1
00:00:00,000 --> 00:00:20,000
<font color="#00ff00">{\an8}Downloaded from - MoviesMod.fit</font>

2
00:00:06,146 --> 00:00:08,396
ಈ ಹಿಂದೆ

3
00:00:08,896 --> 00:00:11,230
ಹಾರ್ಫೂಟ್ಸ್ ಎಲ್ಲಿದ್ದಾರೆ?

4
00:00:13,521 --> 00:00:15,271
ನನ್ನ ಗೆಳೆಯರನ್ನು ಹುಡುಕುತ್ತಿದ್ದೆ.

5
00:00:15,355 --> 00:00:17,438
ಸರಿ, ನೀನು ಹುಡುಕುತ್ತಿರುವುದೇ ಬೇರೆ,

6
00:00:17,480 --> 00:00:19,730
ನಿನಗೆ ಈಗ ಸಿಗುವುದೇ ಬೇರೆ, ಅಲ್ವಾ?

7
00:00:21,771 --> 00:00:23,396
ಈ... ಜಾದು.

8
00:00:23,480 --> 00:00:27,855
ದಂಡವನ್ನು ಬಳಸುವುದು ಹೇಗೆ
ಎಂದು ನನಗೆ ಹೇಳಿಕೊಡ್ತೀರಾ?

9
00:00:27,938 --> 00:00:32,146
ನೀನದಕ್ಕೆ ಅರ್ಹನಾದರೆ,
ಅದು ತಾನಾಗಿಯೇ ನಿನಗೆ ಒಲಿಯುತ್ತದೆ.

10
00:00:32,855 --> 00:00:34,605
ಹಳೇ ಜ್ಹೋಪ್ಡಿಯಲ್ಲಿ ಪ್ರಾರ್ಥನೆಗಳು

11
00:00:34,646 --> 00:00:37,271
ನಿಮಗಾಗಿ ರಾತ್ರಿ-ಹಗಲು ಏರುತ್ತವೆ
ಅಂತ ವಲಂಡೀಲ್ ಹೇಳಿದ.

12
00:00:37,355 --> 00:00:40,771
ನಿಷ್ಠಾವಂತರ ಮಾರ್ಗದೆಡೆಗೆ ನನ್ನ ಹೃದಯವನ್ನು
ಮತ್ತೆ ತೆರೆಸಿದ್ದು ನೀವೇ.

13
00:00:40,855 --> 00:00:42,771
ಆದರೆ ನಾವು ಒಟ್ಟಿಗೆ ಹೋರಾಡೋಣ.

14
00:00:42,855 --> 00:00:45,438
ಎಲ್ಲಾ ಯುದ್ಧಗಳನ್ನೂ ಹೋರಾಡಿಯೇ ಗೆಲ್ಲಬೇಕಿಲ್ಲ.

15
00:00:48,688 --> 00:00:52,688
ದಂಗೆಯನ್ನು ಆರಂಭಿಸಿದ್ದು ಇವನೇ
ಅಂತ ಸೆರೆಮನೆಯಧಿಕಾರಿಗೆ ತಿಳಿಸಿ.

16
00:00:53,230 --> 00:00:56,063
ಶಿಲಾ ಗಾಯಕರು ಪರ್ವತವನ್ನು
ಕೇಳಿಸಿಕೊಂಡರೆಂದು ಹೇಳಿದರು.

17
00:00:56,146 --> 00:00:58,771
ಈ ಉಂಗುರದಿಂದ, ನನಗದು ಕಾಣುತ್ತದೆ.

18
00:00:58,855 --> 00:01:03,563
ಈ ಸಾಗರದೊಳಗಿನ ಸಂಪತ್ತಿನಿಂದ
ನಾವು ಒಂದು ಕವಡೆಯನ್ನೂ ಪಡೆದಿಲ್ಲ.

19
00:01:04,230 --> 00:01:05,563
ಅವನು ಬದಲಾಗಿದ್ದಾನೆ.

20
00:01:05,605 --> 00:01:08,605
ದುರಾಸೆ ಅವನ ಸ್ವಭಾವವಲ್ಲ. ಎಂದಿಗೂ ಆಗಿಲ್ಲ.

21
00:01:08,688 --> 00:01:12,396
ಇದು ಸಾಧ್ಯವೇ, ಅವನು ತೊಟ್ಟಿರುವ ಉಂಗುರ--

22
00:01:12,480 --> 00:01:16,188
ಇಲ್ಲ. ನಿಮ್ಮ ಉಂಗುರಗಳಲ್ಲಿ
ಯಾವುದೇ ತಪ್ಪು ಇರಬಾರದು.

23
00:01:16,271 --> 00:01:18,855
ಹಾಗಾದರೆ ಉಂಗುರ ತಯಾರಿಸಿದವನದ್ದೇ ತಪ್ಪು.

24
00:01:18,938 --> 00:01:22,730
ಅನ್ನಟಾರ್ ಬಗ್ಗೆ ನಿಜವಾಗಿಯೂ
ನಿಮಗೆ ಎಷ್ಟು ತಿಳಿದಿದೆ?

25
00:01:23,771 --> 00:01:26,605
ನೀನು ಡ್ವಾರ್ಫ್ ಉಂಗುರಗಳನ್ನು ಬದಲಿಸಿದೆಯಾ?

26
00:01:27,646 --> 00:01:28,646
ಇಲ್ಲ.

27
00:01:28,730 --> 00:01:29,771
ನಾವು ಬದಲಿಸಿದೆವು.

28
00:01:35,021 --> 00:01:39,188
ನಮ್ಮ ತಪ್ಪುಗಳಿಗೆ ಪ್ರಾಯಶ್ಚಿತ್ತ ಮಾಡಲು
ಉಂಗುರಗಳನ್ನು ಒಟ್ಟಿಗೆ ಪೂರ್ಣಗೊಳಿಸುವುದು.

29
00:01:39,271 --> 00:01:42,605
ಆ ಒಂಬತ್ತು ಆ ಏಳನ್ನು ಮುಕ್ತಗೊಳಿಸಬೇಕು.

30
00:01:42,688 --> 00:01:44,730
ನಮ್ಮೆಲ್ಲರನ್ನೂ ಅವು ಮುಕ್ತಗೊಳಿಸಬೇಕು.

31
00:01:45,271 --> 00:01:46,646
ಒರ್ಕ್ಸ್ ಮೊರ್ಡೊರಿನಲ್ಲಿಲ್ಲ.

32
00:01:46,730 --> 00:01:48,980
ಅವರ ದಂಡೊಂದು ಎರೆಗಿಯೊನ್ ಕಡೆ ಹೊರಟಿದೆ.

33
00:01:49,480 --> 00:01:53,480
ಗಲಾದ್ರಿಯಲ್ ಸರಿಯಾಗಿ ಹೇಳಿದಳು. ನೀವು ಈಗಲೇ
ಎರೆಗಿಯೊನ್‌ಗೆ ಸೇನೆ ಕಳುಹಿಸಬೇಕು!

34
00:01:58,146 --> 00:01:59,813
ನಾನು ನಿನ್ನನ್ನು ಇಲ್ಲಿಗೆ

35
00:01:59,896 --> 00:02:01,271
ಖೈದಿಯಾಗಿ ಕರೆಸಿಲ್ಲ...

36
00:02:01,355 --> 00:02:02,771
ಆದರೆ ಸಂಭಾವ್ಯ ಮಿತ್ರನಾಗಿ ಕರೆಸಿದೆ.

37
00:02:02,855 --> 00:02:04,771
ಯಾಕೆಂದರೆ ನಮ್ಮ ಶತ್ರು ಒಬ್ಬನೇ.

38
00:03:21,105 --> 00:03:27,105
ದಿ ಲಾರ್ಡ್ ಆಫ್ ದಿ ರಿಂಗ್ಸ್ :
ದಿ ರಿಂಗ್ಸ್ ಆಫ್ ಪವರ್

39
00:04:08,105 --> 00:04:09,105
ನೀನು ಬಾಯಿ ಮುಚ್ಚು.

40
00:04:09,188 --> 00:04:10,646
ನಮ್ಮನ್ನು ತೊರೆದವರು ಅಂತಾರೆ.

41
00:04:14,105 --> 00:04:15,771
ಅವರು ನಮ್ಮನ್ನು ಏನಂತಾದರೂ ಕರೆಯಲಿ.

42
00:04:15,855 --> 00:04:19,063
ಆತ್ಮವನ್ನು ಹುಡುಕಲು ಆಡಾರ್ ಗೆ ನೆರವಾಗಿ
ಸಾಯುವ ಬದಲು ಯಾವುದಾದರೂ ಒಳ್ಳೆಯದೇ.

43
00:05:16,480 --> 00:05:20,688
ಓ, ಮನುಷ್ಯರ ಉಂಗುರಗಳೇ,
ಯಾಕಿನ್ನೂ ನನ್ನನ್ನು ವಿರೋಧಿಸುತ್ತೀರಿ?

44
00:05:22,271 --> 00:05:25,563
ನಿಮಗೆ ಜೀವ ಇಲ್ಲ, ನೀವು ಉಸಿರಾಡಲ್ಲ,

45
00:05:25,646 --> 00:05:28,646
ನಿಮಗೆ ಮನಸ್ಸು ಅಥವಾ ಇಚ್ಛೆ ಇಲ್ಲವೇ?

46
00:05:28,730 --> 00:05:32,063
ನಿಮ್ಮೊಳಗೆ ಅದೆಂತಹ ಅಹಂಕಾರ ಅಡಗಿದೆ,

47
00:05:33,730 --> 00:05:35,480
ನನ್ನ ಆಜ್ಞೆಯನ್ನೇ ಮೀರುತ್ತೀರಾ?

48
00:05:39,313 --> 00:05:40,313
ಮತ್ತೆ.

49
00:05:41,230 --> 00:05:42,563
ಹೆಚ್ಚು ಬೆಳ್ಳಿ.

50
00:05:43,480 --> 00:05:44,563
ಹೆಚ್ಚು ಮೀಥ್ರಿಲ್.

51
00:05:45,105 --> 00:05:46,688
ಹೆಚ್ಚಿನ ಮೀಥ್ರಿಲ್ ಇಲ್ಲ.

52
00:05:46,771 --> 00:05:49,230
ಡ್ವಾರ್ವ್ಸ್ ಪೂರೈಕೆ ಮಾಡುವಲ್ಲಿ ತಡ ಮಾಡಿದ್ದಾರೆ.

53
00:05:50,771 --> 00:05:52,105
ಹಾಗಾಗಿ ಅವರನ್ನು ಹುಡುಕಿ.

54
00:05:52,188 --> 00:05:55,563
ಪ್ರಯತ್ನಿಸಿದೆವು, ನನ್ನೊಡೆಯ.
ನಮ್ಮ ಯಾವ ಸಂದೇಶಗಳಿಗೂ ಉತ್ತರ ಬಂದಿಲ್ಲ.

55
00:05:55,646 --> 00:05:57,063
ಎಲ್ಲವನ್ನೂ ನಾನೇ ಮಾಡಬೇಕೇ?

56
00:05:57,146 --> 00:05:59,146
ನಾವು ಆದಷ್ಟೂ ಶ್ರಮವಹಿಸುತ್ತಿದ್ದೇವೆ.

57
00:06:02,688 --> 00:06:05,063
ನಮ್ಮಲ್ಲಿ ಕೆಲವರು ಗಮನಿಸಿದ್ದೇವೆ...

58
00:06:05,938 --> 00:06:08,771
ಇತ್ತೀಚೆಗೆ ನೀವು
ತುಂಬಾ ಕೋಪಗೊಳ್ಳುತ್ತೀರಿ, ಒಡೆಯ.

59
00:06:26,521 --> 00:06:28,355
ನಿನ್ನ ಹೆಸರೇನಂದೆ, ಅಕ್ಕಸಾಲಿಗಳೇ?

60
00:06:30,313 --> 00:06:32,813
ಅಂದರೆ, ನಿಮಗೆ ನೆನಪಿಲ್ಲವೇ?

61
00:06:32,896 --> 00:06:34,188
ಖಂಡಿತ ನನಗೆ ನೆನಪಿದೆ.

62
00:06:35,730 --> 00:06:38,105
ಅದು... ಒಂದು ನಿಮಿಷ ಇರು.

63
00:06:38,188 --> 00:06:40,438
-ಕೆಲಬ್ರಿಮ್ಬೋರ್ ದೊರೆ.
-ಒಂದು ನಿಮಿಷ ಇರಿ, ಅಂದೆ!

64
00:06:42,730 --> 00:06:44,480
ಎಲ್ಲರೂ ವಿರಾಮ ತಗೊಳ್ಳಿ.

65
00:06:54,271 --> 00:06:57,396
ಮೀರ್ಡಾನಿಯ. ಅವಳ ಹೆಸರು ಮೀರ್ಡಾನಿಯ.

66
00:06:59,605 --> 00:07:01,855
ಎಲ್ಲವನ್ನೂ ನೆನಪಿಟ್ಟುಕೊಳ್ಳುವುದು ಸಾಧ್ಯವಿಲ್ಲ.

67
00:07:04,688 --> 00:07:09,063
ಇಲ್ಲ, ಅಂದರೆ, ಸಣ್ಣ ವಿಚಾರಗಳನ್ನು ಕೂಡ.

68
00:07:10,021 --> 00:07:15,313
ಈ ಮೊದಲು, ನನ್ನ ಸುಕ್ಕು ಬಿಡಿಸುವ ಸುತ್ತಿಗೆಯನ್ನು
ಇಲ್ಲೇ ಇಟ್ಟಿರುತ್ತಿದ್ದೆ, ಮತ್ತು...

69
00:07:16,521 --> 00:07:17,730
ಅಂದರೆ ಆ ಸುತ್ತಿಗೆಯೇ?

70
00:07:28,438 --> 00:07:29,438
ಹೌದು.

71
00:07:40,563 --> 00:07:42,646
ನನ್ನ ತಲೆಗೇನೋ ಆಗಿದೆ.

72
00:07:43,563 --> 00:07:45,646
ಅದರ ಆಳದೊಳಗೆ ಎಷ್ಟು ಹೊಕ್ಕಿದ್ದೀರಿ ಎಂದರೆ,

73
00:07:46,271 --> 00:07:48,688
ಅದರಿಂದ ಹೊರಬರಲು ಸಾಧ್ಯವಾಗುತ್ತಲೇ ಇಲ್ಲ.

74
00:07:50,563 --> 00:07:52,938
ತುಂಬಾ ಆಳಕ್ಕೆ.

75
00:07:53,896 --> 00:07:56,521
ನನಗನಿಸುತ್ತೆ, ಕೆಲವೊಮ್ಮೆ, ಅಲ್ಲಿಯೇ ಕೆಲ ಹೊತ್ತು

76
00:07:57,771 --> 00:07:59,646
ಇರಬೇಕೆಂದು ನಿಮಗನಿಸುತ್ತಿರಬೇಕು,

77
00:08:00,521 --> 00:08:01,938
ಸ್ವಲ್ಪ ಸ್ಪಷ್ಟತೆ ಪಡೆಯಲು.

78
00:08:06,605 --> 00:08:07,813
ನಾನು ಚೆನ್ನಾಗಿದ್ದೇನೆ.

79
00:08:10,480 --> 00:08:12,521
ನಾನು ದಣಿದಿದ್ದೇನೆ ಅಷ್ಟೇ.

80
00:08:13,021 --> 00:08:15,855
ಹಾಗಾದರೆ ನಾನೀಗ ಹೇಳುವ ಸುದ್ದಿ
ನಿಮಗೆ ಇಷ್ಟವಾಗದಿರಬಹುದು.

81
00:08:17,855 --> 00:08:19,605
ನಿಮ್ಮ ಜನರಿಗೆ ವಿಚಾರಣೆ ಬೇಕಂತೆ.

82
00:08:20,188 --> 00:08:21,438
ಇಲ್ಲ, ಇಲ್ಲ.

83
00:08:22,896 --> 00:08:26,230
ಎರೆಗಿಯೊನ್ ದೊರೆ ನೀವೇ. ನಿಮಗೆ ಜವಾಬ್ದಾರಿಗಳಿವೆ.

84
00:08:26,313 --> 00:08:30,105
ಹೌದು, ಮತ್ತು ನನ್ನ ದೊಡ್ಡ ಜವಾಬ್ದಾರಿ
ಉಂಗುರಗಳು ಆಗಿವೆ.

85
00:08:30,855 --> 00:08:35,230
ಆ ಒಂಬತ್ತು ಪೂರ್ಣಗೊಳ್ಳುವವರೆಗೆ,
ಬೇರೆ ಯಾವುದೂ ಮುಖ್ಯವಲ್ಲ.

86
00:08:37,855 --> 00:08:38,855
ಸರಿ ಬಿಡಿ.

87
00:08:40,063 --> 00:08:41,188
ನಿಮ್ಮ ಇಚ್ಛೆ.

88
00:08:42,688 --> 00:08:44,271
ಇನ್ನೂ ಏನೋ ಇದೆ.

89
00:08:45,813 --> 00:08:48,938
ಡ್ವಾರ್ವ್ಸ್ ನಮ್ಮ ಮೀಥ್ರಿಲ್ ತರಲು
ತಡ ಮಾಡಿದ್ದಾರೆ.

90
00:08:51,646 --> 00:08:53,688
ಅದೇನಂತ ನೋಡುವೆಯಾ?

91
00:08:53,771 --> 00:08:55,188
ಈಗಲೇ ನೋಡುವೆ.

92
00:09:16,230 --> 00:09:19,146
ಮಹಾ ಎಲ್ಫ್ ಕುಶಲ ಕರ್ಮಿ
ಕೆಲಸದಲ್ಲಿ ನಿರತರಾಗಿದ್ದಾರೆ.

93
00:09:20,396 --> 00:09:24,313
ಅವರ ಪರವಾಗಿ ಆಡಳಿತದ ಎಲ್ಲಾ ಜವಾಬ್ದಾರಿಗಳನ್ನು
ನಾನೇ ನಿರ್ವಹಿಸಬೇಕೆಂದು ಕೋರಿದ್ದಾರೆ.

94
00:09:25,771 --> 00:09:27,355
ಈಗ, ಸಮಸ್ಯೆ ಏನು ಹಾಗಾದರೆ?

95
00:09:31,438 --> 00:09:32,480
ಅವರಿಗೆ ತೋರಿಸು.

96
00:09:33,896 --> 00:09:34,896
ಏನು ತೋರಿಸುವುದು?

97
00:09:35,771 --> 00:09:39,105
ಈ ಕಾವಲುಮನೆಯಲ್ಲಿ ನಗರಕ್ಕೆ ಪ್ರಯಾಣಿಸುವ
ಕುಶಲಕರ್ಮಿಗಳು ಮತ್ತು ವ್ಯಾಪಾರಿಗಳು

98
00:09:39,188 --> 00:09:40,438
ತುಂಬಿ ತುಳುಕುತ್ತಿರುತ್ತಾರೆ.

99
00:09:40,521 --> 00:09:42,521
ನಿನ್ನೆ ಸಂಜೆ ಇದು ಸಂಶಯಾಸ್ಪದವಾಗಿ ನಿಂತಿತು.

100
00:09:42,605 --> 00:09:44,230
ರಸ್ತೆಯಲ್ಲಿ ತಡೆ ಆಯಿತಾ ಅಂತ ನೋಡೋಕೆ

101
00:09:44,313 --> 00:09:46,688
ನದಿಯ ಮೂಲಕ ಹುಡುಕಾಟದ ತಂಡವನ್ನು ಕಳಿಸಿದೆವು.

102
00:09:46,771 --> 00:09:48,771
ಆದರೆ ಒಬ್ಬ ಸೈನಿಕ ಮಾತ್ರ ಹಿಂತಿರುಗಿದ.

103
00:09:48,855 --> 00:09:49,855
ಅವನು ಎಲ್ಲಿದ್ದಾನೆ?

104
00:09:53,771 --> 00:09:58,188
ಈ ಬೆಳಿಗ್ಗೆ ನೀರಿನಲ್ಲಿ ಕೊಚ್ಚಿಕೊಂಡು ಬಂದ.
ಅವನ ಬಳಿ ಒಂದು ಸಂದೇಶವಿತ್ತು.

105
00:10:05,855 --> 00:10:07,105
ಅವನನ್ನು ಹೂಳಿರಿ.

106
00:10:10,521 --> 00:10:11,813
ಇದನ್ನು ಯಾರಿಗೂ ತೋರಿಸಬೇಡಿ.

107
00:10:19,063 --> 00:10:21,021
ದೊರೆ ಕೆಲಬ್ರಿಮ್ಬೋರ್‌ಗೆ ತಿಳಿಸಲೇ?

108
00:10:21,105 --> 00:10:22,188
ಬೇಡ.

109
00:10:23,021 --> 00:10:26,438
ಅವರನ್ನು ಯಾರೂ ವಿಚಲಿತಗೊಳಿಸಬಾರದೆಂದು
ನನಗೆ ಖುದ್ದಾಗಿ ಹೇಳಿದ್ದಾರೆ.

110
00:10:27,938 --> 00:10:29,230
ಅಕ್ಕಸಾಲಿಗರಾದರೂ ಅಷ್ಟೇ.

111
00:10:30,230 --> 00:10:31,980
ನಮ್ಮನ್ನು ಕರ್ತವ್ಯದಿಂದ ಬಿಡಿಸಿದ್ದಾರಾ?

112
00:10:33,855 --> 00:10:35,063
ಹೌದು ಎಂದು ಹೇಳುವೆ.

113
00:10:37,021 --> 00:10:39,688
ನನ್ನ ಹೆಸರನ್ನು ಮರೆತ ವಿಚಾರವಾಗಿಯೇ?

114
00:10:39,771 --> 00:10:41,355
ಅವರೊಂದಿಗೆ ಒರಟಾಗಿ ವರ್ತಿಸಿದೆ...

115
00:10:41,855 --> 00:10:44,355
ಅವರು ಎಂದಿನಂತಿಲ್ಲ, ಮೀರ್ಡಾನಿಯ.

116
00:10:46,646 --> 00:10:49,313
ಸದ್ಯಕ್ಕೆ, ನಾವು ಅವರನ್ನು
ಒಂಟಿಯಾಗಿ ಬಿಡುವುದೇ ಒಳಿತು.

117
00:10:50,063 --> 00:10:53,021
ಅವರಿಗೆ ಸಮಯ ಕೊಡೋಣ. ಪ್ರಾರ್ಥಿಸೋಣ.

118
00:10:54,271 --> 00:10:57,021
ಅದು ಅವರನ್ನು ಮುಗಿಸುವುದರೊಳಗೆ
ಅವರೇ ಈ ಕೆಲಸವನ್ನು ಮುಗಿಸಲಿ ಅಂತ.

119
00:11:09,813 --> 00:11:11,521
ನಿನ್ನನ್ನು ನಂಬಬಹುದೇ...

120
00:11:12,355 --> 00:11:15,188
ಬೇರೆಯವರು ಸಹ ಅವರ ಕೋರಿಕೆಗಳನ್ನು
ಗೌರವಿಸುವರು ಎಂದು?

121
00:11:16,730 --> 00:11:18,563
ಖಂಡಿತ, ಒಡೆಯ.

122
00:11:27,105 --> 00:11:30,313
ಒಡೆಯ, ಆ ಕೆತ್ತನೆ. ದೇಹದ ಮೇಲೆ.

123
00:11:31,188 --> 00:11:32,646
ಏನಂತ ಬರೆದಿತ್ತು?

124
00:11:39,230 --> 00:11:40,563
"ಅವನು ಎಲ್ಲಿದ್ದಾನೆ?"

125
00:12:27,396 --> 00:12:30,896
ನಿಮ್ಮ ಸೆರೆಯಲ್ಲಿ ನಾನು ಕಳೆದ ಅಲ್ಪಾವಧಿಯಲ್ಲಿ,

126
00:12:32,271 --> 00:12:34,688
ಸೌರೊನ್‌ನ ಹುಡುಕಲೇಬೇಕೆಂದು ಪಣ ತೊಟ್ಟಿದ್ದೀಯ.

127
00:12:35,480 --> 00:12:39,021
ಹೇಗೆಂದರೆ, ಅದರೊಳಗಡೆಯೇ ಮುಳುಗಿಹೋದಂತೆ,

128
00:12:40,521 --> 00:12:42,063
ಅದು ಯಾವಾಗಲೂ ಆಗುವಂತೆ,

129
00:12:42,146 --> 00:12:44,938
ಒಮ್ಮೆ ಅವನು ನಿನ್ನ ತಲೆಯೊಳಗೆ
ಹೊಕ್ಕಿ ಕುಳಿತ ಎಂತಾದರೆ.

130
00:12:45,646 --> 00:12:47,438
ನನ್ನ ಮನಸಿನ ಬಗ್ಗೆ ನಿನಗೆ ಗೊತ್ತಿಲ್ಲ.

131
00:12:49,938 --> 00:12:51,271
ನೀನು ಅವನಿಗೆ ಮಣಿದೆ.

132
00:12:52,063 --> 00:12:53,396
ನಾನು ಪ್ರತಿರೋಧಿಸಿದೆ.

133
00:12:53,896 --> 00:12:55,688
ಬಹುಶಃ, ಸ್ವಲ್ಪ ಸಮಯದವರೆಗೆ.

134
00:12:58,521 --> 00:13:00,896
ಆದರೆ ಇಷ್ಟರಲ್ಲೇ ಅವನು ನಿನ್ನನ್ನು ನೋಡುತ್ತಾನೆ.

135
00:13:03,021 --> 00:13:07,188
ನೀನು ಯಾರಂತ ಅಷ್ಟೇ ಅಲ್ಲ, ನೀನು
ಏನಾಗಬೇಕಂತಿದ್ದೀಯಾ ಅನ್ನೋದು ಕೂಡ.

136
00:13:07,938 --> 00:13:11,980
ಅವನ ಕಣ್ಣುಗಳು ರಂದ್ರ ಕೊರೆಯುತ್ತವೆ,
ಅದರ ಒಳಗೆ ಅವನ ನುಗ್ಗುತ್ತಾನೆ.

137
00:13:14,438 --> 00:13:20,105
ಕೆಲ ಸಮಯದವರೆಗೂ, ಅವನ ಶಕ್ತಿ
ನಿನ್ನದೇ ಆಗಿದೆ ಎಂಬಂತೆ ನಂಬಿಸುತ್ತಾನೆ.

138
00:13:22,396 --> 00:13:23,980
ಅದಮ್ಯ ಶಕ್ತಿ...

139
00:13:24,896 --> 00:13:28,521
ಅದರಿಂದ ಪ್ರತಿ ಆಸೆಯನ್ನು
ಪೂರೈಸುವುದು ಅನಿವಾರ್ಯವೆನಿಸುತ್ತದೆ.

140
00:13:29,313 --> 00:13:30,855
ರಂಗಿನ ಸಾಗರದೆದುರು

141
00:13:32,188 --> 00:13:35,563
ಕಾಣುವ ಎಲ್ಲವೂ ಅಂದಿನಿಂದ ಶಾಶ್ವತವಾಗಿ--

142
00:13:35,646 --> 00:13:38,396
ಬಣ್ಣ ಕಳೆದುಕೊಂಡಂತಿರುತ್ತವೆ.

143
00:13:45,688 --> 00:13:47,188
ನಿನಗೇನು ಭರವಸೆ ಕೊಟ್ಟ?

144
00:13:49,146 --> 00:13:50,355
ಒಂದು ಸೈನ್ಯ.

145
00:13:51,938 --> 00:13:53,771
ನನಗೇನು ಆಮಿಷ ಒಡ್ಡಿದ ಗೊತ್ತಾ?

146
00:13:55,313 --> 00:13:56,313
ನನಗೆ ಬೇಕಾಗಿಲ್ಲ.

147
00:13:58,396 --> 00:13:59,396
ಮಕ್ಕಳು.

148
00:14:00,271 --> 00:14:03,896
ಹಾಗಾದರೆ ನಮಗಿಬ್ಬರಿಗೂ
ನಮ್ಮಿಷ್ಟವಾದವುಗಳನ್ನೇ ಕೊಟ್ಟಿದ್ದಾನೆ.

149
00:14:04,396 --> 00:14:05,730
ನೋಡು,

150
00:14:07,230 --> 00:14:10,021
ನಾವು ನಂದಿಸಬೇಕಾಗಿರುವುದು ಅವನ ಸುಳ್ಳುಗಳನ್ನಲ್ಲ.

151
00:14:11,771 --> 00:14:13,063
ಬದಲಾಗಿ ಅವನನ್ನು.

152
00:14:14,938 --> 00:14:16,771
ಅದನ್ನು ಮಾಡಲು ನಿನಗೆ ಸಹಾಯ ಮಾಡುವೆ.

153
00:14:18,730 --> 00:14:20,605
ಸೌರೊನ್‌ನ ನಾಶಮಾಡಲು ನೆರವಾಗುವೆ.

154
00:14:20,688 --> 00:14:23,813
ಅದೆಂತಹ ಸಹಾಯ ಮಾಡುವೆ, ಆರ್ಕ್?

155
00:14:39,688 --> 00:14:42,146
ಮೋರ್ಗೋಥ್ ನ ಕಿರೀಟ. ಆದರೆ ನನಗೆ ಹೇಳಿದ್ದು--

156
00:14:42,230 --> 00:14:44,271
ಏನಾಯಿತು ಎಂಬುದಕ್ಕೆ ಅನೇಕ ಕಥೆಗಳಿವೆ,

157
00:14:44,355 --> 00:14:46,980
ಸಿಲ್ಮರಿಲ್ ಗಳನ್ನು
ತಮ್ಮ ಮೂಲಸ್ವರೂಪದಿಂದ ಬದಲಾಯಿಸಿದ ಮೇಲೆ.

158
00:14:47,730 --> 00:14:50,938
ಸೌರೊನ್ ತನಗೆ ಸರಿಹೊಂದುವಂತೆ
ಅದನ್ನು ಮತ್ತೆ ಕಾಯಿಸಿದಾಗ ನಾನಲ್ಲಿದ್ದೆ.

159
00:14:52,271 --> 00:14:54,646
ಕಿರೀಟ ಧರಿಸಲು ಅವನು ಮಂಡಿಯೂರಿದಾಗ ನಾನಲ್ಲಿದ್ದೆ.

160
00:14:56,855 --> 00:15:02,271
ಅವನನ್ನು ಕೊಲ್ಲಲು
ಅದರ ಶಕ್ತಿಯನ್ನು ಬಳಸಿದವನು ನಾನೇ.

161
00:15:04,605 --> 00:15:06,313
ನೀನು ಹೇಳುವುದು ನಿಜವಾದರೆ,

162
00:15:08,521 --> 00:15:09,646
ಅವನು ಏಕೆ ಹಿಂದಿರುಗಿದ?

163
00:15:09,730 --> 00:15:12,021
ಯಾಕೆಂದರೆ ನನಗಿನ್ನೂ ನೀನು ಸಿಕ್ಕಿರಲಿಲ್ಲ.

164
00:15:13,230 --> 00:15:14,938
ಇದರಲ್ಲಿ ನನ್ನ ಪಾತ್ರ ಏನಿದೆ?

165
00:15:15,021 --> 00:15:18,521
ಆ ಮೂರು ಎಲ್ವೆನ್ ಉಂಗುರಗಳು
ನಿಮ್ಮ ಜನರ ವಿನಾಶವನ್ನು ತಡೆದವಂತೆ.

166
00:15:19,980 --> 00:15:21,146
ಅದು ನಿಜವೇ?

167
00:15:23,480 --> 00:15:28,105
ನಿಜವಾಗಿದ್ದರೆ, ಬಹುಶಃ ಒಟ್ಟಿಗೆ,

168
00:15:28,188 --> 00:15:30,771
ಈ ಕಿರೀಟ ಮತ್ತು ನಿನ್ನ ಉಂಗುರಗಳು
ಸೌರೊನ್‌ನ ಶಾಶ್ವತವಾಗಿ

169
00:15:30,855 --> 00:15:33,355
ನಾಶಮಾಡಲು ಸಾಕಷ್ಟು ಶಕ್ತಿಯುತವಾಗಿರುತ್ತವೆ.

170
00:15:35,813 --> 00:15:38,813
ವಂಚಕನು ನನಗಿನ್ನು ಸಿಗಲ್ಲ ಅಂದುಕೊಂಡಿದ್ದಾನೆ.

171
00:15:40,563 --> 00:15:42,771
ಆದರೆ ಅವನು ಎರೆಗಿಯೊನ್‌ನಲ್ಲಿ ಅವಿತಿದ್ದಾನೆ.

172
00:15:44,688 --> 00:15:48,480
ಮತ್ತು ನಾನು ಅನುಮಾನಿಸಿದಂತೆ
ನಿನಗೆ ಖಂಡಿತ ಗೊತ್ತಿರಬೇಕು...

173
00:15:55,646 --> 00:15:58,021
ಹಲ್ಬ್ರ್ಯಾಂಡೇ ಸೌರೊನ್ ಅಂತ.

174
00:15:59,438 --> 00:16:00,521
ಅಲ್ಲವೇ?

175
00:16:05,605 --> 00:16:07,771
ಆ ನಗರದ ಭವಿಷ್ಯ

176
00:16:08,521 --> 00:16:11,771
ನಿನ್ನ ಅಹಂಕಾರವನ್ನು ಬದಿಗಿಡುವ
ನಿನ್ನ ಸಾಮರ್ಥ್ಯದ ಮೇಲೆ ನಿಂತಿದೆ.

177
00:16:14,438 --> 00:16:16,855
ಆ ಇಚ್ಛಾಶಕ್ತಿಯನ್ನು ಬೆಳೆಸಿಕೋ ಎನ್ನುವೆ.

178
00:16:18,063 --> 00:16:19,271
ನಿನಗೆ ಸಾಧ್ಯವಾದಲ್ಲಿ.

179
00:16:34,813 --> 00:16:36,146
ನಾವು ಮತ್ತೆ ಮಾತನಾಡೋಣ.

180
00:16:51,563 --> 00:16:52,730
ಕಾನೂನಿನ ಉಲ್ಲಂಘನೆ.

181
00:16:54,855 --> 00:17:00,521
ಹಿಂಸಾತ್ಮಕ ಕಲಹದ ಪ್ರಚೋದನೆಯು
ಜೀವಹಾನಿಗೆ ಕಾರಣವಾಯಿತು.

182
00:17:01,563 --> 00:17:05,480
ಮತ್ತು ಕೊನೆಯದು, ಆದರೆ ಅತ್ಯಂತ ಅಸಹ್ಯಕರವಾದುದು,

183
00:17:06,605 --> 00:17:08,605
ಮಹಾ ದೇಶದ್ರೋಹದ ಅಪರಾಧ.

184
00:17:09,980 --> 00:17:15,813
ಒಟ್ಟಾರೆಯಾಗಿ ನೋಡಿದರೆ, ಕಾನೂನಿನ ಈ ಭೀಕರ
ಉಲ್ಲಂಘನೆಗಳಿಗೆ ಮರಣದಂಡನೆಯೇ ಸೂಕ್ತ.

185
00:17:15,896 --> 00:17:18,063
-ಹಾಂ!
-ಅಲ್ಲಿಗೆ ಮುಗಿಯುತ್ತೆ.

186
00:17:21,438 --> 00:17:23,688
-ಅವನು ಮರಣದಂಡನೆಗೆ ಅರ್ಹನಲ್ಲ.
-ಹಾಂ, ಇರಬಹುದು.

187
00:17:24,521 --> 00:17:25,521
ಆದಾಗ್ಯೂ,

188
00:17:27,271 --> 00:17:30,730
ನಮ್ಮ ರಾಜ್ಯಕ್ಕೆ ಆತನ ವರ್ಷಗಳ
ನಿಷ್ಠಾವಂತ ಸೇವೆಯನ್ನು ಪರಿಗಣಿಸಿ,

189
00:17:31,855 --> 00:17:35,563
ಆರೋಪಿಯನ್ನು ಬಿಡುಗಡೆಗೊಳಿಸಲು
ಈ ನ್ಯಾಯಾಲಯದ ಸಭೆಯು ತೀರ್ಮಾನಿಸುತ್ತದೆ.

190
00:17:43,938 --> 00:17:45,396
ಬಿಡುಗಡೆಗೊಳಿಸಿ...

191
00:17:48,771 --> 00:17:54,396
ಬಿಡುಗಡೆಗೊಳಿಸಬಹುದು, ಯಾವಾಗ ಎಂದರೆ,
ಅವನು ತನ್ನ ಅಪರಾಧಗಳನ್ನು ತ್ಯಜಿಸಿ

192
00:17:56,063 --> 00:17:59,396
ನ್ಯೂಮೆನೊರಿನ ನಿಜವಾದ ದೊರೆಗೆ
ತನ್ನ ನಿಷ್ಠೆಯ ಭರವಸೆ ಇತ್ತಾಗ ಮಾತ್ರ.

193
00:18:05,730 --> 00:18:10,271
ಎಲೆಂಡಿಲ್, ಅಮಾನ್ಡಿಲ್‌ನ, ಪುತ್ರನೇ,
ನಿನ್ನ ಅಪರಾಧಗಳನ್ನು ತ್ಯಜಿಸುವೆಯಾ?

194
00:18:23,480 --> 00:18:24,480
ತ್ಯಜಿಸುವೆ.

195
00:18:27,646 --> 00:18:32,438
ಅರ್-ಫರಝೋನ್ ನ್ಯೂಮೆನೊರಿನ
ನಿಜವಾದ ಅರಸನೆಂದು ಒಪ್ಪುವೆಯಾ?

196
00:18:43,188 --> 00:18:44,396
ನಾನೊಪ್ಪಲ್ಲ.

197
00:18:45,896 --> 00:18:47,563
ಜೋರಾಗಿ ಮಾತನಾಡು, ಎಲೆಂಡಿಲ್,

198
00:18:48,521 --> 00:18:51,063
ಇಲ್ಲಿ ನೆರೆದಿರುವವರಿಗೆ
ನಿನ್ನ ಮಾತು ಸರಿಯಾಗಿ ಕೇಳಿಸಲಿ.

199
00:18:55,646 --> 00:18:56,896
ನಾನು ಒಪ್ಪಲ್ಲ!

200
00:18:59,230 --> 00:19:05,105
ಯಾಕೆಂದರೆ ಈಗ ನ್ಯೂಮೆನೊರಿನ ನಿಜವಾದ ಆಳುಗರು,
ಅದರ ಕೊನೆಗಾಲದವರೆಗೂ,

201
00:19:05,188 --> 00:19:08,855
ಟಾರ್-ಪಲಾಂಟಿರ್‌ನ ಪುತ್ರಿಯಾದ ಮಿರಿಯೆಲ್!

202
00:19:11,188 --> 00:19:15,646
ಮತ್ತು ಇಲ್ಲಿರುವ ಒಬ್ಬನೇ ಮೋಸಗಾರ ಅಂದರೆ ನೀನೇ!

203
00:19:34,105 --> 00:19:35,855
ಈಗ ಇವನೊಂದಿಗೆ ಏನು ಮಾಡುವುದು?

204
00:19:36,521 --> 00:19:38,563
ಈಗಾಗಲೇ ಬೇಕಾದಷ್ಟು ಮಾಡಿದ್ದೀಯಾ.

205
00:19:42,980 --> 00:19:45,938
ಬಹುಶಃ ಇವನ ಭವಿಷ್ಯದ ನಿರ್ಧಾರವನ್ನು
ವಾಲಾರಿಗೇ ಬಿಡಬೇಕು.

206
00:19:47,563 --> 00:19:50,771
ನಿಷ್ಠಾವಂತರು ಹಳೆಯ ಸಂಪ್ರದಾಯಗಳ
ಪ್ರಕಾರ ಬದುಕಬೇಕೆಂದರೆ,

207
00:19:50,855 --> 00:19:52,313
ಅದೇ ರೀತಿ ಸಾಯಲೂಬೇಕು.

208
00:20:05,771 --> 00:20:06,855
ನೋರಿ.

209
00:20:08,355 --> 00:20:10,146
ನೋಡಿ? ಯಾರನ್ನ ನೋಡ್ಬೇಕು?

210
00:20:12,230 --> 00:20:13,605
ಯಾರೂ ಇಲ್ಲ.

211
00:20:13,688 --> 00:20:16,688
ನಾನು... ನಾನು ಏನನ್ನೋ ನೋಡಿದೆ.

212
00:20:17,688 --> 00:20:21,355
ಗುಪ್ತ ಅಗ್ನಿ ನಮಗೆ ಪಿಸುಗುಟ್ಟುತ್ತದೆ,
ನಾವು ಕೇಳಲು ಕಿವಿಗೊಟ್ಟರೆ.

213
00:20:22,438 --> 00:20:24,771
ನಮಗೆ ವಿಷಯಗಳನ್ನು ಹೇಳುತ್ತದೆ.
ಮತ್ತು ತೋರಿಸುತ್ತದೆ.

214
00:20:25,646 --> 00:20:30,313
ನಡೆಯುವಂತಹ ವಿಷಯಗಳನ್ನು ತೋರಿಸುತ್ತಾ?
ಅಥವಾ ನಡೆಯಬಹುದಾದಂಥ ವಿಷಯಗಳನ್ನಾ?

215
00:20:31,230 --> 00:20:34,896
ನಾಳೆಯ ಮೋಡಗಳನ್ನು ನೆನ್ನೆಯ
ಸೂರ್ಯಕಿರಣಗಳಷ್ಟೇ ಸ್ಪಷ್ಟವಾಗಿ ತೋರಿಸುತ್ತದೆ.

216
00:20:36,605 --> 00:20:40,771
ಅದರ ಶಕ್ತಿಯನ್ನು ಪಳಗಿಸಲು ಹೇಗೆ ಕಲಿಯಲಿ?
ಅಂಧಕಾರದ ವಿರುದ್ಧ ಹೋರಾಡಲು?

217
00:20:40,855 --> 00:20:43,396
ನೀನು ಅದನ್ನು ಪಳಗಿಸಿದರೆ
ಗುಪ್ತ ಅಗ್ನಿಗೆ ಏನಾಗಬೇಕು?

218
00:20:43,480 --> 00:20:46,313
ಅದನ್ನು ಪಳಗಿಸದಿದ್ದರೆ,
ನಾನು ಬಳಸುವುದಾದರೂ ಹೇಗೆ?

219
00:20:49,688 --> 00:20:54,646
ನೀನು ಇದುವರೆಗೂ ಕೈಗೆತ್ತಿಕೊಂಡಿರುವ
ಪ್ರತಿ ಕಾರ್ಯದಲ್ಲೂ ವಿಫಲನಾಗಿದ್ದೀಯ.

220
00:20:55,646 --> 00:20:57,771
ನಿನ್ನ ಮುಂದಿರುವ ಈ ಪರೀಕ್ಷೆಯಲ್ಲಿ ವಿಫಲನಾದರೆ,

221
00:20:59,271 --> 00:21:01,063
ಇನ್ನೊಂದು ಅವಕಾಶ ಇರುವುದಿಲ್ಲ.

222
00:21:02,188 --> 00:21:03,896
ನಾನು ಏನು ಮಾಡಬೇಕು ಹೇಳಿ.

223
00:21:06,730 --> 00:21:09,813
ಹಳೆಯ ಟಾಮ್‌ನ ಅನುಸರಿಸು.
ಆತನೇ ನಿನಗೆ ತೋರಿಸುತ್ತಾನೆ.

224
00:21:17,396 --> 00:21:18,855
ನೀನೇಕೆ ಹೊರಡಬಾರದು?

225
00:21:19,438 --> 00:21:21,563
ಅವರಿಂದ ತಪ್ಪಿಸಿಕೋ. ಓಡಿ ಹೋಗು.

226
00:21:21,646 --> 00:21:23,105
ಆಮೇಲೆ ಎಲ್ಲಿಗೆ ಹೋಗೋಣ?

227
00:21:23,188 --> 00:21:25,563
ಯಾಕೆ... ನಿನಗೆ ಎಲ್ಲಿ ಬೇಕಾದರೂ ಹೋಗು.

228
00:21:26,771 --> 00:21:30,396
ಹಾರ್ಫೂಟ್ಸ್ ವಾಸಿಸಲು ಪ್ರತಿ ತಿಂಗಳು
ಹೊಸ ಸ್ಥಳವನ್ನು ಕಂಡುಕೊಳ್ಳುತ್ತಾರೆ.

229
00:21:34,480 --> 00:21:39,688
ನನ್ನ ತಾಯಿ ಮತ್ತು ಅವಳ ಪೋಷಕರು
ಈ ಸ್ಮಿಯಲ್‌ನ ನನಗಾಗಿ ತೋಡಿದರು.

230
00:21:39,771 --> 00:21:41,271
ನಾನು ಇದರೊಳಗೇ ಹುಟ್ಟಿದೆ.

231
00:21:44,980 --> 00:21:49,146
ಗೋರೆಯನ್ನು ನಿಲ್ಲಿಸುವಷ್ಟು ದೊಡ್ಡವಳಾದಾಗಿನಿಂದಲೂ
ಆ ಮರವನ್ನು ನೋಡಿಕೊಳ್ಳುತ್ತಿದ್ದೇನೆ.

232
00:21:52,146 --> 00:21:55,271
ಅದರ ಛಾಯೆಯಡಿಯೇ ನನ್ನ ಬ್ರಮ್ಗಾರ್‌ನ ಮದುವೆಯಾದೆ.

233
00:21:58,646 --> 00:22:02,771
ಮತ್ತು ಕಳೆದ ವಸಂತದಂದು, ಅವನು ತೀರಿಕೊಂಡಾಗ,

234
00:22:05,271 --> 00:22:06,688
ಅವನನ್ನು ಅದರಡಿಯೇ ಹೂಳಿದೆ.

235
00:22:11,146 --> 00:22:13,146
ಒಂದು ದಿನ, ನಾನೂ ಅವರ ಪಕ್ಕದಲ್ಲೇ ಮಣ್ಣಾಗುವೆ.

236
00:22:21,605 --> 00:22:24,396
ಇಂಥ ಪ್ರತಿಯೊಂದು ಸ್ಮಿಯಲ್‌ಗಳಿಗೂ
ಅಂಥದ್ದೊಂದು ಕತೆ ಇದೆ.

237
00:22:30,896 --> 00:22:35,105
ನೋಡು, ಈ ಜಾಗ ನಾವು ಬದುಕುವ ಜಾಗವಷ್ಟೇ ಅಲ್ಲ.

238
00:22:37,146 --> 00:22:38,313
ಇದು ನಮ್ಮ ಮನೆ.

239
00:22:39,646 --> 00:22:41,063
ನಾನೇ.

240
00:22:42,355 --> 00:22:44,438
-ನೋರಿ--
-ನಿಮ್ಮನ್ನು ಈ ಕಷ್ಟಕ್ಕೆ ನಾನೇ ತೂರಿದೆ.

241
00:22:45,521 --> 00:22:48,396
ನಿಮ್ಮನ್ನು ಇದರಿಂದ ನಾನೇ ಹೊರತರಬೇಕು.

242
00:22:49,230 --> 00:22:50,813
ನಾನೀಗಲೇ ಶರಣಾಗುವೆ,

243
00:22:50,896 --> 00:22:53,355
ಆಗ ನಾನು ಪೋಪ್ಪಿನ ತಪ್ಪಿಸುವ ಅವಕಾಶವೂ ಇದೆ.

244
00:22:57,063 --> 00:23:00,938
ನಿನ್ನನ್ನು ಕೇಳಬೇಕಂತಿದ್ದೆ, ಅದ್ಯಾಕೆ
ನಿನ್ನನ್ನು ಯಾರೂ ಅಲ್ಲ ಅಂತ ಕರೆಯುತ್ತಾರೆ?

245
00:23:01,563 --> 00:23:05,646
ನನ್ನ ಪೋಷಕರು ಅಷ್ಟು ಬೇಗ ನಿರ್ಧಾರ ಮಾಡಲ್ಲ.
ನನಗೆ ಹೆಸರಿಡೋಕೆ ತುಂಬಾ ಸಮಯ ತೆಗೆದುಕೊಂಡರು.

246
00:23:05,730 --> 00:23:06,938
ಅಂದರೆ, ಎಷ್ಟು ಸಮಯ?

247
00:23:07,021 --> 00:23:08,521
ಅದು, ಒಂದೆರಡು ವರ್ಷಗಳು.

248
00:23:08,605 --> 00:23:09,730
ಅಷ್ಟು ತಡವೇನಲ್ಲ.

249
00:23:10,271 --> 00:23:11,730
ಒಂದೆರಡು ವರ್ಷಗಳ ಹಿಂದೆ.

250
00:23:13,063 --> 00:23:14,771
ಯಾರೂ ಅಲ್ಲ ಅನ್ನೋದೇ ನನ್ನ ಹೆಸರಾಯಿತು.

251
00:23:23,521 --> 00:23:25,063
ನನ್ನನ್ನೇಕೆ ಹಾಗೆ ನೋಡುತ್ತಿರುವೆ?

252
00:23:25,688 --> 00:23:27,938
ನಾನು-- ನಾನು ನಿನ್ನನ್ನು ಕೇಳಬೇಕೆಂದುಕೊಂಡಿದ್ದೆ,

253
00:23:28,021 --> 00:23:30,396
ಮುಂದೆ ನಾವೆಲ್ಲರೂ ಕೊಲೆಯಾಗಲಿರುವುದರಿಂದ,
ಒಂದು ವೇಳೆ,

254
00:23:30,480 --> 00:23:31,646
ನೀನು ಹೋಗಬೇಕೆಂದರೆ--

255
00:23:31,730 --> 00:23:33,146
ಮಾತು ನಿಲ್ಲಿಸು.

256
00:23:53,646 --> 00:23:55,438
-ಮೆರಿಮ್ಯಾಕ್.
-ಪೋಪ್ಪಿ.

257
00:23:57,146 --> 00:23:59,146
ಊಟಕ್ಕೆ ಹಲ್ಲಿ ತಿಂದಿದ್ದೆಯಾ?

258
00:23:59,896 --> 00:24:01,021
ಯಾಕೆ ಕೇಳಿದೆ?

259
00:24:06,605 --> 00:24:07,813
ಅವಳು ಸರಿ, ನೋರ್.

260
00:24:08,563 --> 00:24:11,230
ಆ ಮಾನವರು ಆಗಂತುಕನನ್ನು ಹಿಡಿಯಲೆಂದೇ
ನಮ್ಮ ಹಿಂದಿದ್ದಾರೆ.

261
00:24:11,938 --> 00:24:15,146
ನೀನು ಶರಣಾದರೆ,
ಇಡೀ ಜಗತ್ತಿಗೇ ಅಪಾಯ ಬಂದೊದಗಬಹುದು.

262
00:24:15,230 --> 00:24:17,855
ಸ್ಟೂರ್ ಗಳು ಅಷ್ಟೇ ಅಲ್ಲ, ಹಾರ್ಫೂಟ್ಸ್ ಕೂಡ.

263
00:24:17,938 --> 00:24:19,980
ನಿನ್ನ ಅಮ್ಮ ಮತ್ತು ಅಪ್ಪ. ಡಿಲ್ಲಿ.

264
00:24:22,688 --> 00:24:24,813
ಅವನು ಮುಖ್ಯ ಅಂತ ನನಗೆ ಎಷ್ಟು ಸಲ ಹೇಳಿರುವೆ?

265
00:24:27,480 --> 00:24:29,605
ಸುಮಾರು ಸಲ ಹೇಳಿರಬಹುದು ಅನ್ಸುತ್ತೆ.

266
00:24:33,146 --> 00:24:37,730
ಅದೇನೆಂದರೆ, ನೋರ್, ಇಷ್ಟರಲ್ಲೇ,
ನೀನು ಏನನ್ನಾದರೂ ಸಾಕಷ್ಟು ಬಾರಿ ಹೇಳಿದರೆ,

267
00:24:40,396 --> 00:24:41,730
ನಿನ್ನನ್ನು ನಂಬಿಬಿಡುವೆ.

268
00:24:49,605 --> 00:24:50,855
ಅದಕ್ಕಾಗಿ ಹೋರಾಡೋಣ.

269
00:24:59,146 --> 00:25:01,688
ಕ್ಷುದ್ರ ಮಾಂತ್ರಿಕ ತನ್ನ ದಂಡ ಪತ್ತೆ ಮಾಡಿದ.

270
00:25:02,646 --> 00:25:06,355
ಈಗ ನಿನ್ನದನ್ನು ಹುಡುಕುವ ಸಮಯ ಬಂದಿದೆ.

271
00:25:12,855 --> 00:25:14,271
ಅದು ಯಾವುದು?

272
00:25:16,271 --> 00:25:20,188
ನಿನ್ನ ಅಂತರಾಳವು
ಗುಪ್ತ ಅಗ್ನಿ ಸೇವೆಗಾಗಿ ಮುಡುಪಾದಾಗಲೇ

273
00:25:20,271 --> 00:25:23,146
ನಿನ್ನ ನಿಜವಾದ ದಂಡವು ನಿನಗೆ ಲಭಿಸುತ್ತದೆ.

274
00:25:23,646 --> 00:25:24,938
ಆದರೆ ತುಂಬಾ ಇವೆ.

275
00:25:25,688 --> 00:25:27,646
ಅದನ್ನು ಅರಸುತ್ತಾ ತಿಂಗಳುಗಳೇ ಕಳೆಯಬಹುದು.

276
00:25:28,480 --> 00:25:30,230
ನಿನಗೆ ಬೇಕಾದಷ್ಟು ಸಮಯವಿದೆ.

277
00:25:31,313 --> 00:25:33,938
ನಿನಗೆ ಬೇರೆ ಕಡೆ ಹೋಗುವ ಆಸೆ ಇಲ್ಲವಾದರೆ.

278
00:25:36,313 --> 00:25:39,271
ನಾನು ಅವಳನ್ನು ನೋಡಿದೆ. ನೋರಿ.

279
00:25:40,230 --> 00:25:41,605
ಅವಳು...

280
00:25:41,688 --> 00:25:46,021
ಅವಳನ್ನು ಬೇಗ ಹುಡುಕದಿದ್ದರೆ, ಅವಳು ಸಾಯುವಳು
ಅಂತ ಅದು ಹೇಗೋ ನನಗೆ ಗೊತ್ತಿದೆ.

281
00:25:46,105 --> 00:25:47,313
ಅವರಿಬ್ಬರೂ ಸಾಯುತ್ತಾರೆ.

282
00:25:48,396 --> 00:25:50,313
ಸಾಯುವ ಅನೇಕರು ಜೀವನಕ್ಕೆ ಅರ್ಹರು.

283
00:25:51,230 --> 00:25:53,063
ಬದುಕಿರುವ ಕೆಲವರು ಸಾವಿಗೆ ಅರ್ಹರು.

284
00:25:54,188 --> 00:25:55,771
ಅವರಿಗದನ್ನು ಕೊಡಲು ನೀನ್ಯಾರು?

285
00:25:56,646 --> 00:25:59,563
ಅವಳು ಸುರಕ್ಷಿತಳು ಎಂದು ತಿಳಿದರೆ,
ನಿನ್ನ ಬಳಿ ಮರಳುವೆ.

286
00:25:59,646 --> 00:26:02,355
ಇಲ್ಲ. ನಿನಗೆ ಸಾಧ್ಯವಿಲ್ಲ.

287
00:26:04,230 --> 00:26:09,105
ಕೆಲವೊಮ್ಮೆ ಒಂದು ಮಾರ್ಗ ಎರಡಾಗುತ್ತದೆ,
ಆಗ ನೀನು ಆಯ್ಕೆ ಮಾಡಬೇಕಾಗುತ್ತದೆ.

288
00:26:10,855 --> 00:26:14,938
ಈಗ ನೀನು ದೂರ ತಿರುಗಿದರೆ,
ಈ ಮಾರ್ಗಕ್ಕೆ ಎಂದೂ ಮರಳಲು ಸಾಧ್ಯವಿಲ್ಲ.

289
00:26:16,021 --> 00:26:17,396
ಬೇರೆ ದಾರಿಯೇ ಇಲ್ಲವೇ?

290
00:26:18,855 --> 00:26:20,980
ಸೌರೊನ್ ಪಶ್ಚಿಮದಲ್ಲಿ ಉದಯಿಸುತ್ತಾನೆ.

291
00:26:21,480 --> 00:26:23,396
ಪೂರ್ವದಲ್ಲಿ ಒಬ್ಬ ಕ್ಷುದ್ರ ಮಾಂತ್ರಿಕ.

292
00:26:23,480 --> 00:26:25,980
ಮಧ್ಯ ಧರೆಯಲ್ಲಿರೋ ಪ್ರತಿ ಜೀವಕ್ಕೂ ಅಪಾಯವಿದೆ.

293
00:26:26,730 --> 00:26:28,938
ಅವರನ್ನು ವಿನಾಶವಾಗಲು ಬಿಡುತ್ತೀಯಾ?

294
00:26:31,438 --> 00:26:32,896
ಅವಳು ನನ್ನ ಗೆಳತಿ.

295
00:26:34,271 --> 00:26:37,396
ನಿನ್ನ ಗೆಳತಿಯಾ ಅಥವಾ ನಿನ್ನ ವಿಧಿಯಾ?

296
00:26:39,896 --> 00:26:41,230
ಆಯ್ಕೆ ನಿನ್ನದು.

297
00:27:06,563 --> 00:27:09,396
ಬಾ, ಅದರೊಳಗೆ ನಿನ್ನ ಗಡ್ಡ ಹಾಕು.

298
00:27:38,855 --> 00:27:39,855
ಒಡೆಯ.

299
00:28:05,688 --> 00:28:07,271
ಕರೆಸಿದಿರಾ, ಅಪ್ಪ?

300
00:28:09,480 --> 00:28:10,480
ಇಲ್ಲ.

301
00:28:12,021 --> 00:28:13,105
ಅವನು ಕರೆಸಿದ.

302
00:28:17,063 --> 00:28:20,480
ಆ ಏಳು ನಿಮಗೆ ಒಳ್ಳೆಯ ಸೇವೆಯನ್ನೇ ಮಾಡುತ್ತಿವೆ,
ರಾಜಕುಮಾರ ಡ್ಯುರಿನ್.

303
00:28:22,896 --> 00:28:26,480
ಯಾರದೋ ಸೇವೆಯನ್ನು ಚೆನ್ನಾಗಿ ಮಾಡುತ್ತಿದ್ದಾರೆ.
ಅದಂತೂ ನಿಜ.

304
00:28:26,563 --> 00:28:28,271
ಸನ್ನಿವೇಶಗಳು ಬದಲಾಗಿವೆ.

305
00:28:28,355 --> 00:28:31,646
ಎರೆಗಿಯೊನ್ ಆಕ್ರಮಣದ ಅಪಾಯದಲ್ಲಿದೆ
ಎಂದು ಗೊತ್ತಾಯಿತು.

306
00:28:32,355 --> 00:28:35,980
ಮೀಥ್ರಿಲ್ ಇಲ್ಲದೆ, ಮಿಕ್ಕ ಶಕ್ತಿಯ ಉಂಗುರಗಳು
ಎಂದಿಗೂ ಪೂರ್ಣವಾಗದಿರಬಹುದು.

307
00:28:36,813 --> 00:28:38,146
ನಮಗೆ ಇನ್ನೂ ಬೇಕು.

308
00:28:39,355 --> 00:28:40,896
ಮತ್ತು ನಮಗೆ ಈಗಲೇ ಬೇಕು.

309
00:28:41,646 --> 00:28:43,230
ನಾನು ನಿಮಗೆ ಎಷ್ಟು ನೀಡಲಿ?

310
00:28:43,313 --> 00:28:44,688
ನೀನು ನಮಗೆ ಏನನ್ನೂ ಕೊಡಲು--

311
00:28:44,771 --> 00:28:46,855
ಯಾವುದರಲ್ಲಿ ಎಷ್ಟು?

312
00:28:48,230 --> 00:28:51,105
ನಿಮ್ಮ ಗಣಿಗಾರಿಕೆ
ಕಾರ್ಯಾಚರಣೆಗಳನ್ನು ವಿಸ್ತರಿಸುತ್ತಿರುವಿರಿ.

313
00:28:52,688 --> 00:28:55,896
ಕಟ್ಟೆಗಳು ಮತ್ತು ಗಣಿದ್ವಾರಗಳನ್ನು ಕಟ್ಟಲು

314
00:28:55,980 --> 00:28:59,646
ಸ್ಥಿರವಾದ ಮರದ ಪೂರೈಕೆ ಮಾಡಬಲ್ಲೆವು.

315
00:29:01,146 --> 00:29:04,313
ಅಥವಾ ಖಜದ್-ದುಮ್‌ಗೆ ಏನಾದರೂ...

316
00:29:05,980 --> 00:29:07,438
ಹೆಚ್ಚು ಅಮೂಲ್ಯವಾದದ್ದು ಬೇಕೇ?

317
00:29:11,063 --> 00:29:16,605
ಅಪ್ಪ, ಇದರ ಬಗ್ಗೆ ನಾವು
ಖಾಸಗಿಯಾಗಿ ಚರ್ಚಿಸುವುದು ಒಳ್ಳೆಯದು.

318
00:29:17,396 --> 00:29:18,855
ಚರ್ಚಿಸಲು ಏನೂ ಇಲ್ಲ.

319
00:29:20,438 --> 00:29:22,063
ನಾನು ಈಗಾಗಲೇ ನಿರ್ಧರಿಸಿದ್ದೇನೆ.

320
00:29:25,396 --> 00:29:26,396
ಮತ್ತು?

321
00:29:27,730 --> 00:29:29,105
ಇಲ್ಲ ಎಂಬುದೇ ಉತ್ತರ.

322
00:29:30,980 --> 00:29:34,855
ಕೆಲಬ್ರಿಮ್ಬೋರ್ ದೊರೆಗೆ ನನ್ನ ವಿಷಾದ ತಿಳಿಸಿ.

323
00:29:44,355 --> 00:29:45,355
ರಾಜ ಡ್ಯುರಿನ್.

324
00:29:46,938 --> 00:29:48,855
ರಾಜಕುಮಾರ. ಮತ್ತೆ ಸಿಗೋಣ.

325
00:30:00,438 --> 00:30:01,646
ಔಲೇಗೆ ಧನ್ಯವಾದ.

326
00:30:03,521 --> 00:30:07,688
ಒಂದು ಕ್ಷಣ, ನಿಮ್ಮ ಆಲೋಚನಾಶಕ್ತಿಯೇ
ಬಿದ್ದುಹೋಗಿತ್ತು ಅಂದುಕೊಂಡಿದ್ದೆ.

327
00:30:09,105 --> 00:30:10,105
ಅದಕ್ಕೆ ವಿರುದ್ಧ.

328
00:30:15,938 --> 00:30:17,855
ನನ್ನ ಬುದ್ಧಿಶಕ್ತಿಗೆ ಯಾವ ತೊಂದರೆಯೂ ಇಲ್ಲ.

329
00:30:18,521 --> 00:30:20,105
ಚಿಂತಿಸಬೇಡ, ಮಗನೇ.

330
00:30:21,980 --> 00:30:22,938
ಅವರು ಹಿಂತಿರುಗುವರು.

331
00:30:23,563 --> 00:30:24,563
ಮತ್ತೆ?

332
00:30:26,563 --> 00:30:27,563
ಅವನೇ ಹೇಳಿದ.

333
00:30:29,146 --> 00:30:30,896
ಮಧ್ಯ ಧರೆಗೆ ಯುದ್ಧ ಸಮೀಪಿಸುತ್ತಿದೆ.

334
00:30:32,063 --> 00:30:37,146
ಮತ್ತು ಮೀಥ್ರಿಲ್‌ನ ಆಯುಧಗಳು ಮತ್ತು ರಕ್ಷಾಕವಚ
ಹೊಂದಿರುವ ಸೈನ್ಯವನ್ನು

335
00:30:37,230 --> 00:30:39,188
ಸೋಲಿಸುವುದೇ ಮಹಾ ಕಷ್ಟ.

336
00:30:39,271 --> 00:30:41,230
ನಾವೇ ನಮ್ಮ ಬೆಲೆ ತಿಳಿಸಬಹುದು.

337
00:30:42,480 --> 00:30:43,855
ನಿಮಗೆ ಹುಚ್ಚು ಹಿಡಿದಿದೆಯೇ?

338
00:30:44,938 --> 00:30:47,480
ಇಡೀ ಜಗತ್ತಿಗೇ ಹುಚ್ಚು ಹಿಡಿದಿದೆ, ಮಗನೇ.

339
00:30:49,938 --> 00:30:53,938
ಅದರ ನಿಯಂತ್ರಣ ಸಾಧಿಸುವುದು ನಮಗೆ ಬಿಟ್ಟಿದ್ದು.

340
00:30:55,271 --> 00:30:59,855
ಕಾರ್ಯಪಡೆಗಳನ್ನು ದ್ವಿಗುಣಗೊಳಿಸಲು
ನಾರ್ವಿ ಗೆ ಹೇಳು. ಅಗೆಯುವಿಕೆಯನ್ನು ವಿಸ್ತರಿಸೋಣ.

341
00:31:00,688 --> 00:31:01,688
ಅಪ್ಪ.

342
00:31:03,938 --> 00:31:05,271
ಉಂಗುರವನ್ನು ತೆಗೆಯಿರಿ.

343
00:31:06,271 --> 00:31:07,480
ನಾನು ತೆಗೆಯಲ್ಲ.

344
00:31:10,313 --> 00:31:11,396
ಇದು ನನ್ನದು.

345
00:31:13,105 --> 00:31:14,230
ನನಗೆ ಸೇರಿದ್ದು.

346
00:31:15,480 --> 00:31:16,480
ಇಲ್ಲ.

347
00:31:18,188 --> 00:31:20,021
ನೀವು ಅದಕ್ಕೆ ಸೇರಿದವರು.

348
00:31:22,230 --> 00:31:26,813
ಹಾಗಿಲ್ಲದಿದ್ದರೆ, ದಯವಿಟ್ಟು,
ಅದನ್ನು ಸಾಬೀತುಪಡಿಸಿ.

349
00:31:31,521 --> 00:31:32,688
ಅದನ್ನು ತೆಗೆಯಿರಿ.

350
00:31:42,771 --> 00:31:46,396
ನಿನಗೆ ನಾನೇನನ್ನೂ
ಸಾಬೀತುಪಡಿಸಬೇಕಿಲ್ಲವೋ, ಹುಡುಗ.

351
00:32:07,396 --> 00:32:09,605
ಹಾಗಾದರೆ ನಮಗೆ ಬೇರೆ ಮಾರ್ಗವಿಲ್ಲ.

352
00:32:11,105 --> 00:32:14,605
ಬೇಕಾದರೆ ಆ ಗಣಿಯ ಮುಂದೆ ನಾವೇ ಹೋಗಿ ಅಡ್ಡ ಮಲಗೋಣ.

353
00:32:16,230 --> 00:32:18,313
ನಮ್ಮ ವಿರುದ್ಧ ಇಡೀ ಸೈನ್ಯವನ್ನು ಕಳಿಸುತ್ತಾರೆ.

354
00:32:18,813 --> 00:32:20,105
ಕಳಿಸಲಿ!

355
00:32:20,646 --> 00:32:24,438
ಸ್ವಂತ ಮಗನ ಮೇಲೆಯೇ ಸೈನ್ಯವನ್ನು ಕಳಿಸುವಷ್ಟು
ಪ್ರಭಾವ ಆ ಉಂಗುರ ಅವರ ಮೇಲೆ ಬೀರಿದ್ದರೆ,

356
00:32:24,521 --> 00:32:28,480
ಆಗ ಖಜದ್-ದುಮ್‌ನ ಪ್ರತಿ ಡ್ವಾರ್ಫ್‌ಗೂ
ಆತ ಆಳಲು ಅನರ್ಹ ಅಂತ ಗೊತ್ತಾಗುತ್ತೆ.

357
00:32:28,563 --> 00:32:29,730
ಆತನ ಕಿರೀಟ ಕಸಿಯುತ್ತಾರೆ.

358
00:32:32,896 --> 00:32:35,188
ಅವರ ಬಗ್ಗೆ ಈ ರೀತಿ ಹೇಗೆ ಮಾತನಾಡುವೆ?

359
00:32:36,355 --> 00:32:37,605
ಡ್ಯುರಿನ್.

360
00:32:37,688 --> 00:32:39,938
ನೀನು ಅವರನ್ನು
ಅವಮಾನಿಸುವುದರ ಬಗ್ಗೆ ಹೇಳುತ್ತಿರುವೆ.

361
00:32:41,313 --> 00:32:42,646
ಅವರನ್ನು ನಾಶಪಡಿಸುವ ಬಗ್ಗೆ.

362
00:32:42,730 --> 00:32:46,646
ನೀನು ಪ್ರೀತಿಸುವಷ್ಟೇ ನಾನು
ಅವರನ್ನು ಪ್ರೀತಿಸುತ್ತೇನೆ.

363
00:32:47,230 --> 00:32:50,980
ಅವರನ್ನು ನನ್ನ ತಂದೆಗಿಂತ
ಎರಡರಷ್ಟು ಗೌರವಿಸುತ್ತೇನೆ ಎಂದು ಔಲೆಗೆ ಗೊತ್ತು.

364
00:32:52,313 --> 00:32:55,438
ಆದರೆ ಆ ಸಿಂಹಾಸನದ ಮೇಲಿರೋ ಡ್ವಾರ್ಫ್
ನಿನ್ನ ತಂದೆ ಅಲ್ಲ.

365
00:32:56,063 --> 00:33:00,980
ಅವರು ಆ ಉಂಗುರವನ್ನು ತೊಟ್ಟಿರುವವರೆಗೂ,
ಅವರಿಗೆ ಯಾರ ಧ್ವನಿಯೂ ಕೇಳಿಸಲ್ಲ, ನಮ್ಮದೂ ಸಹ.

366
00:33:01,063 --> 00:33:03,771
ಈ ಬೆಟ್ಟದಲ್ಲಿರುವ
ಪ್ರತಿ ಡ್ವಾರ್ಫ್ ಅಪಾಯದಲ್ಲಿದ್ದಾರೆ!

367
00:33:05,230 --> 00:33:06,313
ಡ್ಯುರಿನ್.

368
00:33:08,105 --> 00:33:09,188
ಡ್ಯುರಿನ್.

369
00:33:13,188 --> 00:33:14,938
ಡ್ಯುರಿನ್, ನೀನು...

370
00:33:15,438 --> 00:33:17,105
ನನ್ನಿಂದ ಅದು ಸಾಧ್ಯವಿಲ್ಲ.

371
00:33:18,896 --> 00:33:21,063
ನಾನು ಮಾಡಲಾರೆ, ಡೀಸಾ.

372
00:33:24,355 --> 00:33:28,688
ಅವರನ್ನು ನೋಡಿದಾಗ,
ಅವರ ಕಣ್ಣುಗಳನ್ನು ನೋಡಿದಾಗ, ನನಗೆ...

373
00:33:32,688 --> 00:33:34,355
ಈಗಲೂ ನನ್ನ ತಂದೆಯೇ ಕಾಣುತ್ತಾರೆ.

374
00:33:36,938 --> 00:33:40,605
ಅವರ ವರ್ತನೆ ಬದಲಾಗಿ ಅವರು ಕಳೆದುಹೋಗಿರಬಹುದು,
ಆದರೂ ಆತ ಅದೇ ವ್ಯಕ್ತಿ.

375
00:33:44,480 --> 00:33:48,355
ನೀನು ಯಾವಾಗಲೂ ಆಶಾವಾದಿ, ಪ್ರಿಯ.

376
00:33:49,855 --> 00:33:50,855
ಬಾ.

377
00:33:56,771 --> 00:34:01,021
ನಾವು ಈಗ ಮಾಡದಿದ್ದರೆ, ಅದೆಂದಿಗೂ ಆಗಲ್ಲ.

378
00:34:02,813 --> 00:34:07,063
ಅವರು ತನ್ನನ್ನು ನಾಶ ಮಾಡಿಕೊಂಡು
ಈ ರಾಜ್ಯವನ್ನೂ ನಾಶ ಮಾಡುತ್ತಾರೆ.

379
00:34:24,271 --> 00:34:29,855
ಬೆಳಿಗ್ಗೆ, ಅಂಧಕಾರದ ಪರೀಕ್ಷೆ ಎದುರಿಸಲು
ನಿಮ್ಮನ್ನು ಸಮುದ್ರಕ್ಕೆ ಎಸೆಯುತ್ತಾರೆ.

380
00:34:32,521 --> 00:34:34,688
ಈಗ ಕಡಲ ಹುಳುವನ್ನು ಕರೆಸುತ್ತಿದ್ದಾರೆ.

381
00:34:38,688 --> 00:34:40,063
ಅರ್-ಫರಝೋನ್ ಜೊತೆ ಮಾತಾಡಿದೆ.

382
00:34:40,980 --> 00:34:43,396
ನಿಷ್ಠಾವಂತರನ್ನು ಆತ
ಮತ್ತಷ್ಟು ವಿರೋಧಿಸುವುದಿಲ್ಲ.

383
00:34:44,271 --> 00:34:47,938
ಅವರ ಕ್ಷಮಾದಾನ ಈಗಲೂ ಲಭ್ಯವಿದೆ,
ನೀನು ಒಪ್ಪಿಕೊಂಡರೆ--

384
00:34:48,021 --> 00:34:49,688
ಅವರಿಗೆ ನಿಷ್ಠೆಯ ಪ್ರತಿಜ್ಞೆಯೇ?

385
00:34:53,438 --> 00:34:58,188
ಒಬ್ಬ ವ್ಯಕ್ತಿಗೆ ತನ್ನ ಮೌಲ್ಯಗಳನ್ನು
ಸುಡಲು ಹೇಳುವುದು ಕ್ಷಮಾದಾನ ಅಲ್ಲ.

386
00:35:03,271 --> 00:35:07,063
ಈ ಕುಟುಂಬವು ಎಲ್ಲವನ್ನೂ ಕಳೆದುಕೊಂಡ ಮೇಲೆ,
ನಿನ್ನನ್ನೂ ಕಳೆದುಕೊಳ್ಳಲಾರೆ.

387
00:35:08,896 --> 00:35:10,355
ದಯವಿಟ್ಟು, ಅಪ್ಪ.

388
00:35:13,896 --> 00:35:15,063
ದಯವಿಟ್ಟು.

389
00:35:20,855 --> 00:35:22,563
ನಿನ್ನ ಅಹಂ ಬದಿಗಿಡು.

390
00:35:24,896 --> 00:35:27,855
ಇಷ್ಟೆಲ್ಲಾ ನಡೆದು,
ನಿನಗೆ ಅಹಂ ಮಾತ್ರ ಕಾಣುತ್ತದೆಂದರೆ...

391
00:35:33,730 --> 00:35:36,146
ಇನ್ನು ನಮಗೆ ಮಾತನಾಡಲು ಏನೂ ಉಳಿದಿಲ್ಲ.

392
00:35:49,021 --> 00:35:50,646
ಹೀಗಂತೀಯ ಅಂತ ರಾಜ ಹೇಳಿದರು.

393
00:35:52,771 --> 00:35:56,771
ಅವರ ಮೇಲಿನ ದ್ವೇಷದಿಂದ ನೀನು ನನ್ನನ್ನೂ
ದ್ವೇಷಿಸುತ್ತಿರುವೆ, ಮತ್ತು ನನ್ನ ಮಾತು

394
00:35:58,188 --> 00:36:00,480
ಕೇಳುವುದನ್ನು ಶಾಶ್ವತವಾಗಿ ನಿಲ್ಲಿಸಿದೆ ಎಂದರು.

395
00:36:03,438 --> 00:36:05,980
ಆದ್ದರಿಂದ ನಾನು ಅವರ ಮುಂದೆ ಮಂಡಿಯೂರಿ,

396
00:36:07,771 --> 00:36:09,021
ಅವರನ್ನು ಬೇಡಿಕೊಂಡೆ,

397
00:36:09,105 --> 00:36:12,188
ತಲೆಯನ್ನು ನೆಲಕ್ಕೊತ್ತಿ,
ಆಕೆಯ ಬಳಿ ಹೋಗಲು ಅವಕಾಶ ಕೇಳಿದೆ.

398
00:36:28,813 --> 00:36:30,313
ನಾನು ತಪ್ಪಾಗಿಲ್ಲ ಅಂದುಕೊಳ್ಳುವೆ.

399
00:36:32,021 --> 00:36:33,563
ನಿನಗೆ ಈ ಜಾಗ ಸೂಕ್ತವಲ್ಲ.

400
00:36:33,646 --> 00:36:34,855
ಫರಝೋನ್ ಗೆ ತಲೆಬಾಗು.

401
00:36:36,230 --> 00:36:37,480
ಇದು ನನ್ನ ಆಜ್ಞೆ.

402
00:36:38,813 --> 00:36:41,688
ನ್ಯೂಮೆನೊರ್ ತಡೆದುಕೊಳ್ಳಬೇಕಾದರೆ,
ಅದಕ್ಕೆ ನಿನ್ನಂತಹ ಜನ ಬೇಕು.

403
00:36:42,855 --> 00:36:46,105
ಬೆಲೆಬಾಳುವುದಕ್ಕೆ ಬೆಲೆ ಕೊಡುವ ಜನ.
ನಂಬಿಕಸ್ಥ ಜನ.

404
00:36:47,396 --> 00:36:50,230
ನಂಬಿಕೆಯನ್ನು ಉಳಿಸಿಕೊಳ್ಳದಿದ್ದರೆ
ಅದು ನಂಬಿಕೆಯಲ್ಲ.

405
00:36:52,188 --> 00:36:56,771
ನನ್ನ ಮನಸ್ಸಿನಲ್ಲಿ ಈ ರಾಜ್ಯದ ನಿಜವಾದ
ವಾರಸುದಾರಳು ನೀವೇ ಅಂತ ಗೊತ್ತಿದೆ.

406
00:36:58,271 --> 00:37:00,105
ಅದನ್ನು ನಾನು ಕಡೆಗಣಿಸಲಾರೆ.

407
00:37:01,396 --> 00:37:04,480
ನಾನು ಹಾಗೆ ಮಾಡಿದರೆ, ನೀವು
ಕಾಪಾಡಬೇಕೆಂದುಕೊಂಡ ವ್ಯಕ್ತಿ ನಾನಾಗಿರಲ್ಲ.

408
00:37:04,563 --> 00:37:05,896
ನೀನು ತಪ್ಪಾಗಿದ್ದರೆ?

409
00:37:07,396 --> 00:37:09,938
ಆಗ ನಾನು ತೃಪ್ತಿಯಿಂದ ಸಾಯುತ್ತೇನೆ,

410
00:37:10,021 --> 00:37:12,105
ಬದಲಾಗಿ ಹೇಡಿಯ ಬದುಕು ಮಾತ್ರ ಬೇಡ.

411
00:37:15,480 --> 00:37:17,063
ಹಾಗಾದರೆ ನನ್ನ ಮನಸ್ಸು?

412
00:37:24,230 --> 00:37:28,980
ನನ್ನ ಜೀವ ಉಳಿಯಬೇಕೆಂಬುದು
ವಾಲಾರ್ ಇಚ್ಛೆಯಾಗಿದ್ದರೆ...

413
00:37:32,271 --> 00:37:33,688
ಹಾಗೆಯೇ ಆಗುತ್ತೆ.

414
00:37:39,230 --> 00:37:40,646
ಹಾಗಾಗದಿದ್ದರೆ?

415
00:37:51,021 --> 00:37:53,230
"ಕಡಲು ಸತ್ಯದ ಪ್ರತೀಕ."

416
00:38:16,688 --> 00:38:17,688
ನಡೆ!

417
00:38:28,271 --> 00:38:29,355
ಡೀಸಾ?

418
00:38:37,980 --> 00:38:41,355
ಡೀಸಾ, ನಾವು ರಾಜನ ಆದೇಶದ ಮೇರೆಗೆ ಇಲ್ಲಿದ್ದೇವೆ.

419
00:38:41,438 --> 00:38:42,646
ಅದಕ್ಕೇ, ದಯವಿಟ್ಟು ಸರಿ,

420
00:38:43,563 --> 00:38:46,730
ಇಲ್ಲವಾದರೆ ಬಲವಂತವಾಗಿ
ನಿನ್ನನ್ನು ಸರಿಸಬೇಕಾಗುತ್ತದೆ.

421
00:38:52,938 --> 00:38:54,021
ನನ್ನನ್ನು ಕ್ಷಮಿಸು.

422
00:39:10,021 --> 00:39:12,271
ಅದು ನಮ್ಮನ್ನು ಹೆದರಿಸಲು ಮಾಡಿದೆಯಾ?

423
00:39:13,980 --> 00:39:14,980
ಇಲ್ಲ.

424
00:39:16,146 --> 00:39:17,230
ಅವು ಹೆದರಿಸುತ್ತವೆ.

425
00:39:47,771 --> 00:39:49,313
ನಿನ್ನನ್ನು ಪ್ರೀತಿಸುತ್ತೇನೆ.

426
00:39:50,438 --> 00:39:51,730
ನನ್ನನ್ನು ನಂತರ ಪ್ರೀತಿಸು.

427
00:39:54,771 --> 00:39:56,271
ಇದು ಆರಂಭ ಮಾತ್ರ.

428
00:39:57,146 --> 00:40:00,021
ಅವು ಹಿಂತಿರುಗುತ್ತವೆ. ಮತ್ತು ಹೆಚ್ಚು ಬರುತ್ತವೆ.

429
00:40:02,438 --> 00:40:03,771
ಆಗ ನಾವು ಸಿದ್ದರಾಗಿರುತ್ತೇವೆ.

430
00:40:35,771 --> 00:40:41,355
ಎಲ್ಲಾ ಐಹಿಕ ಅಧಿಕಾರವನ್ನು ತ್ಯಜಿಸಿ
ವಾಲಾರ್ ತೀರ್ಪನ್ನು ಒಪ್ಪಿಕೊಳ್ಳುವೆಯಾ?

431
00:40:46,605 --> 00:40:48,355
ಅವರ ತೀರ್ಪನ್ನು ಒಪ್ಪಿಕೊಳ್ಳುವೆ.

432
00:40:50,396 --> 00:40:51,563
ಅವನನ್ನು ಒಳಗೆಸೆಯಿರಿ.

433
00:41:15,230 --> 00:41:16,438
ಅವನನ್ನು ಬಿಡುಗಡೆ ಮಾಡಿ!

434
00:41:20,896 --> 00:41:23,480
ಅವನ ಅಪರಾಧ ನನ್ನ ಹೆಸರಿನಲ್ಲಿ ಮಾಡಿದ್ದರಿಂದ,

435
00:41:25,438 --> 00:41:28,646
ಅವನ ಸ್ಥಾನದಲ್ಲಿ ವಾಲಾರ್ ತೀರ್ಪನ್ನು
ಎದುರಿಸುವ ಹಕ್ಕು ನನಗಿದೆ.

436
00:41:33,605 --> 00:41:36,938
-ಅವನೇ ಆಗಿರಬೇಕು. ಕರೆದುಕೊಳ್ಳಿ.
-ಇಲ್ಲ, ಇಲ್ಲ. ಇಲ್ಲ!

437
00:41:38,230 --> 00:41:39,230
ನನ್ನ ರಾಣಿ?

438
00:41:42,021 --> 00:41:44,855
ಆಕೆ ಹೇಳಿದ್ದು ಸರಿ.
ಅಲ್ಲಿ ಎಲ್ಲಾ ಇದೆ. ನೀವು ಮಾಡಬೇಕು.

439
00:41:45,771 --> 00:41:46,855
ಇದು ನಿಜಾನಾ?

440
00:41:48,230 --> 00:41:49,730
ಕಾನೂನಿನ ಪ್ರಕಾರ, ಹೌದು.

441
00:41:51,771 --> 00:41:53,021
ಹಾಗೆಯೇ ಆಗಲಿ.

442
00:41:55,188 --> 00:41:56,938
ಇಲ್ಲ, ನನ್ನನ್ನು ಕಳಿಸಿ.

443
00:41:57,938 --> 00:41:59,313
ನನ್ನನ್ನು ಕಳಿಸಿ.

444
00:42:01,105 --> 00:42:02,730
ಮಿರಿಯೆಲ್, ಬೇಡ-- ನೀನು ಬೇಡ--

445
00:42:02,813 --> 00:42:05,646
ನಿಷ್ಠಾವಂತರ ದಾರಿಯಲ್ಲಿ ನಡೆಯಬೇಕಾದರೆ,

446
00:42:07,480 --> 00:42:09,896
ಮೊದಲ ಹೆಜ್ಜೆ ಇಡುವುದು ನಾನೇ ಆಗಿರಬೇಕು.

447
00:43:06,855 --> 00:43:09,521
-ಇಲ್ಲಿದೆ! ನೋಡಿ!
-ದಿಗಂತದ ಮೇಲೆ.

448
00:43:09,605 --> 00:43:10,813
ಹಾಂ, ಈಗ ಬರುತ್ತಿದೆ.

449
00:44:31,980 --> 00:44:34,771
ವಾಲಾರ್ ತೀರ್ಪಿನ ಪ್ರಕಾರ ಆಕೆ...

450
00:44:42,855 --> 00:44:44,355
-ಅಲ್ಲಿದ್ದಾಳೆ!
-ನಿರ್ದೋಷಿ!

451
00:44:46,313 --> 00:44:47,313
ಮಹಾರಾಣಿ!

452
00:44:54,438 --> 00:45:00,188
ಕಡಲ ರಾಣಿ, ಟಾರ್-ಮಿರಿಯೆಲ್‌ಗೆ ಜಯವಾಗಲಿ!

453
00:45:00,271 --> 00:45:05,438
ರಾಣಿ ಮಿರಿಯೆಲ್‌ಗೆ ಜಯವಾಗಲಿ!
ರಾಣಿ ಮಿರಿಯೆಲ್‌ಗೆ ಜಯವಾಗಲಿ!

454
00:45:05,521 --> 00:45:09,313
ರಾಣಿ ಮಿರಿಯೆಲ್‌ಗೆ ಜಯವಾಗಲಿ!
ರಾಣಿ ಮಿರಿಯೆಲ್‌ಗೆ ಜಯವಾಗಲಿ!

455
00:45:09,396 --> 00:45:12,771
-ರಾಣಿ ಮಿರಿಯೆಲ್‌ಗೆ ಜಯವಾಗಲಿ.
-ಕಡಲ ರಾಣಿಗೆ ಜಯವಾಗಲಿ.

456
00:45:13,730 --> 00:45:15,646
ರಾಣಿ ಮಿರಿಯೆಲ್‌ಗೆ ಜಯವಾಗಲಿ.

457
00:45:52,896 --> 00:45:55,646
ಹೌದು. ಹಲ್ಬ್ರ್ಯಾಂಡೇ ಸೌರೊನ್.

458
00:45:55,730 --> 00:45:59,438
ನನ್ನ ಜನರ ಮೇಲೆ ಪ್ರಾಬಲ್ಯ ಸಾಧಿಸಲು
ಉಂಗುರ ತಯಾರಿಸಲು ಎರೆಗಿಯೊನಲ್ಲಿರುವನು.

459
00:46:00,313 --> 00:46:02,730
-ನಿಮ್ಮ ಮೇಲೂ.
-ಮಧ್ಯ ಧರೆಯ ಪ್ರತಿಯೊಬ್ಬರ ಮೇಲೆ.

460
00:46:02,813 --> 00:46:05,480
ಕೆಲಸ ಪೂರ್ಣಗೊಳ್ಳುವವರೆಗೂ
ಅವನು ಎಲ್ಲಿಯೂ ತಪ್ಪಿಸಿಕೊಳ್ಳಲ್ಲ.

461
00:46:06,688 --> 00:46:10,563
ಮತ್ತು ಅದು ನಮಗೆ
ಕ್ಷಣಿಕ ಪ್ರಯೋಜನವನ್ನು ನೀಡುತ್ತದೆ.

462
00:46:11,188 --> 00:46:12,105
ನಮಗಾ?

463
00:46:15,355 --> 00:46:16,438
ನನ್ನನ್ನು ಬಿಡಿಸಿ.

464
00:46:37,980 --> 00:46:43,563
ನಾವು ಮಾತನಾಡುವಾಗಲೇ, ಎಲ್ರೊಂಡ್ ಲಿಂಡೊನ್‌ನಿಂದ
ಎಲ್ಫ್‌ಗಳ ಸೇನೆಯೊಂದಿಗೆ ಹೊರಟಿದ್ದಾನೆ.

465
00:46:46,188 --> 00:46:49,521
ಮತ್ತು ನೆನ್ಯಾ, ನನ್ನ ಉಂಗುರ.

466
00:46:51,771 --> 00:46:52,771
ಹಾಗೋ.

467
00:46:53,355 --> 00:46:56,938
ಅವನು ಬಂದಮೇಲೆ ನಗರವನ್ನು ಮುಚ್ಚುವನು,

468
00:46:57,021 --> 00:47:00,438
ಕೆಲಬ್ರಿಮ್ಬೋ‍ರ್‌ನ ಸೌರೊನ್‌ನ
ಹಿಡಿತದಿಂದ ಬಿಡಿಸಿ, ನಂತರ ಒಟ್ಟಿಗೆ,

469
00:47:01,688 --> 00:47:02,605
ಉರುಕ್,

470
00:47:04,730 --> 00:47:08,188
ನೀವು ಮತ್ತು ನಾನು, ಸೌರೊನ್‌ನ ಈ ಜಗತ್ತಿನಿಂದ
ಶಾಶ್ವತವಾಗಿ ನಿರ್ಮೂಲನೆ ಮಾಡಬಹುದು.

471
00:47:09,105 --> 00:47:10,480
ಎಂದಿಗೂ ಬಾರದಂತೆ.

472
00:47:11,188 --> 00:47:12,396
ಮತ್ತು ನಂತರ ಏನು?

473
00:47:13,188 --> 00:47:15,938
ಅವನು ಸ್ಪರ್ಶಿಸಿರುವ ಉಂಗುರಗಳನ್ನು ನಾಶ ಮಾಡಬೇಕು.

474
00:47:16,438 --> 00:47:18,730
ಆಮೇಲೆ, ಉರುಕ್‌ಗೆ ಏನಾಗುತ್ತದೆ?

475
00:47:20,313 --> 00:47:23,355
ನಿಮ್ಮ ಮಹಾ ದೊರೆ ನಮಗೆ ಶಾಂತಿಯಿಂದ
ಮನೆಗೆ ಮರಳಲು ಅನುಮತಿ ಕೊಡುವರೇ?

476
00:47:24,605 --> 00:47:27,605
ಅಥವಾ ಮೊರ್ಡೊರ್ ಮೇಲೆ
ಆಕ್ರಮಣ ಮಾಡಲು ಮುಂದುವರಿಯುತ್ತಾರಾ?

477
00:47:29,480 --> 00:47:33,730
ಛಾಯೆ ನಿಮ್ಮ ಮೇಲಷ್ಟೇ ಅಲ್ಲ,
ಇಡೀ ಎಲ್ವೆನ್ ಡಾಮ್ ಮೇಲೆ ಪ್ರಾಬಲ್ಯ ಸಾಧಿಸಿದೆ.

478
00:47:34,355 --> 00:47:35,355
ಕೊನೆಯಲ್ಲಿ,

479
00:47:35,438 --> 00:47:39,813
ನಿನ್ನ ವೀರತ್ವವನ್ನು ಸಾಬೀತುಪಡಿಸುವ ಯತ್ನವೂ
ಸೌರೊನ್‌ನ ಯೋಜನೆಯೇ ಆಗಿರುತ್ತದೆ.

480
00:47:40,980 --> 00:47:42,396
ನೀವು ಸುಳ್ಳು ಹೇಳುತ್ತೀರಿ.

481
00:47:43,396 --> 00:47:45,188
ನಾನೇನಾದರೂ ಬಹಿರಂಗಪಡಿಸಲಿ ಅಂತ.

482
00:47:45,855 --> 00:47:47,896
ನಾನಂದುಕೊಂಡಿದ್ದು ಮತ್ತು

483
00:47:47,980 --> 00:47:52,105
ಅದಕ್ಕಿಂತ ಹೆಚ್ಚಿನದನ್ನು
ನೀನೀಗಾಗಲೇ ಬಹಿರಂಗಪಡಿಸಿರುವೆ.

484
00:48:04,313 --> 00:48:05,563
ಸರಿ, ಸರಿ.

485
00:48:07,438 --> 00:48:08,855
ಇದೇ ಸಮಯ!

486
00:48:11,438 --> 00:48:14,646
ಎರೆಗಿಯೊನ್ ಪೂರ್ತಿ ಈಗ
ಸೌರೊನ್‌ನ ನಿಯಂತ್ರಣದಲ್ಲಿರಬಹುದು.

487
00:48:16,230 --> 00:48:19,938
ಅದನ್ನು ವಶಪಡಿಸಿಕೊಳ್ಳಲು
ನಿನ್ನ ಮಕ್ಕಳ ಸೇನೆಯಷ್ಟೇ ಸಾಲದು.

488
00:48:20,021 --> 00:48:24,063
ಒಂದೇ ಒಂದು ಪಡೆಯೊಂದಿಗೆ
ನಾನು ಸೌರೊನ್‌ನ ಶಕ್ತಿಗೆ ಸವಾಲೆಸೆಯುವೆ

489
00:48:24,146 --> 00:48:25,688
ಅಂತ ನಿಜವಾಗಿ ಅಂದುಕೊಂಡೆಯಾ?

490
00:48:45,646 --> 00:48:48,813
ಈಗ ನೀನು ಯಾವುದೇ ಅನುಮಾನವಿಲ್ಲದೆ
ಅವನು ಯಾರೆಂದು ಖಚಿತಪಡಿಸಿ,

491
00:48:49,813 --> 00:48:51,813
ನಿನ್ನ ಉಂಗುರ ಯಾರ ಬಳಿ ಇದೆ ಅಂತ ಹೇಳಿರೋದರಿಂದ,

492
00:48:53,521 --> 00:48:55,230
ಎರೆಗಿಯೊನ್ ಪರಾಭವಗೊಳ್ಳುತ್ತದೆ.

493
00:48:56,355 --> 00:48:57,855
ಮತ್ತು ಅದರೊಂದಿಗೆ ಸೌರೊನ್.

494
00:48:59,021 --> 00:49:00,021
ಇಲ್ಲ.

495
00:49:02,938 --> 00:49:04,688
ಅವನಿಗೆ ಇದೇ ಬೇಕೇನೋ.

496
00:49:07,271 --> 00:49:09,396
ಸೌರೊನ್‌ಗೆ ತನ್ನದೇ ಆದ ಸೈನ್ಯ ಇಲ್ಲ,

497
00:49:10,771 --> 00:49:12,980
ಆದ್ದರಿಂದ ಅವನು ನಿನ್ನನ್ನು ಇಲ್ಲಿಗೆ ಕರೆಸಿದನು.

498
00:49:15,021 --> 00:49:17,146
ಅವನಿಗೆ ಎರೆಗಿಯೊನ್ ಮೇಲೆ ನೀವು ದಾಳಿ ಮಾಡಬೇಕು.

499
00:49:17,230 --> 00:49:19,771
ಅವಳನ್ನು ಬಂಧಿಸಿ. ನಂತರ ಉಪಯುಕ್ತವಾಗುತ್ತಾಳೆ.

500
00:49:20,855 --> 00:49:24,271
-ನಿನ್ನನ್ನು ಬೇಡುತ್ತೇನೆ. ಮೂರ್ಖನಾಗಬೇಡ.
-ಇಲ್ಲಿಗೆ ಬಾ.

501
00:49:24,355 --> 00:49:26,605
ಇದನ್ನು ಮಾಡಬೇಡ. ಅವನ ಆಮಿಷಕ್ಕೆ ಮರುಳಾಗಬೇಡ.

502
00:49:26,688 --> 00:49:28,271
ಅದನ್ನವನ ವಿರುದ್ಧವೇ ತಿರುಗಿಸುವೆ.

503
00:49:29,105 --> 00:49:30,105
ಇಲ್ಲ!

504
00:49:31,146 --> 00:49:34,188
ಹಾಗೆ ಮಾಡಬಾರದು. ಇದೆಲ್ಲಾ ಅವನ ಯೋಜನೆಯೇ!

505
00:49:35,188 --> 00:49:36,771
ಸೌರೊನ್‌ಗೆ ಇದೇ ಬೇಕಿರೋದು!

506
00:49:37,605 --> 00:49:39,105
ಅವನಿಗೆ ಬೇಕಾಗಿರುವುದು ಇದೇ!

507
00:49:39,896 --> 00:49:41,521
ಈ ಕಡೆ. ಬಾ.

508
00:50:12,980 --> 00:50:14,980
ತಳ್ಳು! ನಡಿ!

509
00:50:16,521 --> 00:50:17,563
ಜೋರಾಗಿ!

510
00:50:28,980 --> 00:50:30,230
ಗಂಟೆಗಳನ್ನು ಬಾರಿಸಿ.

511
00:50:31,271 --> 00:50:32,480
ನಾವು ದಾಳಿಗೊಳಗಾಗಿದ್ದೇವೆ!

512
00:50:33,271 --> 00:50:36,105
ದ್ವಾರಗಳನ್ನು ಮುಚ್ಚಿ! ಸೇತುವೆ ಮೇಲೆತ್ತಿ!

513
00:51:18,355 --> 00:51:19,813
ನಿಮ್ಮ ಪ್ರಗತಿ ಹೇಗಿದೆ?

514
00:51:21,605 --> 00:51:22,938
ನಿನಗದು ಕೇಳಿಸಲಿಲ್ಲವೇ?

515
00:51:23,938 --> 00:51:26,605
ಹೊರಗೆ. ಮುತ್ತಿಗೆಯ ಎಚ್ಚರಿಕೆಯಂತೆ
ಸದ್ದು ಮಾಡಿತು.

516
00:51:27,396 --> 00:51:30,313
ನನ್ನನ್ನು ನಂಬಿ,
ನಗರದಲ್ಲಿ ಎಲ್ಲವೂ ನಿಯಂತ್ರಣದಲ್ಲಿದೆ.

517
00:51:32,063 --> 00:51:33,896
ಅದನ್ನು ನಾನು ನಿರ್ಧರಿಸುತ್ತೇನೆ.

518
00:51:36,438 --> 00:51:37,938
ನೀವು ಇಲ್ಲಿಯೇ ಇರಬೇಕು, ಮಿತ್ರ.

519
00:51:39,230 --> 00:51:41,938
ನಾನು ಎಲ್ಲಿರಬೇಕು ಅಂತ
ನೀನು ನನಗೆ ಹೇಳಬೇಕಾಗಿಲ್ಲ!

520
00:51:51,730 --> 00:51:54,396
ನನ್ನ ಕೈ ಬಿಡು, ಮಿತ್ರ.

521
00:52:00,271 --> 00:52:02,063
ಈಗಲೇ ಈ ಗೋಪುರದಿಂದ ಹೊರಡಿ,

522
00:52:02,146 --> 00:52:04,480
ಮಧ್ಯ ಧರೆಯ ಮನುಷ್ಯರು ಸೋತಾಗ, ಪ್ರಮಾಣ ಮಾಡುವೆ,

523
00:52:04,563 --> 00:52:06,938
ಕಾಣುವ ಮತ್ತು ಕಾಣದ ಪ್ರಪಂಚದ
ಪ್ರತಿಯೊಂದು ಜೀವಕ್ಕೂ

524
00:52:07,021 --> 00:52:10,271
ತಮ್ಮ ಸಾವಿನ ಸೂತ್ರಧಾರ ನೀವೇ ಅಂತ ಗೊತ್ತಾಗುತ್ತೆ.

525
00:52:10,355 --> 00:52:12,271
ಇನ್ನೂ ಒಂಬತ್ತು ಉಂಗುರಗಳನ್ನು ತಯಾರಿಸಬೇಕು!

526
00:52:36,771 --> 00:52:37,896
ಅತ್ಯುತ್ತಮ ಕುದುರೆ.

527
00:53:07,813 --> 00:53:10,438
-ಸರಿ.
-ಅದು ಕುದುರೆ.

528
00:53:13,396 --> 00:53:14,730
ಶತಮಾನಗಳಿಂದ,

529
00:53:16,230 --> 00:53:18,938
ಮಹಾ ಶಕ್ತಿಯುಳ್ಳ ವಸ್ತುಗಳನ್ನು
ತಯಾರಿಸಲು ಯತ್ನಿಸಿದೆ.

530
00:53:21,313 --> 00:53:22,271
ಆದರೆ ನಾನು ವಿಫಲನಾದೆ.

531
00:53:22,896 --> 00:53:24,230
ನಿಜವೇನೆಂದರೆ,

532
00:53:25,313 --> 00:53:28,313
ನಾನು ಎರೆಗಿಯೊನ್‌ಗೆ ಬಂದಿದ್ದು
ವಾಲಾರ್ ಗೆ ನೀವು ಬೇಕು ಅಂತಲ್ಲ,

533
00:53:30,646 --> 00:53:31,813
ನನಗೆ ನೀವು ಬೇಕು ಅಂತ.

534
00:53:33,771 --> 00:53:34,771
ನಾನು...

535
00:53:41,855 --> 00:53:44,105
ನಾನು ಹೆಚ್ಚು ಉಂಗುರಗಳನ್ನು ತಯಾರಿಸಲಾರೆ.

536
00:53:47,896 --> 00:53:49,688
ಮತ್ತು ಮೀಥ್ರಿಲ್ ಇಲ್ಲದೆ, ನಾನು...

537
00:53:52,480 --> 00:53:53,730
ನಿರಾಳವಾಗಿರಿ.

538
00:53:55,230 --> 00:53:56,855
ನಾನು ಖಜದ್-ದುಮ್‌ಗೆ ಹೋಗಿದ್ದೇನೆ.

539
00:54:01,480 --> 00:54:02,896
ಮೀಥ್ರಿಲ್ ಅದಿರು.

540
00:54:04,688 --> 00:54:07,230
ನಾರ್ವಿ‌ಯೇ ಅದನ್ನು ಪುಡಿಯಾಗಿ ಸಂಸ್ಕರಿಸಿದ್ದಾರೆ.

541
00:54:09,271 --> 00:54:11,355
ಅವರ ಗಣಿಯಲ್ಲಿ ಸಿಕ್ಕಿದ ಪರಿಶುದ್ಧ ಅದಿರಿನಿಂದ.

542
00:54:11,438 --> 00:54:13,771
ಪ್ರತಿ ಉಂಗುರಕ್ಕೂ ಒಂಬತ್ತರ ಒಂದು ಭಾಗ.

543
00:54:15,146 --> 00:54:16,480
ಅಷ್ಟು ಸಾಕು.

544
00:54:20,021 --> 00:54:22,396
ನಾವು ಹತ್ತಿರವಾಗಿದ್ದೇವೆ, ಈಗ, ಕೆಲಬ್ರಿಮ್ಬೋರ್.

545
00:54:24,271 --> 00:54:26,480
ಅದನ್ನು ಸಾಧಿಸಲು ತುಂಬಾ ಹತ್ತಿರದಲ್ಲಿದ್ದೇವೆ.

546
00:54:28,230 --> 00:54:31,605
ನನ್ನ ಜೀವದ ಮೇಲೆ ಆಣೆ ಮಾಡುವೆ,

547
00:54:32,355 --> 00:54:36,021
ಈ ಯುಗದ ಇತಿಹಾಸ ಬರೆಯುವಾಗ, ಸಿಲ್ಮರಿಲ್ ಗಳು,

548
00:54:37,563 --> 00:54:38,563
ಅದು...

549
00:54:42,480 --> 00:54:44,855
ಅವರಿಗೆ ಸಲ್ಲಬೇಕಾದ ಶ್ರೇಯ ಸಿಗಲ್ಲ.

550
00:54:47,563 --> 00:54:49,271
ಆದರೆ ನಿಮ್ಮ ಉಂಗುರಗಳು,

551
00:54:51,271 --> 00:54:52,855
ಶಕ್ತಿಯ ಉಂಗುರಗಳು,

552
00:54:54,896 --> 00:55:00,605
ಮಧ್ಯ ಧರೆಯಲ್ಲೆಲ್ಲಾ ಅತ್ಯಮೂಲ್ಯವಾದ ಸೃಷ್ಟಿ
ಅವೇ ಆಗಿರುತ್ತವೆ.

553
00:55:01,855 --> 00:55:03,063
ಹಾಂ.

554
00:55:03,146 --> 00:55:07,480
ಗೆಲುವಿನ ಹೊಸ್ತಿಲಲ್ಲಿರುವಾಗ ಹಿಂದೆ ತಿರುಗಬೇಡಿ.

555
00:55:12,646 --> 00:55:15,396
ಅದನ್ನು ಬಳಸಿ, ಮಿತ್ರ.

556
00:55:17,521 --> 00:55:18,521
ಫೀನೋರ್‌ನ ಮೀರಿಸಿ.

557
00:55:20,563 --> 00:55:21,563
ನಿಮ್ಮನ್ನೇ ಮೀರಿಸಿ.

558
00:55:26,438 --> 00:55:31,480
ಕೊನೆಯ ಬಾರಿಗೆ.

559
00:55:59,271 --> 00:56:01,146
ಒಂದು ಕವಿತೆ ಬರೆದಿರುವೆ,

560
00:56:01,230 --> 00:56:04,063
ಆದರೆ ನಿನ್ನಂದಕ್ಕೆ ಅದು ಸರಿಸಾಟಿಯೇ ಗೊತ್ತಿಲ್ಲ.

561
00:56:22,605 --> 00:56:23,688
ಬನ್ನಿ, ಮಕ್ಕಳೇ!

562
00:57:30,605 --> 00:57:31,855
ಹಾಂ!

563
00:57:36,271 --> 00:57:40,188
ಅಲ್ಲಿಗೆ ಹೋಗಿ. ಬನ್ನಿ! ಬನ್ನಿ!

564
00:57:57,521 --> 00:57:58,521
ಬಿಡುಗಡೆ ಮಾಡಿ!

565
01:00:13,646 --> 01:00:15,646
ಉಪ ಶೀರ್ಷಿಕೆ ಅನುವಾದ: ಸುಜಿತ್ ವೆಂಕಟರಾಮಯ್ಯ

566
01:00:15,730 --> 01:00:17,730
ಸೃಜನಶೀಲ ಮೇಲ್ವಿಚಾರಕರು
ಸುಬ್ಬಯ್ಯ ಕೆಜಿ

567
01:00:18,730 --> 01:00:38,730
<font color="#00ff00">{\an8}Downloaded from - MoviesMod.fit</font>

