಸಂದರ್ಶನ ಬಹಳ ಬೇಗ ನಡೆಯಿತು.

231
00:20:03,244 --> 00:20:05,413
-ನೇವಿಯ ಪ್ರಕಾರ ನಾವು--
-ನೇವಿ ಎನ್ನಬೇಡಿ.

232
00:20:05,496 --> 00:20:08,791
ಸರೀನಾ? ನೀವು ನೇವಿ ಅಲ್ಲ.
ಪೋಲೀಸ್ ತರ ಆಡೋರು ಅಷ್ಟೇ.

233
00:20:09,876 --> 00:20:11,586
ಏನು ನಡೀತು ಅಂತ ನಂಗೊತ್ತು.

234
00:20:11,669 --> 00:20:14,339
ಸ್ಫೋಟಕಗಳು ಮತ್ತು ಶಸ್ತ್ರಧಾರಿ
ನಿಷ್ಠಾವಂತರಿದ್ದರು.

235
00:20:14,422 --> 00:20:16,424
ಎಸ್ಡಿಎಫ್ ಸೈನಿಕ ಧೈರ್ಯ ಕಳೆದುಕೊಂಡ.

236
00:20:20,678 --> 00:20:21,721
ನನ್ನ ಜೊತೆ ಮಾತಾಡು.

237
00:20:21,804 --> 00:20:23,765
ಏನು ಗೊತ್ತಾಯ್ತು?

238
00:20:23,848 --> 00:20:25,808
-ಶಾಂತನಾಗು, ಡಾನಿ!
-ಬಹಳ ಶಬ್ದವಿದೆ.

239
00:20:25,892 --> 00:20:29,646
ಡಾನಿ! ಇಲ್ಲಿ ನೋಡು. ನಾನು ಇಲ್ಲಿಂದ ನಿನ್ನ
ಹೊರ್ಗಡೆ ಕರ್ಕೊಂಡ್ ಹೋಗ್ತೀನಿ!

240
00:20:29,771 --> 00:20:30,855
ನಾನು ಜೊತೆಗಿದೀನಿ.

241
00:20:33,441 --> 00:20:37,654
ಎಲ್ಲಾ ಅಡಿಯೋಗಳು ಸ್ಫೋಟಕವನ್ನು ಹಚ್ಚಿದ್ದು
ಮಿಚೆಲ್ ಎಂದು ಸೂಚಿಸುತ್ತವೆ.

242
00:20:38,363 --> 00:20:41,783
ಪ್ಲೀಸ್. ಒಂದು ನಿಮಿಷ, ಲಾಗ್ಗಳನ್ನು ನೋಡಿ,

243
00:20:42,158 --> 00:20:45,244
ನಂತರ ನಿಮ್ಮ ಹೇಳಿಕೆ
ಬದಲಾಯಿಸ್ತೀರಾ ಅಂತ ನೋಡಿ.

244
00:20:46,204 --> 00:20:49,457
ಹಾಗೆ ನೋಡಿದರೆ ನೀವು
ಚೆನ್ನಾಗಿದೀರಾ, ಕಮಾಂಡರ್.

245
00:20:50,333 --> 00:20:52,293
ಖಂಡಿತ ಡಾಕ್ಟರ್. ಅವನನ್ನು ನೋಡಿ.

246
00:20:52,961 --> 00:20:55,546
ನಮ್ ಹುಡುಗ್ರು ತಲೆ ಮೇಲೂ ಹೊಡೆತ
ತಡ್ಕೋತಾರೆ.

247
00:20:56,297 --> 00:20:58,800
ಹೇಗಿದ್ದೀರಾ, ಕಮಾಂಡರ್, ಸಾಮಾನ್ಯವಾಗಿ?

248
00:20:59,258 --> 00:21:02,011
ಯಾವುದಾದ್ರೂ ಮಂದ ದೃಷ್ಟಿ, ತಲೆನೋವು, ಮರೆವು?

249
00:21:03,888 --> 00:21:04,889
ಮರೆವಾ?

250
00:21:05,598 --> 00:21:08,434
ಮಿದುಳಿನ ಗಾಯದಲ್ಲಿ,
ದೈಹಿಕ ಗಾಯಗಳು ಬೇಗ ಗುಣ ಆಗುತ್ತೆ.

251
00:21:08,518 --> 00:21:10,770
ನರದ ಪಥಗಳು ಹೆಚ್ಚು ಸಮಯ ತಗೋಬಹುದು.

252
00:21:10,853 --> 00:21:12,981
ದುಃಖ ಮತ್ತು ನಷ್ಟದ ಒತ್ತಡದಲ್ಲಿ ಮತ್ತು--

253
00:21:13,064 --> 00:21:15,066
ನೀನು ರೋಗಲಕ್ಷಣಗಳನ್ನು ಹೊಂದಿದ್ದೀಯಾ?

254
00:21:17,193 --> 00:21:18,945
ಇಲ್ಲ, ಸರ್. ಇಲ್ಲ...

255
00:21:20,780 --> 00:21:22,991
ನಾವು ಇನ್ನೂ ಒಂದಿಷ್ಟು ಪರೀಕ್ಷೆ ಮಾಡ್ಬಹುದು

256
00:21:23,116 --> 00:21:25,827
ಸಾಧ್ಯವಾದರೆ, ಅದನ್ನು ಬಾಲ್ಬೋವಾದಲ್ಲಿ ಮಾಡ್ಬೇಕು.

257
00:21:25,910 --> 00:21:27,620
ಎಂಆರ್ಐ ಇಲ್ಲೇ ಮಾಡ್ತೀನಿ.

258
00:21:27,704 --> 00:21:29,914
ಹೌದು. ನಮ್ಮವರು ಆಗ್ಲೇ ಮನೇಗ್ ಹೋದ್ರು.

259
00:21:30,873 --> 00:21:33,251
ನಾನು ಅವರ ಕುಟುಂಬಗಳನ್ನ ಭೇಟಿ ಮಾಡ್ಬೇಕು.

260
00:21:35,086 --> 00:21:38,339
ನೀವು ಬೇಡ ಅನ್ನದಿದ್ರೆ,
ರೀಸ್ ವಿಮಾನದಲ್ಲಿ ಹೋಗಬಹುದು.

261
00:21:39,007 --> 00:21:41,509
ಹತ್ತಿರ ಬಂದ ಮೇಲೆ ವಾರ್ಕಾಮ್ ನೋಡಿಕೊಳ್ಳುತ್ತದೆ.

262
00:21:44,053 --> 00:21:45,263
ಸರಿ, ಕಮಾಂಡರ್.

263
00:21:46,514 --> 00:21:49,517
ಆದರೆ ಅನುಸರಣೆಯವರೆಗೂ, ಶಾಂತಿಯಿಂದಿರಿ.

264
00:21:50,435 --> 00:21:53,021
ವಿಶ್ರಾಂತಿ ಪಡೆಯಿರಿ. ಆಲ್ಕೋಹಾಲ್ ಬೇಡ.

265
00:22:03,906 --> 00:22:05,324
ಕಹಾನಿ ನಮ್ ಕೈಗೆ ಸಿಗ್ತಾನೆ.

266
00:22:11,289 --> 00:22:13,207
ಸಿಕ್ಕಾಗ, ನಾನು ಅವನ ತಲೆ ತೆಗೀತೀನಿ.

267
00:22:13,916 --> 00:22:14,917
ಹಾಳಾದ ಎ.

268
00:22:19,380 --> 00:22:23,509
ಡಾನಿ ಇದನ್ನೇ ಮಾಡ್ತಿದ್ದ.
ಆ 23-ವರ್ಷದ ಹುಡುಗ ಅದ್ಭುತವಾಗಿದ್ದ.

269
00:22:31,893 --> 00:22:32,894
ಡಾನಿಗೆ.

270
00:22:33,603 --> 00:22:35,188
ಭ್ರಾತೃತ್ವ ಧೀರ್ಘಕಾಲ ಬಾಳಲಿ.

271
00:22:45,156 --> 00:22:46,699
ಚೆನ್ನಾಗಿರೋ ವಿಸ್ಕಿ ಸಿಗುತ್ತಾ

272
00:22:55,249 --> 00:22:56,626
ಯಾರಿಗಾಗಿ ಕುಡಿತಿದೀವಿ?

273
00:23:03,091 --> 00:23:05,134
ನೀನು ಕಾಂಟ್ರಾಕ್ಟರಾ ಅಥವಾ ರಿಪೋರ್ಟರಾ?

274
00:23:06,094 --> 00:23:09,305
ನಿನ್ ತೋಳಿನ ಮೇಲಿನ ಗುರುತು.
ಸೇವಾ ಸದಸ್ಯರನ್ನ ಒಳ್ಗಡೆ ಬಿಡಲ್ಲ.

275
00:23:09,388 --> 00:23:11,265
ನೀನ್ ಯಾವತ್ತೂ ನಿಯಮ ಮುರ್ದಿಲ್ವಾ?

276
00:23:12,391 --> 00:23:14,477
ಅಂದ್ರೆ, ಒಬ್ಬ ಏರ್ಮ್ಯಾನ್ ಜೊತೆ ಇದ್ದೆ.

277
00:23:14,936 --> 00:23:19,440
ಕಳೆದ ರಾತ್ರಿ 12 ಸೀಲ್ಗಳ ಜೊತೆ ಬಂದ
ಒಂದು ಸಾಗಾಣಿಕೆ ಬಗ್ಗೆ ಅವ್ನು ನಂಗೆ ಹೇಳ್ದ.

278
00:23:20,191 --> 00:23:22,360
ಕಲರ್ ಗಾರ್ಡ್ ಇಲ್ಲ. ರಾಂಪ್ ಸಮಾರೋಹವಿಲ್ಲ.

279
00:23:22,777 --> 00:23:24,195
ಓಹ್, ನೀನು ಪತ್ರಿಕೆಯವಳು.

280
00:23:24,529 --> 00:23:26,280
ವೋಲ್ಟ್ ಸ್ಟ್ರೀಮ್ ನ್ಯೂಸ್.

281
00:23:26,531 --> 00:23:30,284
-ಮುಂದಿನ ರೌಂಡ್ ನಾನು ಕೊಡ್ತೀನಿ.
-ನನ್ನ ಡ್ರಿಂಕ್ಸ್ ನಾನೇ ಖರೀದಿಸ್ತೀನಿ.

282
00:23:30,368 --> 00:23:31,953
ನಾನು ಟೀಮ್ಗಳ ಬಗ್ಗೆ ಬರೀತೀನಿ.

283
00:23:32,453 --> 00:23:35,039
ವಾಸ್ತವ-ಕಾರ್ಯಾಚರಣೆಗಳ ಬಗ್ಗೆ
ಸೀರೀಸ್ ಮಾಡಿದ್ದೀನಿ.

284
00:23:35,123 --> 00:23:36,124
ಹೌದು. ಓದಿದ್ದೇನೆ.

285
00:23:36,207 --> 00:23:39,252
ಇಲ್ಲಿ ಏನ್ ನಡೀತಿದೆ ಅಂತ
ತಿಳ್ಕೊಳ್ಳೋ ಆಸಕ್ತಿ ಯಾರ್ಗೂ ಇಲ್ಲ.

286
00:23:39,335 --> 00:23:42,672
12 ಸೀಲ್ಗಳು ಸತ್ರೂ ಅಧಿಕಾರದಲ್ಲಿರೋರು
ಒಂದು ಹೇಳಿಕೆ ಕೊಟ್ಟಿಲ್ವಾ?

287
00:23:42,839 --> 00:23:44,132
ಏನು ಮರೆ ಮಾಡ್ತಾ ಇದಾರೆ?

288
00:23:47,093 --> 00:23:50,388
ನಿಂಗೇನೇ ತಿಳ್ಕೋಬೇಕಿದ್ರೂ ಅದು
ನಾನು ಅಥವಾ ಬೂಜರ್ನಿಂದ ಸಿಗಲ್ಲ.

289
00:23:50,471 --> 00:23:51,472
ಬೂಜರ್ ಯಾರು?

290
00:24:02,817 --> 00:24:04,902
ನಾನು ಗುಟ್ಟು ಬಿಟ್ಕೊಡಲ್ಲ ಬರನೆಕ್.

291
00:24:06,404 --> 00:24:08,865
ನಮ್ ಕೆಲಸನ ಬೈಯೋರಿಗಂತೂ ಖಂಡಿತ ಇಲ್ಲ.

292
00:24:08,948 --> 00:24:12,451
ನಾನು ನಿಮ್ ಕೆಲಸನ ಬೈದಿಲ್ಲ,
ನಿಮ್ಮ ನಿಯೋಜನೆಗಳನ್ನ ಪ್ರಶ್ನೆ ಮಾಡಿದೀನಿ

293
00:24:22,837 --> 00:24:24,005
ನಿಮ್ಮ ಪ್ರಯತ್ನಗಳಿಗೆ.

294
00:25:00,374 --> 00:25:02,960
ಸ್ಥಿರವಾಗಿ, ಬಾಸ್.
ನಿಧಾನವಾಗಿ, ಸ್ಥಿರವಾಗಿ.

295
00:25:20,561 --> 00:25:23,314
ರೀಸ್! ಎದ್ದೇಳು!

296
00:25:28,069 --> 00:25:29,070
ಕಮಾಂಡರ್.

297
00:25:30,154 --> 00:25:34,367
ಎಲ್ರೂ ಇಳಿದು ಹೋದ್ರು, ಸರ್.
ನಿಮ್ಮನ್ನ ಎಬ್ಸೋಕೆ ಸುಮಾರು ಬಾರಿ ಪ್ರಯತ್ನಪಟ್ಟೆ.

298
00:25:59,558 --> 00:26:03,729
ನಾರ್ಥ್ ಐಲ್ಯಾಂಡ್ ನೇವಲ್ ಏರ್ ಸ್ಟೇಷನ್
ಕೊರೋನಾಡೋ, ಸಿಎ

299
00:26:12,697 --> 00:26:15,241
ಊಬರ್ ಕರೀತಾ ಇದೀಯಾ ಅಂತ ಮಾತ್ರ ಹೇಳ್ಬೇಡ.

300
00:26:18,369 --> 00:26:21,872
ಈವತ್ತು ನೀನ್ ಬರ್ತಾ ಇದೀಯಾ ಅಂತ ಕೇಳ್ದೆ.
ಅದಕ್ಕೆ ಅಂದ್ಕೊಂಡೆ...

301
00:26:27,920 --> 00:26:29,005
ಅಯ್ಯೋ.

302
00:26:36,178 --> 00:26:37,263
ಥ್ಯಾಂಕ್ಸ್, ಬೆನ್.

303
00:26:39,432 --> 00:26:41,517
-ನಿನ್ನ ಮನೇಗ್ ಕರ್ಕೊಂಡ್ ಹೋಗ್ತೀನಿ.
-ಸರಿ.

304
00:26:47,940 --> 00:26:50,318
ಸ್ವಲ್ಪ ಡ್ರೈವ್ ಮಾಡೋಣ್ವಾ?
ತಲೆ ಸರಿಯಾಗೋಕೆ?

305
00:27:04,957 --> 00:27:06,917
ಏನಾಯ್ತು ಅಂತ ಹೇಳ್ತೀಯಾ?

306
00:27:07,043 --> 00:27:09,462
ನಿಂಗೆಷ್ಟು ಗೊತ್ತು?
ನನ್ ಪ್ರಕಾರ ಏಜೆನ್ಸಿ--

307
00:27:09,545 --> 00:27:11,088
ಏಜೆನ್ಸಿ ಏನೋ ಹೇಳಿರುತ್ತೆ.

308
00:27:11,172 --> 00:27:13,174
ಅಂದ್ರೆ, ಅದು ತುಂಬಾ ಕಷ್ಟ.

309
00:27:13,257 --> 00:27:14,091
ಅದು ನಿಂಗೊತ್ತು.

310
00:27:17,803 --> 00:27:18,929
ಅದು ಜಾಲವಾಗಿತ್ತು.

311
00:27:19,180 --> 00:27:20,264
ಅಂದ್ರೆ?

312
00:27:20,348 --> 00:27:23,309
ಯಾರೋ ನಮ್ಮನ್ ಯಾಮಾರ್ಸೋಕೆ
ಕಹಾನಿ ಬಗ್ಗೆ ಸುಳ್ಳು ಹೇಳಿದ್ರು.

313
00:27:25,519 --> 00:27:26,771
ಇರಾನಿಯನ್ನರು.

314
00:27:28,564 --> 00:27:31,275
ಇರ್ಬಹುದು. ರಷ್ಯನ್ರೂ ಇರ್ಬಹುದು.
ಅಸ್ಸಾದ್ ಇರ್ಬಹುದು.

315
00:27:31,609 --> 00:27:32,610
ಥೂ.

316
00:27:33,152 --> 00:27:35,654
ನಮ್ ಸಿಗ್ನಲ್ ಚೇಂಜ್ ಮಾಡೋಕ್ ಯಾರಿಗ್ ಸಾಧ್ಯ ಇದೆ?

317
00:27:35,738 --> 00:27:37,198
ಅಂದ್ರೆ? ಅಡಚಣೆನಾ?

318
00:27:37,281 --> 00:27:41,077
ನಮ್ ಡಿಜಿಟಲ್ ರಿಕಾರ್ಡ್ ಚೇಂಜ್ ಮಾಡೋದು.
ಧ್ವನಿ ಬದಲಾಯ್ಸೋದು, ಡೀಪ್ ಫೇಕ್.

319
00:27:43,371 --> 00:27:44,872
ಅಣ್ಣಾ, ಅದು...

320
00:27:45,247 --> 00:27:48,417
ಅದಂತೂ ಒಳ್ಳೆ ಹೈ-ಲೆವೆಲ್ ಇ ಡಬ್ಲ್ಯೂ ಸಾಮರ್ಥ್ಯ.

321
00:27:49,752 --> 00:27:51,712
ಅದೊಂಥರಾ ಭಗವಂತನ ಆಟ ಇದ್ದಂಗೆ.

322
00:27:56,550 --> 00:27:59,970
ನಂಗೆ ಪರ್ಷಿಯಾ ಹೌಸ್ನಲ್ಲಿ ಜನ್ರು ಗೊತ್ತು
ಬೇಕಾದ್ರೆ ಫೋನ್ ಮಾಡ್ತೀನಿ.

323
00:28:00,054 --> 00:28:03,349
ನೋಡ್ಬೇಕಾಗಿದ್ದು ಇದ್ಯಾ ಅಂತ ನೋಡ್ತೀನಿ.
ಅಲ್ಲಿಂದ ಶುರು ಮಾಡೋಣ.

324
00:29:11,667 --> 00:29:13,085
ಸಾಕು. ಈಗ ಹೇಳ್ಬಿಡು.

325
00:29:13,169 --> 00:29:15,713
-ನಂದಿನ್ನೂ ಮುಗ್ದಿಲ್ಲ.
-ಮಲಗೋ ಹೊತ್ತು ಮೀರಿದೆ.

326
00:29:21,677 --> 00:29:22,678
ಹಲೋ?

327
00:29:23,262 --> 00:29:24,263
ಅಪ್ಪಾ!

328
00:29:25,890 --> 00:29:27,766
ಹೇಯ್, ಬಗ್.

329
00:29:29,768 --> 00:29:30,895
ಮನೇಗ್ ಬಂದ್ಯಾ.

330
00:29:33,314 --> 00:29:35,316
ದೇವ್ರಾಣೆ. ಮನೇಗ್ ಬಂದೆ.

331
00:29:36,192 --> 00:29:38,527
ನೀನ್ ನಾಳೆ ಬರ್ತೀಯಾ ಅಂತ ಅಮ್ಮ ಹೇಳಿದ್ಳು.

332
00:29:38,611 --> 00:29:40,654
-ಅದು ಈವತ್ತೇ ಅಂತ ನಂಗೊತ್ತಿತ್ತು
-ಹೌದಾ?

333
00:29:41,655 --> 00:29:44,241
ನೋಡು. ಎಷ್ಟು ಎತ್ತರ ಆಗಿದೀಯಾ.

334
00:29:45,367 --> 00:29:47,995
ನನ್ ಕೋಣೇಲಿ ಹೊಸ ದಿಂಬು
ಮತ್ತೆ ಪ್ರಾಣಿ ಗೊಂಬೆ ಇದೆ.

335
00:29:48,078 --> 00:29:49,997
-ನಿಂಗೆ ತೋರಿಸ್ತೀನಿ.
-ಸರಿ.

336
00:29:50,080 --> 00:29:54,001
ನಂಗೆ ಒಳ್ಳೇ ಯೋಚ್ನೆ ಬಂದಿತ್ತು.
ನನಗೆ ನಾಯಿ ಬೇಕಿತ್ತು.

337
00:29:54,084 --> 00:29:54,919
ಸರಿ.

338
00:29:55,002 --> 00:29:57,171
ಲ್ಯೂಸಿ. ನೀನ್ ಹಾಸ್ಗೆಗೆ ಹೋಗ್ ಮಲ್ಗು

339
00:29:57,254 --> 00:29:59,715
ನಂತರ ಅಪ್ಪ ಬಂದು ನಿನ್ನ ಮಲಗಿಸ್ತಾರೆ.

340
00:29:59,798 --> 00:30:01,550
-ನಾನ್ ನಿನ್ನನ್ ಹುಡುಕ್ತೀನಿ.
-ಬಾ.

341
00:30:07,765 --> 00:30:08,974
ಹೋಗು.

342
00:30:09,934 --> 00:30:11,685
ಸರಿ. ನಾನ್ ಅಲ್ಲೇ ಬರ್ತೀನಿ.

343
00:30:38,295 --> 00:30:42,508
ನಿನ್ನ ನಿದ್ದೆ ಮಾಡಿಸ್ತೀನಿ. ನನ್ ಸಲ್ವಾಗಿ
ಕಾದಿದ್ದಕ್ಕೆ ಸಂತೋಷ ಆಯ್ತು. ಥ್ಯಾಂಕ್ಸ್

344
00:30:47,096 --> 00:30:48,222
ಹುಶಾರಾಗಿದೀಯಾ?

345
00:30:49,473 --> 00:30:51,016
ಹೌದು. ಚೆನ್ನಾಗಿದೀನಿ.

346
00:30:51,517 --> 00:30:52,726
ನೋವಾಗ್ತಾ ಇದ್ಯಾ?

347
00:30:53,185 --> 00:30:55,020
ಇಲ್ಲ. ಏನೂ ಇಲ್ಲ.

348
00:30:55,646 --> 00:30:56,647
ನಿಜವಾಗ್ಲೂ?

349
00:30:57,606 --> 00:31:00,025
ಹೌದು. ನಾನು ಆರಾಮಾಗಿದೀನಿ.

350
00:31:00,776 --> 00:31:02,903
ನಾನು ಹೋದಾಗಿಂದ ಏನ್ ಓದ್ತಾ ಇದೀಯಾ?

351
00:31:02,987 --> 00:31:04,655
ಬೇಳದಿಂಗಳನ್ನು ಕುಡಿದ ಬಾಲೆ.

352
00:31:05,072 --> 00:31:06,574
ಜಾದೂ ಶಕ್ತಿ ಬಗ್ಗೆಯದು.

353
00:31:07,533 --> 00:31:08,867
ನೀನೂ ಓದ್ತೀಯಾ?

354
00:31:09,493 --> 00:31:12,580
ಅಪ್ಪಂಗೆ ಸುಸ್ತಾಗಿದೆ.
ಅವ್ರು ಹೋಗಿ ಮಲಗ್ತಾರೆ, ಸರೀನಾ?

355
00:31:12,788 --> 00:31:16,083
ಅವ್ರು ಸ್ನಾನ ಮಾಡ್ಬೇಕು,
ಏಕೆಂದ್ರೆ ಅವ್ರು ವಾಸ್ನೆ ಹೊಡೀತಾ ಇದಾರೆ.

356
00:31:19,837 --> 00:31:20,796
ಸರಿ.

357
00:31:23,716 --> 00:31:25,467
ಅಲ್ಲಿ ಅದೇನು, ಹೊಸಾ ಡ್ರಾಯಿಂಗಾ?

358
00:31:25,593 --> 00:31:28,554
ವಾವ್. ಸುಧಾರಿಸ್ತಿದೀಯಾ ಮಗ್ಳೇ.
ಇಲ್ ನೋಡು.

359
00:31:28,637 --> 00:31:29,972
ನನ್ನ ಕುಟುಂಬ

360
00:31:30,055 --> 00:31:31,307
ಇದನ್ನ ನೀನ್ ಬಿಡ್ಸಿದ್ಯಾ

361
00:31:31,390 --> 00:31:35,227
-ನೀನ್ ಹೋಗೋಕ್ ಮೊದ್ಲೇ ಬಿಡ್ಸಿದ್ದೆ ಅಪ್ಪಾ
-ನಾನು ಇದನ್ನ ಮೊದ್ಲು ನೋಡೇ ಇಲ್ಲ.

362
00:31:35,603 --> 00:31:36,812
ಇದನ್ನ ತೋರ್ಸಿದ್ದೆ.

363
00:31:37,646 --> 00:31:39,064
ನಿಂಗೆ ಇಷ್ಟ ಆಗಿತ್ತು.

364
00:31:42,985 --> 00:31:44,069
ತಮಾಷೆ ಮಾಡ್ತೀಯಾ.

365
00:31:44,278 --> 00:31:47,781
ನಾನು ತಮಾಷೆ ಮಾಡ್ತೀನಿ.
ಯಾವಾಗ್ಲೂ ತಮಾಷೆ ಮಾಡ್ತೀನಿ.

366
00:31:48,115 --> 00:31:50,576
ನನ್ ಪುಟ್ಟಿ ನಗೋಕೆ ಏನ್ ಬೇಕಾದ್ರೂ ಮಾಡ್ತೀನಿ.

367
00:31:52,911 --> 00:31:54,371
-ಗುಡ್ ನೈಟ್.
-ಐ ಲವ್ ಯೂ.

368
00:31:54,830 --> 00:31:55,873
ಐ ಲವ್ ಯೂ.

369
00:32:03,547 --> 00:32:04,548
ಸರಿ.

370
00:32:09,136 --> 00:32:11,096
ನಿನ್ನ ಕರ್ಕೊಂಡ್ ಹೋಗೋಕ್ ಬರ್ತಿದ್ದೆ.

371
00:32:16,518 --> 00:32:19,480
ಪರ್ವಾಗಿಲ್ಲ. ಬೆನ್ ಬಂದಿದ್ದ.

372
00:32:23,692 --> 00:32:27,363
ನಿಂಗೊತ್ತಾ, ನಿಂಗೆ ಆಘಾತ ಆಗಿದೆ ಅಂತ ಮಾತ್ರ
ನಂಗೆ ಅವ್ರು ಹೇಳಿದ್ರು.

373
00:32:27,446 --> 00:32:29,156
ಮತ್ತೆ ನೀನು ಅಡಗಿರ್ಬೇಕಿತ್ತಂತೆ.

374
00:32:31,116 --> 00:32:34,828
ನೀನ್ ಪರೀಕ್ಷೆ ಮಾಡಿಸ್ಕೋ ಜೇಮ್ಸ್
ಬೇಕಿದ್ರೆ ಅಪಾಯಿಂಟ್ಮೆಂಟ್ ತಗೋತೀನಿ.

375
00:32:34,912 --> 00:32:35,913
ನಾನ್ ಚೆನ್ನಾಗಿದೀನಿ

376
00:33:13,909 --> 00:33:17,538
-ರಮಿರೆಜ್! ನಿಲ್ಲು! ನಾನ್ ಬರ್ತಾ ಇದೀನಿ.
-ಗೋಡೆಗೆ!

377
00:33:17,621 --> 00:33:19,790
ರೀಸ್! ಏಳು! ಎದ್ದೇಳು!

378
00:33:24,920 --> 00:33:26,422
ಏನನ್ಸುತ್ತೆ, ಅಪ್ಪಾ?

379
00:33:27,506 --> 00:33:28,507
ಅಪ್ಪಾ!

380
00:33:30,259 --> 00:33:31,176
ಜೇಮ್ಸ್?

381
00:33:33,512 --> 00:33:34,346
ಏನು?

382
00:33:34,722 --> 00:33:37,891
ಅಮ್ಮ ಮತ್ತು ನಾನು ನಿನ್ನ
ಮೊದಲ ದಿನದ ಪ್ಲಾನ್ ಮಾಡಿದೀವಿ.

383
00:33:38,809 --> 00:33:43,480
ನಾವ್ ಮಾಡ್ತಿರೋ ಹೊಸಾ ಚಟುವಟಿಕೆ ಬಗ್ಗೆ
ಅಪ್ಪಂಗೆ ಹೇಳ್ಬಾರ್ದಾ?

384
00:33:43,564 --> 00:33:46,900
ನಾನು ಅಮ್ಮ ಸ್ಟ್ಯಾಂಡ್ ಅಪ್ ಪೆಡಲ್ ಬೋರ್ಡಿಂಗ್
ಮಾಡ್ತಾ ಇದ್ವಿ.

385
00:33:46,984 --> 00:33:49,528
ಅದು ಸರ್ಫಿಂಗ್ ಮತ್ತೆ ಸೀ-ಕಯಾಕಿಂಗ್
ಒಟ್ಗೇ ಇದ್ದಂಗೆ

386
00:33:49,862 --> 00:33:50,863
ತುಂಬಾ ಮಜಾ ಇರುತ್ತೆ

387
00:33:51,530 --> 00:33:56,160
ಅಪ್ಪ ನಮ್ ಜೊತೆ ಬರ್ತಾರಾ ಅಂತ ಕೇಳೋಣ್ವಾ.

388
00:33:56,326 --> 00:33:58,620
ಬರ್ತೀಯಾ ಅಪ್ಪಾ? ನಿಂಗಿಷ್ಟ ಆಗುತ್ತೆ.

389
00:33:58,704 --> 00:34:00,289
ಹಿಂದಿನ್ ಬಾರಿ ಸರ್ಫಿಂಗ್...

390
00:34:01,749 --> 00:34:03,667
ಮಾಡಿದ್ದು ಹಾಳಾಗ್ ಹೋಗಿತ್ತು. ಅಲ್ವಾ?

391
00:34:05,085 --> 00:34:09,590
ಅದು ಸುಲಭ. ನಾವು ಬೆಳಿಗ್ಗೆ ಬೇಗ
ಲಾ ಜೊಲ್ಲಾ ಕೋವ್ನಿಂದ ಬೀಡೋಣ.

392
00:34:09,757 --> 00:34:12,259
ಅಲ್ಲಿ ಅಲೆ ಇರಲ್ಲ, ಶಾಂತ ನೀರಲ್ಲಿ ಹೋಗ್ಬಹುದು.

393
00:34:12,342 --> 00:34:14,511
ಒಳ್ಳೇ ಪ್ಲಾನ್. ಹೋಗೋಣ.

394
00:34:14,595 --> 00:34:17,264
ನಾವು ಸ್ಟ್ಯಾಂಡ್ ಅಪ್ ಪೆಡಲ್ ಬೋರ್ಡಿಂಗ್ ಮಾಡೋಣ.

395
00:34:17,973 --> 00:34:19,641
ಒಳ್ಳೇದು. ಮಜಾ ಇರುತ್ತೆ.

396
00:34:20,768 --> 00:34:21,685
ಸರಿ.

397
00:34:22,936 --> 00:34:26,440
ಜಗತ್ಪ್ರಸಿದ್ಧ ಚಕ್ಕೆ ರೋಲ್ಗಳು.
ನಾವು ಇದನ್ನ ತಿನ್ಬೇಕಾ?

398
00:34:26,523 --> 00:34:28,400
ಅದು...ಅದನ್ನ ತಗೋ...ಬಿಸಿಯಾಗಿದೆ!

399
00:34:28,484 --> 00:34:29,735
ಅಯ್ಯೋ ದೇವ್ರೇ!

400
00:34:32,237 --> 00:34:34,865
-ಹುಶಾರಾಗಿದೀಯಾ?
-ಹುಶಾರಾಗಿದೀನಿ. ಸಾರಿ.

401
00:34:39,203 --> 00:34:40,788
ನಂಗೆ ನಿನ್ನ--

402
00:34:43,123 --> 00:34:44,374
ಅದು ವಾರ್ಕಾಮ್.

403
00:34:47,628 --> 00:34:48,796
ನಾನು ರೀಸ್.

404
00:34:51,507 --> 00:34:54,176
ಇಲ್ಲ, ಸರ್. ಇದು ಸಾಧ್ಯನೇ ಇಲ್ಲ.

405
00:34:57,387 --> 00:34:58,931
ಹೌದು ಸರ್. ಈಗ್ಲೇ ಬರ್ತೀನಿ.

406
00:35:06,396 --> 00:35:09,900
ಇದು ಈವತ್ತೇ ನನ್ ಡೆಸ್ಕ್ ಮೇಲಿರ್ಬೇಕು.
ನಾಳೆ ಅಲ್ಲ. ನಾನು ಹೋಗ್ಬೇಕು.

407
00:35:09,983 --> 00:35:11,693
-ರೀಸ್
-ಕ್ಯಾಪ್ಟನ್, ಬೂಜರ್ ಎಲ್ಲಿ?

408
00:35:11,777 --> 00:35:14,780
ಕೊರೋನರ್ ಬಾಡಿ ತಗೊಂಡ್ ಹೋದ್ರು
ಮೀಟಿಂಗ್ಗೋಸ್ಕರ ನಿಂತಿದೀನಿ.

409
00:35:14,863 --> 00:35:17,574
30 ನಿಮಿಷದಲ್ಲಿದೆ
ರೀಸ್, ನಾನು ನಿನ್ನ ಪಕ್ಕಕ್ಕಿರ್ತೀನಿ

410
00:35:17,658 --> 00:35:20,202
ಕಮಾಂಡರ್.
ಸ್ಪೆಷಲ್ ಏಜೆಂಟ್ ಹೋಲ್ಡರ್, ಎನ್ಸಿಐಎಸ್.

411
00:35:21,286 --> 00:35:22,162
-ಸರ್-
-ನಡಿ.

412
00:35:31,421 --> 00:35:35,843
ನಂಗೆ ಒಂದಿಷ್ಟು ಪ್ರಶ್ನೆಗಳನ್ನ ಕೇಳ್ಬೇಕಿದ್ದು
ಅದು ಪೆಟ್ಟಿ ಆಫೀಸರ್ ವಿಕರ್ನ.

413
00:35:37,135 --> 00:35:38,220
ಮಾನಸಿಕತೇಯ ಬಗ್ಗೆ.

414
00:35:42,850 --> 00:35:45,352
ನಾನು ನಿನ್ನೆ ಇವ್ನ ಜೊತೆ ಇದ್ದೆ.
ಚೆನ್ನಾಗೇ ಇದ್ದ.

415
00:35:46,895 --> 00:35:49,273
ಅವ್ನು ತಾನೇ ಶೂಟ್ ಮಾಡ್ಕೋಳೋದು ಸಾಧ್ಯನೇ ಇಲ್ಲ.

416
00:35:50,816 --> 00:35:52,526
-ಸಾರಿ. ನಿನ್ನೆನಾ?
-ಹೌದು.

417
00:35:53,360 --> 00:35:56,780
ನಾವು ಒಟ್ಟಿಗೇ ಇನ್ಸರ್ಲಿಕ್ನಿಂದ ಬಂದ್ವಿ.
ಅವ್ನು ಚೆನ್ನಾಗೇ ಇದ್ದ.

418
00:35:59,116 --> 00:36:00,117
ಕಮಾಂಡರ್.

419
00:36:01,285 --> 00:36:02,286
ಅದು--

420
00:36:02,494 --> 00:36:05,622
ಅದು ಸಾಧ್ಯ ಇಲ್ಲ.
ವಿಕರ್ಸ್ 2 ದಿನದ್ ಹಿಂದೆನೇ ಶೂಟ್ ಮಾಡ್ಕೊಂಡ.

421
00:36:05,706 --> 00:36:07,708
ಇಲ್ಲ. ನೀನ್ ಹೇಳ್ತಾ ಇರೋದು ತಪ್ಪು.

422
00:36:08,292 --> 00:36:10,961
-ಹೇಯ್. ಆರಾಮಾಗ್ ಉಸಿರಾಡು.
-ಅವ್ರಿಗೆ ಹೇಳು!

423
00:36:11,253 --> 00:36:13,255
ಕಮಾಂಡರ್ ಈಗಷ್ಟೇ ಯುದ್ಧದಿಂದ ಬಂದಿದಾರೆ.

424
00:36:13,380 --> 00:36:15,257
ಹೌದು. ವಿಕರ್ಸ್ ಜೊತೆ. ನಿನ್ನೆ.

425
00:36:17,551 --> 00:36:18,552
ಸರಿ.

426
00:36:18,844 --> 00:36:23,432
ಪಿ ಓ-ಒನ್ ವಿಕರ್ಸ್ ನಿಮ್ಮವ್ರ ದೇಹಗಳ ಜೊತೆ
2 ದಿನದ ಹಿಂದೆ ವಿಮಾನದಲ್ಲಿ ಮನೆಗೆ ಬಂದಿದಾನೆ.

427
00:36:24,099 --> 00:36:26,435
ಆವತ್ತು ರಾತ್ರಿ ಆತ್ಮಹತ್ಯೆ ಮಾಡ್ಕೊಂಡಿದಾನೆ.

428
00:36:27,561 --> 00:36:29,271
ನೆರೆಹೊರೆಯವರು ಬೆಳಿಗ್ಗೆ ನೋಡಿದರು

429
00:36:29,354 --> 00:36:32,232
ಕೊರೊನಾಡೊ ಪೋಲೀಸ್ ಅಲ್ಲಿ ಮೊದಲು ಬಂದರು.

430
00:36:32,566 --> 00:36:34,234
ನಿಜವಾಗ್ಲೂ ಸಾರಿ, ಕಮಾಂಡರ್.

431
00:36:35,277 --> 00:36:36,612
ನಿಧಾನವಾಗಿ, ಸ್ಥಿರವಾಗಿ.

432
00:36:55,380 --> 00:36:56,381
ರೀಸ್.

433
00:36:57,549 --> 00:37:00,802
ಇದನ್ನ ಈವತ್ತೇ ಮಾಡ್ಬೇಕು ಅಂತಿಲ್ಲ.
ನೀವು ಟೈಮ್ ತಗೋಬಹುದು.

434
00:37:00,886 --> 00:37:03,221
-ಸಾಧ್ಯ ಇದ್ರೆ ಅದನ್ನೇ ಮಾಡ್ತಿದ್ದೆ.
-ಸರಿ.

435
00:37:03,972 --> 00:37:07,142
ಬೇಹುಗಾರಿಕೆಯ ಬಗ್ಗೆ ನಿಮ್ಮ ಚಿಂತೆಗಳನ್ನು
ಪರಿಶೀಲಿಸುತ್ತೇವೆ.

436
00:37:07,225 --> 00:37:08,268
ಬನ್ನಿ.

437
00:37:08,393 --> 00:37:09,353
ಪುಷ್-ಅಪ್, ರೆಡಿ?

438
00:37:09,519 --> 00:37:10,395
ರೆಡಿ!

439
00:37:10,562 --> 00:37:11,897
-ಒಂದು!
-ಒಂದು!

440
00:37:11,980 --> 00:37:12,814
-ಎರಡು!
-ಎರಡು!

441
00:37:13,023 --> 00:37:16,652
ಇದು ಅಲ್ಫಾ ಪ್ಲಟೂನ್ ಮೇಲೆ ಉದ್ದೇಶಿತ
ದಾಳಿಯಾಗಿತ್ತೆಂದು ನನಗನಿಸುತ್ತಿದೆ.

442
00:37:17,819 --> 00:37:20,405
ನನ್ನ ತುಕಡಿ 2018ರಿಂದ
ಕಹಾನಿಯನ್ನು ಬೆನ್ನಟ್ಟಿದೆ.

443
00:37:20,656 --> 00:37:23,909
ಆಗ ಅವರ ಇಬ್ಬರು ಕುಡ್ಸ್ ಫೋರ್ಸ್
ಲೆಫ್ಟಿನೆಂಟ್ಗಳು ಸತ್ತರು.

444
00:37:24,034 --> 00:37:26,536
ಅಲೆಪ್ಪೋದವನಿಗೆ ಸುಳ್ಳು
ಮಾಹಿತಿ ಕೊಟ್ಟಿದ್ದಾರೆ.

445
00:37:27,120 --> 00:37:28,288
ಅದೊಂದು ಜಾಲವಾಗಿತ್ತು.

446
00:37:28,413 --> 00:37:31,041
ಸೋಕಾಮ್ ಮತ್ತು ಸಿಐಎ
ಮೂಸಾನನ್ನು ಹುಡುಕುತ್ತಿದ್ದಾರೆ.

447
00:37:31,458 --> 00:37:33,877
ಸಿರಿಯಾದಲ್ಲಿ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿದೆ

448
00:37:35,170 --> 00:37:38,632
ಆದರೆ ಕಾರ್ಯಾಚರಣೆಗೆ ಏನಾಯ್ತು
ಅಂತ ನಂಗೆ ಗೊತ್ತಾಗ್ಬೇಕು.

449
00:37:41,051 --> 00:37:42,052
ಸರ್?

450
00:37:42,135 --> 00:37:45,055
ಪ್ತತ್ಯಕ್ಷ ಸಾಕ್ಷಿ ಇರೋದು ನೀನೊಬ್ನೇ.

451
00:37:45,138 --> 00:37:47,349
ಆದರೆ ಈ ಫೈಲ್ನಲ್ಲಿ ಇರೋದು ಅರ್ಥ ಆಗ್ತಿಲ್ಲ

452
00:37:51,395 --> 00:37:52,562
ಅರ್ಥ ಆಗುತ್ತೆ.

453
00:37:53,730 --> 00:37:57,693
ನಮ್ಮ ಅಡಿಯೋ ರಿಕಾರ್ಡ್ ಅನ್ನು ಯಾರೋ
ಬದಲಾಯ್ಸಿರೋದು ಗೊತ್ತಾದ್ರೆ ಅರ್ಥ ಆಗುತ್ತೆ

454
00:37:57,901 --> 00:38:00,445
ಸ್ಪಷ್ಟೀಕರಣಕ್ಕಾಗಿ, ಅದು ನಿನ್ನ ನಂಬಿಕೆ ಅಲ್ವಾ?

455
00:38:00,529 --> 00:38:04,700
ಒಬ್ಬ ಎಸ್ ಡಿ ಎಫ್ ಸೈನಿಕ ಹೆದರಿ
ಐ ಇ ಡಿನ ಸ್ಫೋಟ ಮಾಡ್ದ ಅನ್ನೋದು.

456
00:38:05,117 --> 00:38:06,994
-ಎಸ್ಓ-೨ ಮಿಚೆಲ್?
-ಹೌದು.

457
00:38:07,661 --> 00:38:10,247
ಹೌದು, ಸರ್. ನನ್ ಹೇಳಿಕೆ ನಿಜ.

458
00:38:10,580 --> 00:38:13,542
ನಮ್ಮವ್ರನ್ನ ಆ ಥಿಯೇಟರ್ನಲ್ಲಿ
ಕೆಲಸ ಮಾಡೋಕೆ ಬಿಡ್ಬಾರ್ದು,

459
00:38:13,625 --> 00:38:15,919
ಯಾರ್ ಹತ್ರ ಆ ತಂತ್ರಜ್ಞಾನ ಇದೆ

460
00:38:16,003 --> 00:38:19,965
ಯಾರು ಅದನ್ನ ಮಾಡ್ಬಹುದು ಮತ್ತೆ
ಯಾರು ನಮ್ಗೆ ಬಲೆ ಬೀಸಿದಾರೆ ಅಂತ ತಿಳಿಯೋವರ್ಗೂ.

461
00:38:22,300 --> 00:38:26,513
ಪೆಟ್ಟಿ ಆಫೀಸರ್ ವಿಕರ್ ಮನೇಲಿ
ಏನಾಯ್ತು ಅಂತ ಹೇಳು.

462
00:38:26,722 --> 00:38:32,144
ಎನ್ ಸಿ ಐ ಎಸ್ ಪ್ರಕಾರ ವಿಕರ್ಸ್ ಸಾವಿನ ಬಗ್ಗೆ
ನೀನು ಪ್ರಶ್ನೆ ಕೇಳ್ದೆ.

463
00:38:34,396 --> 00:38:38,942
ಬೂಜರ್ ಯಾಕೆ ತನಗೆ ತಾನೇ ಗುಂಡು ಹಾರಿಸ್ಕೋತಾನೆ
ಅಂತ ನಾನ್ ಕೇಳ್ದೆ ಸರ್.

464
00:38:41,194 --> 00:38:43,572
ಆದ್ರೆ ಹೌದು, ನನ್ನ ಸಮಯಾವಧಿ ಏರುಪೇರಾಗಿದೆ.

465
00:38:43,989 --> 00:38:47,451
ಕಮಾಂಡರ್ಗೆ ಮಿಷನ್ನಲ್ಲಿ ಭಾರೀ ಆಘಾತ ಆಗಿದೆ.

466
00:38:49,202 --> 00:38:51,413
ಅದ್ರ್ ಪರಿಣಾಮನ ಅವ್ನು ಎದುರಿಸ್ತಾ ಇದಾನೆ.

467
00:38:51,788 --> 00:38:54,791
ಈ 'ಪರಿಣಾಮಗಳು' ಕಾರ್ಯಾಚರಣೆ ಬಗ್ಗೆ ನಿನ್ನ

468
00:38:55,709 --> 00:38:58,170
ನೆನಪಿನ ಮೇಲೆ ಪರಿಣಾಮ ಬೀರಿರಬಹುದಾ?

469
00:38:58,253 --> 00:39:00,213
ಆ ರೀತಿಯ ಕಾರ್ಯಾಚರಣೆನ ಮರೆಯೋಕಾಗಲ್ಲ.

470
00:39:01,757 --> 00:39:02,758
ಇಲ್ಲ, ಸರ್.

471
00:39:09,139 --> 00:39:10,932
ನೋಡು. ರೀಸ್,

472
00:39:12,100 --> 00:39:14,644
ನಿನ್ನ ಬದ್ಧತೆ ನಂಗಿಷ್ಟ ಆಗುತ್ತೆ.

473
00:39:16,063 --> 00:39:19,858
ಎನ್ಲಿಸ್ಟೆಡ್ ಸ್ನೈಪರ್ನಿಂದ
ಟ್ರೂಪ್ ಕಮಾಂಡರ್ ಆಗಿದೀಯಾ.

474
00:39:19,941 --> 00:39:23,612
ಇದು ಸಣ್ಣ ಮಾತಲ್ಲ. 40ನೇ ವಯಸ್ಸಿನಲ್ಲೂ
ನೀನು ಎಲ್ಲಾರ್ಗೂ ಮುಂದಾಳು.

475
00:39:25,572 --> 00:39:27,657
ಆದ್ರೆ ನಿನ್ನನ್ನ ನೀನು ಸರಿ ಮಾಡ್ಕೋಬೇಕು.

476
00:39:32,621 --> 00:39:35,582
ನೀನು ಗ್ಯಾರಿಸನ್ನಲ್ಲಿದ್ದಾಗ ನಿನ್ ಗಡ್ಡ ತೆಗಿ.

477
00:39:36,249 --> 00:39:38,752
ನಾವು ಜನರಿಗೆ ಮಾದರಿ ಆಗಿರ್ಬೇಕು.

478
00:39:40,087 --> 00:39:41,254
ವಿಶೇಷವಾಗಿ ಈಗ.

479
00:39:43,965 --> 00:39:44,800
ಸರಿ, ಸರ್.

480
00:39:45,967 --> 00:39:48,178
ವಿಕರ್ಸ್ ಜೊತೆಗೆ ಈ ತುಕಡಿಯಲ್ಲಿದ್ದ ಪ್ರತಿ

481
00:39:48,261 --> 00:39:51,181
ಸೀಲ್ಗೂ ಮರಣೋತ್ತರ
ಸಿಲ್ವರ್ ಸ್ಟಾರ್ ಕೊಡ್ತಾರಂತೆ.

482
00:39:51,264 --> 00:39:52,099
ನಡೀರೋ ಹುಡ್ಗೀರಾ!

483
00:39:52,182 --> 00:39:55,268
ರಕ್ಷಣಾ ಕಾರ್ಯದರ್ಶಿ ಶವಸಂಸ್ಕಾರಕ್ಕೆ
ಖುದ್ದಾಗಿ ಬರ್ತಾ ಇದಾರೆ.

484
00:39:55,352 --> 00:39:57,437
ಕುಟುಂಬಗಳಿಗೆ ಸಮಾಧಾನ ಆಗುತ್ತೆ.

485
00:39:58,105 --> 00:39:59,397
ಇದು ನಿಜ ಅಲ್ವಾ ಸರ್?

486
00:40:00,816 --> 00:40:03,401
-ಏನು? ಪದಕಗಳಾ?
-ಬೂಜರ್ ಸಾವಿನ ಕಾರಣ.

487
00:40:03,652 --> 00:40:05,654
ನಾನು ಕೊರೋನರ್ ಹತ್ರ ಮತ್ತೆ ಕೇಳಿದೆ.

488
00:40:06,363 --> 00:40:09,574
ಸ್ವಯಂ ಮಾಡ್ಕೊಂಡ ಗಾಯಾನ ಧೃಢೀಕರಿಸಿದಾರೆ.
ಒಂಬತ್ತು ಮಿಲೀಮೀಟರ್.

489
00:40:11,618 --> 00:40:13,120
ಸರ್, ಸಾರಿ ಸರ್.

490
00:40:14,037 --> 00:40:15,956
ಟೀಮ್ ಗನ್ನಿಂದ ಶೂಟ್ ಮಾಡ್ಕೊಂಡ್ನಾ?

491
00:40:16,665 --> 00:40:17,791
ಅದು ಅವನದೇ ಸಿಗ್.

492
00:40:18,625 --> 00:40:20,752
ಅದು ತುಕಡಿಯಿಂದ ಬಂದ ಉಡುಗೊರೆ ಅಲ್ವಾ?

493
00:40:23,630 --> 00:40:27,050
ರೀಸ್, ನೀನು ಈ ಶವಸಂಸ್ಕಾರಕ್ಕೆ ಹೋಗ್ಲೇಬೇಕಾ?

494
00:40:28,176 --> 00:40:30,804
ನೀನು ಬರದೆ ಇರೋದಕ್ಕೆ ಏನಾದ್ರೂ ಕಾರಣ ಹೇಳ್ತೀವಿ.

495
00:40:30,887 --> 00:40:32,055
ನಾನ್ ಬರ್ತೀನಿ ಸರ್.

496
00:40:48,029 --> 00:40:49,156
ಬಿರುಗಾಳಿ ಬರ್ತಾ ಇದೆ.

497
00:40:51,408 --> 00:40:53,493
ನಿಂಗೆ ಮಾತಾಡೋಕ್ ಇಷ್ಟ ಇಲ್ದೇ ಇದ್ರೆ,

498
00:40:53,869 --> 00:40:58,165
ಅಲ್ ಕೂತ್ಕೊಂಡು ನಾನು ದೋಣಿ ತಗೊಂಡ್
ಹೋಗೋದನ್ನ ನೋಡ್ಬಹುದು. ಅದೂ ಪರ್ವಾಗಿಲ್ಲ.

499
00:41:00,417 --> 00:41:02,502
ಈ ಬುಲೆಟ್ನಲ್ಲಿ ಏನಾದ್ರೂ ದೋಷ ಇದ್ಯಾ?

500
00:41:13,388 --> 00:41:14,389
ಅಂದ್ರೆ?

501
00:41:16,725 --> 00:41:17,726
ಕ್ಯಾಲಿಬರ್.

502
00:41:18,977 --> 00:41:20,312
ನನ್ನ ಸಿಗ್ ನಂಗಿಷ್ಟ.

503
00:41:21,229 --> 00:41:24,357
ಬೂಜರ್ನ ಮೆಚ್ಚಿನ ಪಿಸ್ತೂಲು
ಕಸ್ಟಮ್ ೧೯೧೧-೪೫ ಆಗಿತ್ತು.

504
00:41:27,652 --> 00:41:30,780
ಅವನಿಗೆ ಟೀಮ್ ನೈನ್ ಮಿಲಿಮೀಟರ್ಸ್
ಒಂಚೂರೂ ಇಷ್ಟ ಇರ್ಲಿಲ್ಲ.

505
00:41:33,533 --> 00:41:36,203
ನಾವು ಅದ್ರ ಒಳ್ಳೇ ಗುಣಗಳ ಬಗ್ಗೆ ಮಾತಾಡ್ತಿದ್ವಿ.

506
00:41:37,120 --> 00:41:38,872
ನೈನ್ ಮಿಲಿಮೀಟರ್ಸ್ ವಿರುದ್ಧ ೪೫.

507
00:41:40,457 --> 00:41:42,125
ಇನ್ನೂ ಒಳ್ಳೇ ಮ್ಯಾಗಜೀನ್ ಬೇಕಾ?

508
00:41:42,209 --> 00:41:44,502
ಅಥವಾ ಹೆಚ್ಚು ಸೀಸ ಕಾರೋದು ಬೇಕಾ.

509
00:41:44,586 --> 00:41:46,379
ಡೌನ್ರೇಂಜ್, ಅವನಿಗೆ 45 ಬೇಕಿತ್ತು

510
00:41:46,463 --> 00:41:48,882
ಏನಾದ್ರೂ ನಾಶ ಮಾಡ್ಬೇಕು ಅಂತಿದ್ರೆ
ಮಾಡು ಅಂತಿದ್ದ

511
00:41:48,965 --> 00:41:52,677
ಅದಕ್ಕೆ ಬರೀ ತೂತು ಮಾಡ್ಬೇಡ,
ಕತ್ತಿ ಯುದ್ದದಲ್ಲಿ ಚಿಕ್ಕ ಚಾಕು ತರ್ಬೇಡ.

512
00:41:54,846 --> 00:41:59,392
ನಾನ್ ನಂಬಲ್ಲ. ಸಿಗ್ನಿಂದ ಬೂಜರ್
ಆತ್ಮಹತ್ಯೆ ಮಾಡ್ಕೊಳ್ಳೋಕೆ ಸಾಧ್ಯನೇ ಇಲ್ಲ.

513
00:42:00,227 --> 00:42:01,311
ಸಾಧ್ಯ ಇಲ್ಲ.

514
00:42:02,604 --> 00:42:04,147
ಈ ಜಾಲನ ಬೀಸಿದವ್ರು ಸುಳ್ಳು ..

515
00:42:07,984 --> 00:42:10,946
ಸಾಕ್ಷಿ ಸೃಷ್ಟಿಸಿದ್ರೂ ಬೂಜರ್ ಬಗ್ಗೆ
ಸುಳ್ಳು ಹೇಳೋಕಾಗಲ್ಲ

516
00:42:13,990 --> 00:42:17,661
ಕುಡ್ಸ್ ಹತ್ರ ಕೊರೊನಾಡೋದಲ್ಲಿ
ಸೀಲ್ಗಳನ್ನ ಕೊಲ್ಲೋಕೆ ಜನ ಇದ್ದಾರಾ?

517
00:42:19,204 --> 00:42:20,997
ಅದನ್ನ ನೀನು ನಂಗೆ ಹೇಳ್ತಾ ಇದೀಯಾ.

518
00:42:21,248 --> 00:42:22,582
ಯಾರಾದ್ರೂ ಹೇಳ್ತಾರೆ.

519
00:42:25,543 --> 00:42:26,544
ನಾನ್ ಹೇಳ್ಲಾ?

520
00:42:33,593 --> 00:42:35,387
"ಭ್ರಾತೃತ್ವ ಚಿರಾಯುವಾಗಲಿ."

521
00:42:35,679 --> 00:42:36,888
ಹಾಳಾದ್ ಎ.

522
00:42:36,972 --> 00:42:38,807
ನಾನು ಟೀಮ್ಸ್ ಮಿಸ್ ಮಾಡ್ಕೋತಾ ಇದೀನಿ

523
00:42:42,811 --> 00:42:46,398
ಬಹುಶಃ ಬೂಜರ್ ಒಂದು ಸಂದೇಶ ಕಳ್ಸೋಕೆ
ಅಂತನೇ ಟೀಮ್ ಗನ್ ಬಳಸಿರ್ಬಹುದು.

524
00:42:47,023 --> 00:42:48,566
ಬೈ ಹೇಳೋ ಅವನ ವಿಧಾನ.

525
00:42:52,779 --> 00:42:53,780
ಇರ್ಬಹುದು.

526
00:43:02,455 --> 00:43:06,876
ನೀನು, ಲೋರ್ , ಮತ್ತೆ ಲ್ಯೂಸ್
ವಾರಾಂತ್ಯಕ್ಕೆ ಬೋಟ್ ತಗೊಂಡ್ ಹೋಗಿ,

527
00:43:07,669 --> 00:43:11,047
ದಿಗಂತದ ಕಡೆಗೆ ಕಾನ್ ಟಿಕಿ
ಸ್ಟೈಲ್ನಲ್ಲಿ ಹೋಗ್ಬಹುದಲ್ವಾ?

528
00:43:12,007 --> 00:43:13,925
ಮಾರ್ಕೋಸ್ ರಾಂಚ್ಗೆ ಹೋಗಿ.

529
00:43:15,010 --> 00:43:16,219
ಉಸಿರಾಡಿ.

530
00:43:20,473 --> 00:43:22,225
ನಂಗೆ ತಲೆ ಕೆಡ್ತಿದೆ ಅನ್ಸುತ್ತಾ?

531
00:43:25,729 --> 00:43:26,646
ಇಲ್ಲ.

532
00:43:30,817 --> 00:43:33,945
ಆದ್ರೆ ನಿಂಗೆ ತುಂಬಾ ಗೊಂದಲ ಇದೆ
ಅಂತ ಅನ್ನಿಸ್ತಿದೆ.

533
00:43:36,489 --> 00:43:38,658
ಏನೇ ಆದ್ರೂ ನಾನು ನಿನ್ ತಮ್ಮ.

534
00:43:39,951 --> 00:43:43,496
ಏನಾದ್ರೂ ಸರಿ ಇಲ್ಲ ಅಂತ ಅನ್ಸಿದ್ರೆ,
ಏನೇ ಇದ್ರೂ...

535
00:43:44,831 --> 00:43:45,957
ಫೋನ್ ಮಾಡು.

536
00:43:48,043 --> 00:43:48,877
ನಂಗೊತ್ತು.

537
00:43:49,586 --> 00:43:52,297
ಒಳ್ಳೇದು. ಸರಿ. ಇನ್ನೊಂದು ಬಿಯರ್.

538
00:44:18,865 --> 00:44:21,493
ವೋಲ್ಟ್ ಸ್ಟ್ರೀಮ್ ಪ್ರಭಾವಶಾಲಿ ಪತ್ರಕರ್ತೆ
ಕೇಟೀ ಬರ್ನಾಕ್ ಅವರನ್ನು ನೇಮಿಸಿಕೊಂಡಿದೆ.

539
00:44:27,332 --> 00:44:29,542
ಮರೆತ ಸೈನಿಕರು:
ಅಮೇರಿಕದ ವಿಶೇಷ ಕೆಲಸಗಾರರು

540
00:44:37,717 --> 00:44:39,219
ಕೇಟೀ ಬರ್ನಾಕ್ ಅವರನ್ನು ಸಂಪರ್ಕಿಸಿ

541
00:44:49,896 --> 00:44:53,483
ನಾವು ಇನ್ಸಿರ್ಲಿಕ್ನಲ್ಲಿ ಭೇಟಿಯಾದಾಗ
ನಾನು ಒಬ್ನೇ ಇದ್ನಾ?

542
00:44:57,654 --> 00:45:00,323
ನಾನು ಒಬ್ನೇ ಇದ್ನಾ?

543
00:45:04,119 --> 00:45:06,371
ನಿಮ್ಮನ್ನಿದು ಕೇಳೋದು ಸರಿಯಲ್ಲ ಅಂತ ಗೊತ್ತು.

544
00:45:07,622 --> 00:45:10,792
ನೀವೆಲ್ಲರೂ ಮಾಡಿದ ತ್ಯಾಗದ ಬಗ್ಗೆ
ನನಗೆ ಗೌರವವಿದೆ.

545
00:45:11,751 --> 00:45:13,837
ಇಡೀ ದೇಶ ನಿಮ್ಮೊಂದಿಗೆ ಶೋಕಾಚರಣೆಯಲ್ಲಿದೆ

546
00:45:14,546 --> 00:45:15,547
ನಿಮಗೆ ಧನ್ಯವಾದಗಳು,

547
00:45:16,214 --> 00:45:19,384
ಈ ಸಮುದಾಯದ ಗೌರವಾನ್ವಿತ ಸದಸ್ಯರಿಗೆ
ಗೌರವ ಸಲ್ಲಿಸುತ್ತಿದ್ದೇವೆ.

548
00:45:20,260 --> 00:45:21,803
ಸಿಲ್ವರ್ ಸ್ಟಾರ್ ವಿಜೇತರು,

549
00:45:22,554 --> 00:45:25,056
ಪೆಟ್ಟಿ ಆಫೀಸರ್ ಫಸ್ಟ್ ಕ್ಲಾಸ್
ವಿಕ್ಟರ್ ರಾಮಿರೆಜ್

550
00:45:26,766 --> 00:45:27,976
ರೆಡಿ. ಫೇಸ್.

551
00:45:29,769 --> 00:45:31,438
ಪೋರ್ಟ್. ಆರ್ಮ್ಸ್.

552
00:45:33,606 --> 00:45:36,526
ರೆಡಿ. ಏಮ್. ಫೈರ್.

553
00:45:38,611 --> 00:45:40,363
ಬ್ಯಾಕ್. ರೈಟ್.

554
00:45:42,490 --> 00:45:45,243
ರೆಡಿ. ಏಮ್. ಫೈರ್.

555
00:45:46,327 --> 00:45:49,789
ಅಮೇರಿಕದ ನೌಕಾಪಡೆಯ ವಿಶೇಷ ಯುದ್ಧ ನೆಲೆ

556
00:45:58,965 --> 00:46:01,301
ಇರಾನ್ ಜೊತೆ ರಾಸಾಯನಿಕ ಅಸ್ತ್ರಗಳ ಕೊಂಡಿ

557
00:46:02,552 --> 00:46:04,429
ದೇಶ ನಿಮ್ಮೊಂದಿಗೆ ಶೋಕಾಚರಣೆಯಲ್ಲಿದೆ

558
00:46:04,512 --> 00:46:05,346
ಇರಾಕ್

559
00:46:05,430 --> 00:46:11,186
...ನಿಮಗೆ ಧನ್ಯವಾದಗಳು, ಈ ಸಮುದಾಯದ ಗೌರವಾನ್ವಿತ
ಸದಸ್ಯರಿಗೆ ಗೌರವ ಸಲ್ಲಿಸುತ್ತಿದ್ದೇವೆ.

560
00:46:11,811 --> 00:46:13,438
ಸಿಲ್ವರ್ ಸ್ಟಾರ್ ವಿಜೇತರು,

561
00:46:14,105 --> 00:46:16,524
ಎರಡನೇ ದರ್ಜೆ ವಿಶೇಷ ಯುದ್ದ ಪರಿಣಿತರು,

562
00:46:17,525 --> 00:46:18,735
ಡೊನಾಲ್ಡ್ ಮಿಚೆಲ್.

563
00:46:18,902 --> 00:46:21,571
ರೆಡಿ. ಏಮ್. ಫೈರ್.

564
00:46:31,664 --> 00:46:33,041
ಯಾವುದೇ ಸಂದೇಶಗಳಿಲ್ಲ

565
00:46:33,750 --> 00:46:36,836
ಇದನ್ನು ಕೇಳುವುದು ಸರಿಯಿಲ್ಲವೆಂದು ನನಗೆ ಗೊತ್ತು

566
00:46:37,420 --> 00:46:40,548
ನೀವೆಲ್ಲರೂ ಮಾಡಿದ ತ್ಯಾಗದ ಬಗ್ಗೆ
ನನಗೆ ಗೌರವವಿದೆ.

567
00:46:42,675 --> 00:46:45,720
ಸಿಲ್ವರ್ ಸ್ಟಾರ್ ವಿಜೇತರ
ಸಾವಿನ ಶೋಕಾಚರಣೆಯಲ್ಲಿದ್ದೇವೆ,

568
00:46:45,887 --> 00:46:49,516
ಪೆಟ್ಟಿ ಆಫಿಸರ್ ಅರ್ನೆಸ್ಟ್ "ಬೂಜರ್" ವಿಕರ್ಸ್.

569
00:46:57,565 --> 00:46:58,983
-ಕಮಾಂಡರ್ ರೀಸ್.
-ಮೇಡಮ್.

570
00:47:01,819 --> 00:47:05,156
ಶ್ರೀಮತಿ. ರೀಸ್.
ಎಡ್ಮಿರಲ್ ಹೆಂಡತಿ ನಿಮ್ಮ ಬಗ್ಗೆ ಹೇಳಿದ್ದಾರೆ.

571
00:47:05,949 --> 00:47:08,743
ಸ್ಥಳೀಯ ರೇಸ್ಗಳಲ್ಲಿ
ಈ ಹುಡುಗ್ರನ್ನ ಸೋಲಿಸ್ತೀರಂತೆ.

572
00:47:09,244 --> 00:47:11,079
ದುಡ್ಡು ಕೊಟ್ಟಾದ್ರೂ ನೋಡ್ತೀನಿ.

573
00:47:11,329 --> 00:47:13,039
ಥ್ಯಾಂಕ್ಸ್, ಮೇಡಮ್ ಸೆಕ್ರೆಟರಿ.

574
00:47:14,916 --> 00:47:16,543
ನಿಮ್ಮ ಗಂಡನ ಜೊತೆ ಮಾತಾಡಬಹುದಾ?

575
00:47:16,793 --> 00:47:17,794
ಖಂಡಿತ.

576
00:47:24,801 --> 00:47:26,553
ನಾನೇನೂ ದೊಡ್ಡ ರಾಜಕಾರಣಿಯಲ್ಲ.

577
00:47:26,886 --> 00:47:30,640
ಅನಿಸಿದ್ದನ್ನ ಹೇಳ್ತೇನೆ, ಮಾಡ್ತೇನೆ
ಮಾಧ್ಯಮ ಮತ್ತೆ ಜನ್ರು ಹಾಳಾಗ್ ಹೋಗ್ಲಿ.

578
00:47:30,723 --> 00:47:31,683
ಸರಿ ಮೇಡಮ್.

579
00:47:32,600 --> 00:47:37,230
ನಿಮಗೆ ಮತ್ತೆ ಈ ಕುಟುಂಬಗಳಿಗೆ ಚೇತರಿಸ್ಕೊಳ್ಳೊಕೆ
ಏನೇ ಬಂಬಲ ಬೇಕಾದ್ರೂ ಕೊಡ್ತೀನಿ ಅಂತ

580
00:47:37,313 --> 00:47:40,275
ನಾನ್ ಹೇಳಿದ್ರೆ ಅದು ಖಂಡಿತ ಆಗುತ್ತೆ
ಅಂತ ನಿಂಗೊತ್ತಲ್ವಾ.

581
00:47:41,693 --> 00:47:42,694
ಥ್ಯಾಂಕ್ಸ್, ಮೇಡಮ್.

582
00:47:46,739 --> 00:47:49,033
ನಿಮ್ಮನ್ನು ನೇವಿ ಕ್ರಾಸ್ಗೆ ಕಳಿಸುತ್ತೇನೆ.

583
00:47:49,367 --> 00:47:51,744
-ಇಲ್ಲ. ನಂಗೆ ಆ ಯೋಗ್ಯತೆ ಇಲ್ಲ.
-ಹೌದು, ಇದೆ.

584
00:47:52,453 --> 00:47:55,373
ನಿಮ್ಮನ್ನ ಆ ಸುರಂಗದಿಂದ ಹೊರ್ಗಡೆ
ತರೋದೇ ಕಷ್ಟ ಆಗಿತ್ತಂತೆ.

585
00:47:55,456 --> 00:47:57,542
ನಿಮ್ಮವ್ರಿಗೆ ಸಹಾಯ ಮಾಡ್ತಾ ಇದ್ರಂತೆ.

586
00:48:00,169 --> 00:48:03,464
ಇದು ಥಿಯೇಟರ್ಗೆ ಮತ್ತೆ ಹೋಗ್ತಾ ಇರೋ ಸೀಲ್ಗಳಿಗೆ
ಏನೇ ಆದ್ರೂ ನಾವು

587
00:48:03,548 --> 00:48:05,967
ನಮ್ಮ ಕೆಲಸಗಾರರ ಜೊತೆ ಇರ್ತೀವಿ ಅಂತ ತೋರ್ಸುತ್ತೆ

588
00:48:06,050 --> 00:48:08,386
ಮೇಡಮ್, ಸೀಲ್ಗಳು ಮತ್ತೆ ಹೋಗ್ತಿದಾರಾ?

589
00:48:10,221 --> 00:48:13,558
ಇಂಟೆಲಿಜೆನ್ಸ್ ವೈಫಲ್ಯ,
ಕಾರ್ಯಾಚರಣೆ ನಿಲ್ಸಿರ್ಬಹುದು ಅಂದ್ಕೊಂಡೆ.

590
00:48:13,641 --> 00:48:15,059
ನಿಮ್ಮ ಮೂಸಾ ಸಿಕ್ಕಿದಾನೆ.

591
00:48:15,351 --> 00:48:18,980
ಅವನ ತಲೇಲಿ ಒಂದು ತೂತು
ಜೇಬಲ್ಲಿ ಕುಡ್ಸ್ ಫೋರ್ಸ್ ದುಡ್ಡಿತ್ತು.

592
00:48:23,276 --> 00:48:27,030
ಕಹಾನಿ ಮುಂದೆ ಏನ್ ಮಾಡ್ತಾನೆ ಅಂತ ಯೋಚಿಸ್ತಿದೀನಿ.
ಆಗ ನಾನಲ್ಲಿರ್ಬೇಕು...

593
00:48:28,281 --> 00:48:29,532
ಅವ್ನನ್ನ ಹುಡುಕಿದ ಮೇಲೆ.

594
00:48:30,825 --> 00:48:33,620
ಕಹಾನಿ ಸತ್ರೆ ಮೊದ್ಲು ನಿಮಗೇ ತಿಳಿಸ್ತೀವಿ.

595
00:48:41,085 --> 00:48:42,795
20 ಡಾಲರ್ ಇದ್ಯಾ?

596
00:48:44,881 --> 00:48:45,965
ಜೇಮ್ಸ್.

597
00:48:47,133 --> 00:48:49,510
ಬೇಬಿಸಿಟ್ಟರ್ಗೆ ಕೊಡೋಕೆ ದುಡ್ಡಿದ್ಯಾ?

598
00:48:51,679 --> 00:48:52,889
ಅವ್ಳಿಗೆ ವೆನ್ಮೋ...

599
00:48:53,348 --> 00:48:55,725
-ಕೊಡ್ಬಹುದು
-ಶವಸಂಸ್ಕಾರದಲ್ಲಿ ಜನ್ರೇ ಇರ್ಲಿಲ್ಲ

600
00:48:56,100 --> 00:48:58,686
ಮೆಲೋರಿ ಹೆಂಡ್ತಿ ಮುಖಾನೂ ತೋರ್ಸಿಲ್ಲ.
ಅಂದ್ರೆ,

601
00:48:59,562 --> 00:49:01,439
ಬೂಜರ್ಗೆ ಜಾಸ್ತಿ ಸಿಗ್ಬೇಕಿತ್ತು.

602
00:49:06,194 --> 00:49:09,030
ಎಂ ಆರ್ ಐ ಮಾಡ್ಸೋಕೆ ಕ್ಲಿನಿಕ್ಗೆ
ಫೋನ್ ಮಾಡಿದ್ಯಾ?

603
00:49:10,698 --> 00:49:11,699
ಜೇಮ್ಸ್?

604
00:49:11,991 --> 00:49:13,034
ನಂಗೆ ಗುಣ ಆದಂಗಿದೆ.

605
00:49:58,579 --> 00:49:59,580
ಜೇಮ್ಸ್.

606
00:50:08,005 --> 00:50:10,091
ನಾವಿದನ್ನ ದಾಟಿ ಹೋಗ್ತೀವಿ, ಸರೀನಾ?

607
00:50:16,347 --> 00:50:17,890
ನಾನ್ ಚೆನ್ನಾಗಿದೀನಿ, ಚಿನ್ನಾ.

608
00:50:17,974 --> 00:50:19,892
ನಾನ್ ಚೆನ್ನಾಗಿದೀನಿ, ಚೆನ್ನಾಗಿದೀನಿ.

609
00:50:35,158 --> 00:50:36,367
ಏನು? ಏನು?

610
00:50:36,451 --> 00:50:40,246
ಆ ಕಂದು ಕಾರ್ ಕಾಣ್ತಾ ಇದ್ಯಾ?
ಅದು ಅಲ್ಲೇ ಇದೆ. ಸುಮ್ನೇ ಪಾರ್ಕ್ ಮಾಡಿದಾರೆ.

611
00:50:40,997 --> 00:50:43,166
ಶವಯಾತ್ರೆಯಿಂದ ನಮ್ಮನ್ನ ಫಾಲೋ ಮಾಡ್ತಿದೆ.

612
00:50:46,502 --> 00:50:47,962
-ನಿಜವಾಗ್ಲೂ?
-ಹೌದು.

613
00:50:48,880 --> 00:50:51,257
ಒಳ್ಗಡೆ ಹೋಗು. ಲ್ಯೂಸಿನ ಕರ್ಕೋ.

614
00:51:28,544 --> 00:51:30,129
-ಕೈ!
-ಅಯ್ಯೋ ದೇವ್ರೇ!

615
00:51:31,798 --> 00:51:33,341
ಸಾರಿ. ಕಮಾಂಡರ್.

616
00:51:35,426 --> 00:51:38,095
ನಿಮ್ಮನ್ನ ತಂಡದಿಂದ ದೂರ ಭೇಟಿ ಮಾಡ್ಬೇಕಿತ್ತು.

617
00:51:45,019 --> 00:51:47,021
ಟೀ ಕುಡೀತೀರಾ?

618
00:51:48,439 --> 00:51:49,982
ಏನಾದ್ರೂ ಸ್ಟ್ರಾಂಗ್ ಇದ್ಯಾ?

619
00:51:50,650 --> 00:51:52,109
ಒಂದು ಬಾಟಲ್ ತೆಗ್ದಿರ್ಬಹುದು

620
00:51:52,193 --> 00:51:54,987
-ಇದು ಬೇಗ ಮುಗಿಯುತ್ತೆ.
-ನಾನ್ ಹುಷಾರಾಗಿದೀನಿ.

621
00:51:55,154 --> 00:51:57,657
ಥ್ಯಾಂಕ್ಸ್. ಆವಾಗ ನಡ್ದಿದ್ದಕ್ಕೆ ಸಾರಿ.

622
00:51:59,534 --> 00:52:01,077
ನಾನು ಲ್ಯೂಸಿನ ಮಲ್ಗಿಸ್ತೀನಿ.

623
00:52:01,994 --> 00:52:02,912
ಸರಿ.

624
00:52:09,377 --> 00:52:11,170
ಇದಪ್ಪಾ ವಿಷ್ಯ ಅಂದ್ರೆ.

625
00:52:12,255 --> 00:52:14,966
18 ತಿಂಗ್ಳು ಬೇಸ್ ಮತ್ತೆ
ಔಟ್ಪೋಸ್ಟ್ಗಳಲ್ಲಿ ಕಳ್ದಿದೀನಿ,

626
00:52:15,049 --> 00:52:17,009
ಮುಖದ್ ಮೇಲೆ ಯಾರೂ ಗನ್ ಇಟ್ಟಿರ್ಲಿಲ್ಲ.

627
00:52:19,679 --> 00:52:22,139
ಆದ್ರೂ ನನ್ ಹತ್ರ ಮಾತಾಡಿದ್ದಕ್ಕೆ ಸಂತೋಷ ಆಯ್ತು.

628
00:52:23,182 --> 00:52:25,977
ಕಳೆದ 2 ವರ್ಷಗಳಲ್ಲಿ ನಿಮ್ಮ ತುಕಡಿ
6 ತಿಂಗಳ ನೇಮಕಾತಿ

629
00:52:26,102 --> 00:52:28,479
ಮತ್ತೆ ತರಬೇತಿ ಮಧ್ಯ ತೂಗಾಡ್ತಾ ಇದೆ.

630
00:52:28,563 --> 00:52:30,731
ಅದು 67% ಕಡಿಮೆ ಡೌನ್ಟೈಮ್--

631
00:52:30,815 --> 00:52:32,942
ಆಪ್ಟೆಂಪೋ ಅನುಪಾತದ ಬಗ್ಗೆ ಹೇಳಕ್ ಬಂದಿಲ್ಲ.

632
00:52:33,025 --> 00:52:35,403
ಇನ್ಸಿರ್ಲಿಕ್ನಲ್ಲಿ ನಾನ್ ಯಾರ್ ಜೊತೆ ಇದ್ದೆ?

633
00:52:35,486 --> 00:52:38,197
ಇಲ್ಲ. ನೀವು ಅದನ್ನ ಕೇಳಿಲ್ಲ, ಅಲ್ವಾ?

634
00:52:38,406 --> 00:52:39,740
ಅಂದ್ರೆ, ಹಾಗೇ ಅಲ್ಲ.

635
00:52:41,284 --> 00:52:44,871
ಅವ್ರ್ ಸಾವಿನ ಬಗ್ಗೆ ವಿಚಾರ್ಸಿದೀನಿ.
ಪಿಓ-೧ ವಿಕರ್ಸ್ "ಬೂಜರ್", ಅಲ್ವಾ?

636
00:52:44,954 --> 00:52:47,540
ನಾನು ಪೋಲೀಸ್ ವರದಿ ಕಾಪಿ ಹುಡುಕಿದೀನಿ.

637
00:52:48,207 --> 00:52:50,001
ಇದು ಮರಣ ಪ್ರಮಾಣಪತ್ರ.

638
00:52:52,420 --> 00:52:53,629
ದಿನಾಂಕ ನೋಡಿ.

639
00:53:00,636 --> 00:53:04,765
ಆಗ್ಲೇ ಸತ್ತಿದ್ರು, ಕೊರೊನಾಡೋದಲ್ಲಿ
ಇನ್ಸಿರ್ಲಿಕ್ನಲ್ಲಿ ನಿಮ್ಮನ್ನ ಭೇಟಿಯಾದಾಗ್ಲೇ

640
00:53:05,099 --> 00:53:09,145
ನಿಮ್ಮ ತುಕಡಿಯ ನಿಯೋಜನೆ ಬಗ್ಗೆ
ಯಾಕೆ ಹೇಳ್ತಾ ಇದ್ದೆ ಅಂದ್ರೆ ತುಂಬಾ ಕೆಲಸ ಮತ್ತೆ

641
00:53:09,228 --> 00:53:12,607
ದಣಿವಿನ ಕಾರಣ ಆಗಿದ್ರೆ
ಅದು ನಿಮ್ಮ ತಪ್ಪಲ್ಲ ಅಂತ ನಂಗನ್ಸುತ್ತೆ

642
00:53:12,690 --> 00:53:14,734
ಅದಕ್ಕೆ ಹೊಣೆ ಯಾರಂತ ಕಂಡು ಹಿಡೀಬೇಕು--

643
00:53:14,817 --> 00:53:15,943
ನೀವ್ ಹೋಗಿ.

644
00:53:16,569 --> 00:53:19,614
ನನ್ನನ್ನ ಶತ್ರುವಾಗಿ ನೋಡ್ತೀರಾ ಅಂಥ ಗೊತ್ತು,
ನಂಗೆ ಸತ್ಯ ಬೇಕು.

645
00:53:19,697 --> 00:53:23,075
ಈ ಹಾಳಾದ್ ವ್ಯವಸ್ಥೆ ನಿಮ್ಮನ್ನ,
ನಿಮ್ಮವ್ರನ್ನ ಕಷ್ಟಕ್ ದೂಡಿದ್ರೆ--

646
00:53:23,159 --> 00:53:27,455
ನಿಮ್ಮ ಸಮಯಕ್ಕೆ ಥ್ಯಾಂಕ್ಸ್, ಬರನೆಕ್ ಅವ್ರೇ.
ನೀವು ಬಂದಿದ್ದು ಸಂತೋಷ ಆಯ್ತು.

647
00:53:32,126 --> 00:53:35,296
ಸರಿ. ಮುಂದಿನ ವಾರ ನಾನು ಈ ಊರಲ್ಲೇ ಇರ್ತೀನಿ.

648
00:53:35,671 --> 00:53:37,882
ನೀವೇನಾದ್ರೂ ಮನಸ್ಸು ಬದಲಾಯ್ಸಿದ್ರೆ...

649
00:53:42,386 --> 00:53:43,512
ಥ್ಯಾಂಕ್ಸ್.

650
00:54:03,532 --> 00:54:05,034
ನಾವು ಕಹಾನಿನ ಹುಡುಕ್ತೀವಿ.

651
00:54:07,495 --> 00:54:09,455
ಅವ್ನು ಸಿಕ್ಕಾಗ, ಅವ್ನ ತಲೆ ಒಡೀತೀನಿ.

652
00:54:09,789 --> 00:54:11,415
ಭ್ರಾತೃತ್ವ ಚಿರಾಯುವಾಗಲಿ.

653
00:54:39,610 --> 00:54:40,695
ಎಲ್ ಸಿ ಡಿ ಆರ್ ಜೇಮ್ಸ್ ರೀಸ್

654
00:54:58,629 --> 00:55:01,215
ಆ ಕಾರ್ಯಾಚರಣೆಯಲ್ಲಿ ನಂಗೇನೋ ಆಗಿರ್ಬಹುದು.

655
00:55:06,262 --> 00:55:07,888
ಆ ಕ್ಲಿನಿಕ್ಗೆ ಫೋನ್ ಮಾಡ್ಬೇಕು.

656
00:55:25,448 --> 00:55:27,867
-ಎನ್ಗ್ರಾಂ ಅಂದ್ರೇನು ಅಂತ ಗೊತ್ತಾ?
-ಇಲ್ಲ.

657
00:55:27,950 --> 00:55:30,244
ಅದು ಮಿದುಳಿನ ಸಂಶೋಧನೆಯ "ಚರಮ ಸೀಮೆ".

658
00:55:30,327 --> 00:55:33,164
ನೆನಪುಗಳನ್ನು ರಕ್ಷಿಸಿಡಲು ಒಂದು ದೈಹಿಕ ಮಾರ್ಗ.

659
00:55:33,372 --> 00:55:36,042
ಇದು ಒಂದು ಸುಂದರ ನೆನಪಿನ ದೃಶ್ಯಾವಳಿ,

660
00:55:36,250 --> 00:55:37,918
ಪ್ರತೀ ನೆನಪೂ ಪ್ರತ್ಯೇಕ ನಕ್ಷೆ.

661
00:55:38,294 --> 00:55:41,047
ಆದ್ರೆ, ನಮ್ಮ ನೆನಪಿನ ಮಾರ್ಗಗಳಿಗೆ ಧಕ್ಕೆಯಾದಾಗ,

662
00:55:41,338 --> 00:55:43,215
ಬೆಸೆಯುವಿಕೆಯಂಥದ್ದು ಉಂಟಾಗುತ್ತದೆ.

663
00:55:43,299 --> 00:55:45,384
ಹಳೆ ನೆನಪುಗಳು ಹೊಸದರ ಜತೆ ಬೆಸೆಯುತ್ತವೆ.

664
00:55:46,677 --> 00:55:50,056
ಒಂದು ವರ್ಷದ ಹಿಂದೆ ನಡೆದದ್ದರ ನೆನಪು
ನಿನ್ನೆ ನಡೆದಂತೆ ಕಾಣುತ್ತದೆ.

665
00:55:50,139 --> 00:55:54,101
-ನಿಮ್ಮ ಮಿದುಳಿಗೆ ವ್ಯತ್ಯಾಸ ತಿಳಿಯುವುದಿಲ್ಲ.
-ಅದು ಆಘಾತದಿಂದ ಆಗಬಹುದಾ?

666
00:55:54,310 --> 00:55:57,646
ಆಗ್ಬಹುದು. ನಿಮ್ಮ ಅನುಮತಿಯಲ್ಲಿ,
ನಾವು ನಿಕಟವಾಗಿ ನೋಡುತ್ತೇವೆ.

667
00:56:01,734 --> 00:56:04,195
ಸ್ಕ್ಯಾನ್ ಮಿದುಳಿನ ವಿವರವಾದ ನಕ್ಷೆ ಕೊಡುತ್ತದೆ.

668
00:56:04,278 --> 00:56:07,573
ಇದಕ್ಕೆ 1 ತಾಸಿಗಿಂತ ಕಡಿಮೆ ಸಮಯ ಸಾಕು
ಇದು ಮುಗಿದ ಮೇಲೆ ಬರುತ್ತೇವೆ

669
00:56:25,925 --> 00:56:27,635
ಹೆಚ್ಚೂ ಕಡಿಮೆ ರೆಡಿ, ಜೇಮ್ಸ್.

670
00:56:28,135 --> 00:56:29,136
ಕಾಪಿ.

671
00:56:51,826 --> 00:56:53,953
ಚೆನ್ನಾಗಿ ಮಾಡ್ತಾ ಇದೀರಾ. ಆರಾಮಾಗಿರಿ.

672
00:56:54,036 --> 00:56:56,914
ಸ್ಕ್ಯಾನ್ನ ಎಲ್ಲಕ್ಕಿಂತ ಧೀರ್ಘವಾದ
ಹಂತ ಶುರುವಾಗುತ್ತಿದೆ.

673
00:57:16,308 --> 00:57:17,977
ರಮಿರೆಜ್ ಮಿಚೆಲ್ಗೆ ಸಹಾಯ ಬೇಕು

674
00:57:18,060 --> 00:57:20,062
-ಸದ್ದು ಜೋರಿದೆ.
-ಡಾನಿ. ಹತ್ರ ಹೋಗ್ಬೇಡ.

675
00:57:20,146 --> 00:57:22,606
-ತುಂಬಾ ಜೋರಿದೆ, ರಾಮ್
-ಇಲ್ಲ ನಾವು ಇದನ್ನ...

676
00:57:22,898 --> 00:57:23,899
ಡಾನಿ!

677
00:57:24,191 --> 00:57:25,025
-ಬೇಡ.
-ಹೇಯ್.

678
00:57:25,109 --> 00:57:26,110
ಡಾನಿ!

679
00:57:26,902 --> 00:57:29,155
ಬೇಡ!

680
00:57:34,326 --> 00:57:35,703
ಡಾನಿ, ಬೇಡ!

681
00:57:54,763 --> 00:57:56,056
ಎಲ್ಲಾ ಸರೀಗಿದ್ಯಾ?

682
00:58:45,981 --> 00:58:47,942
ಬೂಜರ್ನನ್ನ ಹೀಗೇ ಕೊಂದ್ಯಾ?

683
00:58:49,485 --> 00:58:50,819
ಹೇಡಿಯ ಹಾಗೆ.

684
01:00:42,639 --> 01:00:44,808
ಎಲ್ ಸಿ ಡಿ ಆರ್ ಜೇಮ್ಸ್ ರೀಸ್

685
01:00:55,778 --> 01:00:59,365
ಇದು ಲೋರೆನ್ ರೀಸ್.
ದಯವಿಟ್ಟು ಬೀಪ್ ನಂತರ ನಿಮ್ಮ ಸಂದೇಶವನ್ನು ಹೇಳಿ.

686
01:01:00,699 --> 01:01:02,826
ಲೋರ್, ನಾನು... ನಾನು. ಇದು ನಿಜ.

687
01:01:02,910 --> 01:01:05,245
ಕೊಂದ್ಬಿಡ್ತಿದ್ರು.
ಅವ್ರ್ ಹತ್ರ ನನ್ ಗನ್ ಇದೆ.

688
01:01:05,329 --> 01:01:08,582
ಈಗ್ಲೇ ಲ್ಯೂಸಿನ ಕರ್ಕೊಂಡ್ ಹೊರಗೆ ಹೋಗು
ಸೇಫ್ ಆಗಿದ್ದಾಗ ಕಾಲ್ ಮಾಡು.

689
01:01:14,713 --> 01:01:15,964
ಪಕ್ಕಕ್ ಸರಿ.

690
01:01:17,299 --> 01:01:20,636
-9-1-1, ಏನ್ ಸಮಸ್ಯೆ ಹೇಳಿ?
-ನಾನು ಕಮಾಂಡರ್ ಜೇಮ್ಸ್ ರೀಸ್.

691
01:01:20,719 --> 01:01:23,806
423 ಕೇಮ್ಯಾನ್ ಸ್ಟ್ರೀಟ್ಗೆ
ಪಾಟ್ರೋಲ್ ಯೂನಿಟ್ ಕಳ್ಸಿ.

692
01:01:24,264 --> 01:01:26,725
ಮತ್ತೆ ಹೇಳ್ತಿದೀನಿ, 423 ಕೇಮ್ಯಾನ್ ಸ್ಟ್ರೀಟ್.

693
01:02:40,591 --> 01:02:42,092
ಇಲ್ಲ. ಇಲ್ಲ.

694
01:03:16,668 --> 01:03:17,711
ಸಾರಿ.

695
01:04:50,679 --> 01:04:52,681
ಉಪ ಶೀರ್ಷಿಕೆ ಅನುವಾದ: ರಾಜು

696
01:04:52,764 --> 01:04:54,766
ಕ್ರಿಯಾತ್ಮಕ ಮೇಲ್ವಿಚಾರಕರು

